Amruthadhaare ; ಹಣದ ಬ್ಯಾಗ್ ಪಡೆದ ಜೈದೇವ್ ಸಿಕ್ಕಿ ಬಿದ್ದನಾ..?ಕೆಂಚನನ್ನು ಕೊಂದೇ ಬಿಡುತ್ತಾನಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾಳಿಗಾಗಿ ಮಂದಾಕಿನಿ ಗೆಳತಿಯರು ಕಾಂಪಿಟೀಷನ್ ಇಟ್ಟಿದ್ದಾರೆ. ಅದೂ ಕೂಡ ಇದೇ ಭಾನುವಾರ ನಡೆಯಬೇಕು ಎಂದಿದ್ದಾರೆ.ಮಂದಾಕಿನಿ ಈಗ ಪೀಕಲಾಟಕ್ಕೆ ಸಿಲುಕಿದ್ದು, ಮಹಿಮಾ ಬಳಿ ತನ್ನ ತಪ್ಪಿನ ಬಗ್ಗೆ ಹೇಳಿಕೊಂಡಿದ್ದಾಳೆ. ಉತ್ಸಾಹದಲ್ಲಿ ಗೆಳತಿಯರ ಬಳಿ ಸೊಸೆ ಬಗ್ಗೆ ಕೊಚ್ಚಿಕೊಂಡಿದ್ದು, ಈಗ ಅದೇ ಕಂಟಕವಾಗಿದೆ. ನಾಳೆಯೇ ಸ್ಫರ್ಧೆ ನಡೆಯಲಿದ್ದು, ಮಹಿಮಾ ಬರಲೇಬೇಕು ಎಂದು ಕೇಳಿಕೊಂಡಿದ್ದಾಳೆ. ಆದರೆ, ಮಹಿಮಾ ನಾಳೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ.


ಗೌತಮ್ ಬಗ್ಗೆ ತಿಳಿದ ಜೈದೇವ್

ಜೈದೇವ್ ಗೆ ಭೂಮಿಕಾ ಮಾತಿನ ಬಗ್ಗೆ ಅನುಮಾನವಿದ್ದು, ಯಾವುದೇ ಕಾರಣಕ್ಕೂ ಭೂಮಿಕಾ ಮಾತಿನಲ್ಲಿ ಏನೋ ಮರ್ಮವಿದೆ ಎಂದು ಯೋಚಿಸುತ್ತಿದ್ದಾನೆ. ಮಲ್ಲಿ ಹಾಗೂ ತನ್ನ ಸಂಬಂಧದ ಬಗ್ಗೆ ಖುಷಿ ಖುಷಿಯಾಗಿ ಮಾತನಾಡಿದ್ದು, ಅದೇ ದಿನ ಪಾರ್ಟಿ ಬಗ್ಗೆ ಹೇಳಿದ್ದು, ಇದೇ ದಿನವೇ ಜೈದೇವ್ ಕೈಗೆ ಹಣ ಸೇರುತ್ತಿರುವುದು ಜೊತೆಗೆ ಕೆಂಚ ರಿಲೀಸ್ ಆಗಿರುವುದು. ಎಲ್ಲವನ್ನೂ ತಕ್ಕಡಿಯಲ್ಲಿ ಹಾಕಿದ ಜೈದೇವ್ ತನಗೆ ಏನೋ ಗ್ರಹಚಾರ ಕಾದಿರಬಹುದು ಎಂದು ಆಲೋಚಿಸುತ್ತಿದ್ದಾನೆ. ಅದೇ ಸಂದರ್ಭದಲ್ಲಿ ಭೂಮಿಕಾ ಫೋನ್ ಟ್ರ್ಯಾಕ್ ಮಾಡಿದ್ದಾನೆ. ಆಗ ಗೌತಮ್ ಮತ್ತು ಭೂಮಿಕಾ ತಮ್ಮ ಹಳೆಯ ಫ್ಯಾಕ್ಟರಿ ಬಳಿ ಹೋಗಿರುವ ವಿಚಾರ ತಿಳಿದು ಬಂದಿದೆ.

amruthadhaare-serial-22-june-episode-written-update

ಕಾರನ್ನು ಫಾಲೋ ಮಾಡಿದ್ದು ವೇಸ್ಟ್

ಗೌತಮ್ ಮತ್ತು ಭೂಮಿಕಾ ಜಿಪಿಎಸ್ ಅನ್ನು ನಂಬಿಕೊಂಡು ಕಾರನ್ನು ಫಾಲೋ ಮಾಡುತ್ತಾರೆ. ಇತ್ತ ಜೈದೇಔ ಗೆ ಅನುಮಾನ ಬಂದ ಕಾರಣ ತಮ್ಮ ಕಾರನ್ನು ಯಾರಾದರೂ ಫಾಲೋ ಮಾಡುತ್ತಿದ್ದಾರಾ ಚೆಕ್ ಮಾಡಿ ಎಂದು ಹೇಳುತ್ತಾನೆ. ಗೌತಮ್ ಮತ್ತು ಭೂಮಿಕಾ ಫಾಲೋ ಮಾಡುತ್ತಿರುವ ವಿಚಾರ ತಿಳಿದ ಬಳಿಕ, ಗೌತಮ್ ದಿಕ್ಕನ್ನೇ ಜೈದೇವ್ ಬದಲಿಸುತ್ತಾನೆ. ಇದ್ದಕ್ಕಿದ್ದ ಹಾಗೆಯೇ ಕಾರಿನಲ್ಲಿ ಯಾರೂ ಕಾಣುವುದಿಲ್ಲ. ಇಬ್ಬರೂ ತಲೆ ಕೆಡಿಸಿಕೊಂಡಾಗ ಹಣದ ಬ್ಯಾಗ್ ನಲ್ಲೂ ಕೂಡ ಜಿಪಿಎಸ್ ಇರುವುದು ತಿಳಿದು ಅದನ್ನು ಫಾಲೋ ಮಾಡಿಕೊಂಡು ಹೋಗುತ್ತಾರೆ.

ಕೆಂಚನನ್ನು ಕೊಂದೇ ಬಿಡುತ್ತಾನಾ..?

ಜೈದೇವ್ ಹಣವನ್ನು ಪಡೆಯಲು ಆ ವ್ಯಕ್ತಿಗೆ ತಮ್ಮ ಗೋಡೌನ್ ಗೆ ಬರಲು ತಿಳಿಸಿರುತ್ತಾನೆ. ಜೈದೇವ್ ಕೂಡ ಗೋಡೌನ್ ಕಡೆಗೆ ಹೊರಟಾಗ ದಾರಿ ಮಧ್ಯೆ ಕೆಂಚ ಕಾಣಿಸಿಕೊಳ್ಳುತ್ತಾನೆ. ಜೈದೇವ್ ಗೆ ಕೆಂಚನ ಮೇಲೆ ಕೆಟ್ಟ ಕೋಪವಿರುತ್ತದೆ. ಇಳಿದು ಕೆಂಚನಿಗೆ ಬೈಯುತ್ತಾನೆ. ಆಗ ಕೆಂಚ ಜೈದೇವ್ ನ ಕಾಲನ್ನು ಹಿಡಿದು ರೋಷದಲ್ಲಿ ಫೋನ್ ಮಾಡಿ ಏನೇನೋ ಬೈದು ಬಿಟ್ಟೆ. ನನ್ನನ್ನು ಬಿಟ್ಟು ಬಿಡಿ ನನ್ನ ಹೆಂಡತಿ ಕಷ್ಟಪಟ್ಟು ನನ್ನು ಜೈಲಿನಿಂದ ಬಿಡಿಸಿದ್ದಾಳೆ. ನಾನು ಈಗ ಊರಿಗೆ ಹೋಗಿ ನನ್ನ ಪಾಡಿಗೆ ನಾನು ಜೀವನ ಮಾಡುತ್ತೀನಿ ಎಂದು ಕೇಳಿಕೊಳ್ಳುತ್ತಾನೆ. ಕೆಂಚನ ಮಾತನ್ನು ನಂಬುವ ಜೈದೇವ್ ಹಣ ಕೊಟ್ಟು ಕಳಿಸುತ್ತಾನೆ. ಆದರೆ, ಕೆಂಚ ಜೈದೇವ್ ಮೇಲೆ ಸೇಡುತ್ತಿರಿಸಿಕೊಳ್ಳಲೇಬೇಕು ಎಂದುಕೊಂಡಿದ್ದಾನೆ.

amruthadhaare-serial-22-june-episode-written-update

ಹಣದ ಬ್ಯಾಗ್ ಪಡೆದ ಜೈದೇವ್ ಸಿಕ್ಕಿ ಬಿದ್ದನಾ..?

ಜೈದೇವ್ ಹಣವನ್ನು ಪಡೆದು ಹುಡುಗರಿಗೆ ಎಣಿಸಲು ಹೇಳುತ್ತಾನೆ. ಬಳಿಕ ಹಣ ತನ್ನ ಕೈಗೆ ಸಿಕ್ಕಿತು ಎಂಬ ಖುಷಿಯಲ್ಲಿರುತ್ತಾನೆ. ಇದೇ ಸಂದರ್ಭದಲ್ಲಿ ಆ ಗೋಡೌನ್ ಗೆ ಕೆಂಚ ಬರುತ್ತಾನೆ. ಇನ್ನು ಗೌತಮ್ ಮತ್ತು ಭೂಮಿಕಾ ಕೂಡ ಅಲ್ಲಿಗೆ ಬರುತ್ತಿದ್ದಾರೆ. ಜೈದೇವ್ ಸಿಕ್ಕಿಬೀಳುತ್ತಾನಾ ಇಲ್ಲ ಕೆಂಚನೇ ಇದರ ರೂವಾರಿ ಎಂಬಂತೆ ಬಿಂಬಿಸುತ್ತಾನಾ ಎಂಬ ಕುತೂಹಲ ಮೂಡಿದೆ. ನಾಳಿನ ಸಂಚಿಕೆ ಬಹಳ ಇಂಟರೆಸ್ಟಿಂಗ್ ಆಗಿದೆ.

More from Filmibeat

English summary
bhoomika, gautham try to searching for theaf as wasted. Jaidev escaped
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X