Amruthadhaare ; ಶಕುಂತಲಾ ಬಲೆಗೆ ಬೀಳುತ್ತಾಳಾ ಧನ್ಯಾ..? ಮನೆಗೆ ಬಂದ ಸುಧಾಳ ಉದ್ದೇಶವೇನು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಮಲ್ಲಿ ಬಳಿ ಪ್ರೀತಿಯಿಂದ ಮಾತನಾಡಿದ್ದಾನೆ. ಮಲ್ಲಿಯೇ ತನ್ನ ಜೀವಾಳ ಎಂಬಂತೆ ಮತ್ತೆ ಜೈದೇವ್ ನಟಿಸಿದ್ದಾನೆ.ದಿಯಾಳನ್ನು ದೂರ ಕಳಿಸುವಂತೆ ಆನಂದ್ ಅವರಿಗೆ ಹೇಳಿದ್ದೇನೆ. ಇಷ್ಟು ದಿನ ನಡೆದಿದ್ದು ಒಂದು ಲೆಕ್ಕ. ಇನ್ಮುಂದೆ ನಡೆಯೋದೇ ಬೇರೆ ಲೆಕ್ಕಾ ಎಂದು ಮಲ್ಲಿಗೆ ತನ್ನ ಪ್ಲಾನ್ ನ ಹಿಂಟ್ ಕೂಡ ಕೊಟ್ಟಿದ್ದಾನೆ.ಆದರೆ, ದಡ್ಡಿ ಮಲ್ಲಿ ಜೈದೇವ್ ನನ್ನು ಮತ್ತೆ ನಂಬಿದ್ದು, ಈ ಬಾರಿ ಮೋಸ ಹೋದರೆ, ಮುಳುಗುವುದಂತೂ ಪಕ್ಕಾ. ಜೈದೇವ್ ನಾಟಕಕ್ಕೆ ಮಲ್ಲಿ ಅಷ್ಟೇ ಅಲ್ಲ ಮನೆಯವರು, ಗೌತಮ್ ಕೂಡ ಕಂಪ್ಲೀಟ್ ಆಗಿ ಮೋಸ ಹೋಗುತ್ತಿದ್ದಾರೆ.

ಪ್ರೀತಿಯ ಅಮಲಿನಲ್ಲಿ ಭೂಮಿಕಾ

ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ಬಗೆ ಹರಿದಿದೆ. ಜೈದೇವ್ ಕೂಡ ದಾರಿಗೆ ಬಂದಿದ್ದಾನೆ ಎಂದು ಗೌತಮ್ ಮನೆಯಲ್ಲೇ ಚಿಕ್ಕ ಪಾರ್ಟಿ ಮಾಡಿದ್ದಾನೆ. ಪಾರ್ಟಿಯಲ್ಲಿ ಹೆಚ್ಚು ಕುಡಿದ ಗೌತಮ್ ರೂಮಿಗೆ ಬಂದು ಹೆಂಡತಿ ಭೂಮಿಕಾಳನ್ನು ಹಾಡಿ ಹೊಗಳಿದ್ದಾನೆ. ಭೂಮಿಕಾಗೆ ಲೇಡಿ ಜೇಮ್ಸ್ ಬಾಂಡ್ ಎಂದು ಹೆಸರು ಕೊಟ್ಟಿದ್ದು, ಮನ ಬಿಚ್ಚಿ ಮಾತನಾಡಿದ್ದಾನೆ. ಇದೆಲ್ಲವನ್ನೂ ನೋಡಿದ ಭೂಮಿಕಾ ಸದ್ಯ ಪ್ರೀತಿಯ ಅಮಲಿನಲ್ಲಿ ತೇಲಾಡುತ್ತಿದ್ದಾಳೆ. ಗೌತಮ್ ಪ್ರೀತಿಯ ತೆಕ್ಕೆಯಲ್ಲಿ ಭೂಮಿಕಾ ಹಾಯಾಗಿದ್ದಾಳೆ.

Amruthadhaare Serial 24 October episode written update

ಮನೆಯವಳಂತೆ ಹೊಂದಿಕೊಂಡ ಸುಧಾ

ಇತ್ತ ಆನಂದ್ ಮನೆಯಲ್ಲಿ ಸುಧಾ ಮೊದಲ ದಿನದ ಕೆಲಸವನ್ನು ಆರಂಭಿಸಿದ್ದಾಳೆ. ಮನೆಯ ಕೆಲಸವನ್ನೆಲ್ಲಾ ಮಾಡುತ್ತಾ, ಮಕ್ಕಳನ್ನು ರೆಡಿ ಮಾಡಿ ತಿಂಡಿ ತಿನ್ನಿಸಿ, ಶಾಲೆಗೆ ಕಳಿಸಿದ್ದಾಳೆ. ಅಪರ್ಣಾ ಎದ್ದೇಳುವ ಮುನ್ನವೇ ಎಲ್ಲಾ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾಳೆ. ಅಲ್ಲದೇ, ಆನಂದ್ ಗೆ ಯಾವುದೇ ಚಿಂತೆಯಿಲ್ಲದೇ, ಆಫೀಸ್‌ಗೆ ತೆರಳಿ ಎಂದು ಕಳಿಸಿಕೊಟ್ಟಿದ್ದಾಳೆ. ಮೊದಲ ದಿನವೇ ತನ್ನ ಮನೆಯಂತೆ ಕೆಲಸ ಮಾಡಿದ ಸುಧಾಳನ್ನು ಕಂಡು ಆನಂದ್ ಮತ್ತು ಅಪರ್ಣಾ ಫುಲ್ ಹ್ಯಾಪಿ ಆಗಿದ್ದಾರೆ. ಸುಧಾ ಕೂಡ ತುಂಬಾ ಒಳ್ಳೆಯ ಸಂಬಳ ಸಿಗುತ್ತಿದೆ ಎಂಬುದಕ್ಕಿಂತಲೂ ಮನುಷ್ಯತ್ವಕ್ಕೆ ಬೆಲೆ ಕೊಡುವವಳಂತೆ ನಡೆದುಕೊಂಡಿದ್ದಾಳೆ.

ಇದೇನಿದು ಕಥೆಯಲ್ಲಿ ಹೊಸ ಟ್ವಿಸ್ಟ್..?

ಇನ್ನು ಸುಧಾ ಆಗಮನವನ್ನು ಗೌತಮ್ ಸಹೋದರಿ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಕಹಾನಿ ಮೇ ಟ್ವಿಸ್ಟ್ ಎಂಬಂತೆ ಫೋನ್ ಕರೆಯೊಂದು ವೀಕ್ಷಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದಂತಿದೆ. ಹೌದು. ಅಪರ್ಣಾ ಮನೆಯಲ್ಲಿ ಕೆಲಸ ಮಾಡುವಾಗ ಸುಧಾ ಫೋನ್ ರಿಂಗ್ ಆಗಿದೆ. ಫೋನ್ ಕಾಲ್ ನೋಡಿ ಶಾಕ್ ಆದ ಸುಧಾ ಭಯದಲ್ಲೇ ಪಿಕ್ ಮಾಡಿದ್ದಾಳೆ. ನೀವು ಹೇಳಿದಂತೆಯೇ ಈ ಮನೆಗೆ ಬಂದು ಸೇರಿಕೊಂಡಿದ್ದೀನಿ ಎನ್ನುತ್ತಾಳೆ. ಅತ್ತ ಕಡೆಯಿಂದ ಧ್ವನಿಯೊಂದು ಕೇಳಿಸಿದ್ದು, ನಿನ್ನ ಕೆಲಸ ಈ ಮನೆಯಲ್ಲಿ ಅಲ್ಲ ಎಂಬುದು ನೆನಪಿದೆ ಅಲ್ವಾ.? ಆದಷ್ಟು ಬೇಗ ನಾವು ಅಂದುಕೊಂಡ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕು. ಯಾರಿಗೂ ಅನುಮಾನ ಬಾರದಂತೆ ನಡೆದುಕೊಳ್ಳಿ ಎಂದು ಹೇಳಿದ್ದಾರೆ. ಈ ಸೀನ್ ನೋಡಿದ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

ಶಕುಂತಲಾ ಬಳೆಗೆ ಬೀಳುತ್ತಾಳಾ ಧನ್ಯಾ..?

ಇನ್ನು ಶಕುಂತಲಾ ಮಾನ್ಯ ಸಹೋದರಿ ಧನ್ಯಾಳ ಜೊತೆಗೆ ಮಾತನಾಡಿದ್ದಾಳೆ. ನಯವಾಗಿ ಮಾತನಾಡಿ ಭೇಟಿ ಮಾಡಲು ಮುಂದಾಗಿದ್ದಾಳೆ. ಧನ್ಯಾ ಭಾಗ್ಯ ವಿಚಾರವನ್ನು ತೆಗೆದಿದ್ದು, ಶಕುಂತಲಾಗೆ ತನ್ನ ಹಳೆಯ ವಿಚಾರ ಎಲ್ಲಿ ಬಯಲಾಗುತ್ತೋ ಎಂಬ ಆತಂಕದಲ್ಲಿದ್ದಾಳೆ. ಹೀಗಾಗಿ ಧನ್ಯಾಳನ್ನು ಭೇಟಿ ಮಾಡಿ ಅವಳನ್ನು ಹಿಡಿದು ಕೂಡಿ ಹಾಕಬೇಕು. ಭಾಗ್ಯ ವಿಚಾರ ಏನಿರಬಹುದು ಎಂದು ತಿಳಿದುಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ. ಅಕ್ಕ ಮಾನ್ಯಾಳಂತೆ ಧನ್ಯಾ ಕೂಡ ಶಕುಂತಲಾ ಬಲೆಗೆ ಸಿಕ್ಕಿ ಬೀಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X