Amruthadhaare: ಕುಡಿದು ಭೂಮಿಕಾ ರಂಪಾಟ: ಗೌತಮ್ ಬಗ್ಗೆ ಹೇಳಿದ್ದೇನು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾಳಿಗೆ ಶಕುಂತಲಾ ಬೇಧ-ಭಾವ ಮಾಡುವುದು ಕೊಂಚವೂ ಇಷ್ಟವಾಗುತ್ತಿಲ್ಲ. ಇದನ್ನು ಪ್ರಶ್ನಿಸಿದರೂ ಕೂಡ ಶಕುಂತಲಾ, ಮಹಿಮಾಳಿಗೆ ಕ್ಯಾರೆ ಎನ್ನುವುದಿಲ್ಲ.

ಬೇಸರದಿಂದ ಮಹಿಮಾ ಅಲ್ಲಿಂದ ಹೊರಟು ಬರುತ್ತಾಳೆ. ಆದರೆ, ಜೀವನ್‌ಗೆ ಶಕುಂತಲಾ ಮನೆಯಲ್ಲಿ ಏನು ನಡೆಯಿತು ಎಂಬುದು ಕೊಂಚವೂ ಅರ್ಥವಾಗಿರುವುದಿಲ್ಲ.

Amruthadhaare Serial 21st November episode written update

ಜೀವನ್ ಎಲ್ಲವನ್ನೂ ಕ್ಯಾಶ್ಯುವಲ್ ಆಗಿ ತೆಗೆದುಕೊಂಡಿರುತ್ತಾನೆ. ಇನ್ನು ಮಹಿಮಾಳಿಗೆ ಬೇಕಂತಲೇ ಅಶ್ವಿನಿ ಫೋನ್ ಮಾಡಿ ರೇಗಿಸುತ್ತಾಳೆ. ನಮಗೆಲ್ಲಾ ದೀಪಾವಳಿ ಗಿಫ್ಟ್ ಸಿಕ್ತು. ನೀನು ಬೇಗ ಹೋಗಿ ಮಿಸ್ ಮಾಡಿಕೊಂಡೆ. ನನಗೆ ಡೈಮಂಡ್ ರಿಂಗ್ ಸಿಕ್ಕಿದೆ ಎನ್ನುತ್ತಾಳೆ.

ಮಹಿಮಾಳಿಗೆ ಗ್ಲಾಮರ್ ಚಿಂತೆ

ಅಶ್ವಿನಿ ಮಾತು ಮಹಿಮಾಳಿಗೆ ಕಿರುಚಾಡುವಂತೆ ಮಾಡುತ್ತದೆ. ಇನ್ನು ಮಹಿಮಾಳಿಗೆ ಬೇಕಂತಲೇ ಆಕೆಯ ಸ್ನೇಹಿತ ಬಂದು ಹೂ ಗುಚ್ಛವನ್ನು ನೀಡಿ, ತಾನು ಗರ್ಭಿಣಿ ಆಗಿರುವುದಕ್ಕೆ ವಿಶ್ ಮಾಡುತ್ತಾನೆ. ಬಳಿಕ ನಿನ್ನ ಗ್ಲಾಮರ್ ಹಾಳಾಗುತ್ತದೆ. ಫ್ಯಾಷನ್ ಫೀಲ್ಡ್‌ನಲ್ಲಿ ಇದ್ದುಕೊಂಡು ಈಗ ತಾಯಿ ಆಗುವುದು ಎಷ್ಟು ಸರಿ ಎಂದು ತಲೆಗೆ ಹುಳ ಬಿಡುತ್ತಾನೆ. ಇದರಿಂದ ಮಹಿಮಾ ತೀರಾ ತಲೆ ಕೆಡಿಸಿಕೊಂಡಿದ್ದಾಳೆ. ಈ ಮಗು ಬೇಕಾ, ಬೇಡವಾ? ಎಂದು ಯೋಚಿಸುತ್ತಿದ್ದಾಳೆ.

ಅಮ್ಮನ ಮೇಲೆ ಜೈಯದೇವನಿಗೆ ಕೋಪ

ಇನ್ನು ಜೈದೇವನಿಗೆ ತನ್ನ ಸ್ವಂತ ಅಮ್ಮನೇ ಅವನ ಏಳಿಗೆಯನ್ನು ಬಯಸಲಿಲ್ಲ. ಆಫೀಸಿಗೆ ಹೋಗದಂತೆ ತಡೆದಳು. ಮುಂದೆ ತನ್ನ ಭವಿಷ್ಯದ ಕಥೆ ಏನು ಎಂದು ನಿತ್ಯ ಕುಡಿಯುತ್ತಿದ್ದಾನೆ. ಹಗಲು ರಾತ್ರಿ ಎನ್ನದೇ ಅಳಿಮಯ್ಯ ಕುಡಿದು ಕುಡಿದು ತನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನಲ್ಲ ಎಂದು ಲಕ್ಷ್ಮೀಕಾಂತ ಬುದ್ಧಿ ಹೇಳುತ್ತಾನೆ. ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳುತ್ತಾನೆ. ಅದಕ್ಕೆ ಜೈದೇವ ನನ್ನ ಅಮ್ಮನಿಂದಲೇ ನನಗೆ ಮೋಸ ಆಗಿದೆ. ಅವಳು ನನ್ನ ಅಮ್ಮನೇ ಅಲ್ಲ. ಅವಳ ಉಳಿವಿಗೋಸ್ಕರ ನನ್ನ ಬದುಕನ್ನು ಹೀಗೆ ನಾಶ ಮಾಡಿದ್ದಾಳೆ ಎಂದು ಬೈಯುತ್ತಾನೆ.

Amruthadhaare Serial 21st November episode written update

ಜೈದೇವನಿಗೆ ಬೈದ ಲಕ್ಷ್ಮೀಕಾಂತ

ಲಕ್ಷ್ಮೀಕಾಂತನಿಗೆ ಕೋಪ ಬರುತ್ತದೆ. ನಿನ್ನ ಅಮ್ಮನ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ನಿಮಗೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ಈ ಮಟ್ಟಕ್ಕೆ ಅವಳು ಬರುವುದಕ್ಕೆ ಏನೆಲ್ಲಾ ಸಾಹಸ ಮಾಡಿದ್ದಾಳೆ ಅಂತ ಗೊತ್ತಾ? ಅವಳ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡಬೇಡ ಎಂದು ಬೈಯುತ್ತಾನೆ. ಆದರೆ ಜೈದೇವನಿಗೆ ಅರ್ಥವಾಗುವುದಿಲ್ಲ.

ಪಾರ್ಟಿಗೆ ಬಂದ ಗೌತಮ್-ಭೂಮಿಕಾ

ಗೌತಮ್‌ಗೆ ತನ್ನ ಅತ್ತೆಯ ಮನೆಯವರ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ. ಎರಡು ದಿನ ಅವರ ಮನೆಯಲ್ಲಿ ನೀಡಿದ ಸತ್ಕಾರ ಖುಷಿ ಕೊಡುತ್ತದೆ. ಹೀಗಾಗಿ ಗೌತಮ್, ಆನಂದ್ ಬಳಿ ತನ್ನ ಮಾವ ಹಾಗೂ ಅವರ ಮನೆಯವರ ಬಗ್ಗೆ ಹೇಳಿಕೊಂಡು ಖುಷಿ ಪಡುತ್ತಾನೆ. ಗೌತಮ್ ಮತ್ತು ಭೂಮಿಕಾ ಇಬ್ಬರೂ ಆನಂದ್ ಮನೆಗೆ ಪಾರ್ಟಿಗೆ ಹೊರಡುತ್ತಾರೆ. ಅಪರ್ಣಾ, ಭೂಮಿಕಾಳನ್ನು ಮನೆಯಿಂದ ಹೊರಗಡೆ ಕಳಿಸಿದ್ದಕ್ಕೆ ಕ್ಷಮೆ ಕೇಳುತ್ತಾಳೆ. ಆಗ ಗೌತಮ್‌ಗೆ ಶಾಕ್ ಆಗುತ್ತದೆ. ತನ್ನ ಮತ್ತು ಆನಂದ್ ಅನ್ನು ಒಂದು ಮಾಡಲು ಭೂಮಿಕಾ ಏನೆಲ್ಲಾ ಮಾಡಿದ್ದಾಳೆ ಎಂಬುದನ್ನು ತಿಳಿದು ಮನದಲ್ಲೇ ಖುಷಿ ಪಡುತ್ತಾನೆ.

ಕುಡಿದು ಮಾತನಾಡಿದ ಭೂಮಿಕಾ

ಭೂಮಿಕಾ ಹಾಗೂ ಗೌತಮ್ ಇಬ್ಬರನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ಅಪರ್ಣಾ ಜ್ಯೂಸ್‌ನಲ್ಲಿ ಮದ್ಯವನ್ನು ಮಿಕ್ಸ್ ಮಾಡಿ ಕೊಡುತ್ತಾಳೆ. ಅದನ್ನು ಕುಡಿದ ಭೂಮಿಕಾ, ಆನಂದ್ ಮತ್ತು ಗೌತಮ್ ಸ್ನೇಹದ ಬಗ್ಗೆಯೂ, ಗೌತಮ್ ಮನೆಯಲ್ಲಿ ಹೇಗಿರುತ್ತಾನೆ? ತಾನು ಹೇಗಿದ್ದಾಳೆ? ಆ ಮನೆಯಲ್ಲಿ ಎಂಬ ಬಗ್ಗೆ ಸ್ವಲ್ಪವೂ ಸಂಕೋಚವಿಲ್ಲದೇ, ಕುಡಿದ ಮತ್ತಿನಲ್ಲಿ ಎಲ್ಲವನ್ನೂ ಹೇಳಿ ಬಿಡುತ್ತಾಳೆ.

More from Filmibeat

English summary
Amruthadhaare kannada Serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X