Amruthadhaare: ಗೌತಮ್‌ಗೆ ಕೋಪ ತರಿಸಿದ ಮಾನ್ಯ ಯಾರು..?

By ಪ್ರಿಯಾ ದೊರೆ

ಮಹಿಮಾ ಯಾವಾಗಲೂ ತಲೆಯ ಮೇಲೆಯೇ ನಡೆಯುತ್ತಾಳೆ. ಜೀವನ್ ಇಬ್ಬರೂ ಪ್ಯಾಚ್ ಅಪ್ ಮಾಡಿಕೊಂಡ ಮೇಲೆ ಡೇಟಿಂಗ್ ಹೋಗೋಣ ಎಂದು ಬಯಸುತ್ತಾನೆ. ಆದರೆ, ಮಹಿಮಾ ದುರಹಂಕಾರದಲ್ಲಿ ಮಾತನಾಡುತ್ತಾಳೆ. ಇದನ್ನು ಕೇಳಿಸಿಕೊಂಡ ಶಕುಂತಲಾಳಿಗೆ ಇಬ್ಬರ ನಡುವೆ ಯಾವುದೇ ಕಿತ್ತಾಟ ಬರುವುದು ಇಷ್ಟವಿರುವುದಿಲ್ಲ. ಹಾಗಾಗಿ ಶಕುಂತಲಾ ತನ್ನ ತಲೆ ಉಪಯೋಗಿಸಿ ಐಡಿಯಾ ಮಾಡುತ್ತಾಳೆ.

ಮಹಿಮಾ ಜೀವನ್ ಜೊತೆಗೆ ಗೌತಮ್ ಹಾಗೂ ಭೂಮಿಕಾ ಡೇಟಿಂಗ್‌ಗೆ ಹೋದರೆ, ಅಲ್ಲಿ ಮಹಿಮಾ ಜಗಳ ಮಾಡಿಕೊಳ್ಳುವುದಿಲ್ಲ ಎಂದು ಆಲೋಚಿಸುತ್ತಾಳೆ. ಇದೇ ವಿಚಾರವನ್ನು ಗೌತಮ್‌ಗೆ ನೇರವಾಗಿ ಹೇಳದೇ, ನೀನು ಭೂಮಿಕಾಳನ್ನು ಅರ್ಥ ಮಾಡಿಕೊಳ್ಳಬೇಕು. ಸೋ ನೀವಿಬ್ಬರೂ ಡೇಟಿಂಗ್‌ಗೆ ಹೋಗಿ ಎಂದು ಎಮೋಷನಲ್ ಆಗಿ ಲಾಕ್ ಮಾಡುತ್ತಾಳೆ.

Amruthdhaare-serial

ಗೌತಮ್‌ಗೆ ಇಷ್ಟವಿಲ್ಲದಿದ್ದರೂ ಭೂಮಿಕಾ ಜೊತೆಗೆ ಹೊರಗೆ ಹೋಗಲು ಒಪ್ಪುತ್ತಾನೆ. ಇತ್ತ ಭೂಮಿಕಾ ಕಥೆಯೂ ಇದೇ ಆಗಿರುತ್ತದೆ. ಇನ್ನು ಶಕುಂತಲಾಳಿಗೆ ಅವರ ಅತ್ತೆ ಶಿವಮೊಗ್ಗದಿಂದ ಬರುತ್ತಿದ್ದಾರೆ ಎಂಬುದನ್ನು ಕೇಳಿ ಗಢಗಢ ಎಂದು ನಡುಗುತ್ತಾಳೆ. ಅಂದರೆ, ಶಕುಂತಲಾಳಿಗೆ ಅವರ ಅತ್ತೆಯನ್ನು ಕಂಡರೆ ಯಾಕೆ ಆಗುವುದಿಲ್ಲ. ಅಷ್ಟಕ್ಕೂ ಅವರ ಅತ್ತೆ ಯಾರು ಎಂಬ ಪ್ರಶ್ನೆ ಮೂಡಿದೆ.

ಡೇಟಿಂಗ್ ಬಂದು ದೂರ ಉಳಿದ ಜೋಡಿ

ಇತ್ತ ನಾಲ್ಕೂ ಜನರು ಡೇಟಿಂಗ್‌ಗೆಂದು ಹೋಟೆಲ್‌ಗೆ ಬರುತ್ತಾರೆ. ಮಹಿಮಾ ಹಾಗೂ ಜೀವನ್ ಒಂದು ಟೇಬಲ್‌ನಲ್ಲಿ ಕೂರುತ್ತಾರೆ. ಗೌತಮ್ ಹಾಗೂ ಭೂಮಿಕಾಳಿಗೆ ಎಂದು ಬೇರೆ ಟೇಬಲ್ ರಿಸರ್ವ್ ಆಗಿರುತ್ತದೆ. ಮಹಿಮಾ ಹಾಗೂ ಜೀವನ್ ಇಬ್ಬರೂ ಕೂಡ ಅನ್ಯೋನ್ಯವಾಗಿ ಒಬ್ಬರಿಗೊಬ್ಬರು ಹತ್ತಿರದಲ್ಲಿ ಕುಳಿತುಕೊಂಡು ಅವರ ಸಮಯವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಆದರೆ, ಇದಕ್ಕೆ ಗೌತಮ್ ಸಿಟ್ಟಾಗುತ್ತಾನೆ. ಇದೆಲ್ಲಾ ಸರಿಯಿಲ್ಲ ಎಂದು ಹೇಳುತ್ತಾನೆ. ಭೂಮಿಕಾ ಅವರಿಬ್ಬರು ಇರುವ ರೀತಿಯನ್ನು ನೋಡಿ ಖುಷಿ ಪಡುವುದರ ಜೊತೆಗೆ ಅವರು ಕರೆಕ್ಟ್ ಆಗಿಯೇ ಇದ್ದಾರೆ ಎಂಬುದನ್ನು ಗೌತಮ್‌ಗೆ ಅರ್ಥ ಮಾಡಿಸುತ್ತಾಳೆ. ಭೂಮಿಕಾ ಜೊತೆಗೆ ಕೂರಲು ಇಷ್ಟವಿಲ್ಲದೇ ಗೌತಮ್ ಮ್ಯಾಚ್ ನೋಡಲು ಹೋಗುತ್ತಾನೆ. ಭೂಮಿಕಾ ಒಬ್ಬಳೇ ಕುಳಿತು ಪುಸ್ತಕ ಓದುತ್ತಿರುತ್ತಾಳೆ.

Amruthdhaare-serial

ಅಣ್ಣ-ಅತ್ತಿಗೆ ಮೇಲೆ ಮಹಿಮಾ ಕಾಳಜಿ

ಇದನ್ನು ಗಮನಿಸಿದ ಜೀವನ್ ಹಾಗೂ ಮಹಿಮಾ ಮೊದಲು ಆತಂಕ ಪಡುತ್ತಾರೆ. ಇಬ್ಬರೂ ಭೂಮಿಕಾ ಬಳಿ ಹೋಗಿ ಏನಾದರೂ ಸಮಸ್ಯೆ ಆಯ್ತಾ..? ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಭೂಮಿಕಾ ಏನೂ ತೊಂದರೆ ಇಲ್ಲ ಎಂದು ಹೇಳಿಕಳಿಸುತ್ತಾಳೆ. ಆದರೆ, ಇದು ಮಹಿಮಾಳಿಗೆ ಆತಂಕ ಸೃಷ್ಟಿಸುತ್ತದೆ. ಅಣ್ಣ ಮತ್ತು ಅತ್ತಿಗೆ ನಮಗೋಸ್ಕರ ಕಾಂಪ್ರಮೈಸ್ ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂದು ಆತಂಕ ವ್ಯಕ್ತಪಡಿಸುತ್ತಾಳೆ. ಇದಕ್ಕೆ ಜೀವನ್ ಬಹಳ ಪಾಸಿಟಿವ್ ಆಗಿ ಮಾತನಾಡುತ್ತಾನೆ.

ಗೌತಮ್‌ಗೆ ಬಂದ ಕಾಲ್ ಯಾವುದು..?

ಇನ್ನು ಶಕುಂತಲಾಳಿಗೆ ಒಂದು ಫೋನ್ ಕಾಲ್ ಬರುತ್ತದೆ. ಅತ್ತ ಕಡೆಯಿಂದ ಮಾನ್ಯ ಎಂಬಾಕೆ ಮಾತನಾಡುತ್ತಾಳೆ. ಗೌತಮ್‌ಗೆ ಮದುವೆ ಫಿಕ್ಸ್ ಆಗಿರುವ ಬಗ್ಗೆ ಮಾತನಾಡುತ್ತಿರುತ್ತಾಳೆ. ಶಕುಂತಲಾ ಆಕೆಯ ಧ್ವನಿ ಕೇಳಿದ ಕೂಡಲೇ ಕೋಪದಿಂದ ಮಾತನಾಡುತ್ತಾಳೆ. ನೀನ್ಯಾಕೆ ಕಾಲ್ ಮಾಡಿದೆ. ಗೌತಮ್ ಮದುವೆ ಆಗುತ್ತಾನೆ. ಅವನ ಜೊತೆ ನೀನು ಯಾಕೆ ಮಾತನಾಡಬೇಕು. ಫೋನ್ ಮಾಡಬೇಡ ಎಂದು ಹೇಳಿ ಫೋನ್ ಇಡುತ್ತಾಳೆ.

ಅಷ್ಟಕ್ಕೂ ಮಾನ್ಯ ಯಾರು?

ಇತ್ತ ಗೌತಮ್‌ಗೂ ಮಾನ್ಯಳಿಂದ ಕಾಲ್ ಬರುತ್ತದೆ. ರಿಸೀವ್ ಮಾಡುವ ಗೌತಮ್, ಬಹಳ ಕೋಪದಲ್ಲಿ ಕಿರುಚಾಡುತ್ತಾನೆ. ನೀನ್ಯಾಕೆ ನನಗೆ ಫೋನ್ ಮಾಡಿದೆ ಎಂದು ಪ್ರಶ್ನೆ ಮಾಡಿ ಕಾಲ್ ಕಟ್ ಮಾಡುತ್ತಾನೆ. ಹಾಗಾದರೆ ಈ ಮಾನ್ಯ ಯಾರು..? ಗೌತಮ್‌ಗೂ ಮಾನ್ಯಾಳಿಗೂ ಏನು ಸಂಬಂಧ..?

More from Filmibeat

English summary
Amruthadhaare Serial Today episode. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X