Amruthadhaare ; ಮಲ್ಲಿಗೆಂದು ತಂದ ಊಟ ಮಹಿಮಾ ಪಾಲಾಯ್ತು : ಜೈದೇವನ ಮತ್ತೊಂದು ಪ್ಲಾನ್ ಉಲ್ಟಾ ಆಯ್ತು..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಚಿಕ್ಕಮಗಳುರಿಗೆ ಗೌತಮ್ ಮತ್ತು ಭೂಮಿಕಾ ಹನಿಮೂನ್ ಗೆಂದು ಹೋಗಿದ್ದಾರೆ. ಇನ್ನು ಹೋಗಿ ಒಂದೇ ದಿನವಾವಾಗಿದೆ.ಅವರ ಎಸ್ಟೇಟ್ ಸುತ್ತಾಡುತ್ತಿದ್ದಾರೆ.1500 ಎಕರೆ ಎಸ್ಟೇಟ್ ಇಟ್ಟುಕೊಂಡಿರುವ ಗೌತಮ್ ಹೆಂಡತಿ ಭೂಮಿಕಾ. ತನಗೆ ಆ ಎಸ್ಟೇಟ್ ಗಿಫ್ಟ್ ಮಾಡುತ್ತಾರೆ ಎಂಬುದನ್ನು ತಿಳಿದು ಕನ್ಫ್ಯೂಸ್ ಆಗಿದ್ದಾಳೆ. ಇನ್ನು ಗೌತಮ್ ಜೊತೆಗೆ ಇಂದು ಭೂಮಿಕಾ ಮತ್ತು, ಅಪರ್ಣಾ-ಆನಂದ್ ಎಲ್ಲರೂ ಕಾಫಿ ಫ್ಯಾಕ್ಟರಿಗೆ ತೆರಳುತ್ತಾರೆ. ದೊಡ್ಡ ಫ್ಯಾಕ್ಟರಿಯಲ್ಲಿ ಕಾಫಿ ಬೀಜಗಳನ್ನು ಪುಡಿ ಮಾಡಿ ಪ್ಯಾಕ್ ಮಾಡಲಾಗುತ್ತದೆ

ಕಾಫಿ ಫ್ಯಾಕ್ಟರಿಗೆ ಹೋದ ಭೂಮಿಕಾ

ಆ ಕಾಫಿ ಪುಡಿಯನ್ನು ಹೆಚ್ಚಾಗಿ ಫಾರಿನ್ ಗೆ ಎಕ್ಸ್ ಪೋರ್ಟ್ ಮಾಡುವ ಬಗ್ಗೆ ಗೌತಮ್ ಹೇಳುತ್ತಾನೆ. ವರ್ಷಕ್ಕೆ ಸಾವಿರಾರು ಟನ್ ಕಾಫಿ ಅನ್ನು ತಯಾರಿಸಲಾಗುತ್ತದೆಯಂತೆ. ಈ ಫ್ಯಾಕ್ಟರಿ ಗೌತಮ್ ಅವರ ತಾತನ ಕನಸು. ಅವರ ತಂದೆ ಕೂಡ ಆಸೆ ಇಟ್ಟುಕೊಂಡಿದ್ದು, ಈಗ ಗೌತಮ್ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾನೆ. ಈ ಕಾಫಿ ಫ್ಯಾಕ್ಟರಿಗೆ ಭಾಗ್ಯ ಎಂದು ಹೆಸರಿಟ್ಟಿರಲಾಗುತ್ತದೆ. ಭಾಗ್ಯ ಎಂದರೆ ಯಾರು ಎಂದು ಭೂಮಿಕಾ ವಿಚಾರಿಸುತ್ತಾಳೆ. ಆನಂದ್ ಅದು ಗೌತಮ್ ತಾಯಿ ಎಂದಾಗ ಭೂಮಿಕಾ ಗೌತಮ್ ಬಳಿ ಹೋಗಿ ನಿಮ್ಮ ತಾಯಿಯ ಬಗ್ಗೆ ಹೇಳಿ ಎಂದು ಕೇಳುತ್ತಾಳೆ. ಆದರೆ ಗೌತಮ್ ಈಗ ಬೇಡ ಇನ್ನೊಂದು ದಿನ ಹೇಳುತ್ತೀನಿ ಎನ್ನುತ್ತಾನೆ.

amruthadhaare-serial-21-may-episode-written-update


ಕೆಲಸದವರಿಗೆ ಭರವಸೆ ಕೊಟ್ಟ ಗೌತಮ್

ಇನ್ನು ಫ್ಯಾಕ್ಟರಿಗೆ ಕೆಂಚನ ಪತ್ನಿ ಬಂದು ನನ್ನ ಗಂಡ ಮಣ್ಣು ತಿನ್ನುವ ಕೆಲಸವನ್ನು ಮಾಡಿದ್ದಾನೆ. ದಯವಿಟ್ಟು ಅವನನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಿಸಿ. ಇಲ್ಲದೇ ಹೋದರೆ ನನಗೆ ಕಷ್ಟವಾಗುತ್ತದೆ ಎಂದು ಗೌತಮ್ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಾಳೆ. ಗೌತಮ್ ಕೂಡ ಕ್ಷಮಿಸಿ ಕೆಂಚನನ್ನು ಬಿಡಿಸುವ ವ್ಯವಸ್ಥೆ ಮಾಡುತ್ತಾನೆ. ಇನ್ನು ಕೆಲಸಗಾರರನ್ನೆಲ್ಲಾ ಕರೆದು ಗೌತಮ್ ಸಮಾಧಾನದ ಮಾತುಗಳನ್ನು ಆಡುತ್ತಾನೆ. ಎಸ್ಟೇಟ್ ನಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಎಲ್ಲರೂ ಅರಾಮವಾಗಿರಿ ಎಂದು ಧೈರ್ಯ ತುಂಬುತ್ತಾನೆ. ವಾಪಸ್ ಮನೆಗೆ ಹೋದ ಬಳಿಕ ಗೌತಮ್ ಭೂಮಿಕಾಳಿಗೆ ಪ್ರಪೋಸ್ ಮಾಡಲೇಬೇಕು ಎಂದು ತೀರ್ಮಾನಿಸುತ್ತಾನೆ. ಹಾಗಾಗಿ ಭೂಮಿಕಾಳನ್ನು ನಾಳೆ ರೆಡಿ ಇರುವಂತೆ ಹೇಳಿದಾಗ ಅವಳಿಗೆ ಖುಷಿಯಾಗುತ್ತದೆ.

ಮಲ್ಲಿ ಊಟದಲ್ಲಿ ಸ್ಲೀಪಿಂಗ್ ಪಿಲ್ಸ್

ಇತ್ತ ಮಲ್ಲಿಯನ್ನು ಸಾಯಿಸಲು ಜೈದೇವ ಮತ್ತೊಂದು ಪ್ಲಾನ್ ಮಾಡಿದ್ದಾನೆ. ಅದೇನೆಂದರೆ ಸ್ಲೀಪಿಂಗ್ ಮಾತ್ರೆಗಳನ್ನು ಕೊಟ್ಟು ಮಲ್ಲಿಯ ಪ್ರಜ್ಞೆ ತಪ್ಪಿಸುವುದು ಬಳಿಕ ಅವಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಂದು ಬಿಡುವುದು. ನಂತರ ಪೊಲೀಸ್ ಠಾಣೆಗೆ ಹೋಗಿ ಮಲ್ಲಿ ಕಾಣಿಸುತ್ತಿಲ್ಲ ಎಂದು ದೂರು ನೀಡಬೇಕು ಎಂದುಕೊಂಡಿದ್ದಾನೆ. ಈ ಪ್ಲಾನ್ ಗೆ ಶಕುಂತಲಾ ಮತ್ತು ಲಕ್ಷ್ಮೀಕಾಂತ ಕೂಡ ಓಕೆ ಎಂದಿದ್ದಾರೆ.

amruthadhaare-serial-21-may-episode-written-update

ಮಲ್ಲಿ ಕೇರ್ ಟೇಕರ್ ಮಹಿಮಾ

ಮಹಿಮಾ ಮಲ್ಲಿ ಜೊತೆಗೆ ಮಾತನಾಡುವಾಗಲೇ ಜೈದೇವ ಊಟವನ್ನು ತೆಗೆದುಕೊಂಡು ಬರುತ್ತಾನೆ. ಅದರಲ್ಲಿ ನಿದ್ರೆ ಮಾತ್ರೆಯ ಪುಡಿ ಹಾಕಿರುತ್ತಾನೆ. ಇನ್ನೇನು ಮಲ್ಲಿ ತಿನ್ನಬೇಕು ಎನ್ನುವಷ್ಟರಲ್ಲಿ ಮಹಿಮಾ ಈ ಊಟ ನಾನು ತ್ತಿನ್ನುತ್ತೀನಿ. ನನಗೆ ಒಂದು ದಿನವೂ ಹೀಗೆ ಊಟ ತಂದು ಕೊಟ್ಟಿಲ್ಲ ಎಂದು ತಿನ್ನಲು ಮುಂದಾಗುತ್ತಾಳೆ. ಈಗ ಮಹಿಮಾಳನ್ನು ಶಕುಂತಲಾ ಮತ್ತು ಜೈದೇವ ತಡೆಯುತ್ತಾರಾ..? ಇಲ್ಲ ಮಹಿಮಾ ಊಟ ಮಾಡಿ ದಿನವಿಡೀ ಮಲಗುತ್ತಾನಾ ಎಂಬುದನ್ನು ಕಾದುನೋಡಬೇಕಿದೆ.

More from Filmibeat

English summary
jaidev brings food for malli but mahima tries to eat it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X