Amruthadhaare ; ಜೈದೇವನ ಮಾತು ಕೇಳಿ ದಂಗಾದ ಭೂಮಿಕಾ ಮದುವೆಯನ್ನು ನಿಲ್ಲಿಸುತ್ತಾಳಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ ಮುಗ್ದನಂತೆ ನಟಿಸಿದ್ದಾನೆ. ಅತ್ತಿಗೆ ಭೂಮಿಕಾ ಕಣ್ಣಿಗೆ ಮಣ್ಣೆರಚಿದ್ದು, ತನಗೂ ಮಲ್ಲಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಜೈದೇವನ ಮಾತುಗಳನ್ನು ಕೇಳಿದ ಭೂಮಿಕಾಳಿಗೆ ತನ್ನ ಅನುಮಾನಗಳೆಲ್ಲವೂ ಸುಳ್ಳು. ಜೈದೇವ ತುಂಬಾ ಒಳ್ಳೆಯ ವ್ಯಕ್ತಿ ಎಂದು ಭೂಮಿಕಾ ಮೈದುನನ್ನು ನಂಬಿದ್ದಾಳೆ.

ಆದರೆ, ಮಲ್ಲಿಯೇ ಬೇಕಂತಲೇ ಸುಳ್ಳು ಹೇಳಿದಳಾ. ಹಾಗೆ ಸುಳ್ಳು ಹೇಳಲು ಕಾರಣವೇನು ಎಂದು ಯೋಚಿಸುತ್ತಲೇ ಅವಳ ಫೋನ್ ಗೆ ಪದೇ ಪದೇ ಕಾಲ್ ಮಾಡಿದ್ದಾಳೆ. ಆದರೆ, ಮಲ್ಲಿ ಫೋನ್ ಸ್ವಿಚ್ ಆಫ್ ಬರುತ್ತಿದೆ.

Amruthadhaare Serial 22 February episode written update

ಅರಿಶಿನ ಶಾಸ್ತ್ರದಲ್ಲಿ ಮಂಕಾಗಿರುವ ಅಪ್ಪಿ

ಮನೆಯವರೆಲ್ಲರೂ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪೇಕ್ಷಾ ಮತ್ತು ಜೈದೇವನಿಗೆ ಅರಿಶಿನ ಶಾಸ್ತ್ರವನ್ನು ಮಾಡಿದ್ದಾರೆ. ಆದರೆ, ಅಪೇಕ್ಷಾ ಮುಖದಲ್ಲಿ ಸ್ವಲ್ಪವೂ ಖುಷಿಯಿಲ್ಲ. ಅವಳ ಮನಸ್ಸೆಲ್ಲವೂ ಪ್ರಿಯಕರ ಪಾರ್ಥನ ಮೇಲೆಯೇ ಇದೆ. ಮನೆಯವರ ಒಳಿತಿಗಾಗಿ ಮದುಮಗಳಾಗಿದ್ದು, ಪಾರ್ಥನಿಂದ ದೂರ ಇರಬೇಕಲ್ಲ ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ಮನೆಯವರೆಲ್ಲಾ ಮದುವೆಯಾಗಿ ಬೇರೆ ಮನೆಗೆ ಹೋಗುವ ದುಃಖ ಅಪೇಕ್ಷಾಳನ್ನು ಆವರಿಸಿಕೊಂಡಿದೆ ಎಂದು ಭಾವಿಸಿದ್ದಾರೆ. ಹಾಗಾಗಿ ಅಲ್ಲಿ ನಿನ್ನ ಜೊತೆಗೆ ಭೂಮಿಕಾ ಇರುತ್ತಾಳೆ. ಮನೆಯವರ ಬಗ್ಗೆ ಹೆಚ್ಚು ಯೋಚಿಸಬೇಡ. ನಿನ್ನ ಮದುವೆಯಲ್ಲಿ ನಗು ನಗುತಾ ನೀನಿರಬೇಕು ಎಂದು ಬುದ್ಧಿ ಹೇಳಿದ್ದಾರೆ.

ಮಲ್ಲಿ ಬಗ್ಗೆ ಸತ್ಯ ಹೇಳಿದ ಜೈದೇವ

ಭೂಮಿಕಾ ಮಲ್ಲಿ ವಿಚಾರವನ್ನು ಮರೆತು ಮದುವೆಯ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಜೈದೇವ ಎಡವಟ್ಟು ಮಾಡಿಕೊಂಡಿದ್ದಾನೆ. ತನ್ನ ಮಾವ ಲಕ್ಷ್ಮೀಕಾಂತನ ಜೊತೆಗೆ ಮಲ್ಲಿ ವಿಚಾರವನ್ನು ಮಾತನಾಡಿದ್ದಾನೆ. ಮಲ್ಲಿ ಒಬ್ಬಳು ಊಟದಲ್ಲಿ ಇರುವ ಉಪ್ಪಿನಕಾಯಿ ಅಂತೆ. ಅವಳಿಗೆ ಸ್ವಲ್ಪವೂ ಬುದ್ಧಿಯೇ ಇಲ್ಲ. ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಪಾಪ ಭೂಮಿಕಾ ಅತ್ತಿಗೆ ನಾನು ಮಾಡಿದ ನಾಟಕವನ್ನು ನಂಬಿ ಬಿಟ್ಟರು. ಮಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಕಾರಣ. ಇದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾತನಾಡುತ್ತಿರುತ್ತಾನೆ. ಈ ಮಾತುಗಳನ್ನು ಅಕಸ್ಮಾತ್ ಆಗಿ ಭೂಮಿಕಾ ಕೇಳಿಸಿಕೊಳ್ಳುತ್ತಾಳೆ.

ಶಕುಂತಲಾ ಆಟದಲ್ಲಿ ಸೋಲುತ್ತಾಳಾ ಭೂಮಿ

ಈ ವಿಚಾರವನ್ನು ಭೂಮಿಕಾ ಶಕುಂತಲಾಳಿಗೆ ಹೇಳುತ್ತಾಳೆ. ಶಕುಂತಲಾ ನನ್ನ ಮಗನ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ನನ್ನ ಮಗ ನೀನು ಅಂದುಕೊಂಡಷ್ಟು ಕೆಟ್ಟವನಲ್ಲ. ಈ ಮದುವೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅಪೇಕ್ಷಾ ಜೊತೆಗೆ ಜೈದೇವನ ಮದುವೆಯ ನಡೆಯಲೇ ಬೇಕು. ಇದು ದಿವಾನ್ ಕುಟುಂಬದ ಪ್ರೆಸ್ಟೀಜ್ ಪ್ರಶ್ನೆ. ನೀನೇನಾದರೂ ಸಮಸ್ಯೆ ಮಾಡಿದರೆ. ಅದೆಲ್ಲವೂ ಮೀಡಿಯಾಗೆ ತಿಳಿದರೆ ದೊಡ್ಡ ಸಮಸ್ಯೆ ಆಗುತ್ತೆ. ಅಷ್ಟೇ ಅಲ್ಲದೇ, ನಿನ್ನ ಬಳಿ ಯಾವ ಸಾಕ್ಷಿಯೂ ಇಲ್ಲ. ಗೌತಮ್ ನನ್ನ ಮಾತನ್ನು ನಂಬುತ್ತಾನೆ. ನೀನು ಹೇಳುವುದನ್ನು ಕೇಳುವುದಿಲ್ಲ. ಸಾಕ್ಷಿ ಇಲ್ಲದೇ ನೀನೇನು ಮಾಡುವುದಕ್ಕೂ ಆಗುವುದಿಲ್ಲ ಎಂದು ಹೇಳುತ್ತಾಳೆ.

Amruthadhaare Serial 22 February episode written update

ನ್ಯಾಯದ ಪರ ನಿಂತ ಭೂಮಿಕಾ

ಆದರೆ, ಭೂಮಿಕಾಳಿಗೆ ಈ ಮದುವೆ ನಡೆಯುವುದು ಇಷ್ಟವಿರುವುದಿಲ್ಲ. ಜೈದೇವ ಮಾಡಿರುವ ತಪ್ಪಿನಿಂದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ತೊಂದರೆಯಾಗುತ್ತದೆ ಎಂದು ಗೌತಮ್ ಬಳಿ ಹೇಳಲು ಹೋಗುತ್ತಾಳೆ. ಆದರೆ, ಅದಾಗಲೇ ಯಾರೋ ಜೈದೇವನ ನಡವಳಿಕೆ ಸರಿಯಿಲ್ಲ ಎಂದು ಮಾತನಾಡಿದ್ದನ್ನು ಕೇಳಿಸಿಕೊಂಡ ಗೌತಮ್ ಜಗಳ ಮಾಡುತ್ತಿರುತ್ತಾನೆ. ನನ್ನ ಸಹೋದರರ ಬಗ್ಗೆ ಯಾರೂ ಏನೂ ಮಾತನಾಡಬಾರದು. ಅವರು ನನಗಿಂತಲೂ ಒಳ್ಳೆಯವರು ಎಂದು ಜಗಳ ಮಾಡುವುದನ್ನು ನೋಡಿ ಈಗ ಮದುವೆಯನ್ನು ನಿಲ್ಲಿಸುವುದು ಹೇಗೆ..? ಮಲ್ಲಿ ಬಗ್ಗೆ ಹೇಗೆ ಗೌತಮ್ ಗೆ ಹೇಳುವುದು ಎಂದು ಭೂಮಿಕಾ ಯೋಚಿಸುತ್ತಿದ್ದಾಳೆ.

More from Filmibeat

English summary
bhoomika hears about malli matter by jaidev and plans to cancel marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X