Amruthadhaare ; ಅತ್ತೆಗೆ ವಾರ್ನಿಂಗ್ ಕೊಟ್ಟ ಸೊಸೆ : ಸರ್ಪ್ರೈಸ್ ತಿಳಿದು ಶಾಕ್ ಆದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮನೆಯಿಂದ ಚಿಕ್ಕಮಗಳೂರಿಗೆ ಹೊರಟು ಎಸ್ಟೇಟ್ ತಲುಪುತ್ತಿದ್ದಂತೆ ಜೈದೇವ ತನ್ನ ಆಟವನ್ನು ಶುರು ಮಾಡಿದ್ದ. ಮಲ್ಲಿಯನ್ನು ಕೊಲ್ಲಬೇಕು ಎಂದು ಮಾಡಿದ್ದ ಪ್ಲಾನ್ ಜಾರಿಗೆ ತಂದಿದ್ದ. ಆದರೆ, ಭೂಮಿಕಾಳಿಗೆ ಮಲ್ಲಿ ಫೋನ್ ನಾಟ್ ರೀಚಬಲ್ ಆಗಿದ್ದು ಅನುಮಾನ ಬಂದಿದ್ದು ಎಚ್ಚೆತ್ತುಕೊಂಡಿದ್ದಳು. ಮಹಿಮಾಳ ಸಹಾಯದಿಂದ ಮಲ್ಲಿ ಜೀವವನ್ನು ಉಳಿಸಿಕೊಂಡಳು. ಈ ಬಾರಿಯೂ ಜೈದೇವ ಮಾಡಿದ ಮಾಸ್ಟರ್ ಪ್ಲಾನ್ ಅಟ್ಟರ್ ಫ್ಲಾಪ್ ಆಗಿ ಹೋಯ್ತು.

ಶಕುಂತಲಾಳಿಗೆ ಮತ್ತೆ ಹಿಂದೇಟು

ಇದನ್ನು ಇಷ್ಟಕ್ಕೆ ಬಿಡದ ಭೂಮಿಕಾ ಶಕುಂತಲಾಳಿಗೆ ಫೋನ್‌ ಮಾಡಿ ವಾರ್ನಿಂಗ್ ಕೊಡುತ್ತಾಳೆ. ನಾನು ಇಲ್ಲದ ಸಮಯದಲ್ಲಿ ಮಲ್ಲಿಗೆ ತೊಂದರೆ ಕೊಡಬೇಕು ಎಂದುಕೊಂಡಿದ್ದರೆ, ಅದನ್ನು ಮರೆತು ಬಿಡಿ. ಮಲ್ಲಿಗೆ ಏನೇ ಆದರೂ ನಾನಂತೂ ಸುಮ್ಮನೇ ಬಿಡುವುದಿಲ್ಲ. ಅದರಲ್ಲು ನಿಮ್ಮ ಮಗ ಗೌತಮ್ ಏನಾಯ್ತು ಎಂದು ಪಿನ್ ಟು ಪಿನ್ ವಿಷಯ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಆಗ ನೀವೇ ಸಿಕ್ಕಿ ಬೀಳುವುದು ಎಂದು ಹೆದರಿಸುತ್ತಾಲೆ. ಶಕುಂತಲಾಳಿಗೆ ಈಗ ತಾನೇನು ಮಾಡದಿದ್ದರೂ ಭೂಮಿಕಾ ತನ್ನನ್ನೇ ಅಪರಾಧಿ ಸ್ಥಾನದಲ್ಲಿ ನೋಡುತ್ತಿದ್ದಾಳೆ ಎಂಬ ಆತಂಕ ಶುರುವಾಗಿದೆ. ಲಕ್ಷ್ಮೀಕಾಂತ ತಂಗಿ ಶಕುಂತಲಾಳಿಗೆ ಶಸ್ತ್ರ ಪ್ರಯೋಗ ಮಾಡಬೇಡ ಅಸ್ತ್ರ ಬಳಸು. ಆಗಲೇ ನಿನ್ನ ಎದುರಾಳಿ ಭೂಮಿಕಾಳನ್ನು ಹೊಡೆದು ಉರುಳಿಸಲು ಸಾಧ್ಯ ಎಂದು ಹೇಳಿಕೊಂಡಿಟ್ಟಿದ್ದಾನೆ. ಶಕುಂತಲಾ ಕೂಡ ಮುಂದೆ ಹುಷಾರಾಗಿ ಹೆಜ್ಜೆ ಇಡಬೇಕು ಎಂದುಕೊಂಡಿದ್ದಾಳೆ.

amruthadhaare-serial-20-may-episode-written-update

ಗೌತಮ್ ನನ್ನು ಆಟವಾಡಿಸಿದ ಭೂಮಿಕಾ

ಗೌತಮ್ ರಾಮರಸವನ್ನು ಕುಡಿದು ಮಲಗಿದ್ದ. ಬೆಳಗೆದ್ದ ಕೂಡಲೇ ಅವನಿಗೆ ರಾತ್ರಿ ನಡೆದಿದ್ದೇನು ನೆನಪಿಲ್ಲ ಎಂಬುದನ್ನು ಅರಿತುಕೊಂಡು ಭೂಮಿಕಾ ಆಟವಾಡಿಸಿದ್ದಾಳೆ. ನೀವು ರಾತ್ರಿ ಮುತ್ತು ಕೊಡು ಎಂದು ಬಲವಂತ ಮಾಡಿದ್ರಿ ಎಂದು ಸುಳ್ಳು ಹೇಳುತ್ತಾಳೆ. ಈ ಮಾತನ್ನು ಕೇಳಿದ ಗೌತಮ್ ಗಾಬರಿಯಾಗುತ್ತಾನೆ. ಪ್ರೀತಿ ವಿಚಾರವನ್ನೂ ಹೇಳಿಕೊಂಡು ಬಿಟ್ಟೆನೇನೋ ಎಂದುಕೊಂಡು ಆತಂಕಗೊಂಡಿದ್ದಾನೆ. ಮುಜುಗರದಿಂದ ಇರುವ ಗೌತಮ್ ನನ್ನು ನೋಡಿ ಭೂಮಿಕಾ ಮಜಾತೆಗೆದುಕೊಳ್ಳುತ್ತಿದ್ದಾಳೆ.

ಅಣ್ಣನಿಗೆ ಬುದ್ಧಿ ಹೇಳಿದ ಮಹಿಮಾ

ಇನ್ನು ಜೈದೇವ ಈ ಸಲದ ಪ್ಲಾನ್ ಫ್ಲಾಪ್ ಆದರೂ ಮತ್ತೊಂದು ಪ್ಲಾನ್ ಮಾಡಿಕೊಂಡಿದ್ದಾನೆ. ಅದರಲ್ಲಿ ಯಾವ ತಪ್ಪೂ ಆಗದಂತೆ ನೋಡಿಕೊಳ್ಳುತ್ತೇನೆ ಕೊನೆಯ ಚಾನ್ಸ್ ಕೊಡಿ ಎಂದು ಶಕುಂತಲಾ ಬಳಿ ಕೇಳಿದ್ದಾನೆ. ಶಕುಂತಲಾ ಕೂಡ ಇದೇ ಲಾಸ್ಟ್ ಚಾನ್ಸ್, ಆಮೇಲೆ ನಾನು ಅಖಾಡಕ್ಕೆ ಇಳಿಯಬೇಕಾಗುತ್ತದೆ ಎಂದು ಹೇಳಿದ್ದಾಳೆ. ಮಲ್ಲಿ ತನ್ನ ಪತಿಯ ಪರೀಸ್ಥಿತಿಯನ್ನು ಕಂಡು ಮರುಗಿದ್ದಾಳೆ. ಆದರೆ, ಜೈದೇವ ಮಲ್ಲಿ ಬಳಿ ನಾಟಕ ಮಾಡಿಕೊಂಡಿದ್ದಾನೆ. ಇನ್ನು ಮಹಿಮಾ ಬಂದು ಅಣ್ಣ ಜೈದೇವನಿಗೆ ಬುದ್ಧಿ ಹೇಳಿದ್ದಾಳೆ. ಬಿಸಿನೆಸ್ ರೈವಲ್ಸ್ ಇದ್ದಾರೆ ಎಂದ ಮೇಲೆ ನೀನು ಗೌತನ್ ಅಣ್ಣನಿಗೆ ಹೇಳಬೇಕಿತ್ತು. ಇಲ್ಲ ಅಮ್ಮನಿಗೆ ಫೋನ್ ಮಾಡಬೇಕಿತ್ತು. ಅದು ಬಿಟ್ಟು ನೀನು ಯಾಕೆ ಮಲ್ಲಿ ಅನ್ನು ಕರೆಸಿಕೊಂಡೆ. ಅವಳು ಗರ್ಭೀಣಿ ಅಂತ ಗೊತ್ತಲ್ವಾ. ಅವಳು ಮತ್ತು ಮಗು ಇಬ್ಬರಿಗೂ ತೊಂದರೆ ಆಗುತ್ತಿತ್ತು.

amruthadhaare-serial-20-may-episode-written-update

ಭೂಮಿಕಾಳಿಗೆ ಶಾಕ್ ಕೊಟ್ಟ ಸರ್ಪ್ರೈಸ್

ಇನ್ಮುಂದೆ ಹೀಗೆಲ್ಲಾ ಮಾಡಬೇಡ ನೀನು ಎಚ್ಚರವಾಗಿರು ಎಂದು ಮಹಿಮಾ ಜೈದೇವನಿಗೆ ಬುದ್ಧಿ ಹೇಳಿ ಹೋಗುತ್ತಾಳೆ. ಇದು ಜೈದೇವನಿಗೆ ಇರಿಟೇಟ್ ಮಾಡುತ್ತದೆ. ಇನ್ನು ಭೂಮಿಕಾ, ಅಪರ್ಣಾ, ಆನಂದ್ ಮತ್ತು ಗೌತಮ್ ಎಸ್ಟೇಟ್ ನೋಡಲು ಹೋಗುತ್ತಾರೆ. ಈ ವೇಳೆ ಆನಂದ್ ಬಾಯಿ ತಪ್ಪಿ ಈ ಎಸ್ಟೇಟ್ ಅನ್ನು ನಿಮ್ಮ ಹೆಸರಿಗೆ ಗೌತಮ್ ಬರೆಯಬೇಕೆಂದಿದ್ದಾರೆ ಎಂದು ಹೇಳಿ ಬಿಡುತ್ತಾನೆ. ಈ ಮಾತನ್ನು ಕೇಳಿದ ಭೂಮಿಕಾ ಫುಲ್ ಶಾಕ್ ಆಗುತ್ತಾಳೆ

More from Filmibeat

English summary
bhoomika gives shakunthala warning no to hurt malli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X