Amruthadhaare ; ಭೂಮಿಕಾಳ ಮೇಲೆ ಮಲ್ಲಿಗೆ ಕೋಪ : ಜೈದೇವ್ ಆಟ ಹೆಂಡತಿಗೆ ಗೊತ್ತಾಗುತ್ತಾ..?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಅವಳಿಗೆ ಮಕ್ಕಳಾಗುವುದಿಲ್ಲ ಎಂದು ಶಕುಂತಲಾ ಸ್ನೇಹಿತರು ಹೀಯಾಳಿಸಿದ್ದಾರೆ. ಭೂಮಿಕಾಳಿಗೆ ಇದರಿಂದ ಅವಮಾನವಾಗಿದೆ. ಆದರೆ, ಯಾರ ಬಳಿಯೂ ಹೇಳಿಕೊಳ್ಳಲಾಗದೇ ಕಣ್ಣೀರು ಹಾಕುತ್ತಿರುತ್ತಾಳೆ. ಇದನ್ನೆಲ್ಲಾ ಗಮನಿಸಿದ ಅಪರ್ಣಾ ಭೂಮಿಕಾಳಿಗೆ ಸಮಾಧಾನ ಮಾಡುತ್ತಾಳೆ. ಬಳಿಕ ಗೌತಮ್ ಬಳಿ ಹೋಗಿ ಶಕುಂತಲಾ ಅವರ ಸ್ನೇಹಿತರು ಮಾಡಿದ ಅವಮಾನದ ಬಗ್ಗೆ ತಿಳಿಸುತ್ತಾಳೆ. ಇದರಿಂದ ಭೂಮಿಕಾಳ ಮನಸ್ಸಿಗೆ ನೋವಾಗಿದೆ ಎಂದು ಹೇಳುತ್ತಾಳೆ.
ಹೆಂಡತಿ ಪರ ಮಾತನಾಡಿದ ಗೌತಮ್
ಇದನ್ನೆಲ್ಲಾ ಕೇಳಿದ ಗೌತಮ್, ಸೀಮಂತ ಮಾಡುವಾಗ ಅಮ್ಮನ ಸ್ನೇಹಿತರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಕಂಡವರ ಮನೆಯ ಸುದ್ದಿ ನಿಮಗ್ಯಾಕೆ. ಯಾರಿಗೆ ಮದುವೆಯಾಗಿಲ್ಲ. ಮಕ್ಕಳಾಗಿಲ್ಲ. ಮನೆ ತೆಗೆದುಕೊಂಡಿಲ್ಲ. ಕಾರು ಖರೀದಿಸಿಲ್ಲ ಎಂದು ಇನ್ನೊಬ್ಬರ ವಿಚಾರಕ್ಕೆ ಯಾಕೆ ತಲೆ ಹಾಕುತ್ತೀರಾ. ಅವರವರ ಬದುಕು ಅವರ ಸ್ವಂತ ನಿರ್ಧಾರ. ನೀವು ಬಂದು ಬಾಣಂತನ ಮಾಡುವಂತೆ ಮಾತನಾಡುತ್ತೀರಾ. ನಾವು ಮಕ್ಕಳು ಮಾಡಿಕೊಳ್ಳದೇ ಇರುವುದಕ್ಕೆ ಸಿಂಪಲ್ ಕಾರಣ ಎಂದರೆ, ನನಗೆ ನನ್ನ ತಮ್ಮ-ತಂಗಿಯರೇ ಮಕ್ಕಳಿದ್ದಂತೆ. ಅವರ ಬದುಕು ಸುಖಮಯವಾಗಿರಬೇಕು ಎಂಬುದೇ ನಮ್ಮ ಆಸೆ ಎಂದು ಹೇಳುತ್ತಾನೆ. ಇದರಿಂದ ಶಕುಂತಲಾ ಮತ್ತು ಅವಳ ಗೆಳತಿಯರಿಗೆ ಅವಮಾನವಾಗುತ್ತದೆ. ಭೂಂಇಕಾ ಬಗ್ಗೆ ಯಾರೂ ಮಾತನಾಡದಂತೆ ಖಡಕ್ ವಾರ್ನಿಂಗ್ ಕೊಡುತ್ತಾನೆ.

ಭೂಮಿಕಾ ಮೇಲೆ ಮಲ್ಲಿಗೆ ಕೋಪ
ಇನ್ನು ಮಲ್ಲಿಗೆ ಅಪೇಕ್ಷಾ ತನ್ನ ಅಕ್ಕನ ಬುದ್ಧಿ ಸರಿಯಿಲ್ಲ. ಉಸುರುವಳ್ಳಿಯ ಬುದ್ಧಿ ನಿಮಗೆ ಮುಂದೆ ಗೊತ್ತಾಗುತ್ತೆ ಎಂದು ಕಿವಿ ಊದಿರುತ್ತಾಲೆ. ಇದೇ ಸಂದರ್ಭದಲ್ಲಿ ಜೈದೇವ್ ಕೂಡ ಬಂದು ಭೂಮಿಕಾ ತನ್ನ ಮತ್ತು ದಿಯಾ ಬಗ್ಗೆ ಇನ್ನೂ ಅಪಾರ್ಥ ಮಾಡಿಕೊಂಡಿದ್ದಾರೆ. ಆದರೆ, ನನಗೆ ದಿಿಿಯಾ ಕೇವಲ ಸ್ನೇಹಿತೆಯಷ್ಟೇ. ನನ್ನ ಅವಳ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ಯಾರಾದರೂ ನನ್ನ ಬಗ್ಗೆ ಹೇಳಿದರೆ, ನೀನು ಅನುಮಾನಿಸಬೇಡ ಎಂದು ಎಮೋಷನಲ್ ಆಗಿ ಜೈದೇವ್ ಮಾತನಾಡುತ್ತಾನೆ. ಮಲ್ಲಿಯನ್ನು ಸೀಮಂತ ಆದ ಬಳಿಕ ಊರಿಗೆ ಕಳಿಸಿಕೊಡಬೇಕು ಎಂದು ಭೂಮಿಕಾ ಮಲ್ಲಿ ಬಳಿ ಹೋಗಿ ನಿನ್ನ ಗಂಡನ ಬಗ್ಗೆ ಹೆಚ್ಚು ಗಮನ ಕೊಡು ಎಂದು ಬುದ್ಧಿ ಮಾತನ್ನು ಹೇಳುತ್ತಾಳೆ. ಆದರೆ, ಮಲ್ಲಿಗೆ ಕೋಪ ಬರುತ್ತದೆ.
ದಿಯಾಳನ್ನು ಭೇಟಿ ಮಾಡಿದ ಜೈದೇವ್
ಭೂಮಿಕಾಳಿಗೆ ಮಲ್ಲಿ ನೇರವಾಗಿ ಬೈಯುತ್ತಾಳೆ. ನನ್ನ ಗಂಡನ ಮೇಲೆ ನನಗೆ ನಂಬಿಕೆ ಇದೆ. ಸುಮ್ಮನೆ ಅವರ ಮೇಲೆ ಏನೇನೋ ಹೇಳಬೇಡಿ. ನಿಮಗೆ ಈ ರೀತಿ ಕೆಟ್ಟ ಬುದ್ಧಿ ಇದೆ ಎಂದು ಅಂದುಕೊಂಡಿರಲಿಲ್ಲ. ಇನ್ಯಾವತ್ತು ನನ್ನ ಗಂಡನ ತಂಟೆಗೆ ಬಾರದಿರಿ ಎಂದು ಖಡಕ್ ಆಗಿ ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಭೂಮಿಕಾಳಿಗೆ ಇನ್ನಷ್ಟು ನೋವಾಗುತ್ತದೆ. ಮಲ್ಲಿ ತನ್ನ ಮಾತನ್ನು ಅಪಾರ್ಥ ಮಾಡಿಕೊಂಡಿದ್ದಾಳೆ ಎಂಬುದು ತಿಳಿದು ಸುಮ್ಮನಾಗುತ್ತಾಳೆ. ಮಲ್ಲಿ ಸೀಮಂತ ಮುಗಿಸಿಕೊಂಡು ಮನೆಯಿಂದ ಹೊರಟ ಬಳಿಕ ಜೈದೇವ್ ದಿಯಾಳನ್ನು ಭೇಟಿ ಮಾಡಲು ಮುಂದಾಗಿದ್ದಾನೆ. ದಾರಿ ಮಧ್ಯೆ ಕಾರನ್ನು ನಿಲ್ಲಿಸಿ ದಿಯಾ ಕಾರನ್ನು ಹತ್ತಿದ್ದಾನೆ.

ಸತ್ಯ ಅರಿಯುತ್ತಾಳಾ ಮಲ್ಲಿ..?
ಮಲ್ಲಿ ಜೈದೇವ್ ಬಹಳ ಒಳ್ಳೆಯ ಗಂಡ ಎಂದು ತಿಳಿದಿದ್ದಾಳೆ. ಇದೇ ಅತೀಯಾದ ನಂಬಿಕೆ ಮೇಲೆ ಭೂಮಿಕಾ ಹೇಳಿದ ಮಾತುಗಳನ್ನು ಗಮನಕ್ಕೆ ಹಾಕಿಕೊಳ್ಳುವುದಿಲ್ಲ. ಆದರೆ ಈಗ ಜೈದೇವ್ ಮಲ್ಲಿಗೆ ಕಣ್ಣೇದುರೇ ಮಣ್ಣೆರಚುತ್ತಿದ್ದಾನೆ. ಮಲ್ಲಿ ದಿಯಾಳನ್ನು ನೋಡುತ್ತಾಳಾ..? ಗಂಡ ಮತ್ತು ದಿಯಾ ಒಟ್ಟಿಗೆ ಇರುವುದನ್ನು ನೋಡಿ ಮಲ್ಲಿ ತನ್ನ ತಪ್ಪನ್ನು ಅರ್ಥ ಮಾಡಿಕೊಳ್ಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











