Amruthadhaare: ಪಾರ್ಟಿಗೆ ಬಂದು ಭೂಮಿಕಾಳ ಮೇಲೆ ಅಪವಾದ ಹೊರಿಸಿದ ಕಿರಣ್

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತನಗೆ ಅರಿಯದೆಯೇ ದೊಡ್ಡ ಮೋಸದ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಭೂಮಿಕಾ ಮೇಲೆ ದ್ವೇಷ ಸಾಧಿಸುತ್ತಿರುವ ಜೈದೇವನದ್ದೇ ಎದೆಲ್ಲದರ ಕೈವಾಡವಾಗಿದೆ.

ಶಕುಂತಲಾ ಬಳಿಯೂ ಭೂಮಿಕಾ ಅತ್ತಿಗೆ ಕಿರಣ್ ಅನ್ನು ಪ್ರೀತಿಸುತ್ತಿದ್ದು, ಪಾರ್ಟಿಯಲ್ಲಿ ಈ ವಿಚಾರದ ಬಗ್ಗೆ ಗೌತಮ್ ಅಣ್ಣ ಎಲ್ಲರಿಗೂ ಕ್ಲಾರಿಟಿ ಕೊಡಲಿದ್ದಾರೆ ಎಂದು ಹೇಳುತ್ತಾನೆ.

ಶಕುಂತಲಾಳಿಗೆ ಇದು ಗೊಂದಲ ಸೃಷ್ಟಿಸುತ್ತದೆ. ಆದರೂ ಯಾವ ವಿಚಾರದ ಬಗ್ಗೆ ಯೋಚಸದೇ, ಗೌತಮ್‌ಗೆ ಬೇಕಾದಂತೆ ಪಾರ್ಟಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿರುತ್ತಾರೆ.

Amruthadhaare Serial 21st December episode written update

ಭೂಮಿಕಾಳಿಗೆ ಸರ್ಪ್ರೈಸ್ ಕೊಟ್ಟ ಮನೆಯವರು

ಕಿರಣ್ ಮನೆಗೆ ಹೋಗಿದ್ದ ಭೂಮಿಕಾ, ಆತುರದಲ್ಲಿ ಮನೆಗೆ ಓಡಿ ಓಡಿ ಬರುತ್ತಾಳೆ. ಮನೆಯೆಲ್ಲಾ ಕತ್ತಲೆಯಿಂದ ತುಂಬಿ ಹೋಗಿರುತ್ತದೆ. ಇದರಿಂದ ಭೂಮಿ ಕೆಲ ಸಮಯ ಗಾಬರಿಯಾಗಿ ಎಲ್ಲರನ್ನೂ ಕೂಗುತ್ತಾಳೆ. ಬಳಿಕ ಎಲ್ಲರೂ ಕ್ಯಾಂಡಲ್ ಹಿಡಿದು ಭೂಮಿಕಾ ವಿಶ್ ಮಾಡುತ್ತಾರೆ. ಲೈಟ್ಸ್ ಆನ್ ಆದಾಗ ಡೆಕರೇಷನ್ ನೋಡಿ ಭೂಮಿಕಾ ಸ್ಟನ್ ಆಗುತ್ತಾಳೆ. ಇನ್ನು ಅಪ್ಪ-ಅಮ್ಮ, ಅಪೇಕ್ಷಾಳನ್ನು ನೋಡಿದ ಭೂಮಿಕಾಳಿಗೆ ಮತ್ತಷ್ಟು ಶಾಕ್ ಆಗುತ್ತದೆ. ನೀವೆಲ್ಲಾ ಬಂದಿದ್ದು ಖುಷಿಯಾಯ್ತು, ಗೆಸ್ ಕೂಡ ಮಾಡಿರಲಿಲ್ಲ ಎಂದು ಹೇಳುತ್ತಾಳೆ. ಆಗ ಮನೆಯವರೆಲ್ಲಾ, ಇದೆಲ್ಲಾ ಪ್ಲಾನ್ ಕೂಡ ಗೌತಮ್ ಅವರದ್ದೇ. ನಿನಗೋಸ್ಕರ ಈ ಸರ್ಪ್ರೈಸ್ ನೀಡಿದ್ದಾರೆ ಎಂದು ಹೇಳಿ ಗಿಫ್ಟ್ ಕೊಡುತ್ತಾರೆ. ಇನ್ನು ಗೌತಮ್ ಅನ್ನು ಅತ್ತಿಗೆಗೆ ಕೊಡಬೇಕು ಎಂದುಕೊಂಡಿರುವ ಸರ್ಪ್ರೈಸ್ ಏನು ಕೊಡು ಎಂದು ಆನಂದ್ ಕೇಳುತ್ತಾನೆ. ಗೌತಮ್ ಮೊದಲು ಕೇಕ್ ಕಟ್ ಮಾಡಲಿ ಎಂದು ಹೇಳುತ್ತಾನೆ.

ಭೂಮಿಕಾಳಿಗೆ ವಿಶ್ ಮಾಡಿದ ಕಿರಣ್

ಇನ್ನು ಭೂಮಿಕಾ ಕ್ಯಾಂಡಲ್ ಊದಿ, ಕೇಕ್ ಕಟ್ ಮಾಡಬೇಕು ಅದೇ ಸಮಯಕ್ಕೆ ಕಿರಣ್ ಎಂಟ್ರಿ ಕೊಡುತ್ತಾನೆ. ಭೂಮಿಕಾಳಿಗೆ ಹ್ಯಾಪಿ ಬರ್ತ್ ಡೇ ಟು ಯೂ ಮೈ ಡಿಯರ್ ಭೂಮಿಕಾ ಎಂದು ಹೇಳುತ್ತಾನೆ. ಇದು ಮನೆವರೆಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತದೆ. ಕಿರಣ್ ಸೀದಾ ಭೂಮಿಕಾ ಬಳಿ ಹೋಗಿ ಎಲ್ಲರ ಎದುರಿಗೆ ರೋಸ್ ಕೊಡುತ್ತಾನೆ. ಇದರಿಂದ ಭೂಮಿಕಾ ಗಾಬರಿಯಾಗುತ್ತಾಳೆ. ಗೌತಮ್‌ಗೆ ಮುಜುಗರವುಂಟಾಗುತ್ತದೆ. ಏನು ಮಾಡಬೇಕು ಎಂದು ತಿಳಿಯದ ಭೂಮಿಕಾ ರೋಸ್ ತೆಗೆದುಕೊಂಡು ಕೇಕ್ ಕಟ್ ಮಾಡಲು ಹೋಗುತ್ತಾಳೆ. ಕೇಕ್ ಅನ್ನು ಕಿರಣ್ ಮೊದಲು ಭೂಮಿಕಾಳಿಗೆ ತಿನ್ನಿಸಲು ಹೊರಟಾಗ ಭೂಮಿಕಾ ಕಿರಣ್‌ಗೆ ಬೈಯುತ್ತಾಳೆ.

Amruthadhaare Serial 21st December episode written update

ಸುಳ್ಳು ಕತೆ ಹೇಳಿದ ಕಿರಣ್

ಆಗ ಮಂದಾಕಿನಿ, ಸದಾಶಿವ, ಜೀವನ್ ಎಲ್ಲರಿಗೂ ಕೋಪ ಬರುತ್ತದೆ. ಆದರೂ, ಈಗ ಏನೂ ಮಾತನಾಡಬಾರದು ಪಾರ್ಟಿ ಮುಗಿದ ಮೇಲೆ ಕಿರಣ್‌ಗೆ ಗ್ರಹಚಾರ ಬಿಡಿಸಬೇಕು ಎಂದುಕೊಳ್ಳುತ್ತಾರೆ. ಗೌತಮ್‌ಗೆ ಕಿರಣ್ ನಡವಳಿಕೆ ಸಿಕ್ಕಾಪಟ್ಟೆ ಇರಿಟೇಟ್ ಮಾಡುತ್ತಿರುತ್ತದೆ. ಆದರೂ ಸುಮ್ಮನಿರುತ್ತಾನೆ. ಕಿರಣ್, ತಾನು ಮತ್ತು ಭೂಮಿಕಾ ಪ್ರೀತಿಸುತ್ತಿದ್ದು, ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಇದನ್ನೆಲ್ಲಾ ಪಾರ್ಟಿಯಲ್ಲಿ ಹೇಳುವಂತೆ ಭೂಮಿಕಾನೇ ಹೇಳಿದ್ದು ಎನ್ನುತ್ತಾನೆ. ಈ ಮಾತಿಗೆ ಶಕುಂತಲಾ ಕೋಪಗೊಂಡು ಗೌತಮ್‌ಗೆ ಕಿರಣ್‌ಗೆ ಬೈಯ್ಯಲು ಹೇಳುತ್ತಾಳೆ. ಆಗ ಗೌತಮ್, ಕಿರಣ್ ಏನೇನು ಹೇಳಬೇಕೋ ಎಲ್ಲವನ್ನೂ ಹೇಳಲಿ ಎನ್ನುತ್ತಾನೆ.

ಕಿರಣ್ ಮಾತನ್ನು ನಂಬುತ್ತಾನಾ ಗೌತಮ್

ಇನ್ನು ಕಿರಣ್ ತನ್ನ ಮನೆಗೆ ಭೂಮಿಕಾ ಬಂದು, ಪಾರ್ಟಿ ಮಾಡಿ ಈಗ ಇಲ್ಲಿಗೆ ಬಂದಿರುವುದು ಎಂದು ಹೇಳುತ್ತಾನೆ. ಈ ಮಾತಿಗೆ ಗೌತಮ್ ನೀವು ಕಿರಣ್ ಮನೆಗೆ ಹೋಗಿದ್ದು ಸತ್ಯಾನಾ ಎಂದು ಭೂಮಿಕಾಳನ್ನು ಕೇಳಿದಾಗ, ವಿಧಿ ಇಲ್ಲದೇ ಹೂಂ ಎನ್ನುತ್ತಾಳೆ. ಇದರಿಂದ ಗೌತಮ್‌ಗೆ ಇನ್ನಷ್ಟು ಬೇಸರವಾಗುತ್ತದೆ. ಆದರೆ, ಕಿರಣ್ ಮಾತುಗಳನ್ನು ಗೌತಮ್ ನಂಬುತ್ತಾನಾ..? ಇಲ್ಲ ಭೂಮಿಕಾ ಪರ ನಿಂತು ಸತ್ಯ ಹೊರಹಾಕಿಸುತ್ತಾನಾ ಕಾದು ನೋಡಬೇಕಿದೆ.

More from Filmibeat

English summary
Amruthadhaare kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X