Amruthadhaare ; ಭೂಮಿಕಾ ಅನುಮಾನವನ್ನು ಸುಳ್ಳು ಮಾಡಿದ ಜೈದೇವ್..!
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾಳಿಗೆ ಮನೆ ಕೆಲಸಗಳು ಬರುತ್ತದೆ ಎಂದು ಮಂದಾಕಿನಿ ಹೇಳಿರುವುದರಿಂದ ಈಗ ಮಹಿಮಾ ಸ್ಫರ್ಧೆಯಲ್ಲಿ ಭಾಗವಹಿಸಬೇಕಿದೆ. ಆದರೆ ಮಹಿಮಾಳಿಗೆ ಸಮಯವಿಲ್ಲ. ಇದನ್ನು ಮಂದಾಕಿನಿ ತನ್ನ ಗೆಳತಿಯರಿಗೆ ಹೇಳಿದರೂ ಅರ್ಥವಾಗುತ್ತಿಲ್ಲ. ಮಂದಾಕಿನಿ ಮತ್ತು ಮಹಿಮಾ ಸ್ಪರ್ಧೆಯಲ್ಲಿ ಭಾಗವಹಿಸಲು ಬಲವಂತ ಮಾಡುತ್ತಿದ್ದಾರೆ. ಇತ್ತ ಪಾರ್ಥ ತನ್ನ ಪ್ರೀತಿಯ ವಿಚಾರವನ್ನು ಸದಾಶಿವನ ಬಳಿ ಹೇಳಬೇಕು. ಅವರನ್ನು ಒಪ್ಪಿಸಿ ಅಪೇಕ್ಷಾ ಜೊತೆಗೆ ಮದುವೆಯಾಗಬೇಕು ಎಂದು ಪಾರ್ಥ ತಯಾರಿ ನಡೆಸುತ್ತಿದ್ದಾನೆ.
ಕೆಂಚನ ಮೇಲೆ ಗೂಬೆ ಕೂರಿಸಿದ ಜೈ
ಇನ್ನು ಜೈದೇವ್ ಗೌತಮ್ ಏನನ್ನು ಕೇಳದಿದ್ದರೂ ಕೂಡ ಅವನೇ ಸುಳ್ಳು ಹೇಳಿದ್ದಾನೆ. ತನಗೆ ಟೆಂಡರ್ ಲೀಕ್ ಮಾಡಿದ ವ್ಯಕ್ತಿಯು ಹಣ ಪಡೆಯಲು ನಮ್ಮ ಗೋಡೌನ್ ಗೆ ಬರುತ್ತಿದ್ದಾನೆ ಎಂದು ತಿಳಿಯಿತು. ಆತನನ್ನು ಹಿಡಿದು ನಿಮ್ಮ ಬಳಿ ತರಲೆಂದು ನಾನು ಹೋದೆ. ಅದರ ಜೊತೆಗೆ ಭೂಮಿಕಾ ಅತ್ತಿಗೆಯನ್ನು ಕಿಡ್ನ್ಯಾಪ್ ಮಾಡಿದ ಕೆಂಚ ಕೂಡ ಫೋನ್ ಮಾಡಿದ್ದ. ಇದರ ಹಿಂದೆ ಯಾರಿದ್ದಾರೆ ಎಂದು ಸಾಕ್ಷಿ ಸಮೇತ ಹೇಳುತ್ತೀನಿ ಎಂದಿದ್ದ. ಆದರೆ ಗೋಡೌನ್ ಗೆ ಹೋದಾಗ ಅಲ್ಲಿ ಕೆಂಚ ಕೂಡ ಇದ್ದ. ನನ್ನನ್ನು ನೋಡಿ ಅಲ್ಲಿಂದ ಎಸ್ಕೇಪ್ ಆದ. ಇನ್ನೊಬ್ಬ ವ್ಯಕ್ತಿಯನ್ನು ಹಿಡಿಯುವಾಗ ಫೈಟಿಂಗ್ ಆಯ್ತು ಆಗ ಗಾಯ ಆಯ್ತು ಎಂದು ಕಥೆ ಕಟ್ಟುತ್ತಾನೆ.

ಅಪ್ಸೆಟ್ ಆಗಿರುವ ಗೌತಮ್
ಜೈದೇವ್ ಹೇಳಿದ ಕಥೆ ಸತ್ಯ ಎಂದು ಗೌತಮ್ ನಂಬಿದ್ದಾನೆ. ತನ್ನ ತಮ್ಮನಿಗೆ ಹೀಗಾಯ್ತು. ತನ್ನ ಕಂಪನಿಯ ಟೆಂಡರ್ ಕೂಡ ಕೈ ತಪ್ಪಿ ಹೋಯ್ತಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಇದೇ ಸಮಯಕ್ಕೆ ಆನಂದ್ ಬಂದು ಬೈಯುತ್ತಾನೆ. ಅಪಾಯದ ಕೆಲಸಕ್ಕೆ ನೀನು ಅತ್ತಿಗೆ ಇಬ್ಬರೇ ಸೆಕ್ಯುರಿಟಿ ಇಲ್ಲದೇ ಹೋಗಿದ್ದು ತಪ್ಪು. ನಿಮ್ಮಿಬ್ಬರಿಗೂ ಏನಾದರೂ ತೊಂದರೆ ಆದರೆ, ಯಾರು ಹೊಣೆ ಎಂದು ಬೈಯುತ್ತಾನೆ. ಗೌತಮ್ ಕೂಡ ತನ್ನ ಕೋಪವನ್ನು ಆನಂದ್ ಮೇಲೆ ತೋರಿಸಿಕೊಳ್ಳುತ್ತಾನೆ.
ಗೊಂದಲಕ್ಕೊಳಗಾದ ಭೂಮಿಕಾ
ಜೈದೇವ್ ಮತ್ತು ಮಲ್ಲಿ ಮಾತನಾಡುವುದನ್ನು ಭೂಮಿಕಾ ಕದ್ದು ಕೇಳಿಸಿಕೊಳ್ಳುತ್ತಾಳೆ. ಜೈದೇವ್ ಮಲ್ಲಿ ಜೊತೆಗೆ ಪ್ರೀತಿಯಿಂದ ಮಾತನಾಡುತ್ತಿರುತ್ತಾರೆ. ಇದರಿಂದ ಭೂಮಿಕಾಳಿಗೆ ಗೊಂದಲ ಉಂಟಾಗುತ್ತದೆ. ನಾನೇ ಜೈದೇವ್ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೀನಿ. ಕೆಂಚ ನಮಗೆ ಮೋಸ ಮಾಡಿಬಿಟ್ಟ. ಆತನನ್ನು ನಾನು ಬಿಡಿಸಬಾರದಿತ್ತು. ಜೈದೇವ್ ಬಳಿ ಹೇಳದಂತೆಯೇ ಕೆಂಚ ತನಗೂ ಹೇಳಿದ್ದಾನೆ. ಅವನ ಮಾತನ್ನು ನಂಬಿದ್ದು ತಪ್ಪು ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಮುಂದೇನು ಮಾಡುವುದು ಎಂಬ ದಾರಿ ಕಾಣದೇ ಸುಮ್ಮನೆ ಕುಳಿತಿರುತ್ತಾಳೆ. ಗೌತಮ್ ಗೆ ಸಮಾಧಾನ ಮಾಡುತ್ತಾ ತಾನೂ ಕೂಡ ತನ್ನೊಳಗೇ ಸಮಾಧಾನ ಮಾಡಿಕೊಳ್ಳುತ್ತಿರುತ್ತಾಳೆ.

ಶಕುಂತಲಾ ಬಳಿ ಕ್ಷಮೆ ಕೇಳಿದ ಜೈದೇವ್
ಲಕ್ಷ್ಮೀಕಾಂತ ಜೈದೇವ್ ಮಾಡಿದ ಎಲ್ಲಾ ಕೆಲಗಳನ್ನು ಶಕುಂತಲಾಳಿಗೆ ಹೇಳುತ್ತಾನೆ. ಜೈದೇವ್ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು, ಟೆಂಡರ್ ವಿಚಾರವನ್ನು ಕೂಡ ಹಣಕ್ಕಾಗಿ ತಾನೇ ಲೀಕ್ ಮಾಡಿದ್ದಾನೆ ಎಂಬ ವಿಚಾರವನ್ನು ಹೇಳುತ್ತಾರೆ. ಶಕುಂತಲಾ ಈ ಎಲ್ಲಾ ಮಾತುಗಳನ್ನು ಕೇಳಿ ಶಾಕ್ ಆಗುತ್ತಾಳೆ. ಎಲ್ಲಾ ಕೆಲಸವನ್ನು ಅರ್ಧಂಬರ್ಧ ಮಾಡುತ್ತೀಯಾ. ಕೊನೆಗೆ ಸಿಕ್ಕಿ ಬಿದ್ದರೆ ಕಷ್ಟವಾಗುತ್ತೆ. ನಮ್ಮ ಕಂಪನಿ ಲಾಭದಲ್ಲಿದ್ದರೆ ನಮಗೆ ಒಳ್ಳೆಯದು. ನಮ್ಮ ಕಪನಿಗೆ ಲಾಸ್ ಆದರೆ ನಾವೇ ಬೀದಿಗೆ ಬೀಳುವುದು. ಅಷ್ಟೇ ಅಲ್ಲದೇ, ನಿನಗೆ ಎಲ್ಲವನ್ನು ನಾವು ಕೊಡುತ್ತಿರುವಾಗ ಇನ್ನು ಹಣ ಏಕೆ ಬೇಕಿತ್ತು ಎಂದು ಬೈಯುತ್ತಾಳೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











