Amruthadhaare ; ಅಮ್ಮನ ಮಾತು ಕೇಳಿದ ಜೈದೇವ ಭೂಮಿಕಾಯಿಂದ ಬಚಾವ್ ಆಗ್ತಾನಾ..?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ ಹಾಗೂ ಅಪೇಕ್ಷಾ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಗೌತಮ್ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ಗೌತಮ್ ಮತ್ತು ಆನಂದ್ ಇಬ್ಬರೂ ಮದುವೆ ಕೆಲಸಗಳಲ್ಲಿ ಮುತುವರ್ಜಿ ವಹಿಸಿದ್ದಾರೆ. ಮದುವೆ ಮನೆಯಲ್ಲಿ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡುತ್ತಿದ್ದಾರೆ.ಆನಂದ್ ಬೇಕಂತಲೇ ಗೌತಮ್ ನ ಪ್ರಶ್ನೆ ಮಾಡಿದ್ದಾನೆ. ಮನೆಯಲ್ಲಿ ಸಮಸ್ಯೆ ಎದುರಾದರೆ, ಯಾರ ಪರ ನಿಲ್ಲುತ್ತೀಯಾ. ತಾಯಿ ಮೊದಲಾ ಇಲ್ಲ ಹೆಂಡತಿಯಾಎಂದು ಕೇಳಿದ್ದಾನೆ.
ಜೈದೇವನಿಗೆ ಬುದ್ಧಿ ಹೇಳಿದ ಶಕುಂತಲಾ
ಈ ಮಾತಿಗೆ ಗೌತಮ್ ಸ್ವಲ್ಪವೂ ಯೋಚಿಸದೇ ತಾಯಿ ಫಸ್ಟ್ ಎಂದಿದ್ದಾನೆ. ಅಮ್ಮನಿಗೆ ಸಾಟಿ ಬೇರೆ ಯಾರೂ ಇಲ್ಲ. ಮೊದಲು ಅವಳು. ಆಮೇಲೆ ಹೆಂಡತಿ ಎಂದು ಹೇಳುತ್ತಾನೆ. ಇನ್ನು ಒಂದು ಕಡೆ ನಾದಿನಿ ಮದುವೆ ಸಂಭ್ರಮವಾದರೆ, ಮತ್ತೊಂದು ಕಡೆ ತಮ್ಮನ ಮದುವೆ ನಡೆಯುತ್ತಿರುವ ಖುಷಿಯಲ್ಲಿ ಗೌತಮ್ ಇದ್ದಾನೆ. ಆದರೆ, ಮನೆಯಲ್ಲಿ ಜೈದೇವ ಮಾಡಿರುವ ತಪ್ಪಿನ ಕಾವು ಜೋರಾಗಿದೆ. ಭೂಮಿಕಾ ಅಷ್ಟು ಸುಲಭವಾಗಿ ಯಾವುದನ್ನೂ ನಂಬುವುದಿಲ್ಲ. ಜೈದೇವನ ವಿಚಾರದಲ್ಲಿ ಈಗಲೂ ಅವಳ ಮನದಲ್ಲಿ ಅನುಮಾನದ ಹುಳವಿದೆ. ಯಾವ ಕ್ಷಣದಲ್ಲಿ ಬೇಕಾದರೂ ಬಂದು ನಿನ್ನನ್ನು ಪ್ರಶ್ನಿಸುತ್ತಾಳೆ. ನೀನು ಸ್ವಲ್ಪ ಯಾಮಾರಿ ಉತ್ತರ ಕೊಟ್ಟು ಸಿಕ್ಕಿ ಬೀಳುತ್ತೀಯಾ ಹಾಗಾಗಿ ಏನೂ ಗೊತ್ತೇ ಇಲ್ಲ ಎಂಬಂತೆ ನಡೆದುಕೊಳ್ಳುವುದು ಉತ್ತಮ. ಭೂಮಿಕಾಳನ್ನು ನಂಬಿಸುವುದು ಬಹಳ ಕಷ್ಟ ಹಾಗಾಗಿ ಏನೆಲ್ಲಾ ಮಾಡಬೇಕು. ಅಪೇಕ್ಷಾ ಜೊತೆಗೆ ಜೈದೇವನ ಮದುವೆ ನಡೆಯಬೇಕೆಂದರೆ ಏನು ಮಾಡಬೇಕು ಎಂಬುದನ್ನು ಶಕುಂತಲಾ ಹೇಳಿಕೊಡುತ್ತಾಳೆ.

ಜೈದೇವನನ್ನು ಪ್ರಶ್ನಿಸಿದ ಶಕುಂತಲಾ
ಭೂಮಿಕಾಳಿಗೆ ತನ್ನ ಬಗ್ಗೆ ಆಗಲೀ, ಜೈದೇವನ ಬಗ್ಗೆ ಆಗಲೀ ಯಾವುದೇ ಅನುಮಾನ ಇರಬಾರದು. ಅದರಿಂದ ಮದುವೆಗೂ ಸಮಸ್ಯೆ ಆಗಬಾರದು ಎಂದು ಶಕುಂತಲಾಳೇ ಜೈದೇವನನ್ನು ಕರೆಸಿದ್ದಾಳೆ. ಭೂಮಿಕಾ ಎದುರಿಗೆ ಮಲ್ಲಿ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಮಲ್ಲಿ ಗರ್ಭಿಣಿ ಆಗಿರುವ ವಿಚಾರ ಹಾಗೂ ಮಲ್ಲಿ ಮನೆಯಲ್ಲಿ ಜೈದೇವನ ವಾಚ್ ಸಿಕ್ಕ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಾಳೆ. ಸತ್ಯ ಹೇಳಬೇಕು ಇಲ್ಲದಿದ್ದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸುವಂತೆ ನಟಿಸುತ್ತಾಳೆ. ಜೈದೇವ ತನಗೂ ಮಲ್ಲಿಗೂ ಯಾವುದೇ ಸಂಬಂಧವಿಲ್ಲ. ಅವರ ಬಗ್ಗೆ ಏನೇನೂ ಗೊತ್ತಿಲ್ಲ. ನನ್ನನ್ನು ಅನುಮಾನಿಸಬೇಡಿ ಎಂದು ಮುಗ್ಧನಂತೆ ಉತ್ತರಿಸುತ್ತಾನೆ. ತನ್ನ ಬಗ್ಗೆ ಕೊಂಚವೂ ಅನುಮಾನ ಬರದಂತೆ ನಡೆದುಕೊಳ್ಳುತ್ತಾನೆ.
ಮದುವೆ ಮಂಟಪಕ್ಕೆ ಬಂದ ಅಪೇಕ್ಷಾ
ಮದುವೆಯ ದಿನ ಶಕುಂತಲಾ ಮನೆಯಲ್ಲಿ ಸಂಭ್ರಮಕ್ಕಿಂತಲೂ ಭೂಮಿಕಾಳನ್ನು ಸಮಾಧಾನ ಪಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಇತ್ತ ಮಂದಾಕಿನಿ, ಜೀವನ್, ಅಪೇಕ್ಷಾ ಹಾಗೂ ಮಹಿಮಾ ಎಲ್ಲರೂ ಕಳಸದ ಜೊತೆಗೆ ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ. ಮಂದಾಕಿನಿ ಆಸೆಯಂತೆ ಅಪೇಕ್ಷಾ ಒಳ್ಳೆಯ ಮನೆ ಸೇರುತ್ತಿರುವ ಸಂಭ್ರಮದಲ್ಲಿದ್ದಾಳೆ. ಆದರೆ, ಅಪೇಕ್ಷಾ ಮನಸೆಲ್ಲವೂ ಪಾರ್ಥನ ನೆನಪಿನಲ್ಲೇ ಇದ್ದು, ಬೇರೆ ದಾರಿ ಇಲ್ಲದೇ ಮದುಮಗಳಾಗಿದ್ದಾಳೆ.

ಜೈದೇವನ ಮಾತುಗಳನ್ನು ನಂಬುತ್ತಾಳಾ ಭೂಮಿಕಾ..?
ಭೂಮಿಕಾಳಿಗೆ ಜೈದೇವನ ಮಾತುಗಳನ್ನು ಕೇಳಿ ಗೊಂದಲ ಪರಿಹಾರವಾದಂತೆ ಕಾಣುತ್ತಿದೆ. ಜೈದೇವನಿಗೆ ಮಲ್ಲಿ ಬಗ್ಗೆ ಗೊತ್ತೇ ಇಲ್ಲ ಅನಿಸುತ್ತೆ. ಆದರೆ, ಮಲ್ಲಿ ತನ್ನ ಬಳಿ ಸುಳ್ಳು ಹೇಳಲು ಕಾರಣವೇನು ಎಂಬ ಯೋಚನೆಯಲ್ಲಿ ಮುಳುಗಿದ್ದಾಳೆ. ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿರುವ ಮಲ್ಲಿ ಬಗ್ಗೆಯೇ ಭೂಮಿಕಾ ಯೋಚಿಸುತ್ತಿದ್ದಾಳೆ. ಈ ಮದುವೆಯನ್ನು ಮಾಡಿಸುತ್ತಾಳಾ..? ಅಥವಾ ಮಲ್ಲಿಯನ್ನು ಹುಡುಕಿ ತರುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಇತ್ತ ಪಾರ್ಥ ಮತ್ತು ಅಪೇಕ್ಷಾ ದೂರವಾಗಿಯೇ ಉಳಿದು ಬಿಡುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ.


Click it and Unblock the Notifications











