Amruthadhaare ; ಕನಸು ಕಂಡ ಮಹಿಮಾ ಜೀವನ್ ಬಳಿ ಸತ್ಯ ಹೇಳುತ್ತಾಳಾ..?

By ಪ್ರಿಯಾ ದೊರೆ

ಮಹಿಮಾ ಮಗುವನ್ನು ತೆಗೆಸಿದ್ದು ತನ್ನ ಬ್ಯೂಟಿ ನ ಕಾಪಾಡಿಕೊಳ್ಳಲು ಎಂಬ ಸತ್ಯ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಆದರೆ, ಮಹಿಮಾ ತಾನು ಮಾಡಿದ್ದು ತಪ್ಪು ಎಂದು ಪಶ್ಚಾತಾಪ ಪಡುತ್ತಿದ್ದಾಳೆ. ಅದಲ್ಲದೇ, ಮಂದಾಕಿನಿ ಹಾಗೂ ಸದಾಶಿವ ಇಬ್ಬರೂ ಸೊಸೆಗೆ ಆದಷ್ಟು ಬೇಗನೇ ಮಗುವಾಗಲಿ ಎಂದು ಉಪವಾಸ ಮಾಡಿ ವ್ರತ ಮಾಡುತ್ತಿರುವುದು ಇನ್ನಷ್ಟು ಕಾಡುತ್ತಿದೆ. ಹೀಗಾಗಿ ಮಹಿಮಾ ಜೀವನ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿಬಿಡಬೇಕು ಎಂದು ಭಾವಿಸುತ್ತಾಳೆ. ಅದೇ ರೀತಿ ಜೀವನ್ ಗೆ ಸತ್ಯವನ್ನು ಹೇಳಲು ಮುಂದಾಗುತ್ತಾಳೆ.

ಮಹಿಮಾ ಕಂಡಿದ್ದು ಕನಸು

ಮಹಿಮಾಳನ್ನು ಜೀವನ್ ಬೈಯುತ್ತಾನೆ. ನಿನಗೆ ನಮ್ಮ ಮನೆಯವರು, ನಿಮ್ಮ ಮನೆಯವರು ಅಥವಾ ಮಗು ಏನಾದರೂ ತೊಂದರೆ ಮಾಡಿತ್ತಾ. ಆ ಪುಟ್ಟ ಮಗುವನ್ನು ಸಾಯಿಸಲು ಮನಸಾದರೂ ಹೇಗೆ ಬಂತು ಎಂದು ಕೋಪ ಮಾಡಿಕೊಂಡು ಜಗಳ ಮಾಡುತ್ತಾನೆ. ಆದರೆ, ಇದೆಲ್ಲವೂ ಮಹಿಮಾಳ ಕನಸಾಗಿರುತ್ತದೆ. ಒಂದು ವೇಳೆ ತಾನು ಅಬಾರ್ಷನ್ ಮಾಡಿಸಿಕೊಂಡ ವಿಚಾರವನ್ನು ಹೇಳಿದರೆ ಜೀವನ್ ಹೇಗೆ ರಿಯಾಕ್ಟ್ ಮಾಡಬಹುದು ಎಂದು ಊಹಿಸಿಕೊಳ್ಳುತ್ತಾಳೆ. ಸತ್ಯ ಹೇಳಿದರೆ, ಯಾರೂ ಮಹಿಮಾ ಕೆಲಸವನ್ನು ಒಪ್ಪುವುದಿಲ್ಲ ಎಂದು ಅರ್ಥ ಮಾಡಿಕೊಂಡ ಅವಳು, ಕೊನೆಗೆ ಜೀವನ್ ಬಳಿ ಸೆಕೆಂಡ್ ಹನಿಮೂನ್ ಗೆ ಹೋಗೋಣ ಎನ್ನುತ್ತಾಳೆ.

Amruthadhaare Serial 20 March episode written update

ಕೈ ತುತ್ತು ತಿಂದ ಮಹಿಮಾ

ಇಬ್ಬರೂ ಆಫೀಸ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀವಿ. ಇಬ್ಬರೂ ಸ್ವಲ್ಪ ದಿನ ಹೊರಗೆ ಹೋಗಿ ಬರೋಣ ಎಂದು ಕೇಳುತ್ತಾಳೆ. ಅದಕ್ಕೆ ಜೀವನ್ ಸ್ವಲ್ಪ ದಿನ ಕಷ್ಟ, ಸದ್ಯಕ್ಕೆ ಆಗೋದಿಲ್ಲ ಎಂದು ಹೇಳುತ್ತಾನೆ. ಮಹಿಮಾ ಬೇಸರ ಮಾಡಿಕೊಳ್ಳದೇ ಇದ್ದಿದ್ದನ್ನು ಕಂಡು ಪರವಾಗಿಲ್ಲವೇ ಬದಲಾಗಿದ್ದೀಯಾ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೀಯಾ ಎಂದು ಹೇಳುತ್ತಾನೆ. ಇನ್ನು ಸದಾಶಿವ ಮನೆಯವರಿಗೆಲ್ಲಾ ಕೈ ತುತ್ತು ನೀಡುತ್ತಾನೆ. ಮಹಿಮಾ ಕೂಡ ಇಷ್ಟಪಟ್ಟು ಮಾವನ ಕೈ ತುತ್ತು ತಿನ್ನುತ್ತಾಳೆ.

ಗೌತಮ್ ನನ್ನು ಕಾಪಾಡಿದ ಶಕುಂತಲಾ

ಶಕುಂತಲಾ ಗೌತಮ್ ಗೋಸ್ಕರ ಆಸ್ಪತ್ರೆಗೆ ಬಂದಿದ್ದಾಳೆ. ಗೌತಮ್ ನನ್ನು ಸಪರೇಟ್ ಆಗಿ ಕರೆದು, ಹೀಗೆಲ್ಲಾ ಹೆದರಿಕೊಂಡರೆ ಕಷ್ಟವಾಗುತ್ತದೆ. ಭೂಮಿಕಾಳಿಗೆ ಅನುಮಾನ ಬಂದು ಸತ್ಯ ಗೊತ್ತಾಗಬಹುದು. ಇದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ನೀನು ಮನೆಗೆ ಹೋಗು ಎಂದು ಹೇಳುತ್ತಾಳೆ. ಭೂಮಿಕಾಳಿಗೂ ಕೂಡ ಗೌತಮ್ ಟೆಷ್ಷನ್ ಮಾಡಿಕೊಂಡಿದ್ದಾನೆ. ನೀವಿಬ್ಬರೂ ಇಲ್ಲೇ ಇದ್ದರೆ, ಅವನ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾಳೆ. ಆ ಹುಡುಗಿಯನ್ನು ನಾನು ನೋಡಿ ನೋಡಿಕೊಳ್ಳುತ್ತೇನೆ ಎಂದು ಕಳಿಸಲು ಮುಂದಾಗುತ್ತಾಳೆ. ಅಷ್ಟರಲ್ಲಿ ಪೊಲೀಸರು ಬಂದು ಮಾಹಿತಿ ಪಡೆಯುತ್ತಾರೆ. ಭೂಮಿಕಾ ಹುಡುಗಿಯ ಮನೆಯವರನ್ನು ಕರೆಸಬೇಕಿತ್ತು ಎಂದು ಪೊಲೀಸರ ಬಳಿ ಹೇಳಿದಾಗ ಗೌತಮ್ ಇನ್ನಷ್ಟು ಗಾಬರಿಗೊಳ್ಳುತ್ತಾನೆ.

Amruthadhaare Serial 20 March episode written update

ಮಾನ್ಯಳಿಗೋಸ್ಕರ ಪೂಜೆ ಮಾಡಿಸಿದ ಗೌತಮ್

ಶಕುಂತಲಾ ಯಾವುದೇ ಕಾರಣಕ್ಕೂ ಗೌತಮ್ ನನ್ನು ಮಾನ್ಯ ಭೇಟಿ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ತೀರ್ಮಾನಿಸಿದ್ದಾಳೆ. ಗೌತಮ್ ಮನೆಗೆ ಹೋಗುವ ದಾರಿ ಮಧ್ಯೆ ದೇವಸ್ಥಾನಕ್ಕೆ ತೆರಳಿ, ಮಾನ್ಯಳಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂದು ಪೂಜೆ ಮಾಡಿಸುತ್ತಾನೆ. ಇದನ್ನು ಗಮನಿಸಿದ ಭೂಮಿಕಾಳಿಗೆ ಗೌತಮ್ ಮನಸ್ಸು ಎಷ್ಟು ಒಳ್ಳೆಯದು ಎಂದು ಯೋಚಿಸುತ್ತಾಳೆ. ಇನ್ನು ವೈದ್ಯರು ಮಾನ್ಯಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆಕೆ ಕೋಮಾಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಹಾಗೇನಾದರೂ ಮಾನ್ಯ ಕೋಮಾಗೆ ಹೋದರೆ, ಇದರಿಂದ ಶಕುಂತಲಾ ತನ್ನ ಕೆಲಸ ಸಾಧಿಸಿಕೊಳ್ಳಲು ಪ್ಲಸ್ ಪಾಯಿಂಟ್ ಆಗುವುದಂತೂ ಪಕ್ಕಾ.

More from Filmibeat

English summary
police officers comes to hospital and gautham does pooja for manya recovery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X