Amruthadhaare: ಗೊಂದಲದ ನಡುವೆಯೇ ಮದುವೆಗೆ ಒಪ್ಪಿಗೆ ಸೂಚಿಸಿದ ಭೂಮಿಕಾ
ಭೂಮಿಕಾಳಿಗೆ ಈಗ ಶತಾಯಗತಾಯ ಮದುವೆ ಮಾಡಲೇಬೇಕು ಎಂದು ಎಲ್ಲರೂ ಒದ್ದಾಡುತ್ತಿದ್ದಾರೆ. ಗೌತಮ್ ಅಂತೂ ತನ್ನ ಸರ್ಕಲ್‌ನಲ್ಲಿ ಎಲ್ಲರನ್ನೂ ವಿಚಾರಿಸಿ ಒಳ್ಳೆ ಹುಡುಗನಿಗಾಗಿ ಹುಡುಕಾಟ ನಡೆಸಿದ್ದು ಆಗಿದೆ. ಯಾರೂ ಕೂಡ ಸೆಟ್ ಆಗಿಲ್ಲ. ಮಹಿಮಾ ಮದುವೆಯನ್ನು ಮಾಡಬೇಕು ಎಂದರೆ, ಭೂಮಿಕಾಳಿಗೆ ಗಂಡು ಹುಡುಕಿ ಮದುವೆ ಮಾಡಿಸಬಹುದು. ಆದರೆ, ಭೂಮಿಕಾ ಕೂಡ ಗೌತಮ್ ಮಾತುಗಳನ್ನು ಕೇಳುತ್ತಿಲ್ಲ.
ಗೌತಮ್ ತೋರಿಸಿದ ಯಾವ ಹುಡುಗನನ್ನು ಭೂಮಿಕಾ ಒಪ್ಪಲಿಲ್ಲ. ಬದಲಿಗೆ ನನಗೆ ಗಂಡು ನೋಡಲು ನಮ್ಮ ಮನೆಯವರು ಇದ್ದಾರೆ ಎಂದು ಹೇಳಿ ಬಿಟ್ಟಿದ್ದಾಳೆ. ಇದೇ ಸಂದರ್ಭದಲ್ಲಿ ಮಂದಾಕಿನಿಗೆ ಫೋನ್ ಬಂದಿದ್ದು, ಮುಂಬೈನ ಪ್ರಪೋಸಲ್ ಒಂದು ಬಂದಿದೆ. ಮುಂಬೈನಲ್ಲಿರುವ ಹುಡುಗ ಭೂಮಿಕಾಳನ್ನು ಒಪ್ಪಿದ್ದಾನೆ. ಮಂದಾಕಿನಿಗೆ ಈಗ ತನ್ನ ಮದುವೆಯಲ್ಲಿದ್ದ ಖುಷಿ ಆತಂಕಕ್ಕಿಂತಲೂ ಈಗ ಭೂಮಿಕಾಳಿಗೆ ಹುಡುಗನನ್ನು ತೋರಿಸುವುದರಲ್ಲಿ ಇದೆ.

ಭೂಮಿಕಾ ಯಾವ ಹುಡುಗನನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಮಂದಾಕಿನಿಗೆ ಹೆಚ್ಚು ಆತಂಕ. ಹುಡುಗನ ಮನೆಯವರು ಬಂದರೂ ಭೂಮಿಕಾ ಇನ್ನು ಬಂದಿರುವುದಿಲ್ಲ. ಇದರಿಂದಲೂ ಮಂದಾಕಿನಿ ಗಾಬರಿಯಾಗಿರುತ್ತಾಳೆ. ನಂತರ ಭೂಮಿಕಾ ಬರುತ್ತಾಳೆ. ಭೂಮಿಕಾಳನ್ನು ನೋಡಿದ ಕೂಡಲೇ ಹುಡುಗ ಒಪ್ಪಿಕೊಳ್ಳುತ್ತಾನೆ. ಭೂಮಿಕಾ ನ್ಯಾಚರಲ್ ಆಗಿಯೇ ಇರಲಿ. ಮೇಕಪ್ ಮಾಡಿಕೊಳ್ಳುವುದು ಬೇಡ ಎಂದು ಕೂಡ ಹೇಳುತ್ತಾನೆ.
ಭೂಮಿಕಾಳನ್ನು ಒಪ್ಪಿದ ಹುಡುಗ
ಭೂಮಿಕಾಳನ್ನು ಮಾತನಾಡಿಸಲು ಬಯಸುತ್ತಾನೆ. ಆಗ ಭೂಮಿಕಾ ಮತ್ತು ಹುಡುಗ ಇಬ್ಬರೂ ಬಾಲ್ಕನಿಗೆ ಹೋಗುತ್ತಾರೆ. ಮಳೆ ಬರುತ್ತಿರುವುದನ್ನು ನೋಡಿ ಹುಡುಗ ಖುಷಿಯಾಗುತ್ತಾನೆ. ನನಗೆ ಮಳೆ ಎಂದರೆ ಇಷ್ಟ ಎನ್ನುತ್ತಾನೆ. ಇದಕ್ಕೆ ಭೂಮಿಕಾ ಕೂಡ ತನಗೂ ಮಳೆ ಎಂದರೆ ಇಷ್ಟ ಎಂದು ಹೇಳುತ್ತಾಳೆ. ನಮ್ಮಿಬ್ಬರಿಗೂ ಒಂದೇ ರುಚಿ ಇದೆ ಎನಿಸುತ್ತದೆ ಎನ್ನುವ ಹುಡುಗ ತನ್ನ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ತನಗೆ ಯಾವುದರ ಮೇಲೂ ಆಸೆ ಇಲ್ಲ ಎಂಬುದನ್ನು ಹೇಳಿಕೊಳ್ಳುತ್ತಾನೆ. ಇದನ್ನೆಲ್ಲಾ ಕೇಳುವ ಭೂಮಿಕಾಳಿಗೆ ತಾನು ಬಯಸಿದ ಎಲ್ಲಾ ಗುಣಗಳೂ ಇವನೊಬ್ಬನಲ್ಲೇ ಇದೆಯಲ್ಲಾ ಎಂದು ಖುಷಿ ಪಡುತ್ತಾಳೆ. ಹುಡುಗನ ಮನೆಯವರು ಭೂಮಿಕಾಳನ್ನು ಒಪ್ಪಿಕೊಂಡು ಹೊರಟು ಬಿಡುತ್ತಾರೆ.
ಮದುವೆಗೆ ಒಪ್ಪಿದ ಭೂಮಿಕಾ
ರಾತ್ರಿ ಊಟ ಮಾಡುವಾಗ ಭೂಮಿಕಾ ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತಾಳೆ. ಇಷ್ಟು ಒಳ್ಳೆಯ ಸಂಬಂಧ ಬಂದರೂ ಭೂಮಿಕಾ ಇಷ್ಟಪಡದಿರುವುದು ಎಲ್ಲರಿಗೂ ಬೇಸರವನ್ನು ತರುತ್ತದೆ. ನಂತರ ಭೂಮಿಕಾ ಮನೆಯವರು ಬೇಸರ ಮಾಡಿಕೊಳ್ಳುತ್ತಾರೆ. ತನ್ನ ಮದುವೆಯಾದರೆ ಮಹಿಮಾ ಹಾಗೂ ಜೀವನ್ ಒಂದಾಗುತ್ತಾರೆ ಎಂಬುದನ್ನು ಅರಿತುಕೊಂಡು ಒಪ್ಪಿಗೆ ಸೂಚಿಸುತ್ತಾಳೆ. ನನಗೆ ಮನ ಪೂರ್ವಕವಾಗಿ ಈ ಮದುವೆಗೆ ಒಪ್ಪಿಗೆ ಇದೆ ಎನ್ನುತ್ತಾಳೆ. ಇದರಿಂದ ಮನೆಯವರೆಲ್ಲಾ ಖುಷಿ ಪಡುತ್ತಾರೆ.

ಗೊಂದಲ ಸೃಷ್ಟಿಸಿದ ಗೌತಮ್ ಮಾತು
ಇನ್ನು ಜೀವನ್ ಈ ಖುಷಿಯ ವಿಷಯವನ್ನು ಮಹಿಮಾಗೆ ತಿಳಿಸುತ್ತಾನೆ. ಮಹಿಮಾಳಿಂದ ಗೌತಮ್‌ಗೂ ವಿಚಾರ ಗೊತ್ತಾಗುತ್ತದೆ. ಮಾರನೆಯ ದಿನ ಗೌತಮ್ ಮನೆಯವರು ಭೂಮಿಕಾ ಮನೆಗೆ ಬರುತ್ತಾರೆ. ಭೂಮಿಕಾ ಬಳಿ ಗೌತಮ್ ಮಾತನಾಡುತ್ತಿರುತ್ತಾನೆ. ಆಗ ಗೌತಮ್‌ಗೆ ಭೂಮಿಕಾ ಮಹಿಮಾ ಮದುವೆ ಮಾಡಲು ನಿಮಗೂ ಸುಲಭವಾಯ್ತು. ಮಹಿಮಾ ಮದುವೆಯ ಬಳಿಕ ನಿಮ್ಮ ಮದುವೆ ಬಗ್ಗೆಯೂ ಯೋಚಿಸಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಗೌತಮ್ ಅದೆಲ್ಲಾ ಸಾಧ್ಯವಿಲ್ಲ. ನನಗೂ ಒಂದು ಜೀವ ಕಾಯುತ್ತಿರಬೇಕು. ನನಗಾಗಿ ಮಿಡಿಯುವ ಹೃದಯ ಬೇಕು ಅನಿಸುತ್ತೆ. ಆದರೆ, ನನಗೀಗ ಮದುವೆಯ ವಯಸ್ಸು ಮೀರಿದೆ ಎನ್ನುತ್ತಾನೆ.
ಗೌತಮ್ ಮಾತನ್ನು ಕೇಳಿದ ಭೂಮಿಕಾಳಿಗೆ ಅಂದು ಹೋಟೆಲ್ ನಲ್ಲಿ ಮಾತನಾಡಿದ್ದು, ಗೌತಮ್ ಇರಬಹುದಾ ಎನಿಸುತ್ತದೆ. ಇನ್ನು ಹುಡುಗನ ಮನೆಯವರು ಭೂಮಿಕಾಳಿಗೆ ಬಳೆ ತೊಡಿಸಿ ಬಟ್ಟೆ ಕೊಡುತ್ತಾರೆ. ಗೊಂದಲದಲ್ಲೇ ಭೂಮಿಕಾ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆ.


Click it and Unblock the Notifications











