Amruthadhaare ; ಬದಲಾದಂತೆ ನಟಿಸುತ್ತಿರುವ ಜೈದೇವ್ : ಶಕುಂತಲಾಳನ್ನು ಕಾಡುತ್ತಾಳಾ ಗೌತಮ್ ತಾಯಿ ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಶಕುಂತಲಾಳನ್ನು ಹೀಯಾಳಿಸಿದ್ದಾನೆ. ತನಗೆ ಸಿಎಫ್ಒ ಪೋಸ್ಟ್ ಸಿಗದೇ ಇದ್ದಿದ್ದಕ್ಕೆ ಬೇಸರವಿಲ್ಲ. ಆದರೆ, ನಿನ್ನ ಮಾತಿಗೆ ಬೆಲೆ ಇಲ್ಲದಂತಾಯ್ತು ಎಂದು ಮಾತನಾಡಿದ್ದಾನೆ. ಜೈದೇವ್ ಗೆ ಆ ಪೋಸ್ಟ್ ಸಿಗದಿದ್ದರೇನು, ತನ್ನದೇ ಮತ್ತೊಬ್ಬ ಮಗ ಪಾರ್ಥನಿಗೆ ಸಿಕ್ಕಿದೆ ಎಂದು ಶಕುಂತಲಾ ಸಮಾಧಾನಪಟ್ಟುಕೊಂಡಿದ್ದಾಳೆ. ಆದರೆ, ಇದನ್ನು ಮತ್ತೆ ಮತ್ತೆ ಲಕ್ಷ್ಮೀಕಾಂತ ಕೆಣಕಲು ಯತ್ನಿಸಿದ್ದಾನೆ. ನಿನ್ನ ಮಗನಿಗೆ ಪೋಸ್ಟ್ ಸಿಕ್ಕಿದ್ದರೂ ಕೂಡ ಗೌತಮ್ ನಿನ್ನ ಮಾತನ್ನು ಮೀರಿದ್ದಾನೆ ಎಂಬುದನ್ನು ಮರೆಯಬೇಡ. ಇದು ಇಂದಲ್ಲ ನಾಳೆ ನಿನಗೆ ಮುಳ್ಳಾಗುತ್ತದೆ. ನೀನು ಗೌತಮ್ ನನ್ನು ನಿನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾನೆ.

ಅಪರ್ಣಾಳಿಗೆ ಸಿಕ್ಕ ಸುಧಾ ಯಾರು ಗೊತ್ತಾ..?

ಇತ್ತ ಅಪರ್ಣಾ ರಸ್ತೆ ದಾಟುವಾಗ ಅಪಘಾತವಾಗಬೇಕಿತ್ತು. ಈ ಸಂದರ್ಭರ್ದಲ್ಲಿ ಹೆಂಗಸೊಬ್ಬಳು ಬಂದು ಕಾಪಾಡಿದ್ದಾಳೆ. ಅವಳ ಹೆಸರು ಸುಧಾ. ಇಂತಹ ಕಾಲದಲ್ಲೂ ಇಷ್ಟು ಒಳ್ಳೆಯ ಆಲೋಚನೆಗಳನ್ನು ಮಾಡುವ ವ್ಯಕ್ತಿ ಇದ್ದಾರೆ ಎಂದು ಅಪರ್ಣಾ ಮತ್ತು ಆನಂದ್ ಸುಧಾಳನ್ನು ಕಂಡು ಶಾಕ್ ಆಗಿದ್ದಾರೆ. ಇನ್ನು ತಮ್ಮ ಮನೆಯ ಕೆಲಸಕ್ಕೆ ಸುಧಾಳನ್ನೇ ನೇಮಿಸಬೇಕು ಎಂದು ತೀರ್ಮಾನಿಸಿದ್ದಾರೆ. ಆದರೆ, ಈ ಸುಧಾ ಯಾರು ಎಂಬ ಪ್ರಶ್ನೆ ಮೂಡಿದೆ. ಗೌತಮ್ ನಂತೆಯೇ ಮಾತನಾಡುವ, ಆಲೋಚಿಸುವ ಈ ಸುಧಾ ಅವರ ಸಹೋದರಿಯೇ ಇರಬೇಕು ಎಂದು ಹಲವರು ಗೆಸ್ ಮಾಡುತ್ತಿದ್ದಾರೆ. ಅಮ್ಮನಿಗಾಗಿ ಹುಡುಕಾಡುತ್ತಿರುವ ಗೌತಮ್ ಗೆ ತಂಗಿಯೇ ದಾರಿ ತೋರುತ್ತಾಳಾ ಕಾದು ನೋಡಬೇಕಿದೆ.

Amruthadhaare Serial 21 October episode written update


ದಿಯಾ ಜೊತೆಗೆ ಜೈದೇವ್ ಬ್ರೇಕಪ್

ಈತ್ತ ಜೈದೇವ್ ಒಳ್ಳೆಯವನಂತೆ ನಟಿಸಲು ಮುಂದಾಗಿದ್ದಾನೆ. ಹೀಗಾಗಿ ಅಣ್ಣನೊಂದಿಗೆ ಆಫೀಸಿಗೆ ಹೋಗಿದ್ದಾನೆ. ಅಣ್ಣನ ಪ್ರತಿಯೊಂದು ಕೆಲಸದಲ್ಲೂ ಭಾಗಿಯಾಗಿ ತಾನು ಬದಲಾಗಿದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದಾನೆ. ಇನ್ನು ದಿಯಾ ಪದೇ ಪದೇ ಫೋನ್ ಮಾಡಿದರೂ ರೆಸ್ಪಾನ್ಸ್ ಮಾಡದ ಜೈದೇವ್, ನಿನ್ನ ಜೊತೆಗೆ ಬ್ರೇಕಪ್ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು ಎಂದು ಕೇಳಿದ್ದಾನೆ. ಅಲ್ಲದೇ, ಬೇಕಂತಲೇ ಆನಂದ್ ಗೆ ಫೋನ್ ಮಾಡಿದ್ದು,ದಿಯಾ ಕಾಟ ಕೊಡುತ್ತಿದ್ದಾಳೆ. ಅವಳನ್ನು ದೆಹಲಿಗೆ ಕಳಿಸಿ ಕೊಡಿ. ನನಗೆ ನನ್ನ ತಪ್ಪಿನ ಅರಿವಾಗಿದೆ. ಮತ್ತೆ ತಪ್ಪು ಮಾಡಲು ಇಷ್ಟವಿಲ್ಲ ಎಂದಿದ್ದಾನೆ.


ಅಣ್ಣನನ್ನು ಇಂಪ್ರಸ್ ಮಾಡುತ್ತಿರುವ ಜೈದೇವ್

ಅಷ್ಟೇ ಅಲ್ಲದೇ, ಅಣ್ಣನನ್ನು ಇಂಪ್ರೆಸ್ ಮಾಡುವ ಸಲುವಾಗಿ ಕಂಪನಿಗೆ ಅವಾರ್ಡ್ ಬರುವಂತೆ ಮಾಡಿದ್ದಾನೆ. ಗೌತಮ್ ಜೈದೇವ್ ಕೆಲಸ ಕಂಡು ಸಂತಸಪಟ್ಟಿದ್ದಾನೆ. ಇನ್ನು ಇತ್ತ ಶಕುಂತಲಾಳಿಗೆ ಮತ್ತೆ ಮಾನ್ಯ ಕಾಟ ಶುರುವಾಗಿದೆ. ಮಾನ್ಯಾಳನ್ನು ಕಾರು ಅಪಘಾತದಲ್ಲಿ ಕೊಂದಿದ್ದಾಗಿದೆ. ಆದರೆ, ಅವಳ ಸಹೋದರಿ ಈಗ ಗೌತಮ್ ಗೆ ಪದೇ ಪದೇ ಫೋನ್ ಮಾಡುತ್ತಿದ್ದು, ನಿಮ್ಮ ಬಳಿ ಮಾತನಾಡುವುದಿದೆ ಎಂದು ಕೇಳುತ್ತಲೇ ಇದ್ದಾಳೆ. ಅಲ್ಲದೇ, ಶಕುಂತಲಾಳಿಗೆ ಫೋನ್ ಮಾಡಿ ನನ್ನ ಅಕ್ಕನನ್ನು ಕೊಂದಿರಬಹುದು. ಆದರೆ, ಸತ್ಯವನ್ನು ಹೇಳೇ ಹೇಳುತ್ತೇನೆ. ಭಾಗ್ಯ ಅವರ ಗುಟ್ಟನ್ನು ಬಿಚ್ಚಿಡುತ್ತೇನೆ ಎಂದು ಗೌತಮ್ ತಾಯಿ ಬಗ್ಗೆ ಮಾತನಾಡಿದ್ದಾಳೆ.

ಅಪೇಕ್ಷಾಳಿಗೆ ಹೆಚ್ಚಾಗಿದೆ ದುರಹಂಕಾರ

ಇನ್ನು ಅಪೇಕ್ಷಾಳಿಗೆ ದಿನ ದಿನಕ್ಕೂ ದುರಹಂಕಾರ ಹೆಚ್ಚಾಗುತ್ತಿದೆ. ಪಾರ್ಥನಿಗೆ ಪ್ರೊಮೋಷನ್ ಸಿಕ್ಕಿರುವುದು ತನ್ನ ಕಾಲು ಗುಣದಿಂದ ಎಂದು ಭಾವಿಸಿದ್ದಾಳೆ. ಮನೆಯಲ್ಲೊ ತನ್ನ ದರ್ಪವನ್ನು ತೋರಲು ಶುರು ಮಾಡಿದ್ದಾಳೆ. ಮನೆಯ ಚೇಫ್ ಗಳಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾಳೆ. ಸಮಾಧಾನ ಮಾಡಲು ಬಂದ ಭೂಮಿಕಾಳಿಗೂ ಅಪೇಕ್ಷಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇನ್ನು ಅವಳ ಕೊಬ್ಬನ್ನು ಪಾರ್ಥ ಯಾವತ್ತು ಇಳಿಸುತ್ತಾನೋ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X