Amruthadhaare ; ಅಲ್ಲಿ ಮಲ್ಲಿ ಆಸ್ಪತ್ರೆ ಪಾಲಾಗಿದ್ದರೆ, ಇಲ್ಲಿ ಭೂಮಿಕಾಳಿಗಾಗಿ ಗೌತಮ್ ಹುಡುಕಾಟ ಮುಂದುವರೆದಿದೆ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಭೂಮಿಕಾಳಿಗೆ ಪ್ರಪೋಸ್ ಮಾಡಿ ತಿರುಗಿ ನೋಡುವುದರೊಳಗೆ ಅವಳು ಅಲ್ಲಿ ಇರುವುದಿಲ್ಲ. ಇದರಿಂದ ಗೌತಮ್ ಗಾಬರಿಯಾಗುತ್ತಾನೆ. ಆನಂದ್ ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಭೂಮಿಕಾಳಿಗಾಗಿ ಹುಡುಕಾಡುತ್ತಾನೆ. ಆದರೆ ಎಲ್ಲೂ ಕಾಣಿಸುವದಿಲ್ಲ. ಭೂಮಿಕಾ ದಾರಿ ಉದ್ದಕ್ಕೂ ತನ್ನ ಒಲೆ, ಬಳೆಗಳನ್ನು ಎಸೆದಿರುತ್ತಾಳೆ. ಗೌತಮ್ ಗೆ ದಾರಿ ಗೊತ್ತಾಗಿ, ತನ್ನನ್ನು ಹುಡುಕಲು ಸಹಾಯವಾಗಲಿ ಎಂದು ಹೀಗೆ ಮಾಡಿರುತ್ತಾಳೆ. ಗೌತಮ್ ಗೆ ಕೆಂಚ ಫೋನ್ ಮಾಡಿ ಬೆದರಿಕೆ ಹಾಕುತ್ತಾನೆ.


ಮೋಸ ಮಾಡಿದ ಕೆಂಚ

ದುಡ್ಡು ಹಾಕಿದರೆ ಹೆಂಡತಿಯನ್ನು ಬಿಡುವಂತೆ ಹೇಳುತ್ತಾನೆ. ಅಲ್ಲದೇ, ಪೊಲೀಸರಿಗೆ ಮಾಹಿತಿ ಕೊಟ್ಟರೆ, ಭೂಮಿಕಾಳನ್ನು ಕೊಲ್ಲುವುದಾಗಿ ಹೇಳುತ್ತಾನೆ. ಗೌತಮ್ ಗೆ ಭೂಮಿಕಾ ಮೇಲೆ ಅತಿಯಾದ ಪ್ರೀತಿ ಇದ್ದು, ಅವಳಿಗೆ ಏನೂ ಆಗಬಾರದು ಎಂದು ಆತಂಕ ವ್ಯಕ್ತ ಪಡಿಸಿದ್ದಾನೆ. ಕೆಂಚ ಕೇಳಿದಷ್ಟು ಹಣವನ್ನು ಕಳಿಸು ಎಂದು ಕೂಡ ಆನಂದ್ ಗೆ ಹೇಳಿದ್ದಾನೆ. ಕೆಂಚನ ಅಕೌಂಟ್‌ಗೆ ಹಣ ಹೋಗುತ್ತಿದ್ದಂತೆ ಗೌತಮ್ ಕರೆ ಮಾಡಿ ಭೂಮಿಕಾಳನ್ನು ಬಿಟ್ಟು ಕಳಿಸಲು ಹೇಳುತ್ತಾನೆ. ಆದರೆ, ದುರಾಸೆ ಮನುಷ್ಯ ಕೆಂಚ, ಇನ್ನಷ್ಟು ಹಣವನ್ನು ಕಳಿಸು, ಇಲ್ಲದೇ ಹೋದರೆ ನಿನ್ನ ಹೆಂಡತಿಯನ್ನು ಕೊಲ್ಲುತ್ತೇನೆ ಎದು ಮತ್ತೆ ಹೆದರಿಸುತ್ತಾನೆ. ಗೌತಮ್ ಪೊಲೀಸರ ಜೊತೆಗೆ ಮತ್ತೆ ಹುಡುಕಾಟ ನಡೆಸಲು ಮುಂದಾಗುತ್ತಾನೆ.

amruthadhaare-serial-24-may-episode-written-update

ಮಲ್ಲಿಯನ್ನು ಉಳಿಸಿದ ಮಹಿಮಾ

ಅತ್ತ ಜೈದೇವ ಭೂಮಿಕಾಳನ್ನು ಕೆಂಚನ ಸಹಾಯದಿಂದ ಕಿಡ್ನ್ಯಾಪ್ ಮಾಡಿಸಿದ್ದರೆ, ಇತ್ತ ಶಕುಂತಲಾ ಮಲ್ಲಿ ಕುಡಿಯುವ ಹಾಲಿಗೆ ಅದೇನೋ ಬೆರೆಸಿಕೊಟ್ಟಿದ್ದಾಳೆ. ಅದರಿಂದ ಮಲ್ಲಿಗೆ ಹೊಟ್ಟೆ ನೋವು ಶುರುವಾಗಿದೆ. ಮಲ್ಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಕುಂತಲಾ ವೈದ್ಯರ ಬಳಿ, ಮಲ್ಲಿ ಹೊಟ್ಟೆಯಲ್ಲಿರುವ ಮಗುವನ್ನು ಕೊಂದು, ಅವಳನ್ನು ಕೋಮಾಗೆ ಕಳಿಸುವಂತೆ ಹಣ ಕೊಟ್ಟು ಡೀಲಿಂಗ್ ಮಾಡಿಕೊಂಡಿದ್ದಾಳೆ. ಜೈದೇವ ತನ್ನ ಹೆಂಡತಿ ಮಗುವುಗೆ ಏನೂ ತೊಂದರೆ ಆಗಬಾರದು ಎಂದು ನಾಟಕ ಮಾಡುತ್ತಾ ಅಳುತ್ತಲಿದ್ದಾನೆ. ಮಹಿಮಾ ಜೈದೇವ ಆಡಿದ ನಾಟಕವನ್ನು ನಿಜವೆಂದು ನಂಬಿದ್ದಾಳೆ. ಮಲ್ಲಿಗೆ ಸಮಸ್ಯೆ ಆಗಬಾರದು ಎಂದು ತನಗೆ ತಿಳಿದಿರುವ ವೈದ್ಯರನ್ನು ಕರೆಸಿ, ಎರಡನೇ ಅಭಿಪ್ರಾಯವನ್ನು ಪಡೆದಿದ್ದಾಳೆ. ಇದರಿಂದ ವೈದ್ಯರು ಮಗು ತೆಗೆಯುವುದ ಬೇಡ, ಮಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದ್ದು, ಈಗ ಜೈದೇವನಿಗೆ ಮತ್ತೆ ತಲೆನೋವು ಬಂದಿದೆ.

ಶಕುಂತಲಾ ಪ್ಲಾನ್ ಬಿ ರೆಡಿ

ಆದರೆ, ಶಕುಂತಲಾ ಇದಕ್ಕೆಲ್ಲಾ ಜಗ್ಗುವ ಹೆಣ್ಣೇ ಅಲ್ಲ. ಪ್ಲಾನ್ ಎ ಜೊತೆಗೆ ಪ್ಲಾನ್ ಬಿ ಕೂಡ ರೆಡಿ ಇಟ್ಟುಕೊಂಡಿರುವ ಶಕುಂತಲಾ ಮಲ್ಲಿಯನ್ನು ಸಾಯಿಸಲು ಮುಂದಾಗಿದ್ದಾಳೆ. ನಕಲಿ ವೈದ್ಯರು ಹಾಗೂ ನರ್ಸ್ ಅನ್ನು ಆಸ್ಪತ್ರೆಗೆ ಕಳಿಸಿರುವ ಶಕುಂತಲಾ ಮಲ್ಲಿಯನ್ನು ಕೊಲ್ಲುವಂತೆ ಹೇಳಿದ್ದಾಳೆ. ಆದರೆ, ಮಹಿಮಾ ಮಲ್ಲಿಯನ್ನು ಉಳಿಸಿಕೊಳ್ಳುತ್ತಾಳಾ ಇಲ್ಲ ಶಕುಂತಲಾ ಪ್ಲಾನ್ ಪ್ರಕಾರವೇ ಮಲ್ಲಿ ಸಾಯುತ್ತಾಳಾ ಕಾದು ನೋಡಬೇಕಿದೆ. ಭೂಮಿಕಾ ಮಲ್ಲಿಯನ್ನು ಉಳಿಸಿಕೊಳ್ಳಲು ವಾಪಸ್ ಬೆಂಗಳೂರಿಗೆ ಬರಬಹುದು ಎಂದು ವೀಕ್ಷಕರು ಗೆಸ್ ಮಾಡಿದ್ದಾರೆ.

amruthadhaare-serial-24-may-episode-written-update

ಕೆಂಚನ ಬಳಿ ಬಂದ ಗೌತಮ್

ಆಗ ಗೌತಮ್ ಗೆ ದಾರಿಯಲ್ಲಿ ಭೂಮಿಕಾ ಧರಿಸಿದ್ದ ಚುಮುಕಿ ಕಾಣಿಸುತ್ತದೆ. ಅದೇ ದಾರಿಯಲ್ಲಿ ಸಾಗಿದಾಗ ಬಳೆಗಳು ಕೂಡ ಸಿಗುತ್ತದೆ. ಅದೇ ದಾರಿಯಲ್ಲಿ ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಮತ್ತು ಆನಂದ್ ತೆರಳುತ್ತಾರೆ. ಆಗ ಅಲ್ಲಿ ತೋಟದ ಮನೆಯಲ್ಲಿ ಕೆಂಚ ಮದ್ಯಪಾನ ಮಾಡುತ್ತಾ ಕುಳಿತಿರುತ್ತಾನೆ. ತನ್ನ ಹೆಂಡತಿಯನ್ನು ಬಿಡುವಂತೆ ಗೌತಮ್ ಕೇಳಿಕೊಳ್ಳುತ್ತಾನೆ. ಆದರೆ, ಕೆಂಚ ನಿನ್ನ ಹೆಂಡತಿ ಪ್ರಾಣ ಹರೋಹರವಾಗಿರುತ್ತೆ ಎಂದು ಏನೇನೋ ಮಾತನಾಡುತ್ತಿದ್ದಾನೆ.

More from Filmibeat

English summary
malli is admitted to hospital. Mahima saves sister in law lifeಮಲ್ಲಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಮಹಿಮಾ ಅತ್ತಿಗೆಯನ್ನು ಕಾಪಾಡಿಕೊಂಡಿದ್ದಾಳೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X