Amruthadhaare ; ಕೊನೆಯದಾಗಿ ಜೈದೇವ ಮಾಡಿದ ಪ್ಲಾನ್ ಏನು..? : ಗೌತಮ್ ಪ್ರಪೋಸ್ ಮಾಡುವಾಗ ಭೂಮಿಕಾ ಹೋಗಿದ್ದೇಲ್ಲಿಗೆ..?
ಅಮೃತಧಾರೆ ಧಾರಾವಾಹಿಯಲ್ಲಿ ಈಗಾಗಲೇ ಮಲ್ಲಿ ಜೊತೆಗೆ ಜೈದೇವನ ಮದುವೆ ಆದಾಗಿನಿಂದಲೂ ಒಂದಲ್ಲಾ ಒಂದು ಪ್ಲಾನ್ ಮಾಡುತ್ತಲೇ ಇದ್ದಾನೆ.ಆದರೆ, ಜೈದೇವನ ದುರಾದೃಷ್ಟವೋ ಅಥವಾ ಮಲ್ಲಿಯ ಅದೃಷ್ಟವೋ ಪ್ರತಿ ಬಾರಿ ಜೈದೇವ ಏನೇ ಪ್ಲಾನ್ ಮಾಡಿದರೂ ಫ್ಲಾಪ್ ಆಗುತ್ತಲೇ ಬಂದಿದೆ.ಅದರಲ್ಲಿಯೂ ಬಹು ಮುಖ್ಯವಾಗಿ ಭೂಮಿಕಾ ಅತ್ತಿಗೆ ಆದಾಗಿನಿಂದ ಜೈದೇವನ ಆಟವಾಗಲೀ ಶಕುಂತಲಾಳ ಪ್ಲಾನ್ ಗಳಾಗಲೀ ಯಾವುದೂ ಕೂಡ ಸಕ್ಸಸ್ ಆಗುತ್ತಿಲ್ಲ.
ನಿದ್ದೆ ಮಾತ್ರೆ ತಿಂದು ಮಲಗಿದ ಮಹಿಮಾ
ಜೈದೇವ ಕೊನೆಯ ಪ್ಲಾನ್ ಎಂಬಂತೆ ಮಲ್ಲಿಗೆ ನಿದ್ರೆ ಮಾತ್ರೆ ಬೆರೆಸಿದ ಊಟ ಮಾಡಿಸಿ, ಅವಳು ಇದ್ದಕ್ಕಿದ್ದ ಹಾಗೆಯೇ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಸುದ್ದಿ ಮಾಡಬೇಕು. ನಂತರ ಪೊಲೀಸ್ ಠಾಣೆಯಲ್ಲಿ ತಾವೇ ದೂರು ಕೊಟ್ಟು ಕೇಸ್ ಕ್ಲೋಸ್ ಮಾಡಿಸಬೇಕು ಎಂದು ಜೈದೇವ ಹರಸಾಹಸ ಪಟ್ಟಿದ್ದಾನೆ. ಕಷ್ಟಪಟ್ಟು ನಿದ್ರೆ ಮಾತ್ರೆಗಳನ್ನು ಪುಡಿ ಮಾಡಿ ಮಲ್ಲಿ ತಿನ್ನುವ ಅನ್ನಕ್ಕೆ ಬೆರೆಸಿ ತಂದಿದ್ದಾನೆ. ಆದರೆ, ಮಹಿಮಾ ನನ್ನ ಅಣ್ಣ ನನಗೆ ಯಾವತ್ತೂ ಹೀಗೆ ಊಟ ತಂದು ಕೊಟ್ಟಿಲ್ಲ. ಎಂದು ಹೊಟ್ಟೆ ಉರಿಯಿಂದಲೇ ಆ ಊಟವನ್ನು ತಾನು ತಿನ್ನಲು ಮುಂದಾಗಿದ್ದಾಳೆ. ಜೈದೇವ ಮತ್ತು ಶಕುಂತಲಾ ತಡೆಯಲು ಎಷ್ಟು ಪ್ರಯತ್ನಿಸಿದರೂ ಮಹಿಮಾ ಕೇಳದೇ ಊಟ ಮಾಡುತ್ತಾಳೆ. ನಿದ್ದೆ ಬರುತ್ತಿದೆ ಎಂದು ಎದ್ದು ಹೋಗಿ ಮಲಗುತ್ತಾಳೆ.

ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ಬೈಯಿಸಿಕೊಂಡ ಜೈದೇವ
ಬೆಳಗೆದ್ದು, ಆ ಊಟದಲ್ಲಿ ಏನಿತ್ತೀ ಗೊತ್ತಿಲ್ಲ. ಆದರೆ, ನನಗೆ ಪ್ರಜ್ಞೆ ತಪ್ಪಿದಷ್ಟು ನಿದ್ದೆಯಂತೂ ಬಂತು ಎಂದು ಹೇಳುತ್ತಾಳೆ. ಶಕುಂತಲಾ ಬಳಿ ಅದರಲ್ಲಿ ಏನೋ ಮಿಕ್ಸ್ ಆಗಿತ್ತು ಎಂಬಂತೆ ಅನುಮಾನವನ್ನು ವ್ಯಕ್ತಪಡಿಸುತ್ತಾಳೆ. ಆದರೆ, ಶಕುಂತಲಾ ಹಾಗೆಲ್ಲಾ ಏನಿಲ್ಲ. ನೀನು ಹಾಗೆ ಅಂದುಕೊಂಡಿದ್ದೀಯಾ. ನಿನಗೆ ಒಳ್ಳೆಯ ನಿದ್ದೆ ಬಂದಿದೆ ಅಷ್ಟೇ ಎಂದು ಹೇಳಿ ಸಂದರ್ಭವನ್ನು ಮ್ಯಾನೇಜ್ ಮಾಡುತ್ತಾಳೆ. ನಂತರ ಬಂದು ಜೈದೇಔನಿಗೆ ಬೈಯುತ್ತಾಳೆ. ನೀನು ಮಾಡುವ ಪ್ಲಾನ್ ಗಳೆಲ್ಲವೂ ಫ್ಲಾಪ್ ಆಗುತ್ತದಿದೆ. ಮಹಿಮಾಳಿಗೆ ತನ್ನ ಮೇಲೆ ಅನುಮಾನ ಬಂದಿದೆ. ಇನ್ಮುಂದೆ ಇಂತಹ ಕೆಲಸಗಳನ್ನು ಮಾಡಲೇಬೇಡ ಎಂದು ವಾರ್ನ್ ಮಾಡುತ್ತಾಳೆ.
ಬೆಟ್ಟದ ತುದಿಯಲ್ಲಿ ನಿಂತು ಪ್ರಪೋಸ್
ಇತ್ತ ಗೌತಮ್ ದಿವಾನ್ ತನ್ನ ಪತ್ನಿ ಭೂಮಿಕಾಳಿಗೆ ಪ್ರಪೋಸ್ ಮಾಡಲೇಬೇಕು. ಹೀಗೆ ದಿನದೂಡಿದರೆ ಆಗುವುದಿಲ್ಲ. ಮನದಲ್ಲಿರುವ ಭಾವನೆಗಳನ್ನು ಹೇಳಿಕೊಳ್ಳಲೇಬೇಕು ಎಂದು ಸ್ಪೆಷಲ್ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ. ಪ್ರಪೋಸ್ ಮಾಡಲು ಗೌತಮ್ ಕರೆದುಕೊಂಡು ಹೋಗುತ್ತಿರುವ ಸತ್ಯ ಭೂಮಿಕಾಳಿಗೂ ಗೊತ್ತಿದೆ. ಆದರೆ, ತನಗೇನು ಗೊತ್ತೇ ಇಲ್ಲ ಎಂಬಂತೆ ಸುಮ್ಮನಿದ್ದಾಳೆ. ಬೆಟ್ಟದ ತುದಿಯಲ್ಲಿ ಪ್ರಕೃತಿ ಮಡಿಲಲ್ಲಿ ಭೂಮಿಕಾಳಿಗೆ ಪ್ರಪೋಸ್ ಮಾಡಲು ಗೌತಮ್ ಮುಂದಾಗುತ್ತಾನೆ. ಮುಖ ನೋಡಿದರೆ ಮಾತು ಬರುವುದಿಲ್ಲ ಎಂದು ಹಿಂದೆ ತಿರುಗಿ ಪ್ರಪೋಸ್ ಮಾಡುತ್ತಾನೆ. ನನ್ನ ಬದುಕಿನ ಕಥೆಯಲ್ಲಿ ಎರಡು ಭಾಗವಿರುತ್ತದೆ. ಮೊದಲನೇಯದು ಮದುವೆಗೂ ಮುನ್ನ ಬ್ಲ್ಯಾಕ್ ಆಂಡ್ ವೈಟ್. ನೀವು ಬಂದ ಬಳಿಕ ಫುಲ್ ಕಲರ್ಫುಲ್ ಎಂದು ಪ್ರಪೋಸ್ ಮಾಡುತ್ತಾನೆ.

ಮಾಯವಾದ ಭೂಮಿಕಾ ಹೋಗಿದ್ದೆಲ್ಲಿಗೆ..?
ಆದರೆ, ಹಿಂದೆ ತಿರುಗು ನೋಡಿದರೆ ಅಲ್ಲಿ ಭೂಮಿಕಾ ಇರುವುದಿಲ್ಲ. ಪ್ರತಿ ಸಲ ಭೂಮಿಕಾ ವಿರುದ್ಧ ಪ್ಲಾನ್ ಮಾಡಿ ಸೋಲುತ್ತಿದ್ದ ಜೈದೇವ, ಈ ಸಲ ಕೆಂಚನಿಗೆ ಫೋನ್ ಮಾಡಿ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಲು ಹೇಳಿದ್ದಾನೆ. ಕೆಂಚ ಗೌತಮ್ ಅವರನ್ನು ಫಾಲೋ ಮಾಡಿಕೊಂಡು ಬಂದು ಸಮಯ ನೋಡಿ ಭೂಮಿಕಾಳನ್ನು ಅಪಹರಿಸಿದ್ದಾನೆ. ಮುಂದಿನ ಕಥೆ ಎಷ್ಟು ಟ್ವಿಸ್ಟ್ ಆಂಡ್ ಟರ್ನ್ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











