Amruthadhaare; ಭೂಮಿಕಾಳ ಕೈಗೆ ತಿಜೋರಿ ಕೀ ಕೊಟ್ಟ ಶಕುಂತಲಾ : ಖುಷಿಪಟ್ಟ ಗೌತಮ್..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಶ್ವಿನಿ ಪತಿ ಫಾರಿನ್ ನಿಂದ ನೇರವಾಗಿ ಅತ್ತೆ ಮನೆಗೆ ಬಂದಿದ್ದು, ಹೆಂಡತಿ ಬಳಿ ಕೋಟಿ ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕಂಪನಿ ಲಾಸ್ ನಲ್ಲಿದೆ 40 ಕೋಟಿ ಬೇಕು ಎಂದು ಸುಳ್ಳು ಹೇಳಿದ್ದಾನೆ. ಈಗ ಸ್ಟಾಕ್ ಮಾರ್ಕೆಟ್ ಡೌನ್ ಆಗುತ್ತಿದ್ದು, 10-12 ಕೋಟಿ ಹಣವನ್ನು ಇನ್ವೆಸ್ಟ್ ಮಾಡಿದರೆ ಡಬಲ್ ಲಾಭ ಬರುತ್ತದೆ. ಅದೂ ಕೂಡ ಕೆಲವೇ ದಿನದಲ್ಲಿ ಹಣ ದುಪ್ಪಟ್ಟಾಗುತ್ತೆ ಎಂದು ನಂಬಿಸಿದ್ದಾನೆ. ಅಶ್ವಿನಿ ಕೂಡ ಅರುಣ್ ಮಾತು ನಂಬಿ ಮನೆಯಲ್ಲಿ ಹಣ ಕೇಳಬೇಕು ಎಂದುಕೊಂಡಿದ್ದಾಳೆ.


ಜೈದೇವ್ ಗೆ ಬುದ್ಧಿ ಹೇಳಿದ ಶಕುಂತಲಾ

ಜೈದೇವ್ ದುಡುಕಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಸಮಸ್ಯೆ ಆಗುತ್ತಿದೆಯೇ ಹೊರತು, ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಶಕುಂತಲಾ ಬೈಯುತ್ತಾಳೆ. ಸುಮ್ಮನೆ ಇರುವುದು ಬಿಟ್ಟು ಯಾಕೆ ಒಂದಲ್ಲ ಒಂದು ಸಮಸ್ಯೆಯನ್ನು ತಂದುಕೊಳ್ಳುತ್ತೀಯಾ ಎಂದು ಹೇಳಿದ್ದಕ್ಕೆ ಜೈದೇವ್ ತನ್ನ ಕೈಯಲ್ಲೂ ಸುಮ್ಮನೆ ಕೂರುವುದಕ್ಕೆ ಆಗುತ್ತಿಲ್ಲ. ತನಗೂ ಅಧಿಕಾರ ಬೇಕು. ಹಣವನ್ನು ತನೆಗೆ ಬೇಕಾದಂತೆ ಬಳಸಲು ಆಗುವಂತಾಗಬೇಕು ಎಂದು ಜೈದೇವ್ ಹೇಳುತ್ತಾನೆ. ಶಕುಂತಲಾ ನೀನು ಸುಮ್ಮನಿರು. ಏನೋ ಮಾಡಲು ಹೋಗಿ ಮತ್ತೇನೋ ಮಾಡಿದರೆ ಸಮಸ್ಯೆ ಆಗುತ್ತದೆ. ಅದರ ಬದಲು ಸುಮ್ಮನಿರು ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡುತ್ತಾಳೆ.

amruthadhaare-serial-25-june-episode-written-update

ಭೂಮಿಕಾಳಿಗೆ ತಿಜೋರಿ ಕೀ ಕೊಟ್ಟ ಶಕುಂತಲಾ

ಇನ್ನು ಅಜ್ಜಿ ತನ್ನ ಕಾಲ ಮುಗಿದ ಬಳಿಕ ಈ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಸಮರ್ಥರಿರುವ ವ್ಯಕ್ತಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಮನೆಯವರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾಳೆ. ಇಷ್ಟು ವರ್ಷ ಶಕುಂತಲಾಳನ್ನು ನೋಡಿದಂತೆ ಅವಳಿಗೆ ಈ ಮನೆಯನ್ನು ನಿಭಾಯಿಸುವ ಶಕ್ತಿ ಇದೆ. ನನ್ನ ನಂತರ ಜವಾಬ್ದಾರಿಯುತ ವ್ಯಕ್ತಿಗೆ ಈ ತಿಜೋರಿ ಕೀ ಅನ್ನು ನೀಡಬೇಕು ಎಂದುಕೊಂಡಿದ್ದೇನೆ ಎನ್ನುತ್ತಾಳೆ. ತಿಜೋರಿ ಕೀ ಅನ್ನು ಶಕುಂತಲಾ ಕೈಗೆ ಕೊಡುತ್ತಾಳೆ. ಇದನ್ನು ನೋಡಿದ ಕೂಡಲೇ ಶಕುಂತಲಾ ಫುಲ್ ಹ್ಯಾಪಿ ಆಗುತ್ತಾಳೆ. ಇಷ್ಟು ವರ್ಷ ಕಾದಿದ್ದಕ್ಕೂ ಸಾರ್ಥಕವಾಯ್ತು ಎಂದು ಗರ್ವ ಪಡುತ್ತಾಳೆ. ತಕ್ಷಣವೇ ಭೂಮಿಕಾ ಬಗ್ಗೆ ನಿನ್ನ ಮನದಲ್ಲಿ ಯಾವ ಅಭಿಪ್ರಾಯವಿದೆ ಎಂದು ಕೇಳುತ್ತಾಳೆ.

ಭೂಮಿಕಾ ಕೈಗೆ ಮನೆಯ ಜವಾಬ್ದಾರಿ

ಈ ಮಾತನ್ನು ಕೇಳಿದ ಕೂಡಲೇ ಶಕುಂತಲಾ ಬ್ಲಾಂಕ್ ಆಗುತ್ತಾಳೆ. ಭೂಮಿಕಾಳಿಗೆ ಈ ಮನೆಯ ಜವಾಬ್ದಾರಿ ಹೊರವು ಶಕ್ತಿ ಇದೆ. ಅವಳು ಎಲ್ಲವನ್ನೂ ನಿಭಾಯಿಸುತ್ತಾಳೆ ಎಂದು ಹೇಳುತ್ತಾಳೆ. ಅಜ್ಜಿ ನನಗೂ ಅದೇ ಅಭಿಪ್ರಾಯವಿದೆ. ಹಾಗಾಗಿ ಈ ಮನೆಯ ತಿಜೋರಿ ಕೀ ಅನ್ನು ಅವಳಿಗೆ ನೀಡು. ಇನ್ಮುಂದೆ ಈ ಮನೆಯನ್ನು ಅವಳೇ ನಿಭಾಯಿಸಲಿ ಎಂದು ಹೇಳುತ್ತಾಳೆ. ಆಗ ಕೆಲವರು ಶಾಕ್ ಆದರೆ, ಮತ್ತೂ ಕೆಲವರು ಖುಷಿ ಪಡುತ್ತಾರೆ. ಭೂಮಿಕಾಳಿಗೆ ಕೀ ತೆಗೆದುಕೊಳ್ಳಲು ಮುಜುಗರವಾಗುತ್ತದೆ.

amruthadhaare-serial-25-june-episode-written-update

ಭೂಮಿಕಾಳನ್ನು ಆಟವಾಡಿಸಿದ ಗೌತಮ್

ಶಕುಂತಲಾ ಕೀ ಕೊಟ್ಟು ಅವಮಾನವಾದವಳಂತೆ ಬಂದು ಬಿಡುತ್ತಾಳೆ. ಪಾರ್ಥ ಸೇರಿದಂತೆ ಎಲ್ಲರೂ ಕಂಗ್ರಾಟ್ಸ್ ಮಾಡುತ್ತಾರೆ. ಆದರೆ, ಗೌತಮ್ ಮುಖ ಊದಿಸಿಕೊಂಡು ರೂಮಿಗೆ ಬರುತ್ತಾನೆ. ಇದನ್ನು ಗಮನಿಸಿದ ಭೂಮಿಕಾಳಿಗೆ ಭಯವಾಗುತ್ತದೆ. ರೂಮಿಗೆ ಹೋಗಿ ಗೌತಮ್ ನನ್ನು ವಿಚಾರಿಸುತ್ತಾಳೆ. ತನಗೆ ಜವಾಬ್ದಾರಿ ಕೊಟ್ಟಿದ್ದು ಇಷ್ಟವಾಗಲಿಲ್ವಾ ಎಂದು ಪ್ರಶ್ನಿಸುತ್ತಾಳೆ. ಆಗ ಗೌತಮ್ ಭೂಮಿಕಾಳನ್ನು ಅಪ್ಪಿಕೊಂಡು ವಿಶ್ ಮಾಡುತ್ತಾನೆ. ನನಗೆ ಖುಷಿಯಾಯ್ತು. ಆದರೆ ನಿಮ್ಮನ್ನು ಸತಾಯಿಸಬೇಕು ಎಂದೇ ಸುಮ್ಮನಿದ್ದೆ ಎಂದು ಹೇಳುತ್ತಾನೆ. ಭೂಮಿಕಾಳ ಮನಸ್ಸಿಗೂ ಆಗ ಸಮಾಧಾನವಾಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X