Amruthadhaare: ಒಲವಿನ ದೋಣಿ ಏರಿದ ಭೂಮಿಕಾ ಹಾಗೂ ಗೌತಮ್

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಕಿರಣ್, ಜೈದೇವನ ಮಾತು ಕೇಳಿ ಮತ್ತೆ ಹಳೆಯ ಪ್ರೇಯಸಿ ಭೂಮಿಕಾಳನ್ನು ತನ್ನ ವಶ ಮಾಡಿಕೊಳ್ಳಲು ಮುಂದಾಗಿರುತ್ತಾನೆ.

ತನ್ನ ಹಾಗೂ ಭೂಮಿಕಾ ವಿಚಾರವಾಗಿ ಆಕೆಯ ಹುಟ್ಟುಹಬ್ಬದ ದಿನವೇ ಎಲ್ಲರ ಎದುರು ತಾನು ಹಾಗೂ ಭೂಮಿಕಾ ಪ್ರೀತಿಸುತ್ತಿದ್ದು, ಇಬ್ಬರೂ ಮುಂದೆ ಒಟ್ಟಿಗೆ ಬಾಳುವ ನಿರ್ಧಾರ ಮಾಡಿರುವುದಾಗಿ ಹೇಳುತ್ತಾನೆ.

Amruthadhaare Serial 25th December episode written update

ಕಿರಣ್ ಮಾತನ್ನು ಪೂರ್ತಿಯಾಗಿ ಕೇಳಿದ ಗೌತಮ್, ಆತನ ಗ್ರಹಚಾರ ಬಿಡಿಸುತ್ತಾನೆ. ಕಿರಣ್‌ನ ಅಷ್ಟೂ ಪ್ಲಾನ್ ಅನ್ನು ಎಲ್ಲರ ಮುಂದೆ ತೆರೆದಿಡುತ್ತಾನೆ.

ಕಿರಣ್‌ಗೆ ಗ್ರಹಚಾರ ಬಿಡಿಸಿದ ಶೃತಿ

ಕಿರಣ್ ಹೆಂಡತಿ ಶೃತಿಯನ್ನು ಗೌತಮ್ ಕರೆಸಿ ಅವಳ ಬಾಯಲ್ಲೂ ಸತ್ಯ ಹೇಳಿಸುತ್ತಾನೆ. ಶೃತಿ, ಕಿರಣ್ ಮನಸ್ಸಲ್ಲಿ ಬರೀ ಕೆಟ್ಟದ್ದೇ ತುಂಬಿದೆ. ದುಡ್ಡಿನ ಮೇಲೆ ಅಪಾರವಾದ ದುರಾಸೆ ಹೊಂದಿರುವ ಕಿರಣ್ ಸದಾ ಭೂಮಿಕಾ ಬಾಳನ್ನು ಹೇಗೆ ಹಾಳು ಮಾಡುವುದು ಎಂಬ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಈಗ ಭೂಮಿಕಾ ಬಾಳನ್ನು ಹೊಡೆದು ಹಾಕಿ, ಗೌತಮ್ ಅನ್ನು ಬ್ಲ್ಯಾಕ್ ಮೇಲ್ ಮಾಡಿ ಅದರಿಂದ ಬರುವ ಹಣದಲ್ಲಿ ಜಮ್ ಎಂದು ಜೀವನ ಮಾಡಬೇಕು ಎಂದು ಕಿರಣ್ ಪ್ಲಾನ್ ಮಾಡಿಕೊಂಡಿದ್ದಾನೆ. ಕುಡಿದ ಮತ್ತಿನಲ್ಲಿ ಇದೆಲ್ಲಾ ವಿಚಾರ ಕಿರಣ್ ಹೇಳಿದ್ದ. ಹಾಗಾಗಿ ನಾನು ಗೌತಮ್ ಅವರನ್ನು ಭೇಟಿ ಮಾಡಿದೆ. ಎಲ್ಲಾ ವಿಚಾರವನ್ನು ಹೇಳಿದೆ ಎನ್ನುತ್ತಾಳೆ.

ಕೇಕ್ ಕಟ್ ಮಾಡಿದ ಭೂಮಿಕಾ

ಎಲ್ಲಾ ವಿಚಾರವೂ ತಿಳಿದ ಮೇಲೆ ಗೌತಮ್, ಕಿರಣ್‌ಗೆ ಹೊಡೆದು, ಭೂಮಿಕಾ ಕಾಲಿಗೆ ಬೀಳಲು ಹೇಳುತ್ತಾನೆ. ಕಿರಣ್, ಭೂಮಿಕಾ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹೋಗುತ್ತಾನೆ. ಬಳಿಕ ಗೌತಮ್, ಭೂಮಿಕಾಳನ್ನು ನೀನು ಎಂತವಳು ಎಂಬುದು ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇಷ್ಟೆಲ್ಲಾ ಆಗುವವರೆಗೂ ಸುಮ್ಮನೆ ಇದ್ದದ್ದು, ಎಲ್ಲರಿಗೂ ನಿನ್ನ ಬಗ್ಗೆ ಇರುವ ಅನುಮಾನಗಳು ಸರಿಯಾಗಲಿ ಎಂದು ಸುಮ್ಮನಿದ್ದೆ ಎನ್ನುತ್ತಾನೆ. ಬಳಿಕ ಭೂಮಿಕಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡುತ್ತಾಳೆ. ಸದಾಶಿವ ಮತ್ತು ಜೀವನ್ ಇಬ್ಬರೂ ಗೌತಮ್ ಬಳಿ, ಕಿರಣ್ ವಿಚಾರವನ್ನು ಮುಚ್ಚಿಟ್ಟಿದ್ದಕ್ಕೆ ಕ್ಷಮೆ ಕೇಳುತ್ತಾರೆ. ಗೌತಮ್ ಇದರಲ್ಲಿ ನಿಮ್ಮ ಯಾರ ತಪ್ಪು ಇಲ್ಲ. ಇದನ್ನೆಲ್ಲಾ ಮರೆತು ಬಿಡಿ ಎಂದು ಹೇಳಿ ಸಮಾಧಾನ ಮಾಡುತ್ತಾನೆ.

Amruthadhaare Serial 25th December episode written update

ಜೈದೇವ್‌ಗೆ ತಲೆನೋವು ತಂದ ಕಿರಣ್

ಭೂಮಿಕಾಳನ್ನು ಮನೆಯಿಂದ ಹೊರಗೆ ಹಾಕಲು ಪ್ಲಾನ್‌ ಮಾಡಿ ಜೈದೇವ, ಕಿರಣ್ ಅನ್ನು ಕರೆದುಕೊಂಡು ಬಂದಿರುತ್ತಾನೆ. ಆದರೆ ಕಿರಣ್ ಈಗ ಗೌತಮ್ ಬಳಿ ಸಿಕ್ಕಿ ಬಿದ್ದಿದ್ದು, ಮುಂದೆ ಇದರಿಂದ ತನಗೆ ಯಾವೆಲ್ಲಾ ರೀತಿಯಲ್ಲಿ ಸಮಸ್ಯೆ ಆಗಬಹುದು ಎಂದು ಯೋಚಿಸುತ್ತಿರುತ್ತಾನೆ. ಕಿರಣ್ ಅನ್ನು ಮತ್ತೆ ಭೇಟಿ ಮಾಡಿ, ಎಲ್ಲಿ ತಪ್ಪಾಯ್ತು ಎಂದು ವಿಚಾರಿಸುತ್ತಾನೆ. ಆಗ ಕಿರಣ್ ಜೊತೆಗೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ನೀನೇ ಇದನ್ನೆಲ್ಲಾ ಮಾಡಿಸಿದ್ದು ಎಂಬ ಸತ್ಯವನ್ನು ಗೌತಮ್ ಬಳಿ ಹೇಳುತ್ತೀನಿ ಎಂದು ಕಿರಣ್ ಹೇಳುತ್ತಾನೆ. ಈ ಮಾತನ್ನು ಕೇಳಿದ ಜೈದೇವ ಹಾಗೇನಾದರೂ ಮಾಡಿದರೆ, ನಿನಗೆ ತೊಂದರೆಯಾಗುವುದು ಗ್ಯಾರೆಂಟಿ ಎಂದು ವಾರ್ನಿಂಗ್ ಕೊಡುತ್ತಾನೆ.

ಒಲವಿನ ದೋಣಿಯಲ್ಲಿ ಭೂಮಿಕಾ-ಗೌತಮ್

ಭೂಮಿಕಾ ರೂಮಿಗೆ ಹೋಗಿ ಗೌತಮ್‌ಗೆ ಕ್ಷಮೆ ಕೇಳುತ್ತಾಳೆ. ನಾನು ನಿಮ್ಮ ಬಳಿ ಸುಳ್ಳು ಹೇಳಿಬಿಟ್ಟೆ. ನಾನು ಹಾಗೆ ಮಾಡಬಾರದಿತ್ತು ಕ್ಷಮಿಸಿ ಎಂದು ಹೇಳುತ್ತಾಳೆ. ಗೌತಮ್ ಅದೆಲ್ಲಾ ತಪ್ಪೇನು ಇಲ್ಲ. ಅರಾಮಾಗಿರಿ ಎಂದು ಸಮಾಧಾನ ಮಾಡುತ್ತಾನೆ. ಇನ್ನು ತನಗೆ ಹೆಂಡತಿ, ಮತ್ತು ಪ್ರೀತಿಯ ಬಗ್ಗೆ ಮನದ ಮಾತುಗಳನ್ನು ಆಡುತ್ತಾನೆ. ಇದನ್ನೆಲ್ಲಾ ಕೇಳಿದ ಭೂಮಿಕಾಳಿಗೆ ಗೌತಮ್ ಮೇಲೆ ಒಲವಾಗುತ್ತದೆ. ಈಗ ಇಬ್ಬರೂ ಒಲವಿನ ದೋಣಿಯಲ್ಲಿರುವುದು ಪಕ್ಕಾ ಆಗಿದೆ.

More from Filmibeat

English summary
Amruthadhaare Serial today episode. gautham gives a big surprise for bhoomika's birthday party. Both are in happy mood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X