Amruthadhaare ; ವಜ್ರದ ಹಾರ ಕೈಯಲ್ಲಿಡಿದು ಬಂದ ಸುಧಾಳಿಗೆ ಗೇಟ್ ಪಾಸ್ ಕೊಡುತ್ತಾರಾ..?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಳ ಬುಡಕ್ಕೆ ಸಮಸ್ಯೆ ಬಂದಿದೆ. ಭಾಗ್ಯ ತಮ್ಮದೇ ಕೆಲಸಗಾರರ ಕ್ವಾಟರ್ಸ್ ಬಂದು ಸೇರಿಕೊಂಡಿದ್ದಾಳೆ. ತಮ್ಮ ಮನೆಗೆ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ ಸುಧಾಳೇ ಗೌತಮ್ ಸಹೋದರಿ ಎಂಬ ಸತ್ಯ ಈಗ ಶಕುಂತಲಾಳಿಗೆ ಮನದಟ್ಟಾಗಿದೆ. ಹಾಗಾಗಿ ಈ ತಲೆ ನೋವಿನಿಂದ ಪಾರಾಗಲು ಪ್ಲಾನ್ ಮಾಡಿದ್ದಾಳೆ. ವಜ್ರದ ಹಾರವನ್ನು ಭಾಗ್ಯ ಮನೆಗೆ ತಲುಪಿಸಿರುವ ಶಕುಂತಲಾ ಕಳ್ಳತನವಾಗಿದೆ. ಅದು ಕೂಡ ಸುಧಾಳೇ ಈ ಕೆಲಸವನ್ನು ಮಾಡಿದ್ದಾಳೆ ಎಂದು ಶಕುಂತಲಾ ಆರೋಪಿಸಿದ್ದಾಳೆ.
ವಜ್ರದ ಹಾರದೊಂದಿಗೆ ಬಂದ ಸುಧಾ
ವಜ್ರದ ಹಾರ ಕಳ್ಳತನವಾದ ಸಂದರ್ಭದಲ್ಲಿ ಮನೆಯಲ್ಲಿ ಇದ್ದದ್ದು ಸುಧಾ ಒಬ್ಬಳೇ, ಬೇರೆ ಕೆಲಸಗಾರರೆಲ್ಲಾ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದರು. ಇನ್ನು ಇವತ್ತು ಇಷ್ಟೊತ್ತಾದರೂ ಕೆಲಸಕ್ಕೆ ಆಗಮಿಸಿಲ್ಲ. ಹಾಗಾಗಿ ಈ ಕಳ್ಳತನವನ್ನು ಅವಳೇ ಮಾಡಿರಬೇಕು ಎಂದು ಶಕುಂತಲಾ ಖಡಾಖಂಡಿತವಾಗಿ ಹೇಳುತ್ತಾಳೆ. ಆದರೆ, ಗೌತಮ್ ಮತ್ತು ಭೂಮಿಕಾ ಶಕುಂತಲಾ ಆರೋಪವನ್ನು ನಂಬಲು ತಯಾರಿರುವುದಿಲ್ಲ. ಸುಧಾ ತನ್ನ ತಾಯಿಗೆ ಊಟ ಕೊಟ್ಟು ಮಾತ್ರೆ ನೀಡಲು ಮನೆಗೆ ಹೋಗಿದ್ದಾಳೆ ಎಂದು ವಹಿಸಿಕೊಂಡು ಮಾತನಾಡುತ್ತಾರೆ. ಸುಧಾಳ ಮನೆಗೆ ಕೆಲಸಗಾರ ತೆರಳಿ ವಜ್ರದ ಹಾರ ಕಳುವಾಗಿದ್ದು, ನಿಮ್ಮನ್ನು ವಿಚಾರಿಸಲು ಕರೆಯುತ್ತಿದ್ದಾರೆ ಎಂದಾಗ ಸುಧಾ ಗಾಬರಿಯಾಗುತ್ತಾಳೆ. ನೋಡಿದರೆ, ವಜ್ರದ ಹಾರದ ಬಾಕ್ಸ್ ತನ್ನ ಮನೆಯಲ್ಲೇ ಇರುತ್ತದೆ. ಇದು ಹೇಗೆ ತನ್ನ ಮನೆಗೆ ಬಂತು ಎಂಬ ಅನುಮಾನದಲ್ಲೇ ಅದರೊಂದಿಗೆ ಗೌತಮ್ ಎದುರಿಗೆ ಹೋಗುತ್ತಾಳೆ

ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟಪಟ್ಟ ಶಕುಂತಲಾ
ಗೌತಮ್ ಬಳಿ ನೇರವಾಗಿ ಹೋಗಿ, ಈ ವಜ್ರದ ಹಾರದ ಬಾಕ್ಸ್ ನಮ್ಮ ಮನೆಯಲ್ಲಿತ್ತು. ಇದು ಹೇಗೆ ನಮ್ಮ ಮನೆಗೆ ಬಂತೋ ಗೊತ್ತಿಲ್ಲ ಅಣ್ಣ. ಈಗಲೇ ನನ್ನ ಕಣ್ಣಿಗೆ ಬಿದ್ದಿದ್ದು, ನಿಜವಾಗಿಯೂ ನಾನು ಕದ್ದಿಲ್ಲ ಎಂದು ಹೇಳುತ್ತಾಳೆ. ಆದರೆ, ಶಕುಂತಲಾ ನೀನು ಕದಿಯದೆಯೇ ನಿಮ್ಮ ಮನೆಗೆ ಹೇಗೆ ಬರಲು ಸಾಧ್ಯ. ಸಿಕ್ಕಿ ಬೀಳುವ ಭಯದಲ್ಲಿ ಈಗ ಸುಳ್ಳು ಹೇಳುತ್ತಿದ್ದೀಯಾ ಎಂದು ಶಕುಂತಲಾ ಆರೋಪಿಸುತ್ತಾಳೆ. ಆಗ ಗೌತಮ್ ಸಾಧ್ಯವೇ ಇಲ್ಲ. ಸುಧಾ ಅಂತಹ ಹುಡುಗಿ ಅಲ್ಲವೇ ಅಲ್ಲ. ಅವಳ ಮನೆಗೆ ವಜ್ರದ ಹಾರ ಹೇಗೆ ಹೋಯ್ತು ಎಂಬುದೇ ಪ್ರಶ್ನೆ ಎನ್ನುತ್ತಾನೆ. ಸಿಸಿಟಿವಿ ನೋಡಿದರೆ ತನ್ನ ಬಣ್ಣ ಬಯಲಾಗುತ್ತದೆ ಎಂಬ ಭಯದಲ್ಲಿ ಶಕುಂತಲಾ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟಪಡುತ್ತಾಳೆ.
ಈ ಕೆಲಸ ಆಗದು ಎಂದರೂ ಬಿಡದ ವ್ಯಕ್ತಿ
ಈ ಕೆಲಸದ ಜವಾಬ್ದಾರಿ ನಿನಗೆ ಬೇಡ ಗೌತಮ್, ಜೈದೇವ್ ನೋಡಿಕೊಳ್ಳುತ್ತಾನೆ ಎಂದು ಸಂದರ್ಭವನ್ನು ನಿಭಾಯಿಸುತ್ತಾಳೆ. ಇತ್ತ ಗೌತಮ್ ಫೈಲ್ ನ ಮಾಹಿತಿಯನ್ನು ಸುಧಾ ತೆಗೆದುಕೊಂಡು ಹೋಗುತ್ತಾಳೆ. ಗೌತಮ್ ಶತ್ರು ಕೈಗೆ ಮಾಹಿತಿಯನ್ನು ನೀಡುತ್ತಾಳೆ. ಬಳಿಕ ತನ್ನ ಕೈಯಲ್ಲಿ ಇನ್ನು ಮುಂದೆ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಗೌತಮ್ ಮನೆಯವರು ಬಹಳ ಒಳ್ಳೆಯ ಜನ. ಅವರಿಗೆ ಮೋಸ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳುತ್ತಾಳೆ. ಆದರೆ, ಆತ ಇಲ್ಲ ನೀನು ಈ ಕೆಲಸವನ್ನು ಮಾಡಲೇಬೇಕು ಎಂದು ಒತ್ತಾಯ ಮಾಡುತ್ತಾನೆ.
ಸುಧಾ ತಾಯಿಯನ್ನು ಭೇಟಿಯಾಗುತ್ತಾಳಾ ಭೂಮಿಕಾ..?
ಇನ್ನು ಸುಧಾ ವಜ್ರದ ಹಾರವನ್ನು ಮನೆಗೆ ತಂದು ಕೊಟ್ಟ ಬಳಿಕ ಗೌತಮ್ ಕ್ಷಮೆ ಕೇಳುತ್ತಾನೆ. ನಿನ್ನ ಮೇಲೆ ಸುಮ್ಮನೆ ಆರೋಪ ಮಾಡಿದ್ದಕ್ಕೆ ಕ್ಷಮಿಸು ಎನ್ನುತ್ತಾನೆ. ಇನ್ನು ಭೂಮಿಕಾ ನಿಮಗೆ ಇಷ್ಟು ಒಳ್ಳೆಯ ಬುದ್ಧಿಯನ್ನು ಹೇಳಿಕೊಟ್ಟ ನಿಮ್ಮ ತಾಯಿಯನ್ನು ನೋಡಬೇಕು ಎಂದು ಬಯಸುತ್ತಾಳೆ. ಆದರೆ, ಅಮ್ಮ ಮಲಗಿದ್ದಾರೆ ಎಂದು ಸುಧಾ ಹೇಳಿದ್ದಕ್ಕೆ, ನಿಮ್ಮ ತಾಯಿಯನ್ನು ನೋಡಲು ಕಾಲವೇ ಕೂಡಿ ಬರುತ್ತಿಲ್ಲ. ಯಾವಾಗ ಆ ಸಂದರ್ಭ ಬರುತ್ತದೋ ಎಂದು ಬೇಸರ ಮಾಡಿಕೊಳ್ಳುತ್ತಾಳೆ.


Click it and Unblock the Notifications











