Amruthadhaare ; ಜೈದೇವ್ ಪ್ಲಾನ್ ತಿಳಿಯುತ್ತಾನಾ ಸದಾಶಿವ..? ಶಕುಂತಲಾ ಕೊರಳಿಗೆ ಉರುಳಾಗುವ ಭಾಗ್ಯ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಸದಾಶಿವ ನೇರವಾಗಿ ರಾಜೇಂದ್ರ ಭೂಪತಿಯ ಬಳಿ ಹೋಗಿ ತನ್ನ ಮಗನ ಬದುಕಿನ ದಿಕ್ಕನ್ನು ಬದಲಿಸುವ ಯತ್ನ ಮಾಡುತ್ತಿರುವುದಕ್ಕೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾನೆ.ಜೈದೇವ್ ಮತ್ತು ರಾಜೇಂದ್ರ ಭೂಪತಿ ಸೇರಿಕೊಂಡು ಗೌತಮ್ ದಿವಾನ್ ನನ್ನು ಮಟ್ಟ ಹಾಕಲು ಮತ್ತೊಂದು ಪ್ಲಾನ್ ಮಾಡಿಕೊಂಡಿದ್ದಾರೆ. ಜೈದೇವ್ ಕಂಪನಿಯ ಶೇರ್ ಪಡೆಯಲು ಹೊಸ ಆಲೋಚನೆಯನ್ನು ಮಾಡಿದ್ದಾನೆ. ಈಗಾಗಲೇ ಕಂಪನಿಯ ಶೇ.25 ರಷ್ಟು ಶೇರ್ ಸುಧಾ ಹೆಸರಿನಲ್ಲಿದೆ. ಸುಧಾ ಇರುವುದರಿಂದ ಇದು ಸಾಧ್ಯವಾಗಿದೆ. ಹಾಗಾಗಿ ಸುಧಾಳನ್ನು ಕೊಲೆ ಮಾಡಬೇಕು ಎಂದು ತೀರ್ಮಾನಿಸಿದ್ದಾನೆ.

ಸುಧಾಳನ್ನು ಕೊಲ್ಲಲು ಜೈದೇವ್ ಪ್ಲಾನ್

ಸುಧಾಳನ್ನು ಕೊಂದ ಬಳಿಕ ಆ ಶೇರ್ ಅನ್ನು ಮನೆಯಲ್ಲಿ ಹಿರಿಯ ಸ್ಥಾನ ತನಗೆ ಸಿಗುತ್ತದೆ. ಆಗ ಗೌತಮ್ ಬಳಿ ನೈಸ್ ಆಗಿ ಮಾತನಾಡಿ ಅಷ್ಟೂ ಶೇರ್ ಅನ್ನು ತನ್ನ ಹೆಸರಿಗೆ ಮಾಡಿಕೊಂಡು, ನಿಧಾನವಾಗಿ ಗೌತಮ್ ನನ್ನು ಕಂಪನಿಯಿಂದ ಹೊರಗಿಡಬೇಕು ಎಂದುಕೊಂಡಿದ್ದಾನೆ. ರಾಜೇಂದ್ರ ಭೂಪತಿ ಜೈದೇವ್ ನ ಎಲ್ಲಾ ಪ್ಲಾನ್ ಗಳಿಗೂ ಸಪೋರ್ಟ್ ಮಾಡುತ್ತಿದ್ದಾನೆ. ಸದಾಶಿವ ಜೈದೇವ್ ನನ್ನು ರಾಜೇಂದ್ರ ಭೂಪತಿ ಜೊತೆಗೆ ನೋಡಿದ್ದು, ಅವನಿಗೂ ಬುದ್ಧಿ ಮಾತನ್ನು ಹೇಳಲು ಮುಂದಾಗಿದ್ದಾನೆ. ಆದರೆ, ಜೈದೇವ್ ಮತ್ತು ರಾಜೇಂದ್ರ ನ ಕೋಪಕ್ಕೆ ಸದಾಶಿವ ತುತ್ತಾಗುವ ಎಲ್ಲಾ ಸಾಧ್ಯತೆಗಳೂ ಇವೆ.

amruthadhaare-serial-23-march-episode-written-update

ಮಗಳ ನೋವಿಗೆ ಜೊತೆಯಾದ ಭಾಗ್ಯ

ಮೊದಲ ಬಾರಿಗೆ ಸುಧಾ ತನ್ನ ಪತಿಯ ಬಗ್ಗೆ ಭೂಮಿಕಾ ಬಳಿ ಹೇಳಿಕೊಂಡಿದ್ದಾಳೆ. ಭೂಮಿಕಾ ಗರ್ಭಿಣಿ ಆಗಿರುವ ಕಾರಣ, ಈಗಾಗಲೇ ಮಕ್ಕಳಾಗಿರುವವರ ಬಳಿ ಅವರ ಅನುಭವದ ಬಗ್ಗೆ ಕೇಳಿ ಮಾಹಿತಿ ಪಡೆಯುತ್ತಿದ್ದಾಳೆ. ಸುಧಾ ಜೊತೆಗೆ ಮಾತನಾಡುವಾಗ ನನಗಿಂತಲೂ ಮಗು ವಿಚಾರದಲ್ಲಿ ನೀನೇ ಸೀನಿಯರ್. ನೀನು ಗರ್ಭಿಣಿಯಾಗಿದ್ದಾಗ ನಿನಗೆ ಹೇಗಿತ್ತು. ನಿನ್ನ ಅನುಭವಗಳನ್ನು ಹೇಳಿಕೊ ಎಂದು ಕೇಳುತ್ತಾಳೆ. ಮೊದಲು ನಿರ್ಲಕ್ಷ್ಯ ಮಾಡುವ ಸುಧಾ ಬಳಿಕ ತನ್ನ ಕಷ್ಟದ ದಿನಗಳ ಬಗ್ಗೆ ಹೇಳಿಕೊಳ್ಳುತ್ತಾಳೆ. ಸುಧಾ ಕಣ್ಣೀರು ಹಾಕುವಾಗ ಭಾಗ್ಯ ಬಂದು ಕಣ್ಣೀರನ್ನು ಒರೆಸುತ್ತಾಳೆ. ಇದನ್ನು ಕಂಡು ಭೂಮಿಕಾ ಮತ್ತು ಸುಧಾ ಇಬ್ಬರೂ ಆಶ್ಚರ್ಯ ಪಡುತ್ತಾರೆ.

ಶಕುಂತಲಾಳಿಗೆ ಉರುಳಾಗುವ ಭಾಗ್ಯ

ಭಾಗ್ಯ ಬಹಳ ಬೇಗನೇ ಚೇತರಿಕೆ ಕಾಣುತ್ತಿದ್ದು, ಶಕುಂತಲಾ ಇದನ್ನು ಗಮನಿಸಿಲ್ಲ. ಶಕುಂತಲಾ ಎಚ್ಚೆತ್ತುಕೊಳ್ಳುವ ಮುನ್ನವೇ ಭಾಗ್ಯ ತನ್ನ ಮಗ ಗೌತಮ್ ಗೆ ಎಲ್ಲಾ ಸತ್ಯವನ್ನು ಹೇಳುತ್ತಾಳಾ ಎಂಬ ಕುತೂಹಲ ಮೂಡಿದೆ. ಈಗಾಗಲೇ ಮನೆಗೆ ಬಂದಾಗಿನಿಂದಲೂ ಭಾಗ್ಯ ಗೌತಮ್ ಮತ್ತು ಭೂಮಿಕಾಳಿಗೆ ಸಹಾಯ ಮಾಡುತ್ತಲೇ ಬಂದಿದ್ದಾಳೆ. ಜೈದೇವ್ ಆಸ್ತಿಯ ಫೈಲ್ ಅನ್ನು ಬಚ್ಚಿಟ್ಟಾಗ ಭಾಗ್ಯ ತನ್ನ ಕೈಯಲ್ಲಿ ಸಾಧ್ಯವಾಗುವಷ್ಟು ಪ್ರಯತ್ನಿಸಿ, ಆ ಫೈಲ್ ಭೂಮಿಕಾಳಿಗೆ ಸಿಗುವಂತೆ ಮಾಡಿದಳು. ಭೂಮಿಕಾಳಿಗೆ ಮಕ್ಕಳಾಗುವುದಿಲ್ಲ ಎಂದಾಗ ಸಾಂತ್ವಾನ ಹೇಳಲು ಪ್ರಯತ್ನಿಸಿದಳು. ಈಗ ಸುಧಾಳ ದುಃಖದ ಕಣ್ಣೀರನ್ನು ಒರೆಸಿದ್ದಾಳೆ. ಇವತ್ತಲ್ಲ ನಾಳೆ ಸುಧಾ ಶಕುಂತಲಾ ಕೊರಳಿಗೆ ಬಿಡಿಸಲಾರದ ಉರುಳಾಗುವುದಂತೂ ಪಕ್ಕಾ ಆಗಿದೆ.

Take a Poll

ಮಲ್ಲಿಯ ಮೌನದಲ್ಲಿ ಉತ್ತರ ಪಡೆದ ಭೂಮಿಕಾ

ಇನ್ನು ಮಲ್ಲಿ ಬಳಿ ಭೂಮಿಕಾ ಮಾತನಾಡಿದ್ದು, ಜೈದೇವ್ ವಿಚಾರಕ್ಕೆ ತಮಾಷೆ ಮಾಡಿದ್ದಾಳೆ. ಮಲ್ಲಿ ಜೈದೇವ್ ಮತ್ತು ದಿಯಾ ಸಂಬಂಧವನ್ನು ನೆನಪು ಮಾಡಿಕೊಂಡಿದ್ದು, ಬೇಸರ ಮಾಡಿಕೊಂಡಿದ್ದಾಳೆ. ಮಲ್ಲಿಯ ಮುಖದಲ್ಲಿನ ಬದಲಾವಣೆಯನ್ನು ಕಂಡ ಭೂಮಿಕಾ, ಪ್ರಶ್ನೆ ಮಾಡಿದ್ದಾಳೆ. ನಿನ್ನ ಮತ್ತು ಜೈದೇವ್ ನಡುವೆ ಏನಾಗಿದೆ ಎಂದು ಪ್ರಶ್ನಿಸಿದ್ದು, ಮಲ್ಲಿಯ ಮೌನದಿಂದಲೇ ಉತ್ತರ ಪಡೆದುಕೊಂಡಿದ್ದಾಳೆ. ಇಷ್ಟು ದಿನ ಸುಮ್ಮನಿದ್ದ ಭೂಮಿಕಾ ಈಗ ಮತ್ತೆ ಪತ್ತೆದಾರಿ ಕೆಲಸಕ್ಕೆ ಕೈ ಹಾಕಿದ್ದು, ಜೈದೇವ್ ಬಣ್ಣವನ್ನು ಬಯಲು ಮಾಡುವ ಸಾಧ್ಯತೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X