Amruthdhaare ; ಭೂಮಿಕಾ ಮತ್ತು ಸುಧಾಳನ್ನು ಹತ್ಯೆಗೈಯ್ಯಲು ಸುಪಾರಿ ಕೊಟ್ಟ ಜೈದೇವ್..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಭೂಮಿಕಾ ಬಳಿ ಬಹಳ ಒಗಟಾಗಿ ಮಾತನಾಡಿದ್ದಾಳೆ. ಜೈದೇವ್ ಗೆ ಪಾಠ ಕಲಿಸಬೇಕು ಎಂದುಕೊಂಡಿದ್ದ ಮಲ್ಲಿ ಇಷ್ಟು ದಿನ ತವರು ಮನೆಯ್ಲಲೇ ಉಳಿದುಕೊಂಡಿದ್ದಳು.

ಭೂಮಿಕಾ ಗರ್ಭಿಣಿ ಆಗಿರುವುದನ್ನು ಕೇಳಿ ವಾಪಸ್ ಮನೆಗೆ ಬಂದಿದ್ದಾಳೆ. ಆದರೆ, ಜೈದೇವ್ ಮೇಲೆ ಯಾವುದೇ ಆಸಕ್ತಿ ಇಲ್ಲದ ಮಲ್ಲಿ, ಭೂಮಿಕಾ ಬಳಿ ಒಗಟು ಒಗಟಾಗಿ ಮಾತನಾಡಿದ್ದಾಳೆ. ಅಲ್ಲದೇ, ಜೈದೇವ್ ಮಲ್ಲಿಯನ್ನು ಮನೆಯಲ್ಲಿ ಕಂಡು ಶಾಕ್ ಆಗಿದ್ದಾನೆ. ಇಷ್ಟು ದಿನ ಕಾಣೆಯಾಗಿದ್ದವಳು ಇದ್ದಕ್ಕಿದ್ದ ಹಾಗೆಯೇ ಮನೆಗೆ ಬಂದಿದ್ದಾಳೆ ಎಂದು ಬೇಸರವನ್ನು ಕೂಡ ಮಾಡಿಕೊಂಡಿದ್ದಾನೆ.

amruthadhaare-serial-24-march-episode-written-update

ರಕ್ತದೋಕುಳಿ ಹರಿಸಲು ಮುಂದಾದ ಜೈದೇವ್

ಇತ್ತ ಜೈದೇವ್ ತನ್ನಿಷ್ಟದ ಬದುಕಿಗೆ ಮೂವರು ವಿಲನ್ ಗಳಾಗಿದ್ದಾರೆ. ಸುಧಾ, ಭೂಮಿಕಾ ಮತ್ತು ಮಲ್ಲಿ. ಸದ್ಯಕ್ಕೆ ಮಲ್ಲಿಯಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೆ, ಸುಧಾ ಇರುವುದರಿಂದ ಕಂಪನಿಯ ಶೇರ್ ಸಿಗದೇ ಒದ್ದಾಡುವಂತಾಗಿದೆ. ಇನ್ನು ಭೂಮಿಕಾಳಿಂದಾಗಿ ಪ್ರತೀಯೊಂದು ವಿಚಾರದಲ್ಲೂ ಸಿಕ್ಕಿ ಬೀಳುತ್ತಿರುವ ಜೈದೇವ್ ಸ್ವತಂತ್ರ್ಯವಾದ ಬದುಕನ್ನು ಕಾಣದಂತಾಗಿದೆ. ಹೀಗಾಗಿ ಲಕ್ಷ್ಮೀಯನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿರುವ ಭೂಮಿಕಾ ಮತ್ತು ಸುಧಾಳನ್ನು ಕೊಲ್ಲಲು ಜೈದೇವ್ ಸುಪಾರಿ ಕೊಟ್ಟಿದ್ದಾನೆ. ಮನೆಯಲ್ಲಿ ರಕ್ತದೋಕುಳಿ ಹರಿದರೂ ಪರವಾಗಿಲ್ಲ. ತನಗೆ ದಕ್ಕಬೇಕಾಗಿರುವುದು ಸಿಕ್ಕರೆ ಸಾಕು ಎಂಬ ಆಲೋಚನೆಯಲ್ಲಿ ಜೈದೇವ್ ಇದ್ದಾನೆ.

ಮಲ್ಲಿ ಆಲೋಚನೆ ಸರಿನಾ..?

ಇನ್ನು ದಿಯಾ ಜೊತೆಗೆ ಸಂಬಂಧ ಹೊಂದಿರುವ ಜೈದೇವ್ ಯಾವತ್ತಿಗೂ ಸರಿಯಾಗುವುದಿಲ್ಲ ಎಂಬುದನ್ನು ಮಲ್ಲಿ ಅರ್ಥ ಮಾಡಿಕೊಂಡಿದ್ದಾಳೆ. ಇಷ್ಟು ದಿನ ದಡ್ಡತನದಿಂದ ಇದ್ದ ತಾನು ಇನ್ನು ಮುಂದಾದರೂ ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕು ಎಂದುಕೊಂಡಿದ್ದಾಳೆ. ಹಾಗಾಗಿ ಮಲ್ಲಿ ಈಗ ಓದಲು ಬಯಸಿದ್ದಾಳೆ. ಭೂಮಿಕಾ ಬಳಿ ನಾನು ಇನ್ನೂ ಓದಬೇಕು ಎಂದುಕೊಂಡಿದ್ದೇನೆ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿದ್ದಾಳೆ. ಭೂಮಿಕಾ ಮಲ್ಲಿಯಲ್ಲಿನ ಬದಲಾವಣೆಗಳನ್ನು ಗಮನಿಸಿದ್ದು, ಅವಳ ಒಳ್ಳೆಯ ಆಲೋಚನೆಗೆ ಒಪ್ಪಿಗೆ ನೀಡಿದ್ದಾಳೆ. ಮಲ್ಲಿ ಹೆಚ್ಚು ಓದಿ, ನಾನು ಬುದ್ಧಿವಂತಳು ಎಂಬುದನ್ನು ಜೈದೇವ್ ಗೆ ತೋರಿಸಿಕೊಡುತ್ತಾಳಾ..? ಜೈದೇವ್ ಮತ್ತು ದಿಯಾಳನ್ನು ಮಟ್ಟ ಹಾಕಲು ದೂರಾಲೋಚನೆ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳಾ ? ಎಂಬುದೇ ಈಗ ಕುತೂಹಲಕಾರಿ ವಿಚಾರವಾಗಿದೆ.

ಶಾಕ್ ತಂದ ಸುಧಾ ಗಂಡನ ಆಗಮನ

ಇತ್ತೀಚೆಗಷ್ಟೇ ಸುಧಾ ಭೂಮಿಕಾ ಬಳಿ ತನ್ನ ಪತಿಯ ಬಗ್ಗೆ ಹೇಳಿಕೊಂಡಿದ್ದಳು. ಅವನು ಬದುಕಿದ್ದಾನೆ. ಆದರೆ, ನನ್ನ ಪಾಲಿಗೆ ಸತ್ತಿದ್ದಾನೆ. ರಾಕ್ಷಸನ ಜೊತೆಗೆ ಜೀವನ ಮಾಡಿದ್ದೀನಿ ಎಂದೆಲ್ಲಾ ಹೇಳಿಕೊಂಡಿದ್ದಳು. ಈಗ ಜೈದೇವ್ ಸುಧಾ ಮತ್ತು ಭೂಮಿಕಾಳನ್ನು ಕೊಲ್ಲಲು ಸುಪಾರಿ ನೀಡಿದ್ದು, ಇಬ್ಬರಿಗೂ ಅಪಾಯ ಎದುರಾಗಿದೆ. ಸುಧಾ ಮತ್ತು ಭೂಮಿಕಾಳ ಪ್ರಾಣವನ್ನು ಉಳಿಸಲು ಈಗ ರಾಕ್ಷಸನಾಗಿದ್ದ ಪತಿರಾಯನ ಎಂಟ್ರಿಯಾಗಿದೆ. ಇವರನ್ನು ಕೊಲ್ಲಲು ಬಂದವರಿಂದ ಸುಧಾ ಗಂಡನೇ ಬಂದು ರಕ್ಷಿಸಿದ್ದಾನೆ. ಹೌದು. ಕ್ಯಾಬ್ ಡ್ರೈವರ್ ಆಗಿರುವ ಸುಧಾ ಪತಿಯ ಎಂಟ್ರಿಯಾಗಿದೆ.

Take a Poll

ಸುಧಾ ಸಂಸಾರವನ್ನು ಸರಿ ಮಾಡುತ್ತಾಳಾ ಭೂಮಿಕಾ..?

ಸುಧಾ ತನ್ನ ಪತಿಯನ್ನು ಕಂಡು ಗಾಬರಿಯಾಗಿದ್ದಾಳೆ. ಇವನೇ ನಮ್ಮನ್ನು ಕೊಲ್ಲಲು ಬಂದಿರಬೇಕು ಎಂದು ಭಾವಿಸಿದ್ದಾಳೆ. ಆತನ ಜೊತೆಗೆ ಜಗಳ ಕೂಡ ಮಾಡಿದ್ದಾಳೆ. ಆದರೆ, ಅವರ ಪತಿ ಬದಲಾಗಿದ್ದು, ಈಗ ಮತ್ತೆ ತನ್ನ ಬದುಕನ್ನು ಸುಧಾ ಜೊತೆಗೆ ಹಂಚಿಕೊಳ್ಳಲು ಆಸೆ ಪಟ್ಟಿದ್ದಾನೆ. ಸುಧಾ ಬದುಕನ್ನು ಸರಿ ಮಾಡಲು ಈಗ ಭೂಮಿಕಾ ಮನಸ್ಸು ಮಾಡಿದ್ದು, ಜೈದೇವ್ ಮತ್ತು ಮಲ್ಲಿ ಬದುಕಿನ ಜೊತೆಗೆ ನಾದಿನಿ ಸುಧಾಳ ಜೀವನವನ್ನೂ ಸರಿ ಮಾಡಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X