Amruthadhaare ; ಭಾಗ್ಯ ಮನೆ ತಲುಪಿದ ವಜ್ರದ ಸರ : ಗೌತಮ್ ವೈರಿಗೆ ಸುಧಾ ಸಹಾಯ ಮಾಡುತ್ತಾಳಾ..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಇಬ್ಬರ ಮದುವೆ ವಾರ್ಷಿಕೋತ್ಸವವನ್ನು ಗೆಳೆಯ ಹಾಗೂ ಗೆಳತಿ ಸೇರಿಕೊಂಡು ಆಚರಿಸಿದ್ದಾರೆ.ಗೌತಮ್ ಕೂಡ ತನ್ನ ಬಾಳಿನಲ್ಲಿ ಭೂಮಿಕಾ ಬಂದಿದ್ದರಿಂದ ಎಷ್ಟೆಲ್ಲಾ ಬದಲಾವಣೆಗಳಾಯ್ತು ಹಗೂ ತನ್ನಲ್ಲಿದ್ದ ಒಂಟಿತನ ದೂರಾದ ಬಗ್ಗೆ ಮನಬಿಚ್ಚಿ ಮಾತನಾಡುತ್ತಾನೆ. ತಾಯಿ ಇನ್ನಿಲ್ಲ ಎಂಬ ಸತ್ಯವನ್ನು ತಿಳಿದ ಬಳಿಕ ಮಂಕಾಗಿದ್ದ ಗೌತಮ್, ಭೂಮಿಕಾ ಖುಷಿಯಲ್ಲಿ ಒಂದಾಗಿದ್ದಾನೆ. ಮನಸ್ಸನ್ನು ನಿರಾಳ ಮಾಡಿಕೊಂಡಿದ್ದಾನೆ.
ಭಾಗ್ಯಳ ಬಗ್ಗೆ ತಿಳಿದ ಶಕುಂತಲಾ
ಇತ್ತ ಶಕುಂತಲಾ ಭಾಗ್ಯಳನ್ನು ಮನೆಯವರ ಪಾಲಿಗೆ ಸಾಯಿಸಿದ್ದಾಗಿದೆ. ಆದರೆ, ಆದಷ್ಟು ಬೇಗ ಅವಳನ್ನು ಹುಡುಕಬೇಕು. ಅವಳನ್ನು ಹುಡುಕಿ ಸಾಯಿಸದೇ ಹೋದರೆ ತಾನೇ ತೊಂದರೆಗೆ ಸಿಲುಕುವುದು ಎಂಬುದು ಶಕುಂತಲಾಳಿಗೆ ಗೊತ್ತಿದೆ. ಅಕಸ್ಮಾತ್ ಆಗಿ ತಮ್ಮ ಮನೆ ಕೆಲಸದವರ ಕ್ವಾಟ್ರಸ್ ಕಡೆಗೆ ಶಕುಂತಲಾ ಹೋಗುತ್ತಾಳೆ. ಆಗ ಅಲ್ಲಿರುವ ಭಾಗ್ಯಳನ್ನು ಕಂಡು ಶಾಕ್ ಆಗುತ್ತಾಳೆ. ನಿನಗಾಗಿ ಊರೆಲ್ಲಾ ಹುಡುಕಾಡುತ್ತಿದ್ದರೆ, ಮೆಲ್ಲಗೆ ನನ್ನ ಮನೆಯನ್ನೇ ಸೇರಿಕೊಂಡಿದ್ದೀಯಾ ಎಂದು ಶಕುಂತಲಾ ಮಾತನಾಡುತ್ತಾಳೆ. ಆದರೆ, ಶಕುಂತಲಾಳನ್ನು ಈಗ ಸಾಯಿಸಲು ಸಾಧ್ಯವಿಲ್ಲ. ಗೌತಮ್ ಮತ್ತು ಭೂಮಿಕಾ ಭಾಗ್ಯಳನ್ನು ನೋಡುವ ಮೊದಲೇ ಅವಳನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾಳೆ.

ಅಪೇಕ್ಷಾ ಜೊತೆಗೆ ಭೂಮಿಕಾ ಮಾತು
ಇನ್ನು ಅಪೇಕ್ಷಾ ಮದುವೆಯಾದಾಗಿನಿಂದ ಬಹಳ ಬದಲಾಗಿದ್ದಾಳೆ. ಭೂಮಿಕಾಳನ್ನು ಧ್ವೇಷಿಸುತ್ತಲೇ ಇರುತ್ತಾಳೆ. ತವರು ಮನೆಯವರ ಪಾಲಿಗೆ ಕೆಟ್ಟವಳಾಗಿರುವ ಅಪೇಕ್ಷಾಳಿಗೆ ಸದ್ಯ ತನ್ನವರು ಎಂದು ಪಾರ್ಥ ಬಿಟ್ಟರೆ ಬೇರೆ ಯಾರೂ ಇಲ್ಲ. ಆದರೆ, ಪಾರ್ಥ ಸದಾ ಅಪೇಕ್ಷಾ ಜೊತೆಗೆ ಇರಲು ಸಾಧ್ಯವಿಲ್ಲ. ಅಪೇಖ್ಷಾಳಿಗೆ ಮನೆಯಲ್ಲಿ ಬೋರ್ ಆಗುತ್ತಿದ್ದು, ಪಾರ್ಥನ ಮೇಲೆ ತನ್ನ ಅಸಹತೆಯನ್ನು ತೋರುತ್ತಾಳೆ. ಈ ವಿಚಾರವನ್ನು ಪಾರ್ಥ ಭೂಮಿಕಾ ಬಳಿ ಹೇಳಿಕೊಂಡಿದ್ದು, ಭೂಮಿಕಾ ಅಪೇಕ್ಷಾಳನ್ನು ಮಾತನಾಡಿಸಲು ರೂಮಿಗೆ ಹೋಗುತ್ತಾಳೆ. ಆದರೆ, ಅಪೇಕ್ಷಾ ಭೂಮಿಕಾಳನ್ನು ಬೈಯುತ್ತಾಳೆ. ನನ್ನ ಮದುವೆ ವಿಚಾರದಲ್ಲಿ ನೀನು ನಡೆದುಕೊಂಡ ವಿಚಾರದಿಂದ ನಿನ್ನ ಮೇಲಿನ ಅಭಿಪ್ರಾಯ ಬದಲಾಗಿದೆ. ಅದು ಮತ್ತೆ ಸರಿ ಹೋಗುವುದಿಲ್ಲ ಎಂದು ನಿಷ್ಠುರವಾಗಿ ಮಾತನಾಡಿ ಕಳಿಸುತ್ತಾಳೆ.
ಸುಧಾಳನ್ನು ಮನೆಯಿಂದ ಹೊರಗಾಕಲು ಪ್ಲ್ಯಾನ್
ಶಕುಂತಲಾ ಈಗ ಭಾಗ್ಯ ಈ ಮನೆಯಲ್ಲಿ ಇದ್ದಷ್ಟೂ ದಿನವೂ ಡೇಂಜರ್ ಆದಷ್ಟು ಬೇಗನೇ ಅವಳನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾಳೆ. ಹೀಗಾಗಿ ಶಕುಂತಲಾ ತನ್ನ ವಜ್ರದ ಸರವನ್ನು ಲಕ್ಷ್ಮೀಕಾಂತನ ಕೈಗೆ ಕೊಟ್ಟು, ಸುಧಾ ಮನೆ ಸೇರುವಂತೆ ಮಾಡಿದ್ದಾಳೆ. ಗೌತಮ್ ಬಳಿ ಸರ ಕಳೆದು ಹೋಗಿದೆ. ಮನೆಯ ಕೆಲಸದವರ ಮೇಲೆ ತನಗೆ ಅನುಮಾನವಿದೆ ಎಂದು ಕರೆಸಿ ವಿಚಾರಿಸುತ್ತಾಳೆ. ಆಗ ಸುಧಾ ಅಲ್ಲಿರುವುದಿಲ್ಲ. ಹಾಗಾಗಿ ಸುಧಾ ಮೇಲೆ ಗೂಬೆ ಕೂರಿಸುತ್ತಾಳೆ. ಶಕುಂತಲಾಳ ಪ್ಲ್ಯಾನ್ ಈಗ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.
ಸುಧಾ ಬಳಿ ಗೌತಮ್ ಫೈಲ್ ಮಾಹಿತಿ
ಇದೆಲ್ಲದರ ನಡುವೆ ಗೌತಮ್ ನ ಹಳೆಯ ಬಿಸಿನೆಸ್ ರೈವೆಲರಿ ಮತ್ತೆ ಕಾಣಿಸಿಕೊಂಡಿದ್ದಾನೆ. ಗೌತಮ್ ತನ್ನ ಶತ್ರುವನ್ನು ಕಂಡು ಹೆದರಿಲ್ಲ. ಆದರೆ, ಸುಧಾಳನ್ನು ಗೌತಮ್ ಮನೆಗೆ ಕಳಿಸಿರುವುದು ಅದೇ ವ್ಯ್ಕತಿ ಎಂಬ ಸತ್ಯ ಬಯಲಾಗಿದೆ. ಗೌತಮ್ ಬಿಸಿನೆಸ್ ಅನ್ನು ಹಾಳು ಮಾಡಬೇಕು ಎಂದು ಕೆಲ ಡಾಕ್ಯುಮೆಂಟ್ ಗಳನ್ನು ಫೋಟೋ ಕಳಿಸಲು ಹೇಳಿದ್ದಾನೆ. ಸುಧಾಳಿಗೆ ಈಗ ಗೌತಮ್ ಮನೆಗೆ ಅನ್ಯಾಯ ಮಾಡಲು ಇಷ್ಟವಿಲ್ಲ. ಹಾಗಾಗಿ, ತಾನು ಈ ಕೆಲಸ ಮಾಡುವುದಿಲ್ಲ ಎಂದು ಹೇಳಲು ಮುಂದಾಗಿದ್ದಾಳೆ. ಸದ್ಯ ಧಾರಾವಾಹಿ ಕುತೂಹಲವನ್ನು ಕಾಯ್ದಿರಿಸಿಕೊಂಡಿದೆ.


Click it and Unblock the Notifications











