Amruthadhaare: ಗೌತಮ್-ಭೂಮಿಕಾ ಮದುವೆ ಅಡ್ಜಸ್ಟ್ಮೆಂಟ್ ಎಂದು ತಿಳಿದ ಪಾರ್ಥ ಮಾಡಿದ್ದೇನು..?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಕುರುಡು ಮಕ್ಕಳಿಗೆ ಸಹಾಯ ಮಾಡುತ್ತಿದ್ದು, ಅವರೆಲ್ಲಾ ಭೂಮಿಕಾ ಮದುವೆಗೆ ವಿಶ್ ಮಾಡಲು ಮೆಹಂದಿ ಶಾಸ್ತ್ರಕ್ಕೆ ಬರುತ್ತಾರೆ. ಇದರಿಂದ ಭೂಮಿಕಾ ಮೇಲಿನ ಗೌರವ ಎಲ್ಲರಲ್ಲೂ ಹೆಚ್ಚಾಗುತ್ತದೆ. ಗೌತಮ್ ಮತ್ತು ಆನಂದ್ ಇಬ್ಬರೂ ಕೂಡ ಇನ್ಮುಂದೆ ಭೂಮಿಕಾ ಮಾಡುವ ಸಹಾಯಕ್ಕೆ ತಾವೂ ಕೈ ಜೋಡಿಸುವುದಾಗಿ ಹೇಳುತ್ತಾರೆ.
ಇನ್ನು ಶಕುಂತಲಾ ಮನೆಗೆ ಪಾರ್ಥ ಎಂಬ ಯುವಕ ಬರುತ್ತಾನೆ. ವಾಚ್ ಮ್ಯಾನ್ ಯಾರು ಎಂಬುದು ಗೊತ್ತಿಲ್ಲದೇ, ಒಳಗೆ ಬಿಡುವುದಿಲ್ಲ. ಶಕುಂತಲಾ ಫೋನ್ ಮಾಡಿ ಒಳಗೆ ಬಿಡಲು ಹೇಳಿದ ಬಳಿಕ ಬಿಡುತ್ತಾರೆ.

ಮನೆಗೆ ಬಂದ ಶಕುಂತಲಾ ಕೊನೆ ಮಗ!
ಪಾರ್ಥ ಬೇರೆ ಯಾರೂ ಅಲ್ಲ. ಶಕುಂತಲಾಳ ಕೊನೆಯ ಮಗ. ಮನೆಗೆ ಬರುತ್ತಿದ್ದಂತೆ ಅಮ್ಮ ಹಾಗೂ ಅಣ್ಣ ಗೌತಮ್ ಜೊತೆಗೆ ಖುಷಿಯಿಂದ ಮಾತನಾಡುತ್ತಾನೆ. ಅಣ್ಣನ ಮೇಲೆ ಪಾರ್ಥ ವಿಶೇಷವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಾನೆ. ಎಲ್ಲರಿಗೂ ಅವನೇ ಕಾಫಿ ಮಾಡಿ ಕೊಡುತ್ತಾನೆ. ಮನೆಯಲ್ಲಿ ಅಡುಗೆ ಕೆಲಸ ಮಾಡುವಾತನ ಮಗನಿಗೆಂದು ಪಾರ್ಥ ಲ್ಯಾಪ್ ಟಾಪ್ ತಂದು ಕೊಡುತ್ತಾನೆ. ಇದರಿಂದ ಪಾರ್ಥ ಎಷ್ಟು ಒಳ್ಳೆಯ ಮನಸ್ಥಿತಿ ಇರುವವನು ಎಂಬುದು ಗೊತ್ತಾಗುತ್ತದೆ. ಇನ್ನು ಪಾರ್ಥ ಗೌತಮ್ ಬಳಿ ಮದುವೆ ಆಗುತ್ತಿರುವ ಹುಡುಗಿಯ ಫೋಟೋ ಮತ್ತು ಆಕೆಯ ಬಗ್ಗೆ ಹೇಳು ಎಂದು ಕೇಳುತ್ತಾನೆ. ಆದರೆ, ಗೌತಮ್ ಏನನ್ನೂ ಹೇಳುವುದಿಲ್ಲ.
ಪಾರ್ಥನನ್ನು ನೋಡಿ ಎಲ್ಲರೂ ಫುಲ್ ಖುಷ್
ಮನೆಯಲ್ಲಿ ಎಲ್ಲರೂ ಪಾರ್ಥನನ್ನು ನೋಡಿ ಖುಷಿ ಪಡುತ್ತಾರೆ. ಪಾರ್ಥ ಆಸ್ಟ್ರೇಲಿಯಾಗೆ ಓದಲೆಂದು ಹೋಗಿದ್ದು. ಸದ್ಯ ಮಹಿಮಾ ಮತ್ತು ಗೌತಮ್ ಮದುವೆ ಇರುವುದಕ್ಕೆ ಮನೆಗೆ ಬಂದಿದ್ದಾನೆ. ಪಾರ್ಥ ಮಹಿಮಾಳನ್ನು ಮಾತನಾಡಿಸುತ್ತಾನೆ. ಮಹಿಮಾ ಬಳಿ ಆಕೆ ಮದುವೆಯಾಗುವ ಹುಡುಗನ ಬಗ್ಗೆ ಕೇಳುತ್ತಾನೆ. ಆಗ ಮಹಿಮಾ ಜೀವನ್ ಫೋಟೋ ತೋರಿಸಿ, ಏನು ಮಾಡಿಕೊಂಡಿದ್ದಾನೆ ಎಂದೆಲ್ಲಾ ತಿಳಿದುಕೊಳ್ಳುತ್ತಾನೆ. ಬಳಿಕ ಜೀವನ್ ಅಕ್ಕನನ್ನೇ ಗೌತಮ್ ಮದುವೆಯಾಗುತ್ತಿರುವುದು ಎಂದು ಮಹಿಮಾ ಪಾರ್ಥನ ಬಳಿ ಹೇಳುತ್ತಾಳೆ. ಇದರಿಂದ ಪಾರ್ಥನಿಗೆ ಇಲ್ಲೇನೋ ಸರಿಯಿಲ್ಲ ಎನಿಸುತ್ತದೆ.
ಭೂಮಿ ಮನೆಯಲ್ಲಿ ಎಲ್ಲರಿಗೂ ಬೇಸರ
ಇತ್ತ ಭೂಮಿಕಾ ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿರುತ್ತಾರೆ. ಭೂಮಿಕಾಳಿಗೂ ಎಲ್ಲರನ್ನೂ ಬಿಟ್ಟು ಹೋಗುವುದು ಹೇಗೆ ಎಂಬುದೇ ಗೊತ್ತಾಗುವುದಿಲ್ಲ. ಮನೆಯವರನ್ನೆಲ್ಲಾ ಹೇಗೆ ಬಿಟ್ಟು ಹೋಗಲಿ ಎಂದು ಭೂಮಿಕಾ ಒಬ್ಬಳೇ ಅಳುತ್ತಿರುತ್ತಾಳೆ. ಮನೆಯವರೂ ಅಷ್ಟೇ ಭೂಮಿಕಾಳಿಗೆ ಗೊತ್ತಾಗದಂತೆ ಅಳುತ್ತಿರುತ್ತಾರೆ. ಭೂಮಿಕಾ ಅವರ ತನ್ನ ಜವಾಬ್ದಾರಿಯನ್ನೆಲ್ಲಾ ಮನೆಯವರಿಗೆ ಹಂಚುತ್ತಿರುತ್ತಾಳೆ. ಮದುವೆಯಾದ ಮೇಲೆ ಈ ಮನೆಯ ಜವಾಬ್ದಾರಿಯನ್ನು ಸದಾಶಿವ, ಮಂದಾಕಿನಿ ಹಾಗೂ ಅಪೇಕ್ಷಾಳಿಗೆ ವಹಿಸಿರುತ್ತಾಳೆ. ಮನದೊಳಗೆ ದುಃಖವಿದ್ದರೂ ಭೂಮಿಕಾ ಯಾರಿಗೂ ತೋರಿಸಿಕೊಳ್ಳುವುದಿಲ್ಲ.

ಸತ್ಯ ತಿಳಿದ ಪಾರ್ಥನಲ್ಲಿ ಆತಂಕ!
ಇನ್ನು ಪಾರ್ಥ ಶಕುಂತಲಾಳ ತಮ್ಮನ ಜೊತೆಗೆ ಮಾತನಾಡುತ್ತಿರುತ್ತಾನೆ. ಈ ವೇಳೆಗೆ ಪಾರ್ಥನಿಗೆ ಅವರ ಮಾವ ಗೌತಮ್ ಮತ್ತು ಭೂಮಿಕಾಳದ್ದು ಅಡ್ಜಸ್ಟ್ ಮೆಂಟ್ ಮದುವೆ ಎಂದು ಹೇಳಿ ಬಿಡುತ್ತಾನೆ. ಇದರಿಂದ ಪಾರ್ಥನಿಗೆ ಕೋಪ ಬರುತ್ತದೆ. ಇಬ್ಬರ ಮದುವೆ ಹೇಗೆ ಸೆಟ್ ಆಯ್ತು ಎಂಬುದನ್ನೆಲ್ಲಾ ತಿಳಿಯುತ್ತಾನೆ. ಇದೆಲ್ಲಾ ಪಾರ್ಥನ ಕೋಪವನ್ನು ಹೆಚ್ಚುತ್ತದೆ. ಹೀಗಾಗಿ ಪಾರ್ಥ ಸೀದಾ ಗೌತಮ್ ಬಳಿ ಹೋಗಿ ಜಗಳ ಮಾಡುತ್ತಾನೆ. ಇನ್ನು ಮುಂದಾದರೂ ನಿನ್ನ ಬದುಕಲ್ಲಿ ಸ್ವಲ್ಪ ಸ್ವಾರ್ಥವಿರಲಿ. ಎಷ್ಟು ವರ್ಷ ಅಂತ ನೀನು ಕೂಡ ಬೇರೆಯವರಿಗಾಗಿ ಬದುಕುತ್ತೀಯಾ ಎಂದು ಬೈಯುತ್ತಾನೆ. ಆದರೆ, ಗೌತಮ್‌ಗೆ ಏನು ಉತ್ತರ ಕೊಡಬೇಕು ಎಂಬುದು ತಿಳಿಯುವುದಿಲ್ಲ. ಈಗ ಪಾರ್ಥ ಈ ಮದುವೆಯನ್ನು ಮುರಿಯುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











