Amruthadhaare; ಅತ್ತೆಗೆ ಮಾತು ಕೊಟ್ಟ ಸೊಸೆ : ದಾರಿ ಇಲ್ಲದೇ ಸಹೋದರಿಗೆ ಬುದ್ಧಿ ಹೇಳಿದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಸದಾಶಿವ ನಡುವೆ ಇರುವ ಚಾಲೆಂಜ್ ಗುಟ್ಟನ್ನು ಶಕುಂತಲಾ ಭೂಮಿಕಾ ಎದುರು ರಟ್ಟು ಮಾಡಿದ್ದಾಳೆ. ನಿಮ್ಮ ಕುಟುಂಬದಿಂದಾಗಿ ನನ್ನ ಮಗ ಸಾಮಾನ್ಯ ಮನುಷ್ಯನಂತೆ ಬದುಕುತ್ತಿದ್ದಾನೆ. ಅವನು ಜೀವನದಲ್ಲಿ ಬಹಳ ಸುಖವಾಗಿರಬೇಕು ಎಂದು ಕನಸು ಕಂಡಿದ್ದೇನೆ. ನೀನು ಈ ಮನೆಗೆ ಬಂದಿದ್ದಲ್ಲದೇ, ಈಗ ನಿನ್ನ ತಂಗಿ ಅಪೇಕ್ಷಾಳನ್ನು ಈ ಮನೆಗೆ ಕರೆಸಿಕೊಳ್ಳಲು ಮುಂದಾಗಿದ್ದೀಯಾ. ಇದು ಎಷ್ಟು ಮಾತ್ರ ಸರಿ ಹೇಳು ಎಂದು ಪ್ರಶ್ನಿಸುತ್ತಾಳೆ.

ಅತ್ತೆಗೆ ಮಾತು ಕೊಟ್ಟ ಭೂಮಿಕಾ

ಸತ್ಯ ತಿಳಿದ ಭೂಮಿಕಾ ಗಾಬರಿಯಾಗಿ ಮಂದಾಕಿನಿಗೆ ಫೋನ್ ಮಾಡಿ ವಿಚಾರಿಸುತ್ತಾಳೆ. ಮಂದಾಕಿನಿ ಸದಾಶಿವ ನಿತ್ಯ ಸ್ಕೂಲ್ ನೆಪ ಹೇಳಿ ಮನೆಯಿಂದ ಹೊರಗೆ ಹೋಗುತ್ತಿರುವ ವಿಚಾರ ಹಾಗೂ ಅಪೇಕ್ಷಾ ಬಂದ ಅವಕಾಶವನ್ನು ಕೈ ಬಿಟ್ಟು ಮಂಕಾಗಿ ಕುಳಿತಿರುವ ವಿಚಾರವನ್ನು ಹೇಳುತ್ತಾಳೆ. ಭೂಮಿಕಾಳಿಗೆ ಆಗ ಶಕುಂತಲಾ ಹೇಳಿದ ಮಾತಿನ ಮೇಲೆ ನಂಬಿಕೆ ಬರುತ್ತದೆ. ಮಗನ ಸ್ಥಿತಿಯಲ್ಲಿ ಏರುಪೇರಾಗಿರುವುದಕ್ಕೆ ಒದ್ದಾಡುತ್ತಿದ್ದಾಳೆ. ನನ್ನ ಮಗನ ಬಗ್ಗೆ ಹೊಟ್ಟೆಯಲ್ಲಿದ್ದಾಗಿನಿಂದ ಕನಸು ಕಂಡಿದ್ದೇನೆ. ನನ್ನ ಮಕ್ಕಳಿಗೆ ಎಲ್ಲವೂ ಬೆಸ್ಟ್ ಸಿಗಬೇಕು ಎಂಬುದೇ ನನ್ನ ಆಸೆ. ಜೀವನ್ ನನ್ನು ಮಹಿಮಾ ಪ್ರೀತಿಸಿ ಮದುವೆಯಾಗಿ ಮಿಡಲ್ ಕ್ಲಾಸ್ ಜೀವನ ಮಾಡುತ್ತಿದ್ದಾಳೆ. ಮಹಿಮಾಗೋಸ್ಕರ ನಿನ್ನನ್ನು ನನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕಾಯ್ತು. ಮಲ್ಲಿ ಜೊತೆಗೆ ಜೈದೇವ್ ಮದುವೆಯಾಯ್ತು. ಈಗ ಪಾರ್ಥ ಅವನು ನನ್ನ ಇಷ್ಟಕ್ಕೆ ವಿರುದ್ಧವಾಗಿ ನಿಂತಿದ್ದಾನೆ. ಇದನ್ನೆಲ್ಲಾ ನೋಡುವ ಬದಲು ನಾನು ಸಾಯುವುದೇ ಲೇಸು ಎಂದು ವಿಷ ಕುಡಿಯಲು ಮುಂದಾಗುತ್ತಾಳೆ. ಆಗ ಪಾರ್ಥ ಮತ್ತು ಅಪ್ಪಿ ಪ್ರೀತಿ ವಿಚಾರದಲ್ಲಿ ನಾನು ತಲೆ ಹಾಕುವುದಿಲ್ಲ. ನಿಮಗೆ ಅನಿಸಿದ್ದನ್ನು ಮಾಡಿ ಎಂದು ಭೂಮಿಕಾ ಮಾತು ಕೊಡುತ್ತಾಳೆ.

Amruthadhaare Serial 23 July episode written update

ಅಪೇಕ್ಷಾಳಿಗೆ ಭೂಮಿಕಾ ಬುದ್ಧಿ ಮಾತು

ಇದೇ ಬೇಸರದಲ್ಲಿ ಭೂಮಿಕಾ ಯೋಚಿಸುತ್ತಾ ಕುಳಿತಿರುತ್ತಾಳೆ. ಆಗ ಅಪೇಕ್ಷಾ ಎಲ್ಲಾ ಸತ್ಯವನ್ನು ಅಕ್ಕನಿಗೆ ಹೇಳಬೇಕು. ತನ್ನ ಹಾಗೂ ಪಾರ್ಥನ ಪ್ರೀತಿ ವಿಚಾರವನ್ನು ಮಾತನಾಡಬೇಕು ಎಂದು ಭುಮಿಕಾ ಮನೆಗೆ ಬರುತ್ತಾಳೆ. ಅಕ್ಕ ನಿನ್ನ ಬಳಿ ನಾನು ಮಾತನಾಡಬೇಕು ಎಂದ ಕೂಡಲೇ ಭೂಮಿಕಾ ಪಾರ್ಥನ ವಿಚಾರಕ್ಕೆ ಬಂದಿದ್ದಾಳೆ ಎಂಬುದು ಗೊತ್ತಾಗುತ್ತದೆ. ಆಗ ಅವಳು ಮೊದಲು ನೀನು ಮಿಸ್ ಇಂಡಿಯಾ ಕಂಟೆಸ್ಟೆಂಟ್ ಆಗುವ ಅವಕಾಶವನ್ನು ಕೈ ಬಿಟ್ಟಿರುವುದು ಯಾಕೆ ಅಂತ ಹೇಳು. ಇದಕ್ಕೋಸ್ಕರ ನೀನು ಮಾತ್ರ ಅಲ್ಲ ಮನೆಯವರು ಕೂಡ ಕನಸು ಕಂಡಿದ್ದಾರೆ. ಮೊದಲು ನೀನು ಸಾಧನೆ ಮಾಡು ಆಗ ಎಲ್ಲವೂ ಸರಿ ಹೋಗುತ್ತೆ ಎಂದು ಬುದ್ಧಿ ಮಾತು ಹೇಳಿ ಕಳುಹಿಸುತ್ತಾಳೆ.

ಹಣಕ್ಕಾಗಿ ಪಾರ್ಥನ ಪರದಾಟ

ಜುಮ್ಕಿ ತಾಯಿಯ ಆಪರೇಷನ್ ಗಾಗಿ ಪಾರ್ಥ ರಸ್ತೆ ಮಧ್ಯೆ ನಿಂತು ಹಣ ಸಹಾಯವನ್ನು ಕೇಳುತ್ತಿರುತ್ತಾನೆ. ಆಗ ಆನಂದ್ ಬಂದು ವಿಚಾರಿಸುತ್ತಾನೆ. ಸತ್ಯ ತಿಳಿದ ಗೌತಮ್, ಪಾರ್ಥ ಸ್ವಂತವಾಗಿ ಏನೋ ಸಾಧಿಸಲು ಹೊರಟಿರುವುದಕ್ಕೆ ಖುಷಿ ಪಡುತ್ತಾನೆ. ತಮ್ಮನಿಗೆ ಕ್ರೌಡ್ ಫಂಡಿಂಗ್ ಸಹಾಯ ಕೇಳಲು ಸಲಹೆ ಕೊಡುತ್ತಾನೆ. ಇದರಿಂದ ಪಾರ್ಥನಿಗೆ ಬಹಳ ಸಹಾಯವಾಗುತ್ತದೆ.

amruthadhaare-serial-23-july-episode-written-update

ಜುಮ್ಕಿ ಮನ ಗೆದ್ದ ಪಾರ್ಥ

ಪಾರ್ಥ ಹಾಗೂ ಗೌತಮ್ ಪರಿಚಯಸ್ಥರಿಂದ ಜುಮ್ಕಿ ತಾಯಿ ಆಪರೇಷನ್ ಗೆ ಹಣ ಹೊಂದಿಸಲಾಗುತ್ತದೆ. ಇದರಿಂದ ಜುಮ್ಕಿ ಖುಷಿಯಾಗಿದ್ದಾನೆ. ತನ್ನ ತಾಯಿಯನ್ನು ಎಲ್ಲಿ ಕಳೆದುಕೊಳ್ಳುತ್ತೀನೋ ಎಂದುಕೊಂಡಿದ್ದ ಜುಮ್ಕಿಗೆ ಪಾರ್ಥನಿಂದ ಸಹಾಯವಾಗಿದೆ. ಕೊನೆಗೂ ಪಾರ್ಥ ತನ್ನ ಚಾಲೆಂಜ್‌ ನಲ್ಲಿ ಗೆಲ್ಲುವ ಮೊದಲ ಮೆಟ್ಟಿಲನ್ನು ಯಶಸ್ವಿಯಾಗಿ ಏರಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X