Amruthadhaare: ಕಿರಣ್ ಮಾತು ನಂಬಿ ಬಂದು ತಪ್ಪಿತಸ್ಥಳಾಗುತ್ತಿರುವ ಭೂಮಿಕಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಕಿರಣ್, ಭೂಮಿಕಾಳನ್ನು ಕೈ ಮುಷ್ಠಿಯಲ್ಲಿಡಿದುಕೊಂಡು ಆಡಿಸುತ್ತಿದ್ದಾನೆ. ಕಿರಣ್ ಸಂಚು ಅರಿಯದ ಭೂಮಿಕಾ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾಳೆ.

ಕಿರಣ್ ಆಟದ ಬಲೆಯಲ್ಲಿ ಗೌತಮ್ ಕೂಡ ಸಿಲುಕಿದ್ದು, ಭೂಮಿಕಾ ಬಗ್ಗೆ ಅನುಮಾನ ಹೆಚ್ಚಿಸಿಕೊಂಡಿದ್ದಾನೆ. ಅವಳನ್ನು ಸಂಪೂರ್ಣವಾಗಿ ತನ್ನ ಬಾಳಿನಿಂದ ದೂರ ಮಾಡಿಕೊಳ್ಳಲು ಮುಂದಾಗಿದ್ದಾನೆ.

ಪಾರ್ಟಿಯಲ್ಲಿ ಸರ್ಪ್ರೈಸ್ ಕೊಡಲು ತೀರ್ಮಾನಿಸಿರುವ ಗೌತಮ್, ಭೂಮಿಕಾಳನ್ನು ಮನೆಯಿಂದ ಹೊರಗೆ ಹಾಕುತ್ತಾನಾ? ಇಲ್ಲ ಭೂಮಿಕಾಳನ್ನು ನಂಬಿ ಕಿರಣ್‌ಗೆ ಪಾಠ ಕಲಿಸುತ್ತಾನಾ? ಗೊತ್ತಿಲ್ಲ.

Amruthadhaare Serial 20th December episode written update

ಪಾರ್ಟಿ ಸಮಯದಲ್ಲಿ ಭೂಮಿಕಾ ಹೋಗಿದ್ದೆಲ್ಲಿ..?

ಮನೆಯಲ್ಲಿ ಭೂಮಿಕಾ ಹುಟ್ಟುಹಬ್ಬಕ್ಕಾಗಿ ಗೌತಮ್ ಪಾರ್ಟಿ ಅರೇಂಜ್ ಮಾಡಿದ್ದಾನೆ. ಅದರಲ್ಲೂ ಪಾರ್ಟಿಗೆ ಆಫಿಸಿನವರನ್ನು ಕೂಡ ಆಹ್ವಾನಿಸಿದ್ದಾನೆ. ಹೀಗಿರುವಾಗ ಭೂಮಿಕಾ, ಕಿರಣ್ ಬೀಸುತ್ತಿರುವ ಬಲೆಯಲ್ಲಿ ಸಿಲುಕಿದ್ದು, ಮನೆಯಿಂದ ಹೊರಗೆ ಹೊರಟಿದ್ದಾಳೆ. ಸ್ನೇಹಿತರನ್ನು ಭೇಟಿ ಮಾಡಬೇಕು ಎಂದು ಸುಳ್ಳು ಹೇಳಿ ಕಿರಣ್ ಮನೆಗೆ ಹೊರಟಿದ್ದಾಳೆ. ಪಾರ್ಟಿ ಇರುವ ಸಂದರ್ಭದಲ್ಲಿ ಮನೆಯಲ್ಲಿ ಭೂಮಿಕಾ ಇಲ್ಲದಿರುವುದನ್ನು ಕಂಡ ಗೌತಮ್ ಇನ್ನಷ್ಟು ಬೇಸರ ಮಾಡಿಕೊಂಡಿದ್ದಾನೆ. ಭೂಮಿಕಾ ಎಲ್ಲಿಗೆ ಹೋಗಿದ್ದಾಳೆ ಎಂಬುದು ಗೊತ್ತಿಲ್ಲದೇ, ಮನದೊಳಗೆ ಒದ್ದಾಡುತ್ತಿದ್ದಾನೆ.

ಗಾಸಿಪ್ ಹಬ್ಬಿಸುತ್ತಿರುವ ಕಿರಣ್

ಕಿರಣ್, ಜೈದೇವ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾನೆ. ಭೂಮಿಕಾ ಹಾಗೂ ತನ್ನ ಸಂಬಂಧದ ಬಗ್ಗೆ ಗಾಸಿಪ್ ಮಾಡಿದರೆ, ತನಗೆ ಬೇಕಾದಷ್ಟು ಹಣ ಕೊಡುವುದಾಗಿ ಜೈದೇವ ನಂಬಿಸಿದ್ದಾನೆ. ಇದನ್ನೆಲ್ಲಾ ನಂಬಿರುವ ಕಿರಣ್ ತನ್ನ ಬದುಕನ್ನೂ ಹಾಳು ಮಾಡಿಕೊಡು, ಈಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿರುವ ಭೂಮಿಕಾ ಹಾಗೂ ಗೌತಮ್ ಬಾಳಲ್ಲೂ ಬಿರುಗಾಳಿ ಎಬ್ಬಿಸುತ್ತಿದ್ದಾನೆ. ಆದರೆ, ಜೈದೇವ ತನ್ನ ಕೆಲಸ ಮುಗಿಯುತ್ತಿದ್ದಂತೆಯೇ ಕಿರಣ್‌ಗೆ ದೊಡ್ಡ ಶಾಕ್ ಕೊಡಲಿದ್ದಾನೆ. ಆಫಿಸಿನಲ್ಲಿ ಕಿರಣ್ ತನ್ನ ಹಾಗೂ ಭೂಮಿಕಾ ಬಗ್ಗೆ ಗಾಸಿಪ್ ಆಗುವಂತೆ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ತಾನೇ ಹೇಳಿಕೊಂಡು ತಿರುಗುತ್ತಿದ್ದಾನೆ. ಆಫಿಸಿನಲ್ಲಿರುವವರು ಕೂಡ ಕಿರಣ್ ಮಾತನ್ನು ನಂಬಿದ್ದು, ಗೌತಮ್ ಹೆಂಡತಿ ಭೂಮಿಕಾ ಹಾಗೂ ಕಿರಣ್ ನಿಜವಾಗಲೂ ಪ್ರೇಮಿಗಳು ಎಂದು ನಂಬಿದ್ದಾರೆ.

Amruthadhaare Serial 20th December episode written update

ಭೂಮಿಕಾಳಿಗೆ ಮೋಸ ಮಾಡುತ್ತಿರುವ ಕಿರಣ್

ಇನ್ನು ಈಗಾಗಲೇ ಭೂಮಿಕಾ ವಿಚಾರಕ್ಕೆ ಕಿರಣ್ ಶೃತಿ ಜೊತೆಗೆ ಜಗಳ ಮಾಡಿಕೊಂಡಿದ್ದಾನೆ. ಶೃತಿ ಅನ್ನು ಮನೆಯಿಂದ ಹೊರಗೆ ಕಳಿಸಿದ್ದಾನೆ. ಈಗ ಭೂಮಿಕಾಳಿಗೆ ಗೌತಮ್‌ಗಿಂತಲೂ ತಾನೇ ಮುಖ್ಯ. ಪಾರ್ಟಿಯನ್ನು ಬಿಟ್ಟು, ಭೂಮಿಕಾ ನನ್ನ ಮನೆಗೆ ಬರುತ್ತಾಳೆ ಎಂದು ಆಫಿಸಿನವರಿಗೆ ನಂಬಿಸಿದ್ದಾನೆ. ಭೂಮಿಕಾಳಿಗೆ ಫೋನ್ ಮಾಡಿ ಶೃತಿ ತನ್ನ ಜೊತೆಗೆ ಜಗಳ ಮಾಡುತ್ತಿದ್ದಾಳೆ. ನೀವೆ ಬಂದು ಸಮಸ್ಯೆ ಅನ್ನು ಬಗೆ ಹರಿಸಬೇಕು ಎಂದು ಕೇಳಿದ್ದಾನೆ. ದಯವಿಟ್ಟು ಮನೆಗೆ ಬನ್ನಿ ಎಂದು ಕೇಳಿದ್ದಾನೆ. ಇದನ್ನು ನಂಬಿದ ಭೂಮಿಕಾ, ಕಿರಣ್ ಮನೆಗೆ ಬಂದಿದ್ದಾಳೆ. ಕಿರಣ್, ಶೃತಿ ಮನೆ ಬಿಟ್ಟು ಹೋದಳು. ಅವಳ ಫೋನ್ ಸ್ವಿಚ್ ಆಫ್ ಆಗಿದೆ. ನನ್ನ ನಿಮ್ಮ ನಡುವೆ ಇನ್ನೂ ಸಂಬಂಧ ಇದೆ ಎಂದು ಅಂದುಕೊಂಡಿದ್ದಾಳೆ ಎಂಬಂತೆ ನಾಟಕ ಮಾಡುತ್ತಾನೆ. ಭೂಮಿಕಾ, ಕಿರಣ್ ಮನೆಗೆ ಬಂದು ಹೋಗುವುದನ್ನು ನೋಡಿದ ಆಫಿಸಿನವರು ಅಪಾರ್ಥ ಮಾಡಿಕೊಳ್ಳುತ್ತಾರೆ.

ಸತ್ಯ ಹೇಳಿಕೊಳ್ಳಲಾಗದೇ ಗೆಳೆಯರ ಒದ್ದಾಟ

ಇತ್ತ ಆಫಿಸಿನಲ್ಲಿ ಭೂಮಿಕಾ ಬಗ್ಗೆ ಗಾಸಿಪ್ ಆಗಿರುವ ಸುದ್ದಿ ಗೌತಮ್ ಮತ್ತು ಗೆಳೆಯ ಆನಂದ್ ಇಬ್ಬರಿಗೂ ಗೊತ್ತಿದೆ. ಆದರೆ, ಗೌತಮ್‌ಗೆ ಗೊತ್ತು ಎಂಬ ವಿಚಾರ ಆನಂದ್‌ಗೆ ಗೊತ್ತಿಲ್ಲ. ಆದರೆ, ಆನಂದ್‌ಗೆ ಈ ವಿಚಾರವನ್ನು ಮುಚ್ಚಿಡುವುದು ಆಗುತ್ತಿಲ್ಲ. ಗೆಳೆಯನಿಗೆ ಹೇಗೆ ಹೇಳುವುದು ಎಂದು ಯೋಚಿಸುತ್ತಿದ್ದಾನೆ. ಗೌತಮ್ ಕೂಡ ತನ್ನ ಸಂಸಾರದಲ್ಲಿ ಎದ್ದಿರುವ ಬಿರುಗಾಳಿಯ ಬಗ್ಗೆ ಗೆಳೆಯ ಆನಂದ್ ಬಳಿ ಹೇಳಿಕೊಳ್ಳಲಾಗದೇ ಒದ್ದಾಡುತ್ತಿದ್ದಾನೆ.

More from Filmibeat

English summary
Amruthadhaare Serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X