Amruthadhaare ; ಮಲ್ಲಿ ಬಾಯಿಂದ ಸತ್ಯ ಅರಿತ ಭೂಮಿಕಾ : ಜೈದೇವ್‌ಗೆ ಕಾದಿದೆಯಾ ಗ್ರಹಚಾರ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಬಳಿ ಭೂಮಿಕಾ ಸಲುಗೆಯಿಂದ ವರ್ತಿಸಿದ್ದಾಳೆ. ತಾನೀಗ ಗರ್ಭಿಣಿಯಾಗಿದ್ದು, ಹೇಗೆ ಇರಬೇಕು ಎಂದು ಟಿಪ್ಸ್ ಕೇಳಿದ್ದಾಳೆ. ಆದರೆ, ಇದರಿಂದ ಶಕುಂತಲಾಳಿಗೆ ಇರಿಟೇಟ್ ಆಗಿದ್ದು, ಸಂದರ್ಭವನ್ನು ಮ್ಯಾನೇಜ್ ಮಾಡಿದ್ದಾಳೆ. ಇತ್ತ ಜೀವನ್ ಗೆ ಸದಾಶಿವ ಮತ್ತು ಮಂದಾಕಿನಿ ಇಬ್ಬರೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನು ಹೋಗುತ್ತಿರುವ ದಾರಿ ಸರಿಯಿಲ್ಲ ಎಂದು ಬುದ್ಧಿ ಹೇಳಿದ್ದಾರೆ.ಜೀವನ್ ಇಷ್ಟೆಲ್ಲಾ ಬದಲಾಗಲು ಯಾರು ಕಾರಣ ಎಂಬುದನ್ನು ಸದಾಶಿವನಿಗೆ ಮಹಿಮಾ ತಿಳಿಸಿದ್ದಾಳೆ. ಸದಾಶಿವ ಮಗನನ್ನು ದಾರಿಗೆ ತರಲು ಏನು ಮಾಡಬಹುದು ಎಂದು ಆಲೋಚಿಸಿದ್ದಾನೆ.

ಮೂಗನಾಗಿದ್ದ ಅಜ್ಜನಿಗೆ ಮಾತು ಬರುತ್ತಾ..?

ಮಲ್ಲಿಯ ಹುಟ್ಟುಹಬ್ಬ ಹಿನ್ನೆಲೆ ಅವಳನ್ನು ನೋಡಲೆಂದು ಹಳ್ಳಿಗೆ ಬಂದ ಗೌತಮ್ ಗೆ ಶಾಕಿಂಗ್ ವಿಚಾರ ಗೊತ್ತಾಗಿದೆ. ಮಲ್ಲಿ ರಾಜೇಂದ್ರ ಭೂಪತಿಯ ಮಗಳು ಎಂಬುದು ಗೊತ್ತಾಗಿದ್ದು, ಅಜ್ಜನನ್ನು ಪ್ರಶ್ನೆ ಮಾಡಿದ್ದಾನೆ. ಮೊದಲು ಏನನ್ನೂ ಉತ್ತರಿಸಿದ ಅಜ್ಜ ಕೊನೆಗೆ ಬೇರೆ ದಾರಿ ಕಾಣದೆ ಸತ್ಯ ಬಾಯಿ ಬಿಟ್ಟಿದ್ದಾರೆ. ಅದರಲ್ಲೂ ಇಷ್ಟು ದಿನಗಳ ಕಾಲ ಅಜ್ಜನಿಗೆ ಮಾತು ಬಾರದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಅಜ್ಜ ಬಾಯಿ ಬಿಟ್ಟು ಮಾತನಾಡಿದ್ದಾರೆ. ಅಜ್ಜನ ಮಾತನ್ನು ಕೇಲಿದ ಗೌತಮ್ ಗೆ ಶಾಕ್ ಆಗಿದೆ. ನಿಮಗೆ ಮಾತು ಬರುತ್ತಾ ಎಂದು ಪ್ರಶ್ನೆ ಮಾಡಿದ್ದು, ಅಜ್ಜ ಎಲ್ಲಾ ಮಲ್ಲಿಗಾಗಿ ಎಂದು ಹೇಳಿದ್ದಾರೆ. ಮಲ್ಲಿ ರಾಜೇಂದ್ರ ಭೂಪತಿಯ ಮಗಳು ಎಂಬುದನ್ನು ತಿಳಿದ ಗೌತಮ್ ಗೆ ಮೊದಲೇ ಶಾಕ್ ಆಗಿತ್ತು. ಆದರೆ, ಈಗ ಅಜ್ಜನಿಗೆ ಮಾತು ಕೂಡ ಬರುತ್ತದೆ ಎಂಬುದು ಗೊತ್ತಾಗಿ ಇನ್ನೂ ದೊಡ್ಡ ಆಘಾತವಾಗಿದೆ.

amruthadhaare-serial-22-march-episode-written-update

ರಾಜೇಂದ್ರ ಭೂಪತಿ ಮಗಳು ಮಲ್ಲಿ ಹೇಗಾದಳು..?

ಅಜ್ಜ ಮತ್ತು ಮಲ್ಲಿಯ ತಾಯಿ ಇಬ್ಬರೂ ದೂರದ ಸಂಬಂಧಿಯಂತೆ. ಇಬ್ಬರೂ ಕೂಡ ಒಂದೇ ಊರಿನಲ್ಲಿದ್ದರು. ಅಜ್ಜ ಬದುಕಿನ ಬಂಡಿಯನ್ನು ಎಳೆಯುವ ಸಲುವಾಗಿ ಸಂಬಂಧಿಕರ ಮನೆಯ್ಲಲೇ ಕೆಲಸಕ್ಕೆ ಹೋಗುತ್ತಿದ್ದರಂತೆ. ಮಲ್ಲಿಯ ತಾಯಿ ಬಹಳ ಒಳ್ಳೆಯ ವ್ಯಕ್ತಿತ್ವ ಉಳ್ಳವರು. ಆದರೆ, ಅವರು ರಾಜೇಂದ್ರ ಭೂಪತಿಯನ್ನು ಮದುವೆಯಾಗಿದ್ದರು. ರಾಜೇಂದ್ರ ಭೂಪತಿ ಕೆಟ್ಟ ವ್ಯಕ್ತಿಯಾಗಿದ್ದು, ಏನೋ ಮಾಡಲು ಹೋಗಿ ಮತ್ತೇನೋ ಮಾಡಿ ಅದಕ್ಕಿನ್ನೇನೋ ಮಾಡುತ್ತಿದ್ದರಂತೆ. ಇದರಿಂದ ಮಲ್ಲಿ ತಾಯಿಗೆ ಬಹಳ ಕಷ್ಟವಾಗುತ್ತಿತ್ತಂತೆ. ರಾಜೇಂದ್ರ ಭೂಪತಿಯ ಕೆಟ್ಟ ಕೆಲಸಗಳನ್ನು ಗೌತಮ್ ತಂದೆ ಗಮನಿಸಿ ಧೂರು ನೀಡಿದ್ದರಂತೆ. ಅದೊಂದು ದಿನ ರಾಜೇಂದ್ರ ಭೂಪತಿಯ ಮನೆಗೆ ಬೆಂಕಿ ಬಿದ್ದಾಗ ಅವರ ಮಗಳು, ಹೆಂಡತಿ ಮತ್ತು ಅಜ್ಜ ಮೂವರೇ ಮನೆಯಲ್ಲಿದ್ದರಂತೆ.

ಮಲ್ಲಿಯನ್ನು ಕಂಡು ಖುಷಿ ಪಟ್ಟ ಭೂಮಿಕಾ

ಆಗ ಮಲ್ಲಿಯ ತಾಯಿ ನಾನು ರಾಜೇಂದ್ರನನ್ನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ. ನನ್ನ ಮಗಳ ಮೇಲೆ ಅವನ ನೆರಳು ಬೀಲದಂತೆ ಕಾಪಾಡಬೇಕು ಎಂದು ಮಾತು ಕೊಟ್ಟು ಅಜ್ಜ ಇಷ್ಟು ದೂರ ಕರೆದುಕೊಂಡು ಬಂದರಂತೆ. ಈ ಸತ್ಯ ತಿಳಿದು ಗೌತಮ್ ಗೆ ಬೇಸರವಾಗಿದೆ. ಇನ್ನು ಮಲ್ಲಿಯನ್ನು ಮನೆಗೆ ಕರೆತಂದ ಗೌತಮ್, ಭೂಮಿಕಾಳಿಗೆ ಸರ್ಪ್ರೈಸ್ ಕೊಟ್ಟಿದ್ದಾನೆ. ಭೂಮಿಕಾ ಮಲ್ಲಿಯನ್ನು ನೋಡಿದ್ದೇ ತಡ ಖುಷಿಪಟ್ಟಿದ್ದಾಳೆ.

Take a Poll

ಮಲ್ಲಿ ದಾಂಪತ್ಯದ ಬಗ್ಗೆ ಸತ್ಯ ಅರಿತ ಭೂಮಿಕಾ

ಮಲ್ಲಿಯ ಜೊತೆಗೆ ಹಲವು ದಿನಗಳ ಮಾತುಗಳನ್ನು ಆಡುವಾಗ ಭೂಮಿಕಾ ಜೈದೇವ್ ಮತ್ತು ಮಲ್ಲಿ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಆದರೆ, ಮಲ್ಲಿಯನ್ನು ಅರ್ಥ ಮಾಡಿಕೊಂಡ ಭೂಮಿಕಾ ಇವರಿಬ್ಬರ ದಾಂಪತ್ಯದಲ್ಲಿ ಸಮಸ್ಯೆ ಇದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಈಗ ಜೈದೇವ್‌ ದಿಯಾ ಜೊತೆಗೆ ಸುತ್ತಾಡುತ್ತಿರುವುದನ್ನು ತಿಳಿದ ಭೂಮಿಕಾ, ಮೈದುನನಿಗೆ ತಕ್ಕ ಪಾಠ ಕಲಿಸುತ್ತಾಳಾ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X