ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಅಪ್ಪಿಯನ್ನು ಕಾಪಾಡುವುದು ಯಾರು ?
ಅಮೃತಧಾರೆ ಧಾರಾವಾಹಿಯಲ್ಲಿ ಜೀವ ಮನೆಯನ್ನು ಕಟ್ಟಿ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾನೆ. ಆದರೆ, ರಾಜೇಂದ್ರ ಭೂಪತಿ ಜೊತೆಗೆ ಜೀವ ಕೈ ಜೋಡಿಸಿದ್ದು ಗೌತಮ್ ಗೆ ಬೇಸರ ತಂದಿದೆ. ಒಂದುಕಡೆ ಜೀವ ಬದಲಾಗಿದ್ದರೆ, ಮತ್ತೊಂದು ಕಡೆ ಅಪೇಕ್ಷಾ ಕೂಡ ಬದಲಾಗಿದ್ದಾಳೆ. ಭೂಮಿಕಾಳನ್ನು ಪ್ರತಿಯೊಂದು ವಿಚಾರಕ್ಕೂ ದೂರ ಇಚ್ಛಿಸುವ ಅಪೇಕ್ಷಾ, ಮಹಿಮಾ ಮತ್ತು ಜೀವ ಕೊಟ್ಟ ಉಡುಗೊರೆಯನ್ನೂ ಕಂಡು ಹೀಯಾಳಿಸಿದ್ದಾಳೆ.ಅಲ್ಲದೇ, ಗೃಹಪ್ರವೇಶ ನಡೆಯುವಾಗಲೇ ಮನೆಯಿಂದ ಹೊರಗೆ ಹೋಗಿದ್ದು, ಪಾರ್ಥ ಎಷ್ಟೇ ಬುದ್ಧಿ ಹೇಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಪೇಕ್ಷಾ ಮನೆಯಿಂದ ಹೊರಗೆ ಹೊರಟಿದ್ದಾಳೆ.
ಮಲ್ಲಿಯ ಮುಂದಿನ ನಿರ್ಧಾರವೇನಿರಬಹುದು..?
ಇತ್ತ ಮಲ್ಲಿ ಜೈದೇವ್ ಮೀಟಿಂಗ್ ಎಂದು ಇದ್ದಕ್ಕಿದ್ದ ಹಾಗೆಯೇ ಮನೆಯಿಂದ ಹೊರಟಿದ್ದಕ್ಕೆ ಅನುಮಾನಗೊಂಡು ಫಾಲೋ ಮಾಡಿದ್ದಾಳೆ. ಜೈದೇವ್ ನೇರವಾಗಿ ದಿಯಾ ಮನೆಗೆ ಹೋಗಿದ್ದಾನೆ. ಅಲ್ಲಿ ದಿಯಾಳನ್ನು ಅಪ್ಪಿಕೊಂಡು ಮುತ್ತು ಕೊಟ್ಟು ಮಾತನಾಡಿದ್ದಾನೆ. ಆ ಮಲ್ಲಿ ನನ್ನ ಬದುಕಿನಲ್ಲಿ ದೊಡ್ಡ ತಲೆನೋವಾಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ದಿಯಾಳನ್ನು ನಗಿಸುವ ಸಲುವಾಗಿ ಮಲ್ಲಿ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ. ಇದನ್ನೆಲ್ಲಾ ಕಣ್ಣಾರೆ ಕಂಡ ಮಲ್ಲಿ ಬೇಸರ ಮಾಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಮತ್ತೆ ಮೋಸ ಹೋದೆ ಎಂದು ದುಃಖಿಸಿದ್ದಾಳೆ. ಈಗ ಪತಿಯ ಬಣ್ಣವನ್ನು ಸರಿಯಾಗಿ ಅರ್ಥೈಸಿಕೊಂಡಿರುವ ಮಲ್ಲಿಯ ಮುಂದಿನ ನಿರ್ಧಾರ ಕುತೂಹಲ ಮೂಡಿಸಿದೆ.

ಕುಡಿದು ಅವಾಂತರ ಸೃಷ್ಟಿಸಿದ ಅಪೇಕ್ಷಾ
ಇನ್ನು ಮನೆಯಿಂದ ಹೊರಟ ಅಪೇಕ್ಷಾ ಶಕುಂತಲಾಳ ಬಳಿ ತನಗಾದ ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಮನೆಯಲ್ಲಿ ಸಮಸ್ಯೆ ಉದ್ಭವಿಸಲಿ ಎಂದು ಶಕುಂತಲಾ ಈಗ ನೀನು ಹುಡುಗರ ರೀತಿ ಕುಡಿದು ಮನೆ ಮುಂದೆ ಹೋಗಿ ಗಲಾಟೆ ಮಾಡಬೇಡ ಎಂದು ಪರೋಕ್ಷವಾಗಿ ಆಗಿ ಅಪೇಕ್ಷಾಳನ್ನು ತಪ್ಪು ಮಾಡಲು ಹುರಿದುಂಬಿಸಿದ್ದಾಳೆ. ಅತ್ತೆಯ ಮಾತನ್ನು ಕೇಳಿದ ಅಪೇಕ್ಷಾ ನಿಜವಾಗಲೂ ಕುಡಿದು ಕಾರು ಚಲಾಯಿಸಿದ್ದಾಳೆ. ಈ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದ ಅಪೇಕ್ಷಾ ದುರಹಂಕಾರ ತೋರಿಸಿದ್ದಾಳೆ. ಪೊಲೀಸರಿಗೆ ದುಡ್ಡು ಬಿಸಾಡಿದ್ದು, ಪೊಲೀಸರ ಕಾಲರ್ ಹಿಡಿದು ಬೈದಿದ್ದಾಳೆ. ಅಲ್ಲದೇ, ಕಪಾಳಕ್ಕೆ ಹೊಡೆದು ಅವಮಾನಿಸಿದ್ದಾಳೆ. ಇದರಿಂದ ಕೋಪಗೊಂಡ ಪೊಲೀಸರು ಅಪೇಕ್ಷಾಳನ್ನು ಅರೆಸ್ಟ್ ಮಾಡಿದ್ದಾರೆ.
ತಂಗಿಗಾಗಿ ಪೊಲೀಸ್ ಠಾಣೆಗೆ ಬಂದ ಭೂಮಿಕಾ
ತಾನು ದಿವಾನ್ ಕುಟುಂಬಕ್ಕೆ ಸೇರಿದವಳು ಎಂಬ ಮತ್ತಿನಲ್ಲಿ ತೇಲಾಡುತ್ತಿರುವ ಅಪೇಕ್ಷಾಳಿಗೆ ತಾನು ಮಾಡಿದ ತಪ್ಪಿನಿಂದ ಮುಂದಾಗುವ ಪರಿಣಾಮದ ಅರಿವೇ ಇಲ್ಲ. ಅಪೇಕ್ಷಾ ಅರೆಸ್ಟ್ ಆಗಿರುವ ವಿಚಾರವನ್ನು ಶಕುಂತಲಾ ಮಂದಾಕಿನಿಗೆ ತಿಳಿಸಿದ್ದು, ಮಂದಾಕಿನಿ ಸದಾಶಿವನ ಬಳಿ ಹೇಳಿದ್ದಾಳೆ. ಸದಾಶಿವ ಮಗಳನ್ನು ಬಿಡಿಸಲು ಹೊರಟಾಗ ಭೂಮಿಕಾ ಸತ್ಯ ಅರಿತು ಸಮಸ್ಯೆ ಅನ್ನು ತಾನೇ ಬಗೆಹರಿಸುವುದಾಗಿ ಹೇಳಿ, ಪೊಲೀಸ್ ಠಾಣೆಗೆ ತೆರಳಿದ್ದಾಳೆ.
ದಿವಾನ್ ಕುಟುಂಬಕ್ಕೆ ಸಮಸ್ಯೆ ತಂದ ಸೊಸೆ
ಮನೆಯಲ್ಲಿ ಗೃಹಪ್ರವೇಶ ಸಮಾರಂಬ ಅದ್ಧುರಿಯಾಗಿ ನಡೆದಿದ್ದು. ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಪೇಕ್ಷಾ ಅರೆಸ್ಟ್ ಆಗಿರುವುದು ಭೂಮಿಕಾಳಿಗೆ ಬೇಸರವನ್ನು ಮೂಡಿಸಿದೆ. ಭೂಮಿಕಾ ಪೊಲೀಸರ ಬಳಿ ತಂಗಿಯನ್ನು ಬಿಡುವಂತೆ ಕೇಳಿಕೊಂಡಿದ್ದು, ಪೊಲೀಸರೂ ನನ್ನ ಮೇಲೆ ಕೈ ಮಾಡಿದ್ದಾಳೆ. ಜೈಲು ಪಾಲು ಮಾಡುತ್ತೇನೆ ಎಂದು ಹೇಳಿದ್ದಾರೆ. ಶಕುಂತಲಾ ಕೊಟ್ಟ ಐಡಿಯಾದಿಂದ ತವರು ಮನೆಗೆ ಅವಮಾನಿಸಲು ಹೋಗಿ ಈಗ ಸೊಸೆ ಅಪೇಕ್ಷಾ ಇಡೀ ದಿವಾನ್ ಕುಟುಂಬಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾಳೆ. ಅಪೇಕ್ಷಾ ಮಾಡಿದ ಈ ತಪ್ಪು ಇನ್ನೂ ಏನೆಲ್ಲಾ ಸಮಸ್ಯೆ ಅನ್ನು ತಂದೊಡ್ಡುತ್ತದೋ ಕಾದು ನೋಡಬೇಕಿದೆ.


Click it and Unblock the Notifications











