Amruthadhaare ; ಮಗನ ಮದುವೆ ತಯಾರಿಯಲ್ಲಿ ಶಕುಂತಲಾ : ಜುಮ್ಕಿ ಮನ ಗೆದ್ದ ಪಾರ್ಥ..!
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ವಿಷ ಕುಡಿಯುವುದಾಗಿ ಬೆದರಿಸಿದ್ದಕ್ಕೆ ಭೂಮಿಕಾ ಬೇಸರ ಮಾಡಿಕೊಂಡಿದ್ದಾಳೆ. ತಾನೇ ಪಾರ್ಥ ಮತ್ತು ಅಪೇಕ್ಷಾ ಪ್ರೀತಿಗೆ ಸಪೋರ್ಟ್ ಮಾಡಿದ್ದಳು. ಆದರೆ ಈಗ ಅತ್ತೆಯ ಕಾರಣಕ್ಕೆ ಇಬ್ಬರನ್ನೂ ತಾನೇ ಬೇರೆ ಮಾಡುವಂತಾಗಿದೆ ಎಂದು ಭೂಮಿಕಾ ಬೇಸರ ಮಾಡಿಕೊಂಡಿರುತ್ತಾಳೆ. ಗೌತಮ್ ಎಷ್ಟೇ ಮಾತನಾಡಿಸಿದರೂ ಭೂಮಿಕಾ ಡಲ್ ಆಗಿ ಇರುತ್ತಾಳೆ. ಪಾರ್ಥ ಸ್ನೇಹಿತನ ತಾಯಿಗಾಗಿ ಬೀದಿಯಲ್ಲಿ ನಿಂತು ಸಹಾಯ ಕೇಳಿದ್ದನ್ನು ಗೌತಮ್ ಹೇಳುತ್ತಾನೆ. ಜೊತೆಗೆ ಪಾರ್ಥನ ಮದುವೆ ಮಾಡಬೇಕು ಎಂದು ಹೇಳುತ್ತಾನೆ. ಆದರೂ ಭೂಮಿಕಾ ರೆಸ್ಪಾನ್ಸ್ ಮಾಡುವುದಿಲ್ಲ.
ನೊಂದುಕೊಂಡಿರುವ ಭೂಮಿಕಾ
ಭೂಮಿಕಾ ತನ್ನ ತಂಗಿ ಹಾಗೂ ಪಾರ್ಥನ ಬಗ್ಗೆ ಯೋಚಿಸುತ್ತಲೇ ಡಲ್ ಆಗಿದ್ದಾಳೆ. ಮುಂದೇನು ಮಾಡುವುದು ಎಂಬುದೇ ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಶಕುಂತಲಾ ಖುಷಿಯಾಗಿರುವುದನ್ನು ಕಂಡ ಲಕ್ಷ್ಮೀಕಾಂತ ಕಾರಣ ಕೇಳುತ್ತಾನೆ. ಆಗ ಶಕುಂತಲಾ ಭೂಮಿಕಾ ಪಾರ್ಥ ಮತ್ತು ಅಪೇಕ್ಷಾ ನಡುವೆ ತಾನು ಬರದಂತೆ ಮಾತು ತೆಗೆದುಕೊಂಡಿರುವಂತೆ ಹೇಳುತ್ತಾಳೆ. ಚಾಪೆ ಕೆಳಗೆ ನುಸುಳಿದರೆ, ರಂಗೋಲಿ ಕೆಳಗಿಂದ ಬರುವ ಭೂಮಿಕಾ ಬಳಿ ಹೇಗೆ ಇಷ್ಟೆಲ್ಲಾ ಸಾಹಸ ಮಾಡಿದೆ ಎಂದಿದ್ದಕ್ಕೆ, ಶಕುಂತಲಾ ಯೂನಿವರ್ಸಲ್ ಭಾಷೆ ಕಣ್ಣಿರು ಹಾಕುತ್ತಾ ಅವಳನ್ನು ತನ್ನ ದಾರಿಗೆ ಎಳೆದುಕೊಂಡಿರುವುದಾಗಿ ಹೇಳುತ್ತಾಳೆ. ಇದರಿಂದ ಲಕ್ಷ್ಮೀಕಾಂತ ಖುಷಿ ಪಡುತ್ತಾನೆ.

ಮಿಸ್ ಇಂಡಿಯಾ ಆಗುತ್ತಾಳಾ ಅಪೇಕ್ಷಾ..?
ಇತ್ತ ಅಪೇಕ್ಷಾ ಅಕ್ಕ ಭೂಮಿಕಾಳನ್ನು ಭೇಟಿ ಂಆಡಿ ಮನೆಗೆ ಬರುತ್ತಾಳೆ. ಖುಷಿಯಾಗಿರುವ ಅಪೇಕ್ಷಾ ಮಹಿಮಾಳನ್ನು ಮಿಸ್ ಇಂಡಿಯಾ ಕಂಟೆಸ್ಟೆಂಟ್ ಬಗ್ಗೆ ವಿಚಾರಿಸುತ್ತಾಳೆ. ಇನ್ನೂ ಅವಕಾಶ ಇದ್ದರೆ, ತಾನೇ ಸ್ಫರ್ಧಿಸುವುದಾಗಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಮನೆಯವರೆಲ್ಲರೂ ಖುಷಿ ಪಡುತ್ತಾರೆ. ಅಪೇಕ್ಷಾ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಮಹಿಮಾ ಬಳಿ ಟಿಪ್ಸ್ ಕೇಳುತ್ತಾಳೆ. ಅಪೇಕ್ಷಾಳಲ್ಲಿನ ಉತ್ಸಾಹವನ್ನು ಕಂಡು ಜೀವನ್ ಮತ್ತು ಮಂದಾಕಿನಿ ಹ್ಯಾಪಿ ಆಗಿರುತ್ತಾರೆ. ಮಂದಾಕಿನಿ ಅಂತೂ ಇದೆಲ್ಲಾ ಕ್ರೆಡಿಟ್ಸ್ ಅನ್ನು ತನಗೇ ನೀಡಬೇಕು ಎಂದು ಹೇಳುತ್ತಾಳೆ. ಜೀವನ್ ಬಿಸಿನೆಸ್ ಕೂಡ ಉತ್ತಮವಾಗಿ ಸಾಗುತ್ತಿದ್ದು, ಮಹಿಮಾ ತುಂಬಾ ಸಪೋರ್ಟ್ ಮಾಡುತ್ತಿದ್ದಾಳೆ.
ಪಾರ್ಥನ ಜೊತೆ ಸೇರಿದ ಜುಮ್ಕಿ
ಇನ್ನು ಪಾರ್ಥ ಎಲ್ಲರನ್ನೂ ಓದಲು ಬನ್ನಿ ಎಂದು ಹೇಳಿದರೆ, ಎಲ್ಲರೂ ಕುಂಟೆ ಬಿಲ್ಲೆ ಆಡುತ್ತಾ ನೆಗಲೆಕ್ಟ್ ಮಾಡುತ್ತಾರೆ. ಆದರೆ, ಜುಮ್ಕಿ ಮಾತ್ರ ಪಾರ್ಥನ ಜೊತೆಗೆ ಸೇರಿಕೊಳ್ಳುತ್ತಾನೆ. ಎಲ್ಲರನ್ನೂ ಬನ್ನಿ ಓದೋಣ ಎಂದು ಕರೆಯುತ್ತಾನೆ. ಆದರೆ ಯಾರೂ ಬರುವುದಿಲ್ಲ. ಪಾರ್ಥ ಜುಮ್ಕಿ ಒಬ್ಬನಿಗೆ ಪಾಠ ಮಾಡುತ್ತಿರುತ್ತಾನೆ. ಆಗ ಜುಮ್ಕಿ ತನ್ನ ಹಿನ್ನೆಲೆ ಬಗ್ಗೆ ಹೇಳಿಕೊಳ್ಳುತ್ತಾನೆ. ಪಾರ್ಥ ಜುಮ್ಕಿ ಮನಸ್ಸನ್ನು ಗೆದ್ದಿದ್ದು, ಇನ್ನು ಮೂವರು ಓದಲು ಬಂದು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸ್ ಆದರೆ, ಪಾರ್ಥ ಗೆದ್ದಂತೆ. ಪಾರ್ಥ ಬಹಳ ಕಾನ್ಫಿಡೆನ್ಸ್ ನಿಂದ ಇರುತ್ತಾನೆ. ಆದರೆ, ಸದಾಶಿವ ಮಾತ್ರ ಪಾರ್ಥ ಈ ಆಟದಲ್ಲಿ ಸೋಲುವುದು ಗ್ಯಾರೆಂಟಿ ಎಂದು ನಂಬಿದ್ದಾನೆ. ಆದರೆ, ಯಾರು ಗೆಲ್ಲುತ್ತಾರೋ ಕಾದು ನೋಡಬೇಕಿದೆ.

ಪಾರ್ಥನಿಗೆ ಮದುವೆ ಮಾಡಲು ಚಿಂತನೆ
ಬೆಳ್ಳಂಬೆಳಗ್ಗೆ ಶಕುಂತಲಾ ಎಲ್ಲರನ್ನೂ ಸೇರಿಸಿದ್ದು, ಪೂಜೆ ಬಗ್ಗೆ ಮಾತನಾಡುತ್ತಾ ಪಾರ್ಥನ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ. ಆಗ ಭೂಮಿಕಾ ಕೂಡ ಪಾರ್ಥನ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾಳೆ. ಇನ್ನು ಗೌತಮ್ ಭೂಮಿಕಾ ಬಳಿ ಜೀವನ್ ಮ್ಯಾಟ್ರಿಮೋನಿಯ್ಲಲೇ ಪಾರ್ಥನಿಗೆ ಹುಡುಗಿಯನ್ನು ಹುಡುಕುವ ಎಂದು ಹೇಳುತ್ತಾನೆ. ಆದರೆ, ಭೂಮಿಕಾ ಬೇಡ. ಸಂಬಂಧದಲ್ಲಿ ನೋಡಿದರೆ, ನಾಳೆಯ ದಿನ ಸಮಸ್ಯೆ ಆದರೆ, ಸುಮ್ಮನೆ ಸಂಬಂಧಕ್ಕೆ ಧಕ್ಕೆ ಬರುತ್ತೆ ಎಂದು ಸಲಹೆ ಕೊಡುತ್ತಾಳೆ.


Click it and Unblock the Notifications











