Amruthadhaare: ಎರಡು ಹೊಸ ಪಾತ್ರಗಳ ಪರಿಚಯ: ಅಮ್ಮಮ್ಮ, ಅಜ್ಜಿಯ ಎಂಟ್ರಿ
ಅಮೃತಧಾರೆ ಧಾರಾವಾಹಿಯಲ್ಲಿ ಎರಡು ಹೊಸ ಪಾತ್ರಗಳು ಎಂಟ್ರಿಕೊಟ್ಟಿವೆ. ಒಂದು ಪಾತ್ರ ಗೌತಮ್ ಅವರ ಅಜ್ಜಿ. ಮತ್ತೊಂದು ಪಾತ್ರ ಭೂಮಿಕಾ ಅವರ ಅಜ್ಜಿ. ಇವರಿಬ್ಬರ ಜೊತೆಗೆ ಇನ್ನೂ ಒಂದು ಪಾತ್ರ ಎಂಟ್ರಿಕೊಡಲಿದ್ದು, ಈಗ ಕೇವಲ ಧ್ವನಿಯನ್ನಷ್ಟೇ ಕೇಳಿಸಲಾಗಿದೆ. ಮಾನ್ಯ ಎಂಬ ಪಾತ್ರ ಗೌತಮ್ ಹಾಗೂ ಶಕುಂತಲಾ ಜೊತೆಗೆ ಮಾತನಾಡಿದ್ದಾಳೆ.
ಗೌತಮ್ ದಿವಾನ್ ಕ್ರಿಕೆಟ್ ನೋಡುವಾಗ ಅಕಸ್ಮಾತ್ ಆಗಿ ಭೂಮಿಕಾ ಕೈ ಅನ್ನು ಹಿಡಿದುಕೊಳ್ಳುತ್ತಾನೆ. ಇದರಿಂದ ಭೂಮಿಕಾಳಿಗೆ ಮುಜುಗರವಾಗಿ ಗಾಬರಿಯಾಗುತ್ತಾಳೆ. ನಂತರ ಗೌತಮ್ ಕೂಡ ಭೂಮಿಕಾ ಕೈ ಹಿಡಿದಿದ್ದಕ್ಕೆ ಕ್ಷಮೆ ಕೇಳುತ್ತಾನೆ. ಬಳಿಕ ಹೋಟೆಲ್‌ನಿಂದ ಎಲ್ಲರೂ ಒಟ್ಟಿಗೆ ಮನೆಗೆ ಹೊರಡುತ್ತಾರೆ. ಇತ್ತ ಶಕುಂತಲಾ ಮನೆಯನ್ನು ಕ್ಲೀನ್ ಮಾಡಿಸುತ್ತಿರುತ್ತಾಳೆ. ಅವರ ಅತ್ತೆಗೆ ಏನಿಷ್ಟವೋ ಅದೇ ಅಡುಗೆಯನ್ನು ನಿತ್ಯ ಮಾಡಲು ಹೇಳುತ್ತಿರುತ್ತಾಳೆ. ಅಷ್ಟರಲ್ಲಿ ಶಕುಂತಲಾ ಅವರ ಅತ್ತೆ ಬಂದೇ ಬಿಡುತ್ತಾರೆ. ಶಕುಂತಲಾ ಅತ್ತೆಯನ್ನು ನೋಡಿ ನಡುಗಿ ಹೋಗುತ್ತಾಳೆ. ಮನೆಗೆ ಬಂದವರೇ ಎಲ್ಲರನ್ನೂ ಹೆದರಿಸುತ್ತಾ, ಬೈಯುತ್ತಿರುತ್ತಾಳೆ.

ಊರಿನಿಂದ ಮೊಮ್ಮೊಗನ ಮದುವೆಗೆಂದು ಬಾಳೆಗೊನೆ, ಅಕ್ಕಿ, ಬೇಳೆ, ಸೇರಿದಂತೆ ಪ್ರತಿಯೊಂದು ಎಲ್ಲವನ್ನೂ ತಂದಿರುತ್ತಾಳೆ. ಅಷ್ಟೇ ಅಲ್ಲದೇ, ಶಕುಂತಲಾಳಿಗೆ ತಾನು ಹೇಳಿದಂತೆ ಕೇಳದಿದ್ದರೆ ಮನೆಯಿಂದ ಆಚೆ ಹಾಕುತ್ತೇನೆ. ನೀನು ಈ ಮನೆಗೆ ಹೇಗೆ ಬಂದೆ ಅನ್ನೋದು ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ಹೇಳುತ್ತಾಳೆ. ಶಕುಂತಲಾಳಿಗೆ ಬೇರೆ ದಾರಿ ಇಲ್ಲದೇ, ಎಲ್ಲದಕ್ಕೂ ತಲೆಯಾಡಿಸುತ್ತಾಳೆ. ಇನ್ಮುಂದೆ ಶಕುಂತಲಾಳಿಗೆ ಅವರ ಅತ್ತೆಯ ಕಾಟ ಶುರುವಾಗಿದೆ.
ಅತ್ತೆಗಾಗಿ ಬ್ಯೂಟಿ ಪ್ರಾಡಕ್ಟ್ಸ್ ತಂದ ಸದಾಶಿವ
ಇತ್ತ ಭೂಮಿಕಾ ಮನೆಯಲ್ಲೂ ಇದೇ ಕಥೆ ಆಗಿರುತ್ತದೆ. ಮಂದಾಕಿನಿ ಮನೆಗೆ ರೇಷನ್ ತರಲು ಹೇಳಿದ್ದರೆ, ಸದಾಶಿವ, ಮೇಕಪ್ ವಸ್ತುಗಳು, ಡ್ರೈ ಫ್ರೂಟ್ಸ್, ಸ್ವೀಟ್ಸ್ ಅನ್ನು ತಂದಿರುತ್ತಾನೆ. ಯಾಕೆ ಎಂದು ಕೇಳಿದ್ದಕ್ಕೆ, ಮಂದಾಕಿನಿಗೆ ನಿಮ್ಮ ಅಮ್ಮ ಪಂಕಜಾ ಬರುತ್ತಿದ್ದಾರೆ. ಅವರೇ ಇದೆಲ್ಲಾ ಲಿಸ್ಟ್ ಕಳಿಸಿದ್ದರು. ಅದಕ್ಕೆ ತಂದೆ ಎಂದು ಹೇಳುತ್ತಾನೆ. ಇನ್ನು ಅಮ್ಮಮ್ಮ ಬರುತ್ತಿದ್ದಾರೆ ಎಂದು ಅಪೇಕ್ಷಾ ಕೂಡ ಖುಷಿ ಪಡುತ್ತಾಳೆ. ಅತ್ತೆ ಬಂದರೆ, ಮಂದಾಕಿನಿ ಬಾಯಿಗೆ ಬೀಗ ಬೀಳುತ್ತದೆ ಎಂದು ಸದಾಶಿವನಿಗೂ ಖುಷಿಯಾಗಿರುತ್ತದೆ.
ಪಿಂಕಿ ಅಮ್ಮಮ್ಮನ ಎಂಟ್ರಿ
ಪಂಕಜಾ ಮನೆಗೆ ಬಂದೇ ಬಿಡುತ್ತಾಳೆ. ವಯಸ್ಸಾದರೂ ಕೂಡ ಪಂಕಜಾ ಫುಲ್ ಯಂಗ್ ಆಗಿ ಮಾಡ್ರನ್ ಆಗಿ ರೆಡಿ ಆಗಿರುತ್ತಾರೆ. ಆಕೆ ಕೂಡ ತುಂಬಾ ಸ್ಟೈಲ್ ಆಗಿ ಮಾತನಾಡುತ್ತಾಳೆ. ಈಗಲೂ ನನ್ನನ್ನು ಪಡ್ಡೆ ಹುಡುಗರು ಟೀಸ್ ಮಾಡುತ್ತಾರೆ ಎಂದು ಹೇಳುತ್ತಾರೆ. ಇದೇ ವೇಳೆಗೆ, ಮಂದಾಕಿನಿಯನ್ನು ನೋಡಿದ ಪಂಕಜಾ ಫುಲ್ ಶಾಕ್ ಆಗುತ್ತಾಳೆ. ಇದೇನೆ ಮಂದಾಕಿನಿ ಹೀಗಾಗಿದ್ದೀಯಾ.. ಸ್ವಲ್ಪ ನಿನ್ ಬ್ಯೂಟಿ ಬಗ್ಗೆ ಗಮನ ಕೊಡು. ಬ್ಯೂಟಿ ತುಂಬಾ ಮುಖ್ಯ ಎಂದು ಹೇಳುತ್ತಾಳೆ.

ಗೌತಮ್ ಹಾಗೂ ಭೂಮಿಕಾ ಇಬ್ಬರೇ
ಗೌತಮ್, ಜೀವನ್ ಹಾಗೂ ಭೂಮಿಕಾ ಮನೆವರೆಗೂ ಬರುತ್ತಾರೆ. ಅಷ್ಟರಲ್ಲಿ ಪಂಕಜಾ ಅಮ್ಮಮ್ಮ ಜೀವನ್‌ಗೆ ಫೋನ್ ಮಾಡಿ ನೀನು ಒಬ್ಬನೇ ಮೇಲೆ ಬಾ. ಭೂಮಿಕಾ ಹಾಗೂ ಗೌತಮ್ ಕಾರಿನಲ್ಲೇ ಇರಲಿ ಎಂದು ಹೇಳುತ್ತಾಳೆ. ಜೀವನ್ ಯಾಕೆ ಎಂದರೂ ಕೇಳುವುದಿಲ್ಲ. ಬೇರೆ ದಾರಿ ಇಲ್ಲದೇ, ಜೀವನ್, ಮಹಿಮಾಳಿಗೆ ಏನೋ ಕೊಡಬೇಕು ಮೇಲಕೆ ಹೋಗಿ ತಂದು ಕೊಡುತ್ತೇನೆ ಅಲ್ಲಿಯವರೆಗೂ ಗೌತಮ್ ಅವರ ಜೊತೆಗೆ ನೀನಿರು ಅಕ್ಕ ಎಂದು ಜೀವನ್ ಹೇಳಿ ಹೋಗುತ್ತಾನೆ. ಆದರೆ, ಅವರಿಬ್ಬರನ್ನೇ ಹೀಗೆ ಬಿಟ್ಟು ಹೋಗುವುದಕ್ಕೆ ಕಾರಣವೇನು ಎಂಬುದು ಮುಂದೆ ತಿಳಿಯಬೇಕಿದೆ.


Click it and Unblock the Notifications











