Amruthadhaare ; ಅಪರಿಚಿತ ಕೊಟ್ಟ ಸುಳಿವು ಏನು..? ವಿಷದ ಹಾಲು ಭೂಮಿಕಾ ಹೊಟ್ಟೆ ಸೇರುತ್ತಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಗೆ ಮಲ್ಲಿ ವಾಪಸ್ ಬಂದಿರುವುದು ಲೆಕ್ಕಕ್ಕೆ ಇಲ್ಲ. ಅವಳೊಬ್ಬಳು ದಡ್ಡಿ, ಅವಳಿಗೆ ಏನೂ ಗೊತ್ತಾಗುವುದಿಲ್ಲ ಎಂದು ಕೇರ್ ಲೆಸ್ ಆಗಿಯೇ ಇದ್ದಾನೆ. ದಿಯಾಳಿಗೆ ಸಮಾಧಾನ ಮಾಡುವುದೇ ಜೈದೇವ್ ಗೆ ಕಷ್ಟವಾಗಿದೆ. ಯಾಕೆಂದರೆ ದಿಯಾಳಿಗೆ ಈ ಬದುಕು ಸಾಕಾಗಿದ್ದು, ಮದುವೆಯಾಗಬೇಕು ಎಂಬ ಬಯಕೆ ಹೆಚ್ಚಾಗಿದೆ. ಈಗ ತನ್ನ ಮುಂದಿನ ಬದುಕನ್ನು ಸುಲಭ ಮಾಡಿಕೊಳ್ಳಲು ತನ್ನದೇ ದಾರಿಯಲ್ಲಿ ಮುಂದುವರೆದಿದ್ದಾನೆ. ಅಮ್ಮನಿಗೂ ಏನನ್ನೂ ಹೇಳದೆಯೇ ತನ್ನ ಪಾಡಿಗೆ ತಾನು ಪ್ಲಾನ್ ಮಾಡಿದ್ದಾನೆ.

ಮೂವರ ಹತ್ಯೆಗೆ ಜೈದೇವ್ ಸ್ಕೆಚ್

ಸುಧಾ ಮತ್ತು ಅವಳ ಮಗಳು ಲಕ್ಷ್ಮೀನ ಕೊಲ್ಲಲು ಸುಪಾರಿ ಕೊಟ್ಟು ಹುಡುಗರನ್ನು ಬಿಟ್ಟಿದ್ದಾನೆ. ಆದರೆ, ಭೂಮಿಕಾ ಕೂಡ ಲಕ್ಷ್ಮೀಯನ್ನು ಸ್ಕೂಲಿನಿಂದ ಕರೆದುಕೊಂಡು ಬರಲು ಹೋಗಿದ್ದು, ಈಗ ಮೂವರಿರುವುದನ್ನು ಕಂಡು ಹುಡುಗರು ಗಾಬರಿಯಾಗಿದ್ದಾರೆ. ಭೂಮಿಕಾ ಕೂಡ ಇದ್ದಾಳೆ ಎಂಬುದನ್ನು ತಿಳಿದ ಜೈದೇವ್ ಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಹೀಗಾಗಿ ಮೂವರನ್ನು ಒಂದೇ ಸಲ ಕೊಂದು ಬಿಡಿ ಎಂದು ಹೇಳಿದ್ದಾನೆ. ಕಾರು ದಾರಿ ಮಧ್ಯೆಯೇ ಕೆಟ್ಟು ನಿಂತ ಕಾರಣ ಮೂವರು ನಡೆದುಕೊಂಡು ಹೊರಟಿದ್ದಾರೆ. ಇದೇ ಸರಿಯಾದ ಸಮಯ ಎಂದು ಸುಪಾರಿ ಪಡೆದ ಹುಡುಗರು ಅಪಘಾತ ಮಾಡಿ ಕೊಲ್ಲಲು ಮುಂದಾಗಿದ್ದಾರೆ.

amruthadhaare-serial-25-march-episode-written-update

ಅಪರಿಚಿತನಿಂದ ಉಳಿದ ಜೀವಗಳು

ಅಷ್ಟರಲ್ಲಿ ಅಪರಿಚಿತನ ಕಾರು ಸ್ಪೀಡ್ ಆಗಿ ಬಂದು ಅಡ್ಡ ನಿಂತಿದೆ. ಸ್ಪೀಡ್ ಆಗಿ ಬಂದ ಕಾರಣ ಭೂಮಿಕಾ, ಸುಧಾ ಗಾಬರಿಯಾಗುತ್ತಾರೆ. ಕ್ಯಾಬ್ ಡ್ರೈವರ್ ಗೆ ಬೈಯುತ್ತಾರೆ. ನೀವು ಹೊರಟು ಬಿಡುತ್ತೀರಾ ಅಂತ ಫಾಸ್ಟ್ ಆಗಿ ಬಂದೆ. ನನ್ನ ಕಾರಲ್ಲಿ ಕುಳಿತುಕೊಳ್ಳಿ ಡ್ರಾಪ್ ಮಾಡುತ್ತೀನಿ. ನಿಮ್ಮಿಂದ ನನಗೂ ಸಂಪಾದನೆ ಆಗುತ್ತೆ ಎಂದು ಕೇಳಿಕೊಳ್ಳುತ್ತಾನೆ. ಮೊದಲು ಒಪ್ಪದ ಸುಧಾ ಬೇರೆ ದಾರಿ ಇಲ್ಲದೇ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಕ್ಯಾಬ್ ಡ್ರೈವರ್ ಬಂದು ಅಪಘಾತವನ್ನು ತಪ್ಪಿಸಿದ್ದು, ಇದು ಭೂಮಿಕಾ ಮತ್ತು ಸುಧಾ ಅರಿವಿಗೆ ಬಂದಿಲ್ಲ. ಆದರೆ, ಕ್ಯಾಬ್ ಡ್ರೈವರ್ ಅತಿಯಾಗಿ ಮಾತನಾಡಿದ್ದು, ಸುಧಾಳಿಗೆ ಬಹಳ ಇರಿಟೇಟ್ ಆಗಿದೆ.

ಅಪಾಯದ ಮುನ್ಸೂಚನೆ ಕೊಟ್ಟವನು ಯಾರು..?

ಮನೆಗೆ ಡ್ರಾಪ್ ಮಾಡಿ ಹೊರಡುವಾಗ ಭೂಮಿಕಾ ಬಳಿ ಕ್ಯಾಬ್ ಡ್ರೈವರ್ ಮಾತನಾಡಿದ್ದಾನೆ.ಸ್ಕೂಲ್ ಬಳಿ ನಿಂತಿದ್ದ ಹುಡುಗರು ನಿಮ್ಮನ್ನು ಕೊಲ್ಲಬೇಕು ಎಂದು ಪ್ಲಾನ್ ಮಾಡುತ್ತಿದ್ದರು. ಅದನ್ನು ಕೇಳಿಸಿಕೊಂಡು ನಾನು ಫಾಲೋ ಮಾಡಬೇಕಾಯ್ತು. ಅವರು ನಿಮ್ಮ ಹಿಂದೆ ಯಾಕೆ ಬಿದ್ದಿದ್ದಾರೋ ಗೊತ್ತಿಲ್ಲ. ಆದರೆ, ಯಾವುದಕ್ಕೂ ನೀವು ಎಚ್ಚರವಾಗಿರಿ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ, ಕ್ಯಾಬ್ ಡ್ರೈವರ್ ಆಗಿ ಬಂದಿರುವ ಈ ಅಪರಿಚಿತ ಸದ್ಯ ಭೂಮಿಕಾ ಮತ್ತು ಸುಧಾ ಪಾಲಿಗೆ ದೇವರಾಗಿದ್ದಾನೆ.

Take a Poll


ಅತ್ತೆ ಕೊಟ್ಟ ಹಾಲು ಭೂಮಿಕಾ ಹೊಟ್ಟೆ ಸೇರುತ್ತಾ..?

ಭೂಮಿಕಾ ಮತ್ತು ಗೌತಮ್ ಹುಟ್ಟಲಿರುವ ಮಗುವಿನ ಬಗ್ಗೆ ಅಪಾರವಾದ ಕನಸನ್ನು ಹೊಂದಿದ್ದಾರೆ. ಭೂಮಿಕಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಭೂಮಿಗೆ ತರಬಾರದು ಎಂಬುದು ಶಕುಂತಲಾ ಆಲೋಚನೆ. ಅದಕ್ಕೆ ಏನು ಮಾಡುದು ಎಂದು ಯೋಚಿಸಿರುವ ಶಕುಂತಲಾ ವಿಷ ತಂದಿದ್ದಾಳೆ. ಹಾಲಿಗೆ ಬೆರೆಸಿ ಇದನ್ನು ಭೂಮಿಕಾಳಿಗೆ ಕುಡಿಸಿದರೆ, ಮಗು ಸಾಯುತ್ತದೆ ಎಂದು ಲೆಕ್ಕಾಚಾರ ಹಾಕಿದ್ದಾಳೆ. ಆದರೆ, ಈ ಹಾಲನ್ನು ಭೂಮಿಕಾ ಕುಡಿಯುತ್ತಾ..? ಹಾಗೇನಾದರೂ ಹಾಲು ಕುಡಿದರೆ, ಮುಂದೆ ಏನಾಗಬಹುದು..? ಈ ಬಾರಿಯೂ ಭೂಮಿಕಾ ಮತ್ತು ಅವಳ ಮಗುವನ್ನು ಭಾಗ್ಯ ಕಾಪಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X