Amruthadhaare ; ಕೊನೆಗೂ ಭೂಮಿಕಾಗೆ ಪ್ರಪೋಸ್ ಮಾಡಿದ ಗೌತಮ್ ..!
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಳಿಗೆ ಎಲ್ಲವೂ ತನ್ನಿಂದ ಕೈ ಮೀರಿ ಹೋಗುತ್ತಿದೆ ಎಂಬ ಆತಂಕವೇ ಹೆಚ್ಚಾಗಿದೆ. ಇಷ್ಟವಿಲ್ಲದಿದ್ದರೂ ಗೌತಮ್ ಗೆ ಭೂಮಿಕಾಳ ಜೊತೆಗೆ ಮದುವೆ ಮಾಡಲಾಯ್ತು.ಜೈದೇವ ಮಾಡಿಕೊಂಡ ಎಡವಟ್ಟಿನಿಂದ ಭೂಮಿಕಾ ಎದುರು ಸೋತು ಶಕುಂತಲಾ ಮಲ್ಲಿಯನ್ನು ಎರಡನೇ ಸೊಸೆಯನ್ನಾಗಿ ಮಾಡಿಕೊಳ್ಳಬೇಕಾಯ್ತು.ಇದೆಲ್ಲದರಿಂದಲೂ ಈಗ ಶಕುಂತಲಾಳಿಗೆ ಹಿಂಸೆಯೇ ಆಗುತ್ತಿದೆ. ಅದಾಗಲೇ ಈಗ ಪಾರ್ಥನ ಹೊಸ ಲವ್ ಸ್ಟೋರಿ ನೋಡಿ ಶಕುಂತಲಾ ಗಾಬರಿಯಾಗಿದ್ದಾಳೆ.
ಅಪ್ಪಿ-ಪಾರ್ಥನ ಹಿಂದೆ ಇನ್ ಫಾರ್ಮರ್
ಅಪೇಕ್ಷಾಳನ್ನು ಪಾರ್ಥ ಪ್ರೀತಿಸುತ್ತಿರುವ ವಿಚಾರವನ್ನು ತಿಳಿದ ಶಕುಂತಲಾಳಿಗೆ ಆತಂಕ ಹೆಚ್ಚಾಗಿದೆ. ತನಗಿಷ್ಟವಿಲ್ಲದ ಅಪೇಕ್ಷಾಳನ್ನು ಯಾವುದೇ ಕಾರಣಕ್ಕೂ ಮನೆಗೆ ಸೊಸೆಯಾಗಿ ಕರೆತರಬಾರದು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ತನ್ನ ಸಹೋದರ ಲಕ್ಷ್ಮೀಕಾಂತನ ಜೊತೆಗೆ ಮಾತನಾಡಿದ್ದು, ಇನ್ ಫಾರ್ಮರ್ ನ ಮನೆಗೆ ಕರೆಸಿದ್ದಾಳೆ. ಅವರಿಗೆ ಪಾರ್ಥ ಮತ್ತು ಅಪೇಕ್ಷಾಳ ಮಾಹಿತಿಯನ್ನು ನೀಡಿದ್ದು, ಅವರಿಬ್ಬರು ಎಲ್ಲಿಗೆ ಹೋಗುತ್ತಾರೆ. ಏನು ಮಾಡುತ್ತಾರೆ ಎಂಬ ಪ್ರತಿಯೊಂದು ಮಾಹಿತಿಯನ್ನೂ ತಿಳಿಸಬೇಕು ಎಂದು ಹೇಳಿದ್ದಾಳೆ. ಸದ್ಯ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಮನೆಯಲ್ಲಿ ಸುಳ್ಳು ಹೇಳಿ ಎರಡು ದಿನದ ಟ್ರಿಪ್ ಎಂಜಾಯ್ ಮಾಡಲು ಹೋಗಿದ್ದಾರೆ. ಅಪೇಕ್ಷಾಳಿಗೆ ಮನೆಯಲ್ಲಿ ಸುಳ್ಳು ಹೇಳಿದ್ದು ತಪ್ಪು ಎಂಬ ಪಶ್ಚಾತಾಪ ಕಾಡುತ್ತಿದೆ.

ಅಮ್ಮನ ಇತಿಹಾಸ ಕೆದಕಿದ ಜೈದೇವ
ಇತ್ತ ಜೈದೇವನಿಗೂ ಇನ್ ಫಾರ್ಮರ್ ಬಗ್ಗೆ ಹೇಳಿದ್ದು, ಲಕ್ಷ್ಮೀಕಾಂತ ಅಕಸ್ಮಾತ್ ಆಗಿ ಅವರ ತಂಗಿ ಶಕುಂತಲಾ ಹಿಂದೆ ಏನೆಲ್ಲಾ ಮಾಡಿದ್ದರು ಎಂಬುದನ್ನು ಹೇಳಲು ಯತ್ನಿಸಿದ್ದಾನೆ. ನಿಮ್ಮ ಅಮ್ಮನ ಕಥೆಯನ್ನು ಪೇಪರ್ ನಲ್ಲಿ ಪೆನ್ ಬಳಸಿ ಬರೆದಿದ್ದಲ್ಲ. ರಕ್ತದಲ್ಲಿ ಬರೆದಿರುವುದು. ನಿಮ್ಮ ತಾಯಿಯ ಇತಿಹಾಸವನ್ನು ಓದುವವರ ರಕ್ತ ತಣ್ಣಗಾಗುತ್ತೆ ಎನ್ನುತ್ತಾನೆ. ಅಷ್ಟರಲ್ಲಿ ಶಕುಂತಲಾ ಅಣ್ಣನ ಮಾತನ್ನು ತಡೆಯುತ್ತಾಳೆ. ಆದರೆ, ಜೈದೇವನಿಗೆ ಕುತೂಹಲ ಉಂಟಾಗಿ ಏನದು ಹೇಳಿ ಎಂದು ಬಲವಂತವಾಗಿ ಕೇಳುತ್ತಾನೆ. ಆದರೂ ಲಕ್ಷ್ಮೀಕಾಂತ ಬಾಯಿ ಬಿಡುವುದಿಲ್ಲ.
ಸಾಲಗಳ ಸುಳಿಯಲ್ಲಿ ಸಿಲುಕಿರುವ ಜೀವನ್
ಇತ್ತ ಜೀವನ್ ಮನೆಯಲ್ಲಿ ಯಾರಿಗೂ ತಿಳಿಯದಂತೆ ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದಾನೆ. ಕೆಲಸ ಕಳೆದುಕೊಂಡಿದ್ದರೂ ಮನೆಯಲ್ಲಿ ಹೇಳಿಲ್ಲ. ಮದುವೆ, ಮನೆ ಅಂತೆಲ್ಲಾ ಸಾಲ ಮಾಡಿಕೊಂಡಿದ್ದು, ಈಗ ಸಾಲಗಾರರು ಹಣ ಕೇಳಿಕೊಂಡು ಫೊನ್ ಮಾಡುತ್ತಿದ್ದಾರೆ. ಮಂದಾಕಿನಿ ಹಣವನ್ನು ಸಾಲಗಾರರಿಗೆ ಕೊಡಬೇಕು. ಸಾಲದಲ್ಲಿ ಸಿಲುಕಿದ್ದೇವೆ ಎಂಬ ಟೆಂಷನ್ ಇದೆ. ಆದರೆ, ಜೀವನ್ ಕೆಲಸ ಕಳೆದುಕೊಂಡಿರುವುದು ಗೊತ್ತಾದರೆ ಏನೆಲ್ಲಾ ರಾಮಾಯಣವಾಗುತ್ತದೋ ಗೊತ್ತಿಲ್ಲ. ಎಲ್ಲಾ ಕಂಪನಿಗಳಲ್ಲೂ ಕೆಲಸದಿಂದ ನೌಕರರನ್ನು ತೆಗೆಯುತ್ತಿರುವ ಸುದ್ದಿ ಕೇಳಿ ಗಾಬರಿಯಾಗಿದ್ದಾರೆ. ಆದರೆ, ಜೀವನ್ ಈಗಾಗಲೇ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ.

ಕೊನೆಗೂ ಪ್ರಪೋಸ್ ಮಾಡಿದ ಗೌತಮ್
ಇನ್ನು ಗೌತಮ್ ಮತ್ತು ಭೂಮಿಕಾ ಕಥೆ ನಿಂತಲ್ಲೇ ನಿಂತಿದೆ. ಇಬ್ಬರೂ ಕೂಡ ಪ್ರಪೋಸ್ ಮಾಡುತ್ತಿಲ್ಲ. ಇಬ್ಬರ ಸಂಸಾರವು ಮುಂದುವರೆಯುತ್ತಿಲ್ಲ. ಇದು ಆನಂದ್ ಗೆ ಕಷ್ಟವಾಗಿದೆ. ಗೆಳೆಯ ಆದಷ್ಟು ಬೇಗ ಸೆಟಲ್ ಆಗಲಿ ಎಂದು ಏನೇನೋ ಪ್ರಯತ್ನ ಪಡುತ್ತಿದ್ದಾನೆ. ಈಗ ಮೀಟಿಂಗ್ ಗೆಂದು ಮರಾಠಿ ಭಾಷೆ ಕಲಿಯುತ್ತಿರುವ ಗೌತಮ್ ನನ್ನು ಭೂಮಿಕಾ ಮತ್ತು ಆನಂದ್ ಆಟವಾಡಿಸಿದ್ದಾರೆ. ಹಾಯ್, ವೆಲ್ಕಂ, ನಮಸ್ಕಾರ, ಹೇಗಿದ್ದೀರಾ ಹೀಗೆ ಒಂದಷ್ಟು ಪದಗಳನ್ನು ಬೆಂಗಾಲಿಯಲ್ಲಿ ಹೇಳಿಕೊಡಲು ಮುಂದಾದ ಆನಂದ್ ಕೊನೆಗೆ ಐ ಲವ್ ಯೂ ಎಂದು ಹೇಳಿಕೊಟ್ಟಿದ್ದಾನೆ. ಅದನ್ನೇ ಗೌತಮ್ ಭೂಮಿಕಾ ಹೇಳಿದ್ದಾನೆ. ಒಟ್ನಲ್ಲಿ ಹೆಂಡತಿ ಭೂಮಿಕಾಳಿಗೆ ಗೌತಮ್ ಪ್ರಪೋಸ್ ಮಾಡಿಯಾಗಿದೆ.


Click it and Unblock the Notifications











