Amruthadhaare: ಸುಳ್ಳು ಹೇಳಿ ಅಣ್ಣ ಗೌತಮ್‌ಗೆ ಶಾಕ್ ಕೊಟ್ಟ ಮಹಿಮಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿಗೆ ತನ್ನ ಸೊಸೆ ಗರ್ಭಿಣಿಯಾಗಿರುವ ಖುಷಿಯಲ್ಲಿದ್ದಾಳೆ. ಗೌತಮ್ ಹೇಳಿದಂತೆ ಸೀಮಂತ ಮಾಡಲು ಕೂಡ ಸಜ್ಜಾಗಿದ್ದಾಳೆ.

ಗರ್ಭಿಣಿಯರಿಗೆ ಸೀಮಂತ ಮಾಡುವುದು ಯಾಕೆ ಎಂದು ಮನೆಯವರೆಲ್ಲಾ ಕೇಳಿದಾಗ ಮಂದಾಕಿನಿ ಹೆಣ್ಣಿನ ಕಷ್ಟವನ್ನು ಹಾಗೂ ಸವಾಲುಗಳ ಬಗ್ಗೆ ವಿವರವಾಗಿ ಹೇಳುತ್ತಾಳೆ.

Amruthadhaare Serial 24th January episode written update

ಇನ್ನು ಗೌತಮ್, ಪಾರ್ಥ ಹಾಗೂ ಭೂಮಿಕಾ ಮಹಿಮಾ ಮನೆಯಲ್ಲೇ ಇದ್ದುಕೊಂಡು ಸೀಮಂತಕ್ಕೆ ತಯಾರಿ ನಡೆಸಲು ಮುಂದಾಗಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ಮಹಿಮಾಳಿಗೆ ಹೆಚ್ಚೆಚ್ಚು ಗಿಲ್ಟ್ ಕಾಡುತ್ತಿದೆ.

ಶಕುಂತಲಾಳಿಗೆ ಸೀಮಂತದ ಸಂಕಷ್ಟ

ಇತ್ತ ಶಕುಂತಲಾಳಿಗೆ ನಾಲ್ಕು ಜನ ಮಕ್ಕಳಾದರೂ ಕೂಡ ಅಶ್ವಿನಿ ಮತ್ತೆ ಜೈದೇವನ ಮಾತ್ರವೇ ಪ್ರೀತಿ ಇದೆ. ಪಾರ್ಥ ಹಾಗೂ ಮಹಿಮಾ ಬಗ್ಗೆ ಕೊಂಚವೂ ಕೇರ್ ಮಾಡುವುದಿಲ್ಲ. ಗೌತಮ್ ಅನ್ನು ಬಳಸಿಕೊಂಡು ಜೈದೇವ ಹಾಗೂ ಅಶ್ವಿನಿಗೆ ಜೀವನದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾಳೆ. ಇನ್ನು ಮಹಿಮಾ ಈಗ ಗರ್ಭಿಣಿಯಾಗಿರುವ ಕಾರಣ ಮನೆಗೆ ಬರುತ್ತಿದ್ದಾಳೆ. ಅವಳು ಮನೆಗೆ ಬಂದರೆ, ಪಾರ್ಟಿ, ಶಾಪಿಂಗ್ ಅಂತ ಮನೆಯಲ್ಲಿ ದಿನಕ್ಕೊಂದು ಡ್ರಾಮಾ ಮಾಡುತ್ತಾಳೆ. ಅವಳು ಮನೆಯಲ್ಲಿರುವುದರಿಂದ ನಮಗೆಲ್ಲಾ ತಲೆ ನೋವು ಕೊಡುತ್ತಾಳೆ. ಅವಳು ಈ ಮನೆಗೆ ಬರುವುದೇ ಬೇಡ ಎಂದು ಬಯಸಿದ್ದಾಳೆ. ಆದರೆ, ಸೀಮಂತ ಮಾಡಿ ಗೌತಮ್ ಮಹಿಮಾಳನ್ನು ಮನೆಗೆ ಕರೆದುಕೊಂಡು ಬರಲು ಯತ್ನಿಸಿದ್ದಾನೆ. ಇದನ್ನೆಲ್ಲಾ ನೋಡುತ್ತಿರುವ ಶಕುಂತಲಾ ಆತಂಕಗೊಂಡಿದ್ದಾಳೆ. ಹೇಗಾದರೂ ಮಾಡಿ ಮಹಿಮಾ ಮನೆಗೆ ಬರದಂತೆ ನೋಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಳೆ.

ಸೀಮಂತಕ್ಕೆ ತಯಾರಿ ನಡೆಸಿದ ಮನೆಯವರು

ಇನ್ನು ಗೌತಮ್, ಮಂದಾಕಿನಿ ಮನೆಯಲ್ಲೇ ಇದ್ದುಕೊಂಡು ಮಹಿಮಾ ಸೀಮಂತಕ್ಕೆ ತಯಾರಿ ನಡೆಸುತ್ತಿದ್ದಾನೆ. ಸೀಮಂತಕ್ಕೆ ಏನೆಲ್ಲಾ ಬೇಕು ಎಂದು ಲಿಸ್ಟ್ ಹಾಕಿಸಿದ್ದಾನೆ. ಮನೆಯಲ್ಲೇ ಸಿಂಪಲ್ ಆಗಿ ಸೀಮಂತ ಮಾಡಲು ತಯಾರಿ ಮಾಡುತ್ತಿದ್ದಾನೆ. ತಾನೊಬ್ಬನೇ ಎಲ್ಲಾ ಕೆಲಸವನ್ನು ಮಾಡುತ್ತಿದ್ದು, ಬಹಳ ಖುಷಿಯಲ್ಲಿದ್ದಾನೆ. ತನ್ನ ತಂಗಿ ಮಹಿಮಾ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ಹೊಂದಿದ್ದಾನೆ. ಇನ್ನು ಪಾರ್ಥ ಸೀಮಂತದ ನೆಪದಲ್ಲಿ ಅಪೇಕ್ಷಾ ಹಿಂದೆ ಹಿಂದೆಯೇ ಸುತ್ತುತ್ತಿದ್ದಾನೆ. ಅಪೇಕ್ಷಾ ಮತ್ತು ಪಾರ್ಥ ಸದಾ ಒಟ್ಟಿಗೆ ಇರಲು ಬಯಸುತ್ತಿದ್ದಾರೆ. ಹೀಗಾಗಿ ಚಿಕ್ಕದೊಂದು ಕಾರಣ ಸಿಕ್ಕರೂ ಇಬ್ಬರೂ ಭೇಟಿ ಮಾಡುತ್ತಾರೆ.

Amruthadhaare Serial 24th January episode written update

ಮಗು ಕಳೆದುಕೊಂಡ ದುಃಖದಲ್ಲಿ ಗೌತಮ್

ಇನ್ನು ಮಹಿಮಾಳಿಗೆ ಮನೆಯಲ್ಲಿನ ಸಂಭ್ರಮವನ್ನು ನೋಡಿ ಕ್ಷಣ ಕ್ಷಣಕ್ಕೂ ಗಾಬರಿ ಹೆಚ್ಚಾಗುತ್ತಿದೆ. ತಾನು ಗರ್ಭಿಣಿ ಅಲ್ಲ ಎಂಬ ಸತ್ಯ ಮನೆಯಲ್ಲಿ ಗೊತ್ತಾದರೆ, ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಹಿಮಾ ದೀಪಾಂಶು ಅನ್ನು ಭೇಟಿ ಮಾಡಿ ಐಡಿಯಾ ಕೇಳಿದ್ದಾಳೆ. ಕೊನೆಗೆ ಆಸ್ಪತ್ರೆಯಿಂದ ಗೌತಮ್‌ಗೆ ಕರೆ ಬಂದಿದ್ದು, ಗೌತಮ್ ಮತ್ತು ಭೂಮಿಕಾ ಗಾಬರಿಯಲ್ಲಿ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ವೈದ್ಯರು ಮಹಿಮಾ ಬೈಕ್‌ನಿಂದ ಬಿದ್ದ ಕಾರಣ ಅಬಾರ್ಷನ್ ಆಗಿದೆ ಎಂದು ಸುಳ್ಳು ಹೇಳಿದ್ದಾರೆ. ಇದೆಲ್ಲವೂ ಮಹಿಮಾ ಹಾಗೂ ದೀಪಾಂಶು ಮಾಡಿರುವ ಪ್ಲಾನ್. ಮಗು ಇಲ್ಲ ಎಂಬುದನ್ನು ತಿಳಿದ ಗೌತಮ್ ಶಾಕ್ ಆಗಿದ್ದಾನೆ. ತನ್ನ ಕನಸುಗಳೆಲ್ಲವೂ ಒಂದು ಕ್ಷಣದಲ್ಲಿ ಮಾಯಾವಾಯ್ತು ಎಂದು ದುಃಖಿಸಿದ್ದಾನೆ.

ಮನೆಯವರಿಗೆಲ್ಲಾ ಶಾಕ್ ಕೊಟ್ಟ ಗೌತಮ್

ಇನ್ನು ಗೌತಮ್ ದುಃಖಕ್ಕೆ ಭೂಮಿಕಾ ಜೊತೆಯಾಗಿದ್ದಾಳೆ. ಅವನ ಕಣ್ಣಿರನ್ನು ಒರೆಸಿ ಸಮಾಧಾನ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್ ಇಬ್ಬರೂ ಮಹಿಮಾಳನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಮಹಿಮಾ ತಾನು ಸುಳ್ಳು ಹೇಳುತ್ತಿರುವ ವಿಚಾರ ಗೊತ್ತಿದ್ದರೂ ಕೂಡ ಏನೂ ಮಾತನಾಡದೇ ಅಣ್ಣ ಗೌತಮ್ ಮಾತಿಗೆ ತಕ್ಕಂತೆ ಸ್ಪಂದಿಸಿದ್ದಾಳೆ. ಇನ್ನು ಈ ವಿಚಾರವನ್ನು ಮನೆಯವರು ತಿಳಿಸಿ ಶಾಕ್ ಕೊಡಲು ಗೌತಮ್ ಸಜ್ಜಾಗಿದ್ದಾನೆ.

More from Filmibeat

English summary
Amruthadhaare Serial today episode update, mahima admits to hospital and lies for Gautham. And he is in shock;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X