Amruthadhaare: ಸೀಮಂತಕ್ಕೆ ತಯಾರಿ; ಪಶ್ಚಾತಾಪ ಪಡುತ್ತಿರುವ ಮಹಿಮಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಇಬ್ಬರೂ ಈಗ ತಮ್ಮದೇ ಲೋಕದಲ್ಲಿದ್ದಾರೆ. ಪ್ರೇಮಲೋಕಕ್ಕೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದಾರೆ.

ಅಪೇಕ್ಷಾಳಿಗೂ ಪಾರ್ಥ ಇಷ್ಟವಾಗಿದ್ದಾನೆ. ಹಾಗಾಗಿ ಪಾರ್ಥನನ್ನು ಸ್ವಲ್ಪ ಸ್ವಲ್ಪವೇ ಆಟವಾಡಿಸುತ್ತಿದ್ದಾಳೆ. ತಾನು ಹೋಗುವ ಸ್ಥಳದ ಬಗ್ಗೆ ಇಂಡೈರೆಕ್ಟ್ ಆಗಿ ಹೇಳುತ್ತಾಳೆ.

Amruthadhaare Serial 22nd January episode written update

ಆಗಾಗ ಬೇಕಂತಲೇ ಪಾರ್ಥನಿಗೆ ಚಾಲೆಂಜ್ ಹೆಸರಲ್ಲಿ ತನ್ನ ಬಗ್ಗೆ ತಿಳಿದುಕೊಳ್ಳುವಂತೆ ಹೇಳುತ್ತಿರುತ್ತಾಳೆ. ಒಬ್ಬರಿಗೊಬ್ಬರು ಚಾಲೆಂಜ್ ಮಾಡಿಕೊಳ್ಳುವ ಮೂಲಕ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.

ಜೊತೆಯಾಗಿ ಹಬ್ಬ ಆಚರಿಸಿದ ಕುಟುಂಬ

ಇನ್ನು ಗೌತಮ್ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತಿದೆ. ಗೌತಮ್ ಮತ್ತು ಭೂಮಿಕಾ ಹೊಸ ಜೋಡಿಗಳಾಗಿರುವ ಕಾರಣ ಹಬ್ಬದ ಕಳೆ ಹೆಚ್ಚಿದ. ಮಹಿಮಾ, ಅಪೇಕ್ಷಾ ಹಾಗೂ ಜೀವನ್ ಕೂಡ ಮನೆಗೆ ಬಂದ ಕಾರಣ ಮನೆಯವರೆಲ್ಲಾ ಇನ್ನಷ್ಟು ಸಂಭ್ರಮಿಸಿದ್ದಾರೆ. ಗೌತಮ್‌ಗೆ ತಂಗಿ ಮಹಿಮಾ ಗರ್ಭಿಣಿ ಆಗಿದ್ದಾಳೆ ಎಂಬ ಖುಷಿಯೇ ಹೆಚ್ಚಾಗಿದೆ. ಗೌತಮ್‌ಗೆ ಊಟ ನಿದ್ದೆ ಕೂಡ ಸರಿಯಾಗಿ ಮಾಡಲು ಆಗುತ್ತಿಲ್ಲ. ಕ್ಷಣ ಕ್ಷಣವೂ ಮಹಿಮಾ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಭೂಮಿಕಾ, ಗೌತಮ್ ಅವತಾರ ಕಂಡು ಒಂದುಕಡೆ ಖುಷಿ ಪಡುತ್ತಿದ್ದರೆ, ಮತ್ತೊಂದು ಕಡೆ ಗೌತಮ್ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಳೆ.

ಅಣ್ಣನ ಆಸೆ ಕಂಡು ಕೊರಗಿದ ಮಹಿಮಾ

ಮಹಿಮಾ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಗೌತಮ್ ಈಗಾಗಲೇ ಸಾಕಷ್ಟು ಕನಸುಗಳನ್ನು ಕಂಡಿದ್ದಾನೆ. ತನ್ನ ತಂದೆಯೇ ಮಹಿಮಾ ಹೊಟ್ಟೆಯಲ್ಲಿ ಮಗುವಾಗಿ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎಂದು ಗೌತಮ್ ಗಾಢವಾಗಿ ನಂಬಿದ್ದಾನೆ. ಹೀಗಾಗಿ ಆ ಮಗುವಿಗೆ ಯಾವುದೇ ತೊಂದರೆಯಾಗಬಾರದು ಎಂದು ಬಯಸಿದ್ದು ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪದೇ ಪದೇ ಮಹಿಮಾಳಿಗೆ ಎಚ್ಚರಿಸುತ್ತಿದ್ದಾನೆ. ಅಲ್ಲದೇ, ಮಹಿಮಾ ದಿನಚರಿ ಗೌತಮ್ ನಿರ್ಧರಿಸಿದ್ದು, ಬ್ಯೂಟಿಷಿಯನ್, ಡಾಕ್ಟರ್, ಭಗವದ್ಗೀತೆ ಓದಿ ಹೇಳಲು ಗುರುಗಳು, ಹೀಗೆ ಸಾಕಷ್ಟು ಮಂದಿ ಬುಕ್ ಮಾಡಿದ್ದಾನೆ. ಮಹಿಮಾ ರೂಮ್‌ನಲ್ಲಿ ಈಗಾಗಲೇ ಹೊಸ ಟೆಕ್ನಾಲಜಿಯ ತೊಟ್ಟಿಲು. ಗಂಡು ಮದುವೆಯಾದರೆ ಬಟ್ಟೆ, ಹೆಣ್ಣು ಮಗು ಜನಿಸಿದರೂ ಅದಕ್ಕೂ ತರಹೇವಾರಿ ಬಟ್ಟೆಗಳು, ಎಲ್ಲವೂ ಸಿದ್ಧವಾಗಿವೆ. ಅಷ್ಟೇ ಅಲ್ಲದೇ, ಮಗುವನ್ನು ಯಾವ ಶಾಲೆ, ಕಾಲೇಜ್‌ಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸಿ, ಸೀಟ್ ಕೂಡ ಬುಕ್ ಮಾಡಿಬಿಟ್ಟಿದ್ದಾನೆ.

Amruthadhaare Serial 22nd January episode written update

ಸಮಸ್ಯೆ ತಂದಿಟ್ಟುಕೊಂಡ ಮಹಿಮಾ

ಇದನ್ನೆಲ್ಲಾ ತಿಳಿದ ಮಹಿಮಾಳಿಗೆ ಬಹಳ ಗಿಲ್ಟ್ ಫೀಲ್ ಆಗುತ್ತದೆ. ಎಲ್ಲರೂ ತನ್ನ ಮಗುವಿನ ಬಗ್ಗೆ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡಿದ್ದು, ಇಂತಹ ಸಂದರ್ಭದಲ್ಲಿ ತಾನು ತನ್ನ ಸ್ವಾರ್ಥಕ್ಕೋಸ್ಕರ ಮಗುವನ್ನು ತೆಗೆಸಿದ್ದೀನಿ. ಈಗ ಮನೆಯವರಿಗೆಲ್ಲಾ ಹೇಗೆ ಉತ್ತರ ಕೊಡುವುದು. ಎಲ್ಲರ ಕನಸ್ಸನ್ನು ಹೇಗೆ ಮುರಿಯುವುದು ಎಂದು ಅನಿಸುತ್ತದೆ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಯೋಚಿಸುತ್ತಾಳೆ. ಆದರೆ, ಸತ್ಯ ಹೇಳಿದರೆ ಎಲ್ಲಿ ಅಣ್ಣ ಗೌತಮ್‌ಗೆ ತೊಂದರೆ ಆಗುತ್ತದೆ ಎಂದು ಭಯಗೊಂಡಿದ್ದಾಳೆ. ಇದೇ ಯೋಚನೆಯಲ್ಲಿ ಮಾತ್ರೆ ಸರಿಯಾಗಿ ತೆಗೆದುಕೊಳ್ಳದೇ ಸಮಸ್ಯೆ ಮಾಡಿಕೊಂಡಿದ್ದಾಳೆ.

ಸೀಮಂತಕ್ಕೆ ಮನೆಯವರ ತಯಾರಿ

ಅಬಾರ್ಷನ್ ಮಾಡಿಸಿಕೊಂಡ ನಂತರ ತೆಗೆದುಕೊಳ್ಳಬೇಕಾದ ಔಷಧಿ ಸರಿಯಾಗಿ ತೆಗೆದುಕೊಳ್ಳದೇ ಇನ್ಫೆಕ್ಷನ್ ಆಗುವಂತೆ ಮಾಡಿಕೊಂಡಿದ್ದಾಳೆ. ಇದಕ್ಕೆ ವೈದ್ಯರು ಕೂಡ ಬೈಯುತ್ತಾರೆ. ಇನ್ನು ಗೌತಮ್ ಸೇರಿದಂತೆ ಮಹಿಮಾ ಮನೆಯವರು ಕೂಡ ಸೀಮಂತಕ್ಕೆ ತಯಾರಿ ನಡೆಸುತ್ತಿದ್ದಾರೆ. ಸೀಮಂತ ಮಾಡಿ ತವರು ಮನೆಗೆ ಮಹಿಮಾಳನ್ನು ಕರೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಿದ್ದಾರೆ. ಆದರೆ, ಮಹಿಮಾ ಮಾಡಿಕೊಂಡಿರುವ ಎಡವಟ್ಟು ಮನೆಯವರಿಗೆಲ್ಲಾ ನಿರಾಸೆ ಮೂಡಿಸುವುದಂತೂ ಖಚಿತವಾಗಿದೆ.

More from Filmibeat

English summary
zee kannada serial, amruthadhaare serial, zee kannada fan page, baby shower for mahima, mahima feeling guilty,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X