Amruthadhaare ; ಗೌತಮ್ ಪ್ರೀತಿಗೆ ಬದುಕಿ ಬಂದ ಭೂಮಿಕಾ : ಅತ್ತಿಗೆ ಜವಾಬ್ದಾರಿಯನ್ನು ನಿಭಾಯಿಸಿದ ಮಹಿಮಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶಕುಂತಲಾ ಮತ್ತು ಜೈದೇವ ಏನೇ ಪ್ಲಾನ್ ಮಾಡಿದರೂ ಭೂಮಿಕಾಳಿಂದ ಎಲ್ಲವೂ ಉಲ್ಟಾ ಆಗುತ್ತಿದೆ. ಈಗ ಭೂಮಿಕಾ ಮತ್ತು ಗೌತಮ್ ಚಿಕ್ಕಮಗಳೂರಿನಲ್ಲಿದ್ದಾರೆ ಎಂದು ಶಕುಂತಲಾ ಹೊಸ ಪ್ಲಾನ್ ಮಾಡಿ ಮಲ್ಲಿಯನ್ನು ಕೊಲ್ಲಲು ಮುಂದಾಗಿದ್ದಾಳೆ. ಆದರೆ, ಜೈದೇವ ಮಲ್ಲಿ ಜೊತೆಗೆ ಭೂಮಿಕಾ ಕಥೆಯನ್ನು ಮುಗಿಸಲು ಮುಂದಾಗಿದ್ದಾನೆ. ಕೆಂಚ ಜೈದೇವನ ಮಾತು ಕೇಳಿ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆದರೆ, ಗೌತಮ್ ತನ್ನ ಹೆಂಡತಿ ಭೂಮಿಕಾಳಿಗಾಗಿ ಹುಡುಕಾಟವನ್ನು ನಡೆಸಿದ್ದಾನೆ.

ಅತ್ತಿಗೆ ಜವಾಬ್ದಾರಿಯನ್ನು ನಿಭಾಯಿಸಿದ ಮಹಿಮಾ

ಇತ್ತ ಮಲ್ಲಿ ಕೋಮಾಗೆ ಹೋಗಬೇಕು, ಅವಳ ಹೊಟ್ಟೆಯಲ್ಲಿರುವ ಮಗು ಸಾಯಬೇಕು ಎಂದು ಶಕುಂತಲಾ ಮಲ್ಲಿಯನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾಳೆ. ಮಹಿಮಾ ಮಲ್ಲಿ ಹಾಗೂ ಅವಳ ಮಗುವುಗೆ ಏನೂ ಆಗದಂತೆ ತಡೆದಿದ್ದು, ಈಗ ಮಲ್ಲಿಯ ಕಥೆಯನ್ನೇ ಮುಗಿಸಲು ಶಕುಂತಲಾ ನಕಲಿ ವೈದ್ಯರನ್ನು ಕಳಿಸಿದ್ದಾಳೆ. ಜೈದೇವ ಪ್ಲಾನ್ ಮಾಡಿ ಜೀವನ್ ಮತ್ತು ಮಹಿಮಾಳನ್ನು ಊಟ ಮಾಡಿ ಬನ್ನಿ ಎಂದು ಕಳಿಸಿದ್ದಾನೆ. ಇದೇ ಸಂದರ್ಭದಲ್ಲಿ ಮಲ್ಲಿಯನ್ನು ಕೊಲ್ಲಲು ಬಂದ ವೈದ್ಯರು ಚಾಕು ತೆಗೆಯುವ ವೇಳೆಗೆ ಮಹಿಮಾ ಹಾಗೂ ಜೀವನ್ ವಾಪಸ್ ಬಂದು ಮಲ್ಲಿಯನ್ನು ಕಾಪಾಡಿದ್ದಾರೆ. ಈ ಬಾರಿಯೂ ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ಜೈದೇವ ಬೇಸರ ಮಾಡಿಕೊಂಡಿದ್ದಾನೆ.

amruthadhaare-serial-25-may-episode-written-update

ಮತ್ತೆ ಶಕುಂತಲಾಳಿಗೆ ಸೋಲು

ಶಕುಂತಲಾ ಏನೇ ಪ್ಲಾನ್ ಮಾಡಿದರೂ ಮಲ್ಲಿಯನ್ನು ಮನೆಯಿಂದ ಹೊರಗೆ ಹಾಕಲು ಸಾಧ್ಯವಾಗುತ್ತಿಲ್ಲ. ಗೌತಮ್ ನಿಂದ ಭೂಮಿಕಾಳನ್ನ ದೂರ ಇಡಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾಳೆ. ಈಗ ತಾನು ಮಾಡಿರುವ ಪ್ಲಾನ್ ನ ತನ್ನ ಮೇಲೆ ಅನುಮಾನ ಬಾರದಂತೆ ಕೆಂಚನಿಂದಲೇ ಇದೆಲ್ಲಾ ನಡೆದಿದೆ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಆದರೆ, ಅತ್ತ ಕೆಂಚ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿದ್ದು, ಚಿಕ್ಕಮಗಳೂರಿನಲ್ಲೇ ಇರುವ ಕಾರಣ, ಭೂಮಿಕಾ ಕೈಯಲ್ಲಿ ಶಕುಂತಲಾ ಸಿಕ್ಕಿ ಬೀಳುವುದಂತೂ ಪಕ್ಕಾ ಆಗಿದೆ. ಮತ್ತೆ ಸೋಲು ಅನುಭವಿಸಿರುವ ಶಕುಂತಲಾ ಕೊರಳಿಗೆ ಯಾವ ಉರುಳು ಸಿಲುಕಿ ಬೀಳುತ್ತದೋ ಕಾದು ನೋಡಬೇಕಿದೆ.

ಅನುಮಾನ ವ್ಯಕ್ತಪಡಿಸಿದ ಮಹಿಮಾ

ಜೈದೇವನ ಮೇಲೆ ಅಟ್ಯಾಕ್ ಆಗಿ ಎರಡು ದಿನವೂ ಕಳೆದಿಲ್ಲ. ಅಷ್ಟು ಬೇಗ ಮತ್ತೆ ಮಲ್ಲಿಯ ಮೇಲೆ ಅಟ್ಯಾಕ್ ಮಾಡಿದವರು ಯಾರಿರಬಹುದು ಎಂದು ಮಹಿಮಾ ಅನುಮಾನ ಪಟ್ಟಿದ್ದಾಳೆ. ಇದರಲ್ಲಿ ಮನೆಯವರ ಕೈವಾಡವಿದೆ ಎಂದು ಮಹಿಮಾ ಗೆಸ್ ಮಾಡಿದ್ದು, ಗೌತಮ್ ಹಾಗೂ ಭೂಮಿಕಾಳಿಗೆ ವಿಷಯ ಹೇಳದೇ ಮುಚ್ಚಿಟ್ಟಿದ್ದಾಳೆ. ಮಲ್ಲಿ ಜೀವಕ್ಕೆ ಅಪಾಯವಿದ್ದು. ಜೊತೆಗಿದ್ದುಕೊಂಡು ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕು ಎಂದು ಮಹಿಮಾ ಯೋಚಿಸಿದ್ದಾಳೆ. ಮಹಿಮಾ ಅನುಮಾನಕ್ಕೆ ತಕ್ಕ ಹಾಗೆ ಜೈದೇವ ತಂಗಿಯ ಎದುರು ಸಿಕ್ಕಿ ಬೀಳುತ್ತಾನಾ ಎಂಬ ಕುತೂಹಲ ಮೂಡಿದೆ.

amruthadhaare-serial-25-may-episode-written-update

ಭೂಮಿಕಾಳನ್ನು ಉಳಿಸಿಕೊಂಡ ಗೌತಮ್

ಭೂಮಿಕಾಳಿಗಾಗಿ ಹುಡುಕಿ ಹೊರಟ ಗೌತಮ್ ಗೆ ಕೆಂಚ ಸಿಕ್ಕಿದ್ದು ಭೂಮಿಕಾ ಕಾಣೆಯಾಗಿದ್ದಾಳೆ. ಕೊನೆಗೆ ಕೆಂಚ ಭೂಮಿಕಾಳನ್ನು ಭೂಮಿಯಲ್ಲಿ ಹೂತು ಹಾಕಿದ್ದು, ಕಷ್ಟಪಟ್ಟು ಭೂಮಿಕಾಳನ್ನು ಉಳಿಸಿಕೊಳ್ಳಲು ಗೌತಮ್ ಹರಸಾಹಸ ಪಟ್ಟಿದ್ದಾನೆ. ಐ ಲವ್ ಯೂ ಭೂಮಿಕಾ, ನೀವಿಲ್ಲದಿದ್ದರೆ, ನನ್ನ ಉಸಿರು ಇರಲ್ಲ ಎಂದು ಹೇಳಿದ್ದು, ಭೂಮಿಕಾ ಬದುಕಿ ಬಂದಿದ್ದಾಳೆ. ಗೌತಮ್ ಹಾಗೂ ಭೂಮಿಕಾ ಇಬ್ಬರೂ ಈಗ ಒಂದಾಗಿದ್ದು, ಮುಂದೆ ಇವರ ಬದುಕಿನಲ್ಲಿ ಇನ್ನೂ ಏನೆಲ್ಲಾ ಕಷ್ಟಗಳು ಆಗಮಿಸುತ್ತವೇ ಎಂಬುದೇ ಕುತೂಹಲವಾಗಿದೆ.

More from Filmibeat

English summary
gautham searches bhoomika and brings her to the hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X