ಅದ್ಧೂರಿಯಾಗಿ ನಡೆಯುತ್ತಿದೆ ಮಹಿಮಾ-ಜೀವನ್ ಮದುವೆ: ಬೇಸರದಲ್ಲಿ ಗೌತಮ್!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಾಳಜಿ ವಹಿಸಿ ತಂಗಿ ಮಹಿಮಾ ಮದುವೆ ಯಾವುದೇ ಕೊರತೆ ಇಲ್ಲದಂತೆ ನಡೆಯುವಂತೆ ಅಣಿ ಮಾಡಿದ್ದಾನೆ. ಗೌತಮ್‌ಗೆ ತನ್ನ ಮನೆಯ ಕೆಲಸದ ಮುಂದೆ ಆಫೀಸ್ ಕೆಲಸ ಬೇಡವಾಗಿದೆ. ಹೀಗಾಗಿ ಇದ್ದ ಮುಖ್ಯವಾದ ಮೀಟಿಂಗ್ ಕೂಡ ಗೌತಮ್ ಕ್ಯಾನ್ಸಲ್ ಮಾಡಿದ್ದಾನೆ.

ಮದುವೆ ಮಂಟಪಕ್ಕೆ ಗೌತಮ್ ಫ್ಯಾಮಿಲಿ ಬರುತ್ತಿದ್ದಂತೆ ಸುದ್ದಿ ವಾಹಿನಿಗಳು ವೆಲ್ಕಂ ಮಾಡುತ್ತವೆ. ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್ ಗೌತಮ್ ದಿವಾನ್ ಸಹೋದರಿ ಮಹಿಮಾ ಮದುವೆಯ ಅಪ್ ಡೇಟ್‌ಗಳನ್ನು ತೋರಿಸುತ್ತಿರುತ್ತಾರೆ. ಇವೆಲ್ಲದರ ನಡುವೆ ಗೌತಮ್ ಬೇಸರ ಮಾಡಿಕೊಂಡಿದ್ದಾನೆ. ಏಕೆ ಗೊತ್ತೆ ಮುಂದೆ ಓದಿ.

amruthadhaare-serial

ಗೌತಮ್‌ಗೆ ಸುದ್ದಿ ವಾಹಿನಿಗಳ ಮುತ್ತಿಗೆ

ಗೌತಮ್ ಮಂಟಪಕ್ಕೆ ಬಂದ ಕೂಡಲೇ ಸುದ್ದಿವಾಹಿನಿಗಳು ಮದುವೆಯ ಬಗ್ಗೆ ವಿಚಾರಿಸುತ್ತಾರೆ. ಆಗ ಗೌತಮ್ ನನ್ನ ತಂಗಿ ಮದುವೆ ನನ್ನಿಷ್ಟದಂತೆ ಅದ್ಧೂರಿಯಾಗಿ ಮಾಡುತ್ತಿದ್ದೇನೆ. ನನ್ನ ಮದುವೆ ನನ್ನ ಮಾವನ ಇಷ್ಟದಂತೆ ನಡೆಯುತ್ತದೆ ಎಂದು ಹೇಳಿ ಹೊರಟು ಬಿಡುತ್ತಾನೆ. ಬಳಿಕ ಜೀವನ್ ಮನೆಯವರು ಕೂಡ ಮಂಟಪಕ್ಕೆ ಬರುತ್ತಾರೆ. ಆಗಲೂ ಸುದ್ದಿ ವಾಹಿನಿಗಳು ಮುತ್ತಿಗೆ ಹಾಕಿಕೊಳ್ಳುತ್ತವೆ. ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ.

ನಿಮ್ಮಿಬ್ಬರ ಪ್ರೀತಿ ಹೇಗೆ ಶುರುವಾಯ್ತು..? ಮದುವೆಯನ್ನು ಹೇಗೆ ಪ್ಲಾನ್ ಮಾಡಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಜೀವನ್ ಮಾತನಾಡುವುದಿಲ್ಲ. ಆದರೆ, ಮಂದಾಕಿನಿ ತುಂಬಾ ಉತ್ಸಾಹದಲ್ಲಿ ಮಾತನಾಡುತ್ತಾಳೆ. ತನ್ನ ಕತೆಯನ್ನು ಹೇಳುತ್ತಾ ಜಂಬ ಕೊಚ್ಚಿಕೊಳ್ಳುತ್ತಿರುತ್ತಾಳೆ. ಆಗ ಭೂಮಿಕಾ ಬರುತ್ತಾಳೆ. ಭೂಮಿಕಾಳನ್ನು ನಿಮ್ಮ ಹಾಗೂ ಗೌತಮ್ ಅವರದ್ದು ಯಾವ ರೀತಿಯ ಮದುವೆ ಎಂದು ಕೇಳಿದ್ದಕ್ಕೆ ಭೂಮಿಕಾ ಅರೇಂಜ್ ಮ್ಯಾರೇಜ್ ಎಂದು ಹೇಳಿ ಮಂದಾಕಿನಿಯನ್ನು ಕರೆದುಕೊಂಡು ಹೋಗುತ್ತಾಳೆ.

amruthadhaare-serial

ಸ್ನೇಹಿತನ ಬಗ್ಗೆ ಆನಂದ್ ಕಾಳಜಿ

ಗೌತಮ್ ಮನೆಯಲ್ಲಿ ಎಲ್ಲರಿಗೂ ಹಣ, ಹೆಸರು ಮುಖ್ಯವೇ ಹೊರತು ಗೌತಮ್ ಆಗಲೀ ಅವನ ಭಾವನೆಗಳಾಗಲೀ ಯಾರಿಗೂ ಬೇಕಿಲ್ಲ. ಶಕುಂತಲಾ ಹಾಗೂ ಅವಳ ಮಕ್ಕಳು ಗೌತಮ್ ನನ್ನು ಸ್ವಲ್ಪವೂ ಇಷ್ಟ ಪಡುವುದಿಲ್ಲ. ಮಹಿಮಾ ಮದುವೆಯಲ್ಲಿ ಜಯದೇವ ಕಾಣಿಸುವುದಿಲ್ಲ. ಹೀಗಾಗಿ ಗೌತಮ್ ಜಯದೇವನನ್ನು ಹುಡುಕುತ್ತಾನೆ. ಆದರೆ, ಜಯದೇವ ಹಿಂದಿನ ದಿನ ಕಂಠ ಪೂರ್ತಿ ಕುಡಿದು ಮದುವೆ ಮನೆಯಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತಾನೆ.

ಇತ್ತ, ಶಕುಂತಲಾ ಈ ಯಾವ ವಿಚಾರವನ್ನು ಗೌತಮ್ ಗಮನಕ್ಕೆ ತರುವುದಿಲ್ಲ. ಆದರೆ, ಆನಂದ್ ಸ್ನೇಹಿತ ಗೌತಮ್ ಮೇಲಿನ ಕಾಳಜಿಯಿಂದಾಗಿ ಇದೆಲ್ಲವನ್ನೂ ಗಮನಿಸುತ್ತಿರುತ್ತಾನೆ. ತನ್ನ ಸ್ನೇಹಿತನಿಗೆ ಮೋಸವಾಗುತ್ತಿರುವುದಕ್ಕೆ ಬೇಸರವೂ ಮಾಡಿಕೊಳ್ಳುತ್ತಾನೆ.

amruthadhaare-serial

ಬೇಧ-ಭಾವ ನೋಡಿ ಭೂಮಿಕಾಗೆ ಬೇಸರ

ಇನ್ನು ಜೀವನ್ ಕಾಶಿಯಾತ್ರೆ ಶಾಸ್ತ್ರ ಮಾಡುವಾಗ ಅವನ ಪಾದವನ್ನು ತೊಳೆಯಲು ಗೌತಮ್ ಮುಂದೆ ಬರುತ್ತಾನೆ. ಆದರೆ, ಲಕ್ಷ್ಮೀಕಾಂತ್ ಗೌತಮ್ ನನ್ನು ತಡೆದು ಹುಡುಗಿಯ ಸ್ವಂತ ಅಣ್ಣ ಅಲ್ವಾ ಶಾಸ್ತ್ರ ಮಾಡಬೇಕಿರುವುದು ಎಂದು ಕೇಳಿ, ಜಯದೇವನನ್ನು ಕರೆದುಕೊಂಡು ಬರುತ್ತೀನಿ ಎಂದು ಹೋಗುತ್ತಾನೆ. ಈ ಭೇದ-ಭಾವವನ್ನು ನೋಡಿ ಭೂಮಿಕಾ ಬೇಸರ ಮಾಡಿಕೊಳ್ಳುತ್ತಾಳೆ.

ಪಾದ ತೊಳೆಯುವುದಿಲ್ಲ ಎಂದು ಜಯದೇವನ ಹಠ

ಆದರೆ ಜಯದೇವ ಜೀವನ್ ಪಾದ ತೊಳೆಯುವುದಿಲ್ಲ ಎಂದು ಹಠ ಮಾಡುತ್ತಾನೆ. ಮಿಡಲ್ ಕ್ಲಾಸ್ ಜೀವನ್ ಕಾಲು ನಾನು ಮುಟ್ಟುವುದಿಲ್ಲ. ಮಹಿಮಾಳಿಗೇನೋ ಕರ್ಮ ಪ್ರೀತಿಸಿ ಮದುವೆಯಾಗುತ್ತಿದ್ದಾಳೆ. ಆದರೆ ನಾನಂತೂ ಅವನ ಪಾದ ತೊಳೆಯೋದಿಲ್ಲ ಎಂದು ಹೇಳುತ್ತಾನೆ. ಶಕುಂತಲಾ ಕೂಡ ಜಯದೇವನ ಮಾತನ್ನು ಒಪ್ಪಿಕೊಳ್ಳುತ್ತಾಳೆ. ಹೀಗಾಗಿ ಜೀವನ್ ಪಾದ ತೊಳೆದು ಕಾಶಿಯಾತ್ರೆ ಶಾಸ್ತ್ರ ಮಾಡುವ ಭಾಗ್ಯ ಗೌತಮ್ ಪಾಲಾಗುತ್ತಾ ಕಾದು ನೋಡಬೇಕು.

More from Filmibeat

English summary
Amruthadhaare: Gautham arranged grand marriage for mahima.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X