Amruthadhaare ; ಮನೆಗೆ ಬಂದು ಸೇರಿಕೊಂಡ ಮಾನ್ಯ : ಭೂಮಿಕಾ ಎದುರು ಬಯಲಾಗುತ್ತಾ ಗೌತಮ್ ರಹಸ್ಯ..?
ಅಮೃತಧಾರೆ ಧಾರಾವಾಹಿಯಲ್ಲಿ ಈಗಾಗಲೇ ಜೈದೇವನ ಜೊತೆಗೆ ಅಪೇಕ್ಷಾ ಮದುವೆ ಫಿಕ್ಸ್ ಆಗಿ ಒಮ್ಮೆ ಮುರಿದು ಬಿದ್ದಿದೆ. ಇದರಿಂದ ಮಂದಾಕಿನಿಗೆ ಆತಂಕ ಶುರುವಾಗಿದೆ. ಹೀಗಾಗಿ ಮಂದಾಕಿನಿ ಯಾವುದೇ ಕಾರಣಕ್ಕೂ ಅಪೇಕ್ಷಾಳನ್ನು ದೊಡ್ಡ ಮನೆಗೆ ಕೊಟ್ಟು ಮದುವೆ ಮಾಡಬಾರದು ಎಂದು ತೀರ್ಮಾನಿಸಿದ್ದಾಳೆ. ದೊಡ್ಡವರ ಸಹವಾಸ ಮಾಡುವುದೇ ತಪ್ಪು ಎಂದು ಪಾರ್ಥನ ಎದುರು ಮಾತನಾಡಿದ್ದಾಳೆ.ಇದರಿಂದ ಪಾರ್ಥ ಹಾಗೂ ಅಪೇಕ್ಷಾಗೆ ಹೊಸ ಆತಂಕ ಶುರುವಾಗಿದೆ. ತಮ್ಮಿಬ್ಬರ ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳಿಕೊಳ್ಳುವುದು ಹೇಗೆ..? ಅದರಿಂದ ಮನೆಯವರು ತಮ್ಮಿಬ್ಬರ ಮದುವೆಗೆ ಒಪ್ಪುತ್ತಾರಾ ಎಂದು ಯೋಚಿಸುತ್ತಿದ್ದಾರೆ.
ಜಾತಕ ತೋರಿಸಲು ಮುಂದಾದ ಸದಾಶಿವ
ಇತ್ತ ಸದಾಶಿವನಿಗೆ ಸೊಸೆಗೆ ಒಂದು ಮಗುವಾದರೆ, ಮೊಮ್ಮಗುವನ್ನು ನೋಡಬಹುದು ಎಂಬ ಆಸೆ ಹುಟ್ಟಿದೆ. ಇದರಿಂದ ಉಪವಾಸ, ಪೂಜೆ ಪುನಸ್ಕಾರವನ್ನು ಆರಂಭಿಸಿರುವ ಸದಾಶಿವ ಈಗ ಮಕ್ಕಳ ಜಾತಕವನ್ನು ಜ್ಯೋತಿಷ್ಯರ ಬಳಿ ತೋರಿಸಲು ಮುಂದಾಗಿದ್ದಾರೆ. ಈ ವಿಚಾರ ತಿಳಿದ ಮಹಿಮಾಳಿಗೆ ಆತಂಕ ಎದುರಾಗಿದೆ. ತನ್ನ ಜಾತಕವನ್ನು ತೋರಿಸಿದರೆ, ತಾನು ಅಬಾರ್ಷನ್ ಮಾಡಿಕೊಂಡ ಸತ್ಯ ಗೊತ್ತಾಗಬಹುದು ಎಂದು ಗಾಬರಿಯಾಗಿದ್ದಾಳೆ. ಹಾಗಾಗಿ ಜೀವನ್ ಬಳಿ ವಿಚಾರಿಸುತ್ತಾಳೆ. ಜೀವನ್ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾನೆ. ಕೆಲ ಜ್ಯೋತಿಷ್ಯರು ಎಲ್ಲಾ ಸತ್ಯವನ್ನು ಹೇಳುತ್ತಾರೆ. ಕೆಲವರು ಹೇಳೋದಿಲ್ಲ ಎಂದೆಲ್ಲಾ ಹೇಳುತ್ತಾನೆ. ಮಹಿಮಾಳಿಗೆ ಹೇಗೆ ರಿಯಾಕ್ಟ್ ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ.

ಆತಂಕ ತೋಡಿಕೊಂಡ ಗೌತಮ್
ಇತ್ತ ಗೌತಮ್ ಮನೆಗೆ ಬಂದ ಬಳಿಕವೂ ತೀರಾ ಆತಂಕದಲ್ಲೇ ಇದ್ದಾನೆ. ಗೌತಮ್ ಡಲ್ ಆಗಿ ಇರುವುದನ್ನು ನೋಡಿದ ಭೂಮಿಕಾ ಬೇಸರ ಮಾಡಿಕೊಂಡಿದ್ದಾಳೆ. ಆನಂದ್ ಮನೆಗೆ ಬಂದ ಕೂಡಲೇ ನಡೆದ ಘಟನೆಯನ್ನೆಲ್ಲಾ ಹೇಳಿ ಬಿಡುತ್ತಾಳೆ. ಗೌತಮ್ ಗೆ ಸಮಾಧಾನ ಮಾಡಲು ಹೋದಾಗ ಮಾನ್ಯಳಿಗೆ ಆಕ್ಸಿಡೆಂಟ್ ಆಗಿರುವುದು ಎಂದು ಹೇಳಿದಾಗ ಆನಂದ್ ಗೂ ಭಯವಾಗುತ್ತದೆ. ಮಾನ್ಯಳಿಂದಾಗಿ ಗೌತಮ್ ಬಾಳಲ್ಲಿ ಮತ್ತೆ ಸಮಸ್ಯೆ ಎದುರಾಗಬಹುದು ಎಂದು ಚಿಂತಿಸುತ್ತಾನೆ. ಗೌತಮ್ ಗೆ ಸಮಾಧಾನ ಮಾಡಿ, ನೋಡೋಣ, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳೋಣ ಎಂದು ಧೈರ್ಯ ತುಂಬುತ್ತಾನೆ.

ಮಾನ್ಯಳನ್ನು ಮಾತನಾಡಿಸಿದ ಭೂಮಿಕಾ
ಇನ್ನು ಭೂಮಿಕಾ ಆಸ್ಪತ್ರೆಗೆ ಹೋಗಿ ಮಾನ್ಯಳಿಗೆ ಎಚ್ಚರವಾದ ಬಳಿಕ ಮಾತನಾಡಿಸುತ್ತಾಳೆ. ನೀವು ಯಾರು..? ನಿಮ್ಮ ಹೆಸರೇನು ಎಂದೆಲ್ಲಾ ವಿಚಾರಿಸುತ್ತಾಳೆ. ಮಾನ್ಯ ತನ್ನ ಹೆಸರನ್ನು ಹೇಳುತ್ತಾಳೆ. ಭೂಮಿಕಾ ಅಪಘಾತವಾದ ವಿಚಾರವನ್ನು ತಿಳಿಸಿ, ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳುತ್ತಾಳೆ. ಪೊಲೀಸರು ಬಂದು ಮಾನ್ಯಳನ್ನು ವಿಚಾರಿಸಿದಾಗ ಮಾನ್ಯ ಕೂಡ, ಇಲ್ಲ ತನ್ನದೇ ತಪ್ಪು ಎಂದು ಹೇಳುತ್ತಾಳೆ. ತಕ್ಷಣವೇ ಭೂಮಿಕಾ ಮಾನ್ಯಳನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಆದರೆ ಈ ವಿಚಾರ ಶಕುಂತಲಾ ಹಾಗೂ ಗೌತಮ್ ಗೆ ಗೊತ್ತಿರುವುದಿಲ್ಲ.

ಟೆನ್ಷನ್ ಹೆಚ್ಚಿಸಿಕೊಂಡ ಶಕುಂತಲಾ
ಮಾನ್ಯಳಿಗೆ ಪ್ರಜ್ಞೆ ಬಂದಿರಬಹುದು ಎಂದು ಆಸ್ಪತ್ರೆಗೆ ಗೌತಮ್ ಮತ್ತು ಶಕುಂತಲಾ ಹೋಗುತ್ತಾರೆ. ಅಲ್ಲಿ ಮಾನ್ಯ ಇಲ್ಲದಿರುವುದನ್ನು ನೋಡಿ ತಲೆ ನೋವು ಹೋಯ್ತು ಎಂದುಕೊಳ್ಳುತ್ತಾರೆ. ಆದರೆ, ಮನೆಗೆ ಬಂದು ನೋಡಿದರೆ, ಮಾನ್ಯ ಭೂಮಿಕಾ ಜೊತೆಗೆ ಇರುತ್ತಾಳೆ. ಇದರಿಂದ ಶಕುಂತಲಾಳೀಗೆ ಟೆಂಷನ್ ಹೆಚ್ಚಾಗಿದೆ. ಮಾನ್ಯ ಸುಮ್ಮನಿರುವುದಿಲ್ಲ. ಏನಾದರೂ ಸಮಸ್ಯೆ ನ ತರುತ್ತಾಳೆ. ಗೌತಮ್ ಗೆ ತೊಂದರೆ ಕೊಡುತ್ತಾಳೆ. ಮಾನ್ಯಳ ಬಾಯಿ ಮುಚ್ಚಿಸಬೇಕು ಎಂದು ಶಕುಂತಲಾ ಯೋಚಿಸುತ್ತಿದ್ದಾಳೆ. ಆದರೆ, ಮಾನ್ಯ ತಲೆಯಲ್ಲಿ ಏನು ಓಡುತ್ತಿದೆ..? ಗೌತಮ್ ಹಾಗೂ ಮಾನ್ಯಳ ರಹಸ್ಯವೇನು ಎಂಬುದನ್ನು ಮುಂದೆ ನೋಡಬೇಕಿದೆ.


Click it and Unblock the Notifications











