Amruthadhaare: ಭೂಮಿಕಾಳಿಗಾಗಿ ಗೌತಮ್ ದಿವಾನ್ ಉಂಗುರ ಖರೀದಿಸಲು ಕಾರಣವೇನು..?

By ಪ್ರಿಯಾ ದೊರೆ

ಭೂಮಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ವಿಶ್ವಾಸ್ ಮನೆಯವರು ಹಾಗೂ ಗೌತಮ್ ಮನೆಯವರು ಎಲ್ಲರೂ ಕೂಡ ಭೂಮಿಕಾಳ ಮನೆಯಲ್ಲಿ ಸಂತೋಷದಿಂದ ಸೇರಿರುತ್ತಾರೆ. ಮಂದಾಕಿನಿ ಎಲ್ಲರಿಗೂ ಸ್ವೀಟ್ ತಂದು ಕೊಡುತ್ತಾಳೆ. ಆಗ ಗೌತಮ್ ದಿವಾನ್ ಬೇಡ ಎನ್ನುತ್ತಾನೆ. ಅದಕ್ಕೆ ಮಂದಾಕಿನಿ ಇದೊಂದು ಸ್ವೀಟ್ ತಿಂದರೆ ಏನು ದಪ್ಪಗಾಗುವುದಿಲ್ಲ ಎಂದು ಹೇಳಿ ಸ್ವೀಟ್ ತಿನ್ನಲು ಹೇಳುತ್ತಾಳೆ.

ಪಕ್ಕದಲ್ಲೇ ಇದ್ದ ಗೌತಮ್ ಗೆಳೆಯ ಆನಂದ್ ಮನದಲ್ಲೇ ಈಗ ಹಾಗೆ ನೋಡುತ್ತಿರಿ. ಇರುವ ಅಷ್ಟೂ ಸ್ವೀಟ್ ಅನ್ನು ತಿನ್ನುತ್ತಾನೆ. ನಿಮ್ಮೆಲ್ಲರ ಎದುರು ಸ್ವಲ್ಪ ಸ್ಕೋಪ್ ಅಷ್ಟೇ ಎಂದು ಹೇಳುತ್ತಾನೆ. ಆಗ ಗೌತಮ್ ಗೆಳೆಯನಿಗೆ ಸನ್ನೆಯಲ್ಲೇ ನೀನು ಮನದಲ್ಲಿ ಮಾತನಾಡಿದ್ದು ನನಗೆ ಕೇಳಿಸಿತು ಎನ್ನುತ್ತಾನೆ. ಅಷ್ಟರಲ್ಲಿ ಗೌತಮ್ ಹಾಗೂ ಭೂಮಿಕಾ ಒಬ್ಬರನ್ನೊಬ್ಬರು ನೋಡುತ್ತಾರೆ. ಆಗ ಭೂಮಿಕಾ ಕಣ್ಸನ್ನೆಯ ಮೂಲಕ ಮೈಸೂರ್ ಪಾಕ್ ಅನ್ನು ತಿನ್ನಿ ಎಂದು ಗೌತಮ್‌ಗೆ ಹೇಳುತ್ತಾಳೆ. ಗೌತಮ್ ಕೂಡ ಸ್ವೀಟ್ ತಿಂದು ಭೂಮಿಕಾಳಿಗೆ ಸನ್ನೆ ಮಾಡುತ್ತಾ ಚೆನ್ನಾಗಿದೆ ಎಂದು ಹೇಳುತ್ತಾನೆ.

Amruthadhaare Serial 21st June episode written update

ಎಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ ಭೂಮಿಕಾ ಹಿಂದೆಯೇ ಗೌತಮ್ ನಿಂತಿರುತ್ತಾನೆ. ಆನಂದ್ ಮಕ್ಕಳು ಓಡಿ ಬಂದು ಭೂಮಿಕಾಳನ್ನು ಬೀಳಿಸುತ್ತಾರೆ. ಆಗ ಭೂಮಿಕಾಳನ್ನು ಗೌತಮ್ ಹಿಡಿದುಕೊಳ್ಳುತ್ತಾಳೆ. ಇದರಿಂದ ವಿಶ್ವಾಸ್‌ಗೆ ಮುಜುಗರವಾಗುತ್ತದೆ. ಭೂಮಿಕಾ ಹಾಗೂ ಗೌತಮ್ ನಡುವೆ ತಮಗೇ ತಿಳಿಯದಂತೆ ಮನದೊಳಗೆ ಪ್ರೀತಿ ಚಿಗುರೊಡೆಯಲು ಶುರು ಮಾಡಿದೆ. ಆದರೆ, ಈಗ ಭೂಮಿಕಾಳಿಗೆ ವಿಶ್ವಾಸ್ ಜೊತೆಗೆ ಮದುವೆ ಫಿಕ್ಸ್ ಆಗಿರುವುದು ಪ್ರೇಕ್ಷಕರನ್ನು ಕನ್‌ಫ್ಯೂಸ್ ಮಾಡುತ್ತಿದೆ.

ಮತ್ತೆ ಮಹಿಮಾ-ಜೀವನ್ ಜಗಳ

ಇನ್ನು ಮಹಿಮಾ ಖುಷಿಯಲ್ಲಿ ರೂಮಿಗೆ ಹೋಗಿ ಜೀವನ್‌ಗೆ ತಮ್ಮ ಎಂಗೇಜ್‌ಮೆಂಟ್ ಬಗ್ಗೆ ಮಾತನಾಡಲು ಹೇಳುತ್ತಾಳೆ. ಆದರೆ ಜೀವನ್, ಇಷ್ಟು ಬೇಗ ಸಾಧ್ಯವಿಲ್ಲ ಮಹಿಮಾ. ನಾನಿನ್ನು ಕಾರು, ಮನೆ, ಖರೀದಿಸಿ ಸೆಟಲ್ ಆಗಬೇಕು ಎಂದು ಹೇಳುತ್ತಾನೆ. ಆಗ ಮತ್ತೆ ಮಹಿಮಾ ಜಗಳ ಮಾಡುತ್ತಾಳೆ. ನೀನು ಈಗಲೇ ನಮ್ಮ ಎಂಗೇಜ್‌ಮೆಂಟ್ ಬಗ್ಗೆ ಹೇಳಲಿಲ್ಲ ಎಂದರೆ, ನಾನು ಬೇರೆಯವನನ್ನು ಮದುವೆಯಾಗುತ್ತೀನಿ ಎನ್ನುತ್ತಾಳೆ. ಇದಕ್ಕೆ ಜೀವನ್ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರಿಬ್ಬರ ಜಗಳವನ್ನು ನೋಡಿದ ಶಕುಂತಲಾಳಿಗೆ ಭಯವಾಗುತ್ತದೆ.

Amruthadhaare Serial 21st June episode written update

ಮಹಿಮಾ ತನ್ನ ಹಠದಿಂದ ಮತ್ತೇನೋ ಅನಾಹುತ ಮಾಡಿಕೊಳ್ಳಬಾರದು ಎಂದು ತಾನೇ, ಎಲ್ಲರ ಎದುರಿಗೂ ಮಹಿಮಾ ಹಾಗೂ ಜೀವನ್ ಎಂಗೇಜ್‌ಮೆಂಟ್ ಅನ್ನು ಭೂಮಿಕಾ ಹಾಗೂ ವಿಶ್ವಾಸ್ ಎಂಗೇಜ್‌ಮೆಂಟ್ ದಿನವೇ ಇಟ್ಟುಕೊಳ್ಳುವುದಾಗಿ ಅನೌನ್ಸ್ ಮಾಡುತ್ತಾಳೆ. ಇದರಿಂದ ಮಹಿಮಾಳಿಗೆ ಖುಷಿಯಾಗುತ್ತದೆ.

ಭೂಮಿಕಾಳಿಗೆ ರಿಂಗ್ ಖರೀದಿಸಿದ ಗೌತಮ್

ಇತ್ತ ಗೌತಮ್ ತನ್ನ ತಂಗಿ ಎಂಗೇಜ್ ಮೆಂಟ್‌ಗೆ ರಿಂಗ್ ತಂದಿರುತ್ತಾನೆ. ಈ ರಿಂಗ್ ಅನ್ನು ಅಮ್ಮನಿಗೆ ಕೊಟ್ಟು ಮಹಿಮಾಳಿಗೆ ನೀಡಲು ಹೇಳಬೇಕು. ನಾನು ಕೊಡಲು ಹೋದರೆ, ಎಮೋಷನ್ ಆಗಿ ಅತ್ತು ಬಿಡುತ್ತೇನೆ ಎಂದು ಗೆಳೆಯನ ಬಳಿ ಹೇಳುತ್ತಾನೆ. ಇನ್ನೊಂದು ರಿಂಗ್ ಅನ್ನು ನೋಡಿದ ಗೆಳೆಯ ಇದು ಯಾರಿಗೆ ಹುಡುಗಿಯ ರಿಂಗ್ ಎಂದು ಕೇಳುತ್ತಾನೆ. ಆಗ ಗೌತಮ್, ಅದು ಭೂಮಿಕಾಳಿಗೆ ಎನ್ನುತ್ತಾನೆ.

ಗೌತಮ್ ಕೇಳಿದ ಆನಂದ್, ಹಾಗಾದರೆ, ಏನು ಸಮಾಚಾರ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ ಅವಳು ಈ ಮದುವೆಗೆ ಒಪ್ಪಿಕೊಂಡು ನನ್ನ ತಂಗಿಯ ಲೈನ್ ಕ್ಲಿಯರ್ ಮಾಡಿದ ಖುಷಿಗೆ ಎಂದು ಹೇಳುತ್ತಾನೆ.

ಎಂಗೇಜ್ ಆಗುವ ಖುಷಿಯಲ್ಲಿ ಭೂಮಿಕಾ

ಇತ್ತ ಭೂಮಿಕಾ ತನ್ನ ಜೀವನ ಒಂದು ಹಂತಕ್ಕೆ ಬಂದು ತಲುಪಿತು ಎಂಬ ಖುಷಿಯಲ್ಲಿರುತ್ತಾಳೆ. ತನ್ನ ಆಸೆಗಳೆಲ್ಲವೂ ಬೇಗ ಬೇಗ ನೆರವೇರುತ್ತಿದೆ. ಇಷ್ಟು ವರ್ಷ ಕಾದಿದ್ದಕ್ಕೂ ಒಳ್ಳೆಯ ಹುಡುಗ ಸಿಕ್ಕಿದ್ದಾನೆ ಎಂದು ತೇಲಾಡುತ್ತಿರುತ್ತಾಳೆ. ಎಂಗೇಜ್‌ಮೆಂಟ್‌ಗೆ ರೆಡಿಯಾಗಿ ಟಿಶ್ಯೂ ಪೇಪರ್‌ನಲ್ಲಿ ತನ್ನ ಹಾಗೂ ವಿಶ್ವಾಸ್ ಹೆಸರನ್ನು ಬರೆದು ಖುಷಿ ಪಡುತ್ತಿರುತ್ತಾಳೆ.

More from Filmibeat

English summary
Amruthadhaare Serial 21st June episode written update. here is details about Bhoomika and Gautham Diwan speaks in eye language at home eventhough everyone are present. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X