Amruthadhaare ; ಮಲ್ಲಿಗೆ ಪ್ರಜ್ಞೆ ಬಾರದಂತೆ ಮಾಡಲು ಮುಂದಾದ ಜೈದೇವ್ ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಹೊಸ ತಿರುವು ಪಡೆದುಕೊಂಡಿದೆ. ಮಲ್ಲಿ ಬದುಕು ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದು, ಮಗು ಗರ್ಭದಲ್ಲೇ ಉಸಿರು ನಿಲ್ಲಿಸಿದೆ. ಮಲ್ಲಿಗೆ ಇದ್ದಕ್ಕಿದ್ದ ಹಾಗೆಯೇ ಅಪಘಾತವಾಗಿರುವುದು ಮನೆಯಲ್ಲೂ ಎಲ್ಲರಿಗೂ ಗಾಬರಿಯನ್ನುಂಟು ಮಾಡಿದೆ. ಶಕುಂತಲಾ ಕೂಡ ಆತಂಕಗೊಂಡಿದ್ದಾಳೆ. ಆದರೆ, ಈ ಅಪಘಾತಕ್ಕೆಲ್ಲಾ ನೇರವಾಗಿ ಜೈದೇವ್ ಕಾರಣನಾಗಿರಬಹುದು. ಬೇಕಂತಲೇ ಪ್ಲಾನ್ ಮಾಡಿ ಆಕ್ಸಿಡೆಂಟ್ ಮಾಡಿಸಿರಬಹುದು ಎಂದು ಊಹಿಸಿದ್ದಾನೆ.

ಮಗುವಿಗಾಗಿ ಮಿಡಿದ ಶಕುಂತಲಾ

ಶಕುಂತಲಾಳಿಗೆ ಮಲ್ಲಿ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲದಿದ್ದರೂ ಕೂಡ, ಜೈದೇವ್ ಮಗು ಎಂಬ ಮಮಕಾರ ಅವಳಲ್ಲಿದೆ. ತನ್ನ ಮಗನ ಮಗು, ಈ ವಂಶದ ಕುಡಿ ಎಂದು ಶಕುಂತಲಾಳಿಗೆ ಆಸೆ ಇತ್ತು. ಮಲ್ಲಿ ಕಂಡರೆ ಆಗದಿದ್ದರೂ ಮಗುವಿನ ಬಗ್ಗೆ ಯಾವುದೇ ಕೆಟ್ಟ ಆಲೋಚನೆ ಇಲ್ಲದ ಶಕುಂತಲಾ ಈಗ ಬೇಸರ ಮಾಡಿಕೊಂಡಿದ್ದಾಳೆ. ಜೈದೇವ್ ಗೆ ಸಮಾಧಾನ ಮಾಡಿದ್ದಾಳೆ. ಜೈದೇವ್ ಕೂಡ ತನ್ನ ಹೆಂಡತಿಗೆ ಇಂತಹ ಸ್ಥಿತಿ ಬಂದಿದ್ದಕ್ಕೆ ಹಾಗೂ ಮಗುವನ್ನು ಕಳೆದುಕೊಂಡಿದ್ದಕ್ಕೆ ನೊಂದುಕೊಂಡವನಂತೆ ತಾಯಿಯ ಎದುರು ನಾಟಕ ಮಾಡಿದ್ದಾನೆ. ಆದರೆ, ಲಕ್ಷ್ಮೀಕಾಂತನಿಗೆ ಮಾತ್ರವೇ ಜೈದೇವ್ ಪ್ಲಾನ್ ಗೊತ್ತಿದೆ. ಮಲ್ಲಿಯನ್ನು ಮುಗಿಸಲು ಏನೋ, ಮಾಸ್ಟರ್ ಪ್ಲಾನ್ ಮಾಡಿದ್ದಾನೆ ಎಂಬುದು ಗೊತ್ತಿದ್ದರೂ ಯಾರ ಬಳಿಯೂ ಏನೂ ಹೇಳದೆಯೇ ಸುಮ್ಮನಿದ್ದಾನೆ.

Amruthadhaare Serial 25 September episode written update

ಹಣದಿಂದ ಕೆಲಸ ಸಾಧಿಸಿಕೊಂಡ ಜೈದೇವ್

ಇನ್ನು ಮಲ್ಲಿಗೆ ಎಚ್ಚರವಾದರೆ, ತಾನು ಮತ್ತು ದಿಯಾ ಒಟ್ಟಿಗೆ ಇರುವುದನ್ನು ಗೌತಮ್ ಮತ್ತು ಭೂಮಿಕಾಳಿಗೆ ಹೇಳಿ ಬಿಡುತ್ತಾಳೆ ಎಂದು ಹೊಸ ಪ್ಲಾನ್ ಮಾಡಿದ್ದಾನೆ. ನರ್ಸ್ ಗೆ ಹಣ ಕೊಟ್ಟು ಮಲ್ಲಿಗೆ ಎಚ್ಚರವಾಗದಂತೆ ನೋಡಿಕೊಂಡಿದ್ದಾನೆ. ಪ್ರಜ್ಞೆಯೇ ಬಾರದೇ ಹಾಗೆಯೇ ಮಲ್ಲಿಯನ್ನು ಇಹಲೋಕಕ್ಕೆ ಕಳಿಸಬೇಕು ಎಂದು ಆಲೋಚಿಸಿದ್ದಾನೆ. ಹೀಗಾಗಿ ಜೈದೇವ್ ನರ್ಸ್ ಗೆ ಕೇಳಿದಷ್ಟು ಹಣ, ಸ್ವಂತ ಮನೆಯನ್ನು ಕೊಡಿಸಲು ಮುಂದಾಗಿದ್ದಾನೆ. ಆದರೆ, ಅಣ್ಣನ ಎದುರು ಮಾತ್ರ ನಾಟಕ ಮಾಡುತ್ತಿದ್ದಾನೆ. ಆದರೆ ವಿಧಿಯ ಆಟ ಏನಿದೆಯೋ ಕಾದು ನೋಡಬೇಕಿದೆ.

ದಿಯಾಳನ್ನು ಬಿಡದ ಜೈದೇವ್

ಜೈದೇವ್ ಅಣ್ಣ ಅಷ್ಟು ಬುದ್ಧಿ ಹೇಳಿದರೂ ನಾಟಕ ಮಾಡಿಕೊಂಡು ಬದುಕುತ್ತಿದ್ದಾನೆ. ಮಲ್ಲಿಯನ್ನು ನಂಬಿಸಿ ಈಗಲೂ ದಿಯಾಳೊಂದಿಗೆ ಸಂಪರ್ಕವನ್ನು ಹೊಂದಿದ್ದಾನೆ. ಈಗಲೂ ದಿಯಾಳನ್ನು ಭೇಟಿ ಮಾಡಿ ಸ್ವಲ್ಪ ದಿನ ನಾನು ನಿನ್ನ ಜೊತೆಗೆ ಇದ್ದು ಬಿಡುತ್ತೇನೆ. ಮಲ್ಲಿಗೆ ಡಿವೋರ್ಸ್ ಕೊಡುತ್ತೇನೆ ಎಂದು ಭರವಸೆ ತುಂಬಿದ್ದಾನೆ. ದಿಯಾ ಕೂಡ ಜೈದೇವ್ ಹೇಳಿದ್ದನ್ನು ನಂಬಿಕೊಂಡು ತಾನು ಮಾಡುತ್ತಿರುವ ತಪ್ಪನ್ನು ಮರೆತಿದ್ದಾಳೆ. ಇತ್ತ ಅಒರ್ಣಾ ಮತ್ತು ಆನಂದ್ ಕೂಡ ಮಲ್ಲಿ ಸ್ಥಿತಿಯನ್ನು ನೆನೆದು ಬೇಸರ ಮಾಡಿಕೊಂಡಿದ್ದಾರೆ. ಅಪರ್ಣಾಳಿಗೆ ಜೈದೇವ್ ನಿಂದಲೇ ಈ ಅಪಘಾತವಾಗಿರಬೇಕು ಎಂದು ಊಹಿಸಿದ್ದಾಳೆ. ಆದರೆ, ಅಪರ್ಣಾ ಮಾತನ್ನು ಆನಂದ್ ನಂಬಲು ತಯಾರಿಲ್ಲ.

Amruthadhaare Serial 25 September episode written update

ಮಲ್ಲಿಗಾಗಿ ಕಣ್ಣೀರು ಹಾಕುತ್ತಿರುವ ಭೂಮಿಕಾ

ಭೂಮಿಕಾ ಮಲ್ಲಿ ಪಾಪದ ಹುಡುಗಿ. ಈಗ ಎಚ್ಚರವಾಗಿ ತನ್ನ ಮಗು ಎಲ್ಲಿ ಎಂದು ಕೇಳಿದರೆ ಏನು ಹೇಳುವುದು ಎಂದು ಒದ್ದಾಡುತ್ತಿದ್ದಾಳೆ. ಇಡೀ ದಿನ ಗೌತಮ್ ಮತ್ತು ಭೂಮಿಕಾ ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಮಲ್ಲಿಗೆ ಎಚ್ಚರವಾಗುವವರೆಗೂ ಎಲ್ಲೂ ಹೋಗಬಾರದು ಎಂದುಕೊಂಡಿದ್ದಾರೆ. ಆದರೆ, ಜೈದೇವ್ ಇಬ್ಬರನ್ನೂ ಮನೆಗೆ ಕಳುಹಿಸಲು ನೆಪ ಹುಡುಕುತ್ತಿದ್ದಾನೆ. ಇನ್ನು ಪಾರ್ಥ ಆಸ್ಪತ್ರೆಗೆ ಹೋಗೋಣ ಎಂದು ಬಯಸಿದರೆ, ಅಪೇಕ್ಷಾ ಬೇಡ ಎಂದು ಹೇಳಿದ್ದಾಳೆ. ಆಸ್ಪತ್ರೆಗೆ ಹೋಗುವ ಬದಲು ಹೊರಗಡೆ ಸುತ್ತಾಡಲು ಹೋಗೋಣ ಎಂದು ಕೇಳಿದ್ದಾಳೆ. ಪಾರ್ಥ ಕೂಡ ಬೇರೆ ದಾರಿ ಇಲ್ಲದೇ ಅಪೇಕ್ಷಾ ಮಾತುಗಳಿಗೆ ತಾಳ ಹಾಕುತ್ತಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X