Amruthadhaare ; ಜೈದೇವ್ ಗೆ ಅತ್ತಿಗೆ ಮೇಲೆ ಅನುಮಾನ : ಗೌತಮ್ ಗೆ ಸತ್ಯ ಹೇಳಿದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿ ತನ್ನ ಅಪಾರ್ಟ್ ಮೆಂಟ್ ನ ಇತರೆ ಹೆಂಗಸರ ಜೊತೆಗೆ ಮಾತನಾಡುವಾಗ ಮಹಿಮಾಳನ್ನು ಹೊಗಳಿ ಮಾತನಾಡುತ್ತಾಳೆ. ಮಹಿಮಾ ಮನೆ ಕೆಲಸದ ಜೊತೆಗೆ ಆಫೀಸ್ ಕೆಲಸವನ್ನೂ ನಿಭಾಯಿಸುತ್ತಾಳೆ. ತನಗೆ ತುಂಬಾ ಸಹಾಯ ಮಾಡುತ್ತಾಳೆ. ಆದರೆ ತಾನೇ ಮಹಿಮಾಳಿಗೆ ಯಾವ ಕೆಲಸವನ್ನೂ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಈ ಮಾತನ್ನು ಯಾರೂ ನಂಬುವುದಿಲ್ಲ. ಹುಟ್ಟಿದಾಗ್ಲೇ ಚಿನ್ನದ ಸ್ಪೂನ್ ಅನ್ನು ಬಾಯಿಯಲ್ಲಿ ಇಟ್ಟುಕೊಂಡು ಬಂದಿರುವ ನಿಮ್ಮ ಸೊಸೆ ಯಾವ ಕೆಲಸವನ್ನೂ ಮಾಡಲು ಬರುವುದಿಲ್ಲ. ನೀವು ಹೇಳುವುದೇ ನಿಜವಾದರೆ ನಿಮ್ಮ ಸೊಸೆಗೆ ಸ್ಪರ್ಧೆ ಇಡುತ್ತೇವೆ. ಅದರಲ್ಲಿ ಆಕೆ ಗೆದ್ದರೆ ನಿಮ್ಮ ಮಾತನ್ನು ಒಪ್ಪುತ್ತೇವೆ ಎಂದು ಹೇಳುತ್ತಾರೆ.

ಗೌತಮ್ ಗೆ ಎಲ್ಲಾ ಸತ್ಯವನ್ನು ಹೇಳಿದ ಭೂಮಿಕಾ

ಗೌತಮ್ ತಮ್ಮ ಆಫೀಸ್ ಟೆಂಡರ್ ವಿಚಾರದಲ್ಲಿ ಬಹಳ ತಲೆ ಕೆಡಿಸಿಕೊಂಡಿದ್ದಾನೆ. ಬೇಗ ಮನೆಗೆ ಬರುತ್ತಾನೆ. ಇದೇ ಸಂದರ್ಭದಲ್ಲಿ ಭೂಮಿಕಾ ಗೌತಮ್ ಗೆ ಎಲ್ಲಾ ಸತ್ಯವನ್ನು ಹೇಳುತ್ತಾಳೆ. ಕೆಂಚನನ್ನು ಬಿಡಿಸಿರುವುದು, ಆತ ಈ ಕೆಲಸದ ಹಿಂದಿರುವ ವ್ಯಕ್ತಿ ತಮ್ಮ ಮನೆಯಲ್ಲೇ ಇದ್ದಾನೆ. ಸಾಕ್ಷಿ ಸಮೇತ ನಿಮಗೆ ಸತ್ಯ ಹೇಳುತ್ತೇನೆ ಎಂದಿರುವುದನ್ನು ಹೇಳುತ್ತಾಳೆ. ಗೌತಮ್ ಭೂಮಿಕಾ ಮಾತನ್ನು ಕೇಳಿ ಶಾಕ್ ಆಗುತ್ತಾನೆ. ಬಳಿಕ ಭೂಮಿಕಾ ಈಗಲೇ ಕೆಂಚನನ್ನು ಭೇಟಿ ಮಾಡೋಣ ಎಂದು ಹೇಳಿ ಕರೆದುಕೊಂಡು ಹೊರಡುತ್ತಾಳೆ.

amruthadhaare-serial-21-june-episode-written-update

ಜೈದೇವ್ ಗೆ ಸರ್ಪ್ರೈಸ್ ಇದೆ ಎಂದ ಭೂಮಿಕಾ

ಜೈದೇವ್ ನನ್ನು ಇಂದು ಭೂಮಿಕಾ ಬಹಳ ಸಲುಗೆಯಿಂದಲೂ ಮೆಚ್ಚುಗೆಯಿಂದಲೂ ಮಾತನಾಡಿಸುತ್ತಾಲೆ. ಭೂಮಿಖಾ ತನ್ನ ಮೇಲೆ ಭರವಸೆಯಿಂದ ಹೀಗೆ ಮಾತನಾಡುತ್ತಿದ್ದಾಳೆ ಎಂದು ಜೈದೇವ್ ಮೊದಲು ಭಾವಿಸುತ್ತಾನೆ.ಆದರೆ, ಗೌತಮ್ ಜೊತೆಗೆ ಹೋಗುವಾಗ ಭೂಮಿಕಾ, ಮನೆಯಲ್ಲಿ ಇಂದು ಸಂಜೆ ಸರ್ಪ್ರೈಸ್ ಪಾರ್ಟಿ ಇದೆ ಎಲ್ಲೂ ಹೋಗಬೇಡಿ. ಮನೆಯವರು ಮಾತ್ರ ಸೇರಿಕೋಮಡು ಪಾರ್ಟಿ ಮಾಡೋಣ ಎಂದು ಹೇಳುತ್ತಾಳೆ. ಈ ಮಾತಂತೂ ಜೈದೇವ್ ಗೆ ಅನುಮಾನವನ್ನು ಮೂಡಿಸುತ್ತದೆ. ಭೂಮಿಕಾ ಮಾತಿನ ಹಿಂದೆ ಬೇರೇನೋ ಅರ್ಥ ಇದೆ ಎಂದು ಭಾವಿಸುತ್ತಾನೆ.


ಭೂಮಿಕಾ ಮೇಲೆ ಜೈದೇವ್ ಗೆ ಅನುಮಾನ

ಲಕ್ಷ್ಮೀಕಾಂತನ ಜೊತೆಗೆ ಜೈದೇವ್ ಫುಲ್ ಹ್ಯಾಪಿ ಆಗಿ ಮಾತನಾಡುತ್ತಿರುತ್ತಾನೆ. ಎರಡು ಕೋಟಿ ಹಣವನ್ನು ತಮ್ಮದೇ ಹಳೆಯ ಫ್ಯಾಕ್ಟರಿ ಬಳಿ ತರಲು ಹೇಳಿದ್ದಾನೆ. ಕೈಗೆ ಹಣ ಸಿಗುತ್ತದೆ ಎಂಬ ಖುಷಿಯಲ್ಲಿ ಜೈದೇವ್ ಇದ್ದಾನೆ. ಇನ್ಮುಂದೆ ಹೀಗೆಯೇ ಸೈಲೆಂಟ್ ಆಗಿ ಇದ್ದುಕೊಂಡೆ ಹಣ ಗಳಿಸಿ ಸಂತೋಷವಾಗಿ ಇರಬೇಕು ಎಂದು ಜೈದೇವ್ ಅಂದುಕೊಂಡಿದ್ದಾನೆ. ಈ ಬಗ್ಗೆ ಲಕ್ಷ್ಮೀಕಾಂತ್ ಬಳಿ ಮಾತನಾಡುವಾಗ ಭೂಮಿಕಾ ಬಗ್ಗೆಯೂ ಹೇಳುತ್ತಾನೆ. ಭೂಮಿಕಾ ಇಷ್ಟು ಬೇಗ ತನ್ನ ಜೊತೆಗೆ ಇಷ್ಟು ಖುಷಿಯಾಗಿ ಮಾತನಾಡುತ್ತಿರುವುದರ ಹಿಂದೆ ಏನೋ ಅರ್ಥವಿದೆ ಅನಿಸುತ್ತಿದೆ. ಆದರೆ, ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳುತ್ತಾನೆ. ಆದರೆ, ಲಕ್ಷ್ಮೀಕಾಂತ ಈ ಬಗ್ಗೆ ಜೈದೇವ್ ಗೆ ನೆಗಲೆಕ್ಟ್ ಆಗಿ ಉತ್ತರಿಸುತ್ತಾನೆ.

amruthadhaare-serial-21-june-episode-written-update


ಜೈದೇವ್ ಬಗ್ಗೆ ಹೊಸ ಸುಳಿವು ಸಿಗುತ್ತಾ..?

ಭೂಮಿಕಾ ಮತ್ತು ಗೌತಮ್ ಕೆಂಚನನ್ನು ಭೇಟಿ ಮಾಡಲು ಹೊರಟಿದ್ದಾರೆ. ಆದರೆ, ಇದೇ ಸಮಯದಲ್ಲಿ ಗೌತಮ್ ಗೆ ಫೋನ್ ಬಂದಿದೆ. ಹಣ ಇರುವ ಕಾರು ಹೊರಟಿದೆ, ಅದರಲ್ಲಿ ಜಿಪಿಎಸ್ ಅಳವಡಿಸಲಾಗಿದೆ ಎಂದು. ಆಗ ಗೌತಮ್ ತಾನು ಅಲ್ಲಿಗೆ ಹೋಗಬೇಕು ಎಂದು ಹೇಳುತ್ತಾನೆ. ಭೂಮಿಕಾ ಕೂಡ ನಾನು ಬರುತ್ತೇನೆ. ಆ ಕೆಲಸ ಮುಗಿಸಿಕೊಂಡ ಬಳಿಕವೇ ಕೆಂಚನನ್ನು ಭೇಟಿ ಮಾಡೋಣ ಎನ್ನುತ್ತಾಳೆ. ಜೈದೇವ್ ಮೋಸದಾಟದ ಬಗ್ಗೆ ಗೌತಮ್ ಮತ್ತು ಭೂಮಿಕಾಳಿಗೆ ಸುಳಿವು ಸಿಗುತ್ತದಾ ಎಂದು ಖಾದು ನೋಡಬೇಕಿದೆ.

More from Filmibeat

English summary
bhoomika tells gautham about kencha and goes to learn truth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X