Amruthadhaare ; ಆಪತ್ತಿನಿಂದ ಭೂಮಿಕಾ ಪಾರು ; ಬರಿಗೈನಲ್ಲೇ ಬೆಂಕಿ ಆರಿಸಿದ ಸುಧಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ತಮ್ಮ ಪ್ರೀತಿಯ ದಿನವನ್ನು ಆಚರಿಸಿದ್ದಾನೆ. ಸರ್ಪ್ರೈಸ್ ಆಗಿ ಕೇಕ್ ತಂದಿದ್ದು ಅಪೇಕ್ಷಾಳಿಹೆ ಖುಷಿ ತಂದಿದೆ.ಮದುವೆಯಾದಾಗಿನಿಂದಲೂ ಬೇಡದ ವಿಚಾರಕ್ಕೆ ಜಗಳ ಮಾಡುತ್ತಿದ್ದ ಅಪೇಕ್ಷಾ ಇಂದು ಫುಲ್ ಹ್ಯಾಪಿ ಮೂಡ್ ನಲ್ಲಿ ಇದ್ದಾಳೆ. ಪಾರ್ಥನ ಸರ್ಪ್ರೈಸ್ ಕಂಡು ಸಂತಸಗೊಂಡಿದ್ದಾಳೆ. ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ತಮ್ಮ ಪ್ರೀತಿಯ ದಿನಗಳನ್ನು ನೆನೆದು, ಮತ್ತೆ ಒಂದಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದು ಎಂಬುದು ಗೊತ್ತಿದ್ದು, ಚಿಕ್ಕ-ಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಿರುತ್ತಾರೆ.

ಸುಧಾಳ ಮನಸ್ಸನ್ನು ಅರಿಯಲು ಯತ್ನ

ಸುಧಾ ಇತ್ತೀಚೆಗೆ ಬಹಳ ಗೊಂದಲದಲ್ಲಿರುವುದು, ಸದಾ ಯೋಚಿಸುತ್ತಾ ಕಳೆದು ಹೋಗಿರುವುದನ್ನು ಭೂಮಿಕಾ ಗಮನಿಸಿದ್ದಾಳೆ. ಏನಾದರೂ ಸಮಸ್ಯೆ ಇರಬಹುದು, ಹಣದ ಕೊರತೆ ಎಂದು ಭಾವಿಸಿ, ಸುಧಾಳಿಗೆ ಹಣವನ್ನೂ ನೀಡುವ ಯತ್ನ ಮಾಡಿದ್ದಾಳೆ. ಆದರೆ, ಸುಧಾ ಇದೆಲ್ಲವನ್ನೂ ಒಲ್ಲೆ ಎಂದಿದ್ದು, ತನಗೇನು ಸಮಸ್ಯೆ ಇಲ್ಲ ಎಂದು ಸುಳ್ಳು ಹೇಳಿದ್ದಾಳೆ. ಮನೆಯವರ ಮನಸ್ಸು ಗೆದ್ದಿರುವ ಸುಧಾಳಿಗೆ ಈಗ ಇಷ್ಟು ಒಳ್ಳೆಯ ಮನೆಗೆ ದ್ರೋಹ ಮಾಡಬೇಕು ಎಂಬ ಕೊರಗು ಕಾಡುತ್ತಿದೆ. ಆದರೆ, ಸುಧಾಳಿಗೆ ತನ್ನ ತಾಯಿ ಆರೋಗ್ಯದ ಮುಂದೆ ಈಗ ಒಳ್ಳೆಯತನದ ಅವಶ್ಯಕತೆ ಇಲ್ಲ ಎನಿಸಿದೆ. ತನ್ನ ತಾಯಿಯನ್ನು ಉಳಿಸಿಕೊಳ್ಳುವ ಸಲುವಾಗಿ ಗೌತಮ್ ಮನೆಗೆ ಸಮಸ್ಯೆ ತಂದಿಡಲು ಮುಂದಾಗಿದ್ದಾಳೆ. ಇದೇ ಚಿಂತೆಯಲ್ಲಿ ಸುಧಾ ನಿತ್ಯ ಕೊರಗುತ್ತಿದ್ದಾಳೆ.

amruthadhaare-serial-25-november-episode-written-update

ದಿಯಾ-ಜೈದೇವ್ ಮತ್ತೆ ಭೇಟಿ

ಜೈದೇವ್ ಮನೆಯವರಿಂದ ಒಳ್ಳೆಯ ಹೆಸರನ್ನು ಪಡಯಲು ದಿಯಾಳಿಂದ ಕೆಲ ದಿನಗಳೀಂದ ಅಂತರವನ್ನು ಕಾಯ್ದುಕೊಂಡಿದ್ದ. ಮನೆಯಲ್ಲಿ ಮಲ್ಲಿ ಹಿಂದೆಯೇ ಸುತ್ತುತ್ತಾ ತಾನು ಈಗ ಮೊದಲಿನ ವ್ಯಕ್ತಿ ಅಲ್ಲ ಎಂದು ನಂಬಿಸಿದ್ದಾನೆ. ಮನೆಯಲ್ಲೂ ಎಲ್ಲರೂ ಜೈದೇವ್ ನಾಟಕವನ್ನು ಗುರುತಿಸದೇ, ಜೈದೇವ್ ಬದಲಾಗಿದ್ದಾನೆ ಎಂದು ಸುಮ್ಮನಿದ್ದಾರೆ. ಆದರೆ, ಈಗ ಮತ್ತೆ ಜೈದೇವ್ ತನ್ನ ಹಳೆಯ ಚಾಳಿಯನ್ನು ಶುರು ಮಾಡಿಕೊಂಡಿದ್ದಾನೆ. ಸಮಯ ಸಿಕ್ಕಾಗಲೆಲ್ಲಾ ದಿಯಾ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾನೆ. ಈಗ ದಿಯಾಳನ್ನು ಭೇಟಿಯಾಗಲು ಮನೆಯಿಂದ ಹೊರಗೂ ಹೀಗಿದ್ದಾನೆ. ದಿಯಾ ಈ ಕಷ್ಟ ಎಲ್ಲಾ ಬೇಡ. ನಾವು ಎಲ್ಲಾದರೂ ದೂರ ಹೋಗೋಣ ಎಂದು ಸಲಹೆ ಕೊಟ್ಟಿದ್ದು, ಜೈದೇಔ ಕೋಪ ಮಾಡಿಕೊಂಡಿದ್ದಾನೆ. ಎಲ್ಲಾ ಬಿಟ್ಟು ಬಂದರೆ ನಿತ್ಯ ಬದುಕಲು ಬಿಡಿಗಾಸು ಹಣವಿಲ್ಲ. ರಾಯಲ್ ಆಗಿ ಬದುಕಿದ್ದೀನಿ, ಹಾಗೆ ಬದುಕಬೇಕು ಎಂದರೆ ಈ ಮನೆ ನನಗೆ ಬಹಳ ಮುಖ್ಯ. ಈ ಮನೆಯನ್ನು ಬಿಟ್ಟು ಬರುವ ಮಾತೇ ಇಲ್ಲ ಎಂದು ಹೇಳಿದ್ದಾನೆ.


ಭೂಮಿಕಾಳ ಸೆರಗಿಗೆ ತಗುಲಿದ ಬೆಂಕಿ

ಇತ್ತ ಭೂಮಿಕಾ ಈಗ ಸ್ವಲ್ಪ ಚೇತರಿಸಿಕೊಂಡಿದ್ದು, ಓಡಾಡುವಂತಾಗಿದ್ದಾಳೆ. ಹೀಗಾಗಿ ಸುಧಾಳ ಸಹಾಯ ಪಡೆದು ರೂಮಿನಿಂದ ಹೊರಗೆ ಬಂದಿದ್ದಾಳೆ. ದೇವರ ಪೂಜೆ ಮಾಡಲು ಬಯಸಿದ್ದು, ದೀಪ ಹಚ್ಚಿ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾಳೆ. ಗ್ರಹಚಾರವೆಂಬಂತೆ ಉರಿಯುತ್ತಿರುವ ದೀಪಕ್ಕೆ ಭೂಮಿಕಾ ಸೆರಗು ತಾಗಿದ್ದು, ಸೆರಗಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ನೋಡುತ್ತಿದ್ದಂತೆ ಸುಧಾ ಕಿರುಚಿಕೊಂಡಿದ್ದಾಳೆ.


ಅತ್ತಿಗೆ ಪ್ರಾಣ ಉಳಿಸಿದ ಸುಧಾ

ಅತ್ತಿಗೆ ಪ್ರಾಣವನ್ನು ಸುಧಾ ಉಳಿಸಿದ್ದಾಳೆ. ಬರಿಗೈನಲ್ಲೇ ಸುಧಾ ಬೆಂಕಿಯನ್ನು ಆರಿಸಿದ್ದಾಳೆ. ಭೂಮಿಕಾಳಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾಳೆ. ಇದರಿಂದ ಸುಧಾ ಕೈಗೆ ಸುಟ್ಟ ಗಾಯಗಳಾಗಿವೆ. ಅಂಗೈ ಸಂಪೂರ್ಣವಾಗಿ ಬೊಬ್ಬೆ ಎದ್ದಿದೆ. ಇದನ್ನು ನೋಡಿ ಭೂಮಿಕಾಳ ಮನಸ್ಸಿಗೆ ಘಾಸಿಯಾಗಿದೆ. ತನ್ನಿಂದ ಸುಧಾಳಿಗೆ ಹೀಗೆಲ್ಲಾ ಆಯ್ತು ಎಂದು ಬೇಸರ ಮಾಡಿಕೊಂಡಿದ್ದಾಳೆ. ಇತ್ತ ಈ ವಿಚಾರವನ್ನು ತಿಳಿದ ಶಕುಂತಲಾ, ಇನ್ನು ಗೌತಮ್ ಸುಧಾಳಿಗೆ ಆಸ್ತಿಯಲ್ಲಿ ಪಾಲು ಕೊಡಬಹುದು ಎಂದು ಗೆಸ್ ಮಾಡಿದ್ದು, ಇದನ್ನೆಲ್ಲಾ ತಪ್ಪಿಸುವುದು ಹೇಗೆ ಎಂದು ಯೋಚಿಸಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X