Amruthadhaare: ಮಹಿಮಾ ಮದುವೆ ತಯಾರಿ: ಶಕುಂತಲಾಳಿಗೆ ಖುಷಿ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮದುವೆಯ ಹಿಂದಿನ ದಿನವೂ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಾಳೆ. ಕೆಲಸವೇ ಸರ್ವಸ್ವವೂ ಎಂದು ನಂಬಿದ್ದಾಳೆ. ಗೌತಮ್ ಕೂಡ ಭೂಮಿಕಾಳಂತೆಯೇ ಕೆಲಸ ಬಿಟ್ಟರೆ, ಮನೆಯವರ ಹಿತಕ್ಕಾಗಿ ಮಾಡುವ ತ್ಯಾಗಗಳಷ್ಟೇ ಅವನ ಬದುಕಾಗಿದೆ. ಅದು ಬಿಟ್ಟು ಬೇರೇನೂ ಬೇಕಿಲ್ಲ.
ಆದರೆ, ಪಾರ್ಥ ಬೇರೆಯವರ ಮಾತು ಕೇಳಿ ಭೂಮಿಕಾ ಹಾಗೂ ಗೌತಮ್ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದಾನೆ. ಭೂಮಿಕಾ ಸರಿಯಾದ ಜೋಡಿ ಅಲ್ಲ ಎಂದು ನಂಬಿದ್ದಾನೆ. ಹೀಗಾಗಿ ಪಾರ್ಥ, ಗೌತಮ್‌ಗೆ ತಿಳಿಯದಂತೆ ಭೂಮಿಕಾಳನ್ನು ಭೇಟಿ ಮಾಡುತ್ತಾನೆ. ತುಂಬಾ ಮುಖ್ಯವಾದ ವಿಷಯವನ್ನು ಮಾತನಾಡಬೇಕು ಎಂದು ಕಾಫಿಗೆ ಕರೆದುಕೊಂಡು ಹೋಗುತ್ತಾನೆ.

ಮಹಿಮಾ, ಜೀವನ್‌ಗೋಸ್ಕರ ನೀವು ಮತ್ತು ನಮ್ಮ ಅಣ್ಣ ಗೌತಮ್ ಅಡ್ಜಸ್ಟ್‌ಮೆಂಟ್ ಮದುವೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನೀವು ಯಾವ ಕಡೆಯಿಂದಲೂ ನಮ್ಮ ಅಣ್ಣನಿಗೆ ಮ್ಯಾಚ್ ಆಗುವುದಿಲ್ಲ. ಈ ಮದುವೆಯನ್ನು ನೀವೇ ನಿಲ್ಲಿಸಿ ಎಂದು ಹೇಳುತ್ತಾನೆ. ಭೂಮಿಕಾ, ಗೌತಮ್ ಹಾಗೂ ತನ್ನ ಸಂಬಂಧದ ಬಗ್ಗೆ ಬಿಡಿಸಿ ಹೇಳುತ್ತಾಳೆ.
ಮನೆಯವರ ಖುಷಿಯಾಗಿ ಮದುವೆ
ತಾವಿಬ್ಬರೂ ಪರ್ಫೆಕ್ಟ್ ಮಿಸ್ ಮ್ಯಾಚ್. ಆದರೆ, ಮನೆಯವರ ಖುಷಿಗಾಗಿ ನಾವು ಈ ಮದುವೆಗೆ ಒಪ್ಪಿಕೊಂಡಿದ್ದೇವೆ. ನಾನು ಯಾವಾಗ ಬೇಕಿದ್ದರೂ ಈ ಮದುವೆಯಿಂದ ಹಿಂದಕ್ಕೆ ಸರಿಯಲು ಸಿದ್ಧಳಿದ್ದೇನೆ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಪಾರ್ಥನಿಗೆ ಖುಷಿಯಾಗುತ್ತದೆ. ಗೌತಮ್ ಬಳಿ ಹೋಗಿ ಭೂಮಿಕಾ ಅತ್ತಿಗೆ ನಿನಗೆ ಪರ್ಫೆಕ್ಟ್ ಮ್ಯಾಚ್ ಎಂದು ಹೇಳುತ್ತಾನೆ.

ಮಹಿಮಾ ಮದುವೆ ತಯಾರಿ
ಇತ್ತ ಗೌತಮ್, ಮಹಿಮಾ ಮದುವೆ ತಯಾರಿಯಲ್ಲಿ ಬ್ಯುಸಿ ಇರುತ್ತಾನೆ. ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರೂ ಕೂಡ ಪದೇ ಪದೇ ಚೆಕ್ ಮಾಡುತ್ತಿರುತ್ತಾನೆ. ಆನಂದ್ ಎಲ್ಲಾ ಸರಿ ಇದೆ ಆದರೂ ಯಾಕೆ ಇಷ್ಟು ಕಾಳಜಿ ತೋರಿಸುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಗೌತಮ್, ಮಹಿಮಾ ನನ್ನ ಮಗಳಿದ್ದಂತೆ. ನಾನೇ ಅವಳನ್ನು ಸಾಕಿ ಬೆಳೆಸಿದ್ದು. ಅವಳು ಏನು ಕೇಳಿದರೂ ಇಲ್ಲ ಎಂದು ಹೇಳುವುದೇ ಇಲ್ಲ. ಈಗ ಅವಳು ಮದುವೆಯಾಗುತ್ತಿದ್ದಾಳೆ. ಅವಳ ಮದುವೆಗೆ ಏನೂ ತೊಂದರೆ ಆಗ ಬಾರದು ಎಂದು ಹೇಳುತ್ತಾನೆ.
ಮಗಳ ಮದುವೆ ಆಗುತ್ತಿರುವುದಕ್ಕೆ ಖುಷಿ
ಮಹಿಮಾ ಮದುವೆಗೆ ತಯಾರಾಗಿದ್ದಾರೆ. ಸೀರೆ ಉಟ್ಟುಕೊಂಡು ಸುಂದರವಾಗಿ ರೆಡಿಯಾಗಿದ್ದಾಳೆ. ಅಜ್ಜಿ ಮಹಿಮಾಳಿಗೆ ನೆಕ್ಲೇಸ್ ಹಾಗೂ ಬಳೆಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಶಕುಂತಲಾಳಿಗೆ ಮಗಳ ಮದುವೆ ಆಗುತ್ತಿರುವುದಕ್ಕೆ ಖುಷಿಯಾಗುತ್ತದೆ. ಅದರಲ್ಲೂ ಮಹಿಮಾ ಇಷ್ಟ ಪಟ್ಟಿರುವ ಹುಡುಗನನ್ನೇ ಮದುವೆ ಆಗುತ್ತಿದ್ದಾಳೆ ಎಂದು ಖುಷಿ ಪಡುತ್ತಿದ್ದಾಳೆ. ಇನ್ನು ಮಹಿಮಾ ಮದುವೆ ಆಗಿ ಹೋದಮೇಲೆ ಆ ಮನೆಯಲ್ಲಿ ಇರದೇ, ಜೀವನ್ ಅನ್ನು ಕರೆದುಕೊಂಡು ಬೇರೆ ಮನೆಗೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಆದರೆ, ಈ ವಿಚಾರವನ್ನು ಯಾರ ಬಳಿಯೂ ಹಂಚಿಕೊಂಡಿಲ್ಲ.
ಇಬ್ಬರನ್ನು ಒಂದು ಮಾಡುವ ಯತ್ನ
ಇನ್ನು ಪಾರ್ಥ ಹಾಗೂ ಆನಂದ್ ಸದಾ ಗೌತಮ್ ಬಳಿ ಭೂಮಿಕಾ ಬಗ್ಗೆ ಮಾತನಾಡುತ್ತಿರುತ್ತಾರೆ. ಅವರಿಗೆ ಗೌತಮ್ ತನ್ನ ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ. ಹಾಗಾಗಿ ಸದಾ ಭೂಮಿಕಾ ಬಗ್ಗೆಯೇ ಹೇಳುತ್ತಿರುತ್ತಾರೆ. ಇತ್ತ ಅಪೇಕ್ಷಾ ಕೂಡ ಭೂಮಿಕಾಳಿಗೆ ಗೌತಮ್ ವಿಚಾರ ಹೇಳಿ ರೇಗಿಸುತ್ತಿರುತ್ತಾಳೆ. ಆದರೆ, ಭೂಮಿಕಾ ಹಾಗೂ ಗೌತಮ್ ನಡುವೆ ಪ್ರೀತಿ ಇರುವುದಿಲ್ಲ. ಪಾರ್ಥ ಬೇಕಂತಲೇ ಗೌತಮ್ ಫೋನ್ ತೆಗೆದುಕೊಂಡು ಭೂಮಿಕಾಳಿಗೆ ಫೋನ್ ಮಾಡಿ ಕೊಡುತ್ತಾನೆ. ವಿಧಿ ಇಲ್ಲದೇ ಗೌತಮ್ ಹಾಗೂ ಭೂಮಿಕಾ ಫೋನ್‌ನಲ್ಲಿ ಮಾತನಾಡುವಂತಾಗುತ್ತದೆ.


Click it and Unblock the Notifications











