Amruthadhaare; ಜೈದೇವ್ ಕಾರಲ್ಲಿ ಹಣದ ಬ್ಯಾಗ್: ಗೋಡೌನ್ ನಲ್ಲಿ ಲಾಕ್ ಆಗಿದ್ದು ಯಾರು..?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಇದ್ದಕ್ಕಿದ್ದ ಹಾಗೆಯೇ ಆಫೀಸಿಗೆ ಹೊರಟಿದ್ದಾನೆ. ಮಲ್ಲಿ ಬಳಿ ತಾನು ಯಾವುದೋ ಒಳ್ಳೆಯ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದು ಯಾರಿಗೂ ಹೇಳಬೇಡ. ಯಾರಾದರೂ ಕೇಳಿದರೆ, ಆಫೀಸಿಗೆ ಹೋಗಿದ್ದೇನೆ ಎಂದು ಹೇಳು ಎನ್ನುತ್ತಾನೆ. ಮಲ್ಲಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ನಿಜಹೇಳಿ ಎಂದು ಕೇಳಿದರೂ ಹೇಳುವುದಿಲ್ಲ. ಕೆಂಚ ತನ್ನ ಪಾಡಿಗೆ ತಾನು ಗೋಡೌನ್ ಗೆ ಆಗಮಿಸಿದ್ದಾನೆ. ಇದೇ ಸಂದರ್ಭದಲ್ಲಿ ಭೂಮಿಕಾ ಫೋನ್ ಮಾಡುತ್ತಾಳೆ. ಆಗ ಕೆಂಚ ಜೈದೇವ್ ಬಗ್ಗೆ ಮಾತನಾಡುತ್ತಾನೆ.
ಕೆಂಚನನ್ನು ಲಾಕ್ ಮಾಡಿದ ಜೈದೇವ್
ಕೆಂಚನ ಮಾತುಗಳು ಜೈದೇವ್ ಕಿವಿಗೆ ಬೀಳುತ್ತದೆ. ನನ್ನಿಂದ ಕೆಲಸ ಸಾಧಿಸಿಕೊಂಡು ಅರ್ಧಕ್ಕೆ ಕೈಬಿಟ್ಟ ಆತನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಅವನು ನನಗೆ ಕಾಲ್ ಮಾಡಿದ ಡೀಟೈಲ್ಸ್, ನನ್ನ ಅಕೌಂಟ್ ಗೆ ಹಣ ಹಾಕಿದ್ದಕ್ಕೆ ಸಾಕ್ಷಿ ಎಲ್ಲವನ್ನೂ ಇಟ್ಟುಕೊಂಡಿದ್ದೇನೆ. ಆತನನ್ನು ಮಟ್ಟ ಹಾಕುವವರೆಗೂ ನನಗೆ ಸುಮ್ಮನಿರಲು ಆಗುವುದಿಲ್ಲ. ನಾನು ನಿಯತ್ತಿನ ಪ್ರಾಣಿ ಎಂದು ಕೆಂಚ ಭೂಮಿಕಾಳಿಗೆ ಫೋನ್ ನಲ್ಲಿ ಹೇಳುತ್ತಿರುತ್ತಾನೆ. ಇದನ್ನೆಲ್ಲಾ ಕೇಳಿಸಿಕೊಂಡ ಜೈದೇವ್ ಕೆಂಚನನ್ನು ಲಾಕ್ ಮಾಡುತ್ತಾನೆ. ಕಾಲು ಹಿಡಿದುಕೊಂಡವನು ಇಲ್ಲಿ ಬಂದು ನನಗೇ ಸ್ಕೆಚ್ ಹಾಕುತ್ತಿದ್ದೀಯಾ. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಯಾರ ಜೊತೆಗೆ ಮಾತನಾಡುತ್ತಿದ್ದೆ ಅಂತ ಹೇಳು ಎಂದು ಹೊಡೆಯುತ್ತಾನೆ.

ಭೂಮಿಕಾ ಪ್ರಯತ್ನವೆಲ್ಲಾ ವ್ಯರ್ಥ
ಜೈದೇವ್ ಕಡೆಯ ಹುಡುಗರೆಲ್ಲಾ ಕೆಂಚನನ್ನು ಲಾಕ್ ಮಾಡಿ ಬಿಡುತ್ತಾರೆ. ಕೆಂಚನಿಗೆ ಬೇರೆ ದಾರಿಯೇ ಕಾಣುವುದಿಲ್ಲ. ಅದೇ ಸಮಯಕ್ಕೆ ಭೂಮಿಕಾ ಫೋನ್ ಮಾಡುತ್ತಾಳೆ. ಆಗ ಜೈದೇವ್ ಎಲ್ಲಿದ್ದೀಯಾ ಅಂತ ಮಾತ್ರ ಕೇಳು ಎಂದು ರಿಸೀವ್ ಮಾಡುತ್ತಾನೆ. ಕೆಂಚ ಎಲ್ಲಿದ್ದೀರಾ ಎಂದು ಭೂಂಇಕಾಳಿಗೆ ಕೇಳಿದಾಗ ಗೋಡೌನ್ ನ ಮುಂಭಾಗದಲ್ಲಿದ್ದೀವಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಜೈದೇವ್ ಫೂಲ್ ಅಲರ್ಟ್ ಆಗುತ್ತಾನೆ. ಎಲ್ಲಿಂದ ಎಲ್ಲಿಗೆ ಸಂಪರ್ಕ ಮಾಡಿದ್ದೀಯಾ. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಗೋಡೌನ್ ನಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಭೂಮಿಕಾಳಿಗೆ ಕೆಂಚ ಸಿಗುವುದಿಲ್ಲ. ಅವಳು ಮಾಡಿದ ಅಷ್ಟೂ ಪ್ರಯತ್ನವೂ ವ್ಯರ್ಥವಾಗುತ್ತದೆ.
ಅಣ್ಣನಿಗೆ ಸಿಕ್ಕಿಬಿದ್ದ ಜೈದೇವ್..!
ಗೌತಮ್ ಮತ್ತು ಭೂಮಿಕಾ ಗೋಡೌನ್ ನಲ್ಲಿ ಎಲ್ಲಿ ಹುಡುಕಿದರೂ ಯಾರೂ ಕಾಣಿಸುವುದಿಲ್ಲ. ಹಣದ ಬ್ಯಾಗ್ ಜಿಪಿಎಸ್ ಕೂಡ ಇಲ್ಲೇ ನಿಂತು ಹೋಗಿರುತ್ತದೆ. ಗೌತಮ್ ಕಾರಗಳನ್ನು ಗಮನಿಸಿದಾಗ ಜೈದೇವ್ ನ ಕಾರ್ ನಲ್ಲಿ ಹಣದ ಬ್ಯಾಗ್ ಕಾಣುತ್ತದೆ. ಗಾಬರಿಯಾದ ಗೌತಮ್ ತಕ್ಷಣವೇ ಪೊಲೀಸರಿಗೆ ಫೋನ್ ಮಾಡುತ್ತಾನೆ. ಗೋಡೌನ್ ಗೆ ಬರುವಂತೆ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಜೈದೇವ್ ಕೆಂಚನನ್ನು ಬೇರೆ ಕಡೆಗೆ ಸಾಗಿಸುತ್ತಾನೆ. ಬಳಿಕ ತನ್ನ ಕೈಗೆ ತಾನೇ ಗಾಯ ಮಾಡಿಕೊಂಡು ಗೌತಮ್ ಎದುರು ಬಂದು ನಿಲ್ಲುತ್ತಾನೆ. ಗೌತಮ್ ಗೆ ಒಂದು ಕ್ಷಣ ಶಾಕ್ ಆಗುತ್ತದೆ.

ಸುಳ್ಳಿನ ಕೋಟೆಯಲ್ಲಿ ಜೈದೇವ್ ಹೊಸ ಆಟ
ನಂತರ ಜೈದೇವ್ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಕೈಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುತ್ತದೆ. ಗೌತಮ್ ಜೈದೇವ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಮನೆಗೆ ಕರೆದುಕೋಮಡು ಬರುತ್ತಾನೆ. ಆಗ ಜೈದೇವ್ ಬೇಕಂತಲೇ ತನ್ನ ಸುಳ್ಳಿನ ಕೋಟೆಯನ್ನು ಎತ್ತರಿಸಿಕೊಂಡು ಹೊಸ ನಾಟಕ ಮಾಡುತ್ತಾನೆ. ಟೆಂಡರ್ ಸಂಬಂಧ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿ ಯಾರದು ವ್ಯಕ್ತಿ ಎಂದು ನೋಡಲು ಗೋಡೌನ್ ಗೆ ಹೋಗಿದ್ದೆ ಎಂದು ಹೇಳುತ್ತಾನೆ. ಈಗ ಗೌತಮ್ ಇಬ್ಬಂದಿಯಲ್ಲಿದ್ದು, ಭೂಮಿಕಾ ಡಿಸಪಾಯಿಂಟ್ ಆಗಿದ್ದಾಳೆ. ಜೈದೇವ್ ಹೊಸ ಆಟ ಶುರುವಾಗಿದೆ.


Click it and Unblock the Notifications











