Amruthadhaare ; ನಾಯಿ ಬಾಲ ಯಾವತ್ತಿದ್ದರೂ ಡೊಂಕೆ ಎನ್ನುವುದನ್ನು ಅರಿತ ಮಲ್ಲಿ.!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಬಣ್ಣ ಮಲ್ಲಿಗೆ ಗೊತ್ತಾಗಿದೆ. ಎಷ್ಟು ಬುದ್ಧಿ ಹೇಳಿದರೂ ಏನೇ ಮಾಡಿದರೂ ಜೈದೇವ್ ಬುದ್ಧಿ ಕಲಿಯುವುದಿಲ್ಲ ಎಂಬುದು ಮಲ್ಲಿಗೆ ಅರ್ಥವಾಗಿದೆ. ಜೈದೇವ್ ಹೇಗೆ ತನ್ನ ಮುಂದೆ ನಾಟಕವಾಡುತ್ತಿರುತ್ತಾನೋ ಹಾಗೆಯೇ ತಾನೂ ಕೂಡ ನಟಿಸಬೇಕು ಎಂದು ಅಂದುಕೊಂಡಿದ್ದು, ಆದರೆ, ಮಲ್ಲಿ ಕೈಯಲ್ಲಿ ಅದು ಸಾಧ್ಯವಾಗುತ್ತಿಲ್ಲ.ಗಂಡನೇ ಹೀಗೆ ಮೋಸ ಮಾಡಿದನಲ್ಲ ಎಂಬ ಬೇಸರ ಮಲ್ಲಿಯನ್ನು ಆವರಿಸಿಕೊಂಡಿದೆ. ಜೈದೇವ್ ಮಾತನಾಡಿಸಿದರೆ ಮೈಯೆಲ್ಲಾ ಕೆಂಡದಂತಾಗುತ್ತಿದ್ದು, ಒದ್ದಾಡಿದ್ದಾಳೆ.
ಇದ್ದಕ್ಕಿದ್ದ ಹಾಗೆಯೇ ತವರಿಗೆ ಹೊರಟ ಮಲ್ಲಿ
ಜೈದೇವ್ ಮುಟ್ಟಲು ಬಂದಾಗ ದೂರ ತಳ್ಳಿದ್ದಾಳೆ. ಇದು ಜೈದೇವ್ ಮನದಲ್ಲಿ ಏನಾಯ್ತೋ ಎಂದು ಅನುಮಾನ ಹುಟ್ಟುವ ಮುನ್ನವೇ ನೆಪ ಹೇಳಿ ಎಸ್ಕೇಪ್ ಆಗಲು ಬಯಸಿದ್ದಾಳೆ. ತಾತನನ್ನು ನೋಡಬೇಕು ಎಂದು ಅನಿಸುತ್ತಿದೆ. ನಾನು ಊರಿಗೆ ಹೋಗಿ ಬರುತ್ತೇನೆ ಎಂದು ಕೇಳಿಕೊಂಡಿದ್ದಾಳೆ. ತನಗೆ ಮೋಸ ಮಾಡುತ್ತಿರುವ ಜೈದೇವ್ ಗೆ ತಾನೂ ಕೂಡ ಏನೂ ಗೊತ್ತಿಲ್ಲ ಎಂಬಂತೆ ನಟಿಸಬೇಕು. ನಟಿಸುತ್ತಲೇ ಜೈದೇವ್ ಗೆ ಬುದ್ಧಿ ಕಲಿಸಬೇಕು ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ್ದಾಳೆ. ಇನ್ನು ಸ್ವಲ್ಪ ದಿನ ತಾತನ ಜೊತೆಗೆ ಇದ್ದು ಬರುತ್ತೇನೆ ಎಂದು ಮಲ್ಲಿ ಊರಿಗೆ ಹೊರಟಿದ್ದಾಳೆ.

ಭೂಮಿಕಾ ಮೇಲೆ ಬೇಸರವನ್ನು ಹೆಚ್ಚಿಸಿಕೊಂಡ ಅಪ್ಪಿ
ಭುಮಿಕಾ ಬೆಳಗಾದ ಮೇಲೆ ಅಪೇಕ್ಷಾಳನ್ನು ತಿಂಡಿಗೆ ಕರೆಯಲು ಬರುತ್ತಾಳೆ. ಆಗ ಅಪ್ಪಿ ಬೇಡ ಎಂದು ಹೇಲಿ ಸುಮ್ಮನೆ ಕೂಳಿತಿರುತ್ತಾಳೆ. ಆಗ ಭೂಮಿಕಾ ಕುಡಿದಾಗ ತೇಲಾಡಿದಂತೆ ಹಾಯಾಗಿ ಇರುತ್ತದೆ. ಆದರೆ, ಮಾರನೇಯ ದಿನ ಯಾಕಾದರೂ ಕುಡಿದೆವೋ ಎಂದು ಪಶ್ಚಾತಾಪ ಪಡುವಷ್ಟು ಭಯವಾಗುತ್ತದೆ ಎಂದು ಹೇಳುತ್ತಾಳೆ. ಈ ಮಅತನ್ನು ಕೇಲಿದ ಅಪೇಕ್ಷಾ ಹಾಗದರೆ ನಿನಗೂ ಕುಡಿದು ಅಭ್ಯಾಸವಿದೆ ಎಂದು ಕೇಳುತ್ತಾಳೆ. ಆಗ ಭೂಮಿಕಾ ಆನಂದ್ ಮನೆಯಲೊಲಿ ಜ್ಯೂಸ್ ಜೊತೆಗೆ ಕುಡಿದ ವಿಚಾರ ಹೇಳಿದ್ದಕ್ಕೆ. ಇದೆಲ್ಲಾ ಸುಳ್ಳು ಕಥೆ. ನೀನು ಕುಡಿದರೆ ತಪ್ಪಿಲ್ಲ. ನಾನು ಕುಡಿದರೆ ತಪ್ಪು ಎಂಬಂತೆ ಬೇಸರವಾಗುವಂತೆ ಮಾತನಾಡುತ್ತಾಳೆ. ಆಗ ಭೂಮಿಕಾ ಏನೂ ಹೇಳಲಾಗದೇ ವಾಪಸ್ ಹೋಗುತ್ತಾಳೆ.
ಅತ್ತೆ ಭಾಗ್ಯಳನ್ನು ಮಾತನಾಡಿಸಿದ ಭೂಮಿಕಾ
ಇತ್ತ ಭಾಗ್ಯಳನ್ನು ಮಾತನಾಡಿಸಲು ಭೂಮಿಕಾ ಬರುತ್ತಾಳೆ. ಆಗ ಸುಧಾ ಬಳಿ ಅಮ್ಮ ಗೌತಮ್ ನನ್ನು ಹೊರತುಪಡಿಸಿ, ಮತ್ಯಾರ ಹೆಸರನ್ನಾದರೂ ಹೇಲಿದ್ದಾರೆ. ಯಾಕೆ ಅವರಿಗೆ ಬೆಂಕಿ ಎಂದರೆ ಭಯವಾಗುತ್ತದೆ ಎಂದು ಕೇಳುತ್ತಾಳೆ. ಆಗ ಸುಧಾ ಅಮ್ಮ ಆಗಾಗ ಇನ್ನೊಬ್ಬರ ಹೆಸರನ್ನು ಹೇಳುತ್ತಿರುತ್ತಾರೆ. ಆದರೆ ಅವರ ಹೆಸರು ನೆನಪಾಗುತ್ತಿಲ್ಲ ಎಂದು ಭೂಮಿಕಾಳಿಗೆ ಹೇಳಿದ್ದಾಳೆ. ಇನ್ನು ಭೂಮಿಕಾ ಅತ್ತ ಎನಾನು ನಿಮ್ಮ ಮಗನ ಹೆಂಡತಿ ಎಂದು ಹೇಳಿದ್ದಕ್ಕೆ, ಭಾಗ್ಯ ಭೂಮಿಕಾಳ ಕೈಯನ್ನು ಮುಟ್ಟುವ ಮೂಲಕ ಸ್ಪಂದಿಸಿದ್ದಾಳೆ.


Click it and Unblock the Notifications











