Amruthadhaare ; ತವರು ಮನೆಗಾಗಿ ಮಿಡಿದ ಭೂಮಿಕಾ ; ಒಡವೆಗಳನ್ನು ಅಡವಿಡುತ್ತಾಳಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವ ಇಟ್ಟುಕೊಂಡಿರುವ ವಿಚಾರವನ್ನು ತಿಳಿದಿರುವ ಭೂಮಿಕಾಳಿಗೆ ಸಿಕ್ಕಾಪಟ್ಟೆ ಖುಷಿ ಇದೆ. ಆದರೆ, ಗೌತಮ್ ಪ್ರಪೋಸ್ ಮಾಡಬೇಕು ಎಂದು ಬಯಸುತ್ತಿದ್ದಾಳೆ. ಆಫೀಸಿನಲ್ಲಿ ಮೀಟಿಂಗ್ ಚೆನ್ನಾಗಿ ಅಗಿದ್ದಕ್ಕೆ ಗೌತಮ್ ಚಾಕಲೇಟ್ ತಂದು ಕೊಡುತ್ತಾನೆ. ಭೂಮಿಕಾ ಹಾಗೂ ಗೌತಮ್ ಇಬ್ಬರೂ ಚಾಕಲೇಟ್ ನ ಹಂಚಿಕೊಂಡು ತಿಂದು ಖುಷಿ ಪಡುತ್ತಾರೆ. ಆದರೆ, ಭೂಮಿಕಾ ಮನದಲ್ಲಿ ಚಿಂತೆಯೊಂದು ಕಾಡಲು ಶುರುವಾಗಿದೆ.

ಗೌತಮ್ ಹುಟ್ಟುಹಬ್ಬಕ್ಕೆ ಭೂಮಿಕಾ ಗಿಫ್ಟ್

ಭೂಮಿಕಾ ಕಾಲುಗಳಲ್ಲಿ ಹೊಸ ಗೆಜ್ಜೆಯನ್ನು ಗಮನಿಸಿದ ಅಜ್ಜಿ ಪ್ರಶ್ನೆ ಮಾಡುತ್ತಾರೆ. ಆಗ ಭೂಮಿಕಾ, ಗೌತಮ್ ಗಿಫ್ಟ್ ಮಾಡಿದ್ದು ಎಂದಾಗ ಅಜ್ಜಿಗೆ ಖುಷಿಯಾಗುತ್ತದೆ. ಇಬ್ಬರೂ ಹೀಗೆ ಖುಷಿಯಾಗಿ ಅನ್ಯೋನ್ಯತೆಯಿಂದ ಬಾಳಿ ಎಂದು ಹರಸುತ್ತಾರೆ. ಅಲ್ಲದೇ, ಗೌತಮ್ ಹುಟ್ಟುಹಬ್ಬಕ್ಕೆ ಯಾವ ಉಡುಗೊರೆಯನ್ನು ಕೊಡುತ್ತೀಯಾ ಎಂದು ಕೇಳುತ್ತಾರೆ. ಆಗ ಭೂಮಿಕಾ ಗಿಫ್ಟ್ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾಳೆ. ಗೌತಮ್ ಬಳಿ ಎಲ್ಲವೂ ಇದ್ದು, ಯಾವ ಉಡುಗೊರೆಯನ್ನು ನೀಡಬೇಕು ಎಂಬುದು ಗೊತ್ತಾಗುವುದಿಲ್ಲ. ಆ ನಂತರ ಅಂಗಡಿಗೆ ಹೋಗಿ ಗೌತಮ್ ಗೆ ಇಷ್ಟವಾಗುವಂತಹ ಮರದ ಗೊಂಬೆಯನ್ನು ಖರೀದಿ ಮಾಡುತ್ತಾಳೆ.

Amruthadhaare Serial 24 April episode written update

ಅಕ್ಕನ ಕೈಯಲ್ಲಿ ಸಿಕ್ಕಿ ಬಿದ್ದ ಜೀವನ್

ಆದರೆ, ಅಲ್ಲಿಗೆ ಜೀವನ್ ಫುಡ್ ಡೆಲಿವರಿ ಮಾಡಲು ಬಂದಿರುತ್ತಾನೆ. ದಾರಿ ಮಧ್ಯೆ ಜೀವನ್ ಬೈಕ್ ಕೈಕೊಟ್ಟಿದ್ದರಿಂದ ತಡವಾಗಿ ಬಂದಿರುತ್ತಾನೆ. ಇದರಿಂದ ಕೋಪಗೊಂಡ ಅಂಗಡಿ ಮಾಲೀಕ ನಿನ್ನ ಊಟವೂ ಬೇಡ ಏನೂ ಬೇಡ ಎಂದು ಬೈಯುತ್ತಿರುತ್ತಾರೆ. ಆಗ ಭೂಮಿಕಾ ಗಮನಿಸಿ ಬೇಸರ ಮಾಡಿಕೊಳ್ಳುತ್ತಾಳೆ. ಅಕ್ಕನ ಬಳಿ ಸತ್ಯ ಮುಚ್ಚಿಡಲಾಗದೇ ಜೀವನ್ ನಡೆದ ಘಟನೆಯನ್ನೆಲ್ಲಾ ಹೇಳುತ್ತಾನೆ. ಈಗ ಹೋಮ್ ಲೋನ್, ಬೈಕ್ ಲೋನ್, ಕೈ ಸಾಲ ಎಲ್ಲವೂ ಕುತ್ತಿಗೆಗೆ ಬಂದಿದೆ. ಕೆಲಸ ಕಳೆದುಕೊಂಡು ಸುಮ್ಮನಿರುವುದಕ್ಕಿಂತಲೂ ಈ ಕೆಲಸವೇ ಲೇಸು ಎಂದು ಮಾಡುತ್ತಿದ್ದೇನೆ. ಮನೆಯಲ್ಲಿ ಯಾರಿಗೂ ಹೇಳಿಲ್ಲ ಎಂದಾಗ ಭೂಮಿಕಾಳಿಗೂ ಏನು ಮಾಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಸಾಲದ ಬಗ್ಗೆ ಯೋಚಿಸಿ ಭೂಮಿಕಾ ಕೂಡ ಕಂಗಾಲಾಗುತ್ತಾಳೆ.

Amruthadhaare Serial 24 April episode written update

ಪಾರ್ಥನ ಹೆಜ್ಜೆ ಹೆಜ್ಜೆಯೂ ಕಲೆ ಹಾಕಿದ ಶಕುಂತಲಾ

ಇತ್ತ ಪಾರ್ಥ ಮತ್ತು ಅಪೇಕ್ಷಾ ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪಾರ್ಥ ಅವಕಾಶ ಸಿಕ್ಕಾಗಲೆಲ್ಲಾ ರೊಮ್ಯಾನ್ಸ್ ಮಾಡುತ್ತಾ ಅಪೇಕ್ಷಾ ಕೈಯಲ್ಲಿ ಬೈಯಿಸಿಕೊಳ್ಳುತ್ತಿದ್ದಾನೆ. ಆದರೆ, ಇವರಿಬ್ಬರನ್ನೂ ಫಾಲೋ ಮಾಡುತ್ತಿರುವ ಇನ್ ಫಾರ್ಮರ್ ಫೊಟೋ ಹಾಗೂ ವೀಡಿಯೋಗಳನ್ನು ತೆಗೆಯುತ್ತಿದ್ದಾನೆ. ಇದನ್ನು ಗಮನಿಸುವ ಪಾರ್ಥ ಅಪ್ಪಿ ಬಳಿ ಹೇಳಿದರೂ ಅವಳು ನಂಬುವುದಿಲ್ಲ. ಆ ಫೋಟೋ ಹಾಗೂ ವೀಡಿಯೋಗಳನ್ನು ಶಕುಂತಲಾಳಿಗೆ ಕಳಿಸಲಾಗುತ್ತದೆ. ಇದನ್ನೆಲ್ಲಾ ನೋಡಿ ಜೈದೇವ, ಶಕುಂತಲಾ ಹೊಟ್ಟೆ ಉರಿದುಕೊಳ್ಳುತ್ತಾರೆ. ಇವರಿಬ್ಬರೂ ಚೆನ್ನಾಗಿ ಕೊಬ್ಬಿದ ಮೇಲೆ ಬಲಿ ಹಾಕಬೇಕು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ.

Amruthadhaare Serial 24 April episode written update

ತವರಿಗಾಗಿ ಒಡವೆ ಮಾರುತ್ತಾಳಾ ಭೂಮಿಕಾ..?

ಭೂಮಿಕಾ ಮನೆಯ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ತಾನೂ ಕೆಲಸಕ್ಕೆ ಹೋಗದ ಕಾರಣ, ತವರು ಮನೆಗೆ ಸಹಾಯ ಮಾಡಲು ಆಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಗೌತಮ್ ಬಳಿ ಸಹಾಯ ಕೇಳಲು ಸ್ವಾಭಿಮಾನ ಅಡ್ಡ ಬಂದಿದೆ. ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಬಂದ ಒಡವೆಗಳನ್ನೇ ಅಡವಿಟ್ಟು ಕಷ್ಟವನ್ನು ನಿವಾರಿಸಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ಆನಂದ್ ಸಹಾಯವನ್ನು ಕೇಳಿದ್ದಾಳೆ. ಆನಂದ್ ಕೂಡ ಭೂಮಿಕಾ ಮಾತಿಗೆ ಒಪ್ಪಿಗೆ ಕೊಟ್ಟಿದ್ದಾನೆ. ಈಗ ಒಡವೆಗಳನ್ನು ಅಡವಿಡುವ ಭೂಮಿಕಾಳಿಗೆ ಮತ್ಯಾವ ಸಂಕಷ್ಟ ಎದುರಾಗುತ್ತದೋ ಕಾದು ನೋಡಬೇಕಿದೆ.

More from Filmibeat

English summary
Bhoomika feels bad after seeing jeevan as food delivery boy,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X