Amruthadhaare: ಮಹಿಮಾ ಹಾಗೂ ಜೀವನ್ ಜೋಡಿ ಪ್ಯಾರಾ ನಾರ್ಮಲ್ ಎಂದಿದ್ದೇಕೆ..?
ಭೂಮಿಕಾ ಹಾಗೂ ಗೌತಮ್ ಇಬ್ಬರೇ ಏಕಾಂತದಲ್ಲಿ ಮಾತನಾಡಲಿ ಎಂದು ಅಮ್ಮಮ್ಮ ಪ್ಲ್ಯಾನ್ ಮಾಡಿ ಜೀವನ್‌ನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಗೌತಮ್ ಸೆಕೆ ಎಂದು ಎಸಿ ಆನ್ ಮಾಡಿಕೊಳ್ಳುತ್ತಾನೆ. ಆದರೆ, ಭೂಮಿಕಾಳಿಗೆ ಚಳಿ ಆಗುತ್ತಿರುತ್ತದೆ. ಆಗ ಸೀನು ಬರುತ್ತದೆ. ಡ್ಯಾಶ್ ಬೋರ್ಡ್‌ನಲ್ಲಿ ಟಿಶ್ಯೂ ಪೇಪರ್ ತೆಗೆದುಕೊಳ್ಳಲು ಹೋದಾಗ ಅಲ್ಲಿ ಮಾತ್ರೆಗಳ ಡಬ್ಬಿ ನೋಡಿ ಶಾಕ್ ಆಗುತ್ತಾಳೆ.
ಇಷ್ಟೊಂದು ಮಾತ್ರೆಗಳನ್ನು ಸೇವಿಸುತ್ತೀರಾ? ಎಂದು ಕೇಳುತ್ತಾಳೆ. ಅದಕ್ಕೆ ಉತ್ತರ ಕೊಡಲಾಗದೇ ಗೌತಮ್ ಮಾತು ಮರೆಸಲು ಆಚೆ ನಿಲ್ಲೋಣ ಎಂದು ಕಾರಿನಿಂದ ಆಚೆ ಬರುತ್ತಾನೆ. ಇಷ್ಟೊತ್ತಾದರೂ ಜೀವನ್ ಯಾಕೆ ಬರಲಿಲ್ಲ ಎಂದು ಗೌತಮ್ ಕೇಳಿದಾಗ ಭೂಮಿಕಾ ಜೀವನ್ ಬೇಕಂತಲೇ ಪ್ಲ್ಯಾನ್ ಮಾಡಿ ನಮ್ಮಿಬ್ಬರನ್ನೇ ಬಿಟ್ಟು ಹೋಗಿರಬೇಕು. ನಾವಿಬ್ಬರು ಮಾತನಾಡಿಕೊಳ್ಳಲಿ ಎಂಬುದು ಅವರ ಇಚ್ಛೆ ಇರಬೇಕು ಎಂದು ಹೇಳುತ್ತಾಳೆ. ಹೀಗೆ ಮಾತನಾಡುತ್ತಾ ಇಬ್ಬರೂ ನಿಂತಿರುತ್ತಾರೆ.

ಭೂಮಿಕಾ ನಮ್ಮಿಬ್ಬರ ಸಂಬಂಧ ಕೂಡ ನಾರ್ಮಲ್ ಅಲ್ಲ ಎಂದು ಹೇಳುತ್ತಾಳೆ. ಆಗ ಗೌತಮ್ ಮತ್ತೇನು ಅಬ್‌ನಾರ್ಮಲ್ಲಾ ಎಂದು ಕೇಳುತ್ತಾನೆ. ಇವರಿಬ್ಬರು ಮಾತನಾಡುವುದನ್ನು ಭೂಮಿಕಾ ಅವರ ಅಮ್ಮಮ್ಮ ಬಾಲ್ಕನಿಯಲ್ಲಿ ನಿಂತು ನೋಡುತ್ತಿರುತ್ತಾರೆ. ಗೌತಮ್ ಮುಖ ಕಾಣಿಸದೇ, ಇದ್ದದ್ದಕ್ಕೆ ಒದ್ದಾಡುತ್ತಿರುತ್ತಾರೆ. ಅಷ್ಟರಲ್ಲಿ ಜೀವನ್ ನ್ಯೂಸ್ ಪೇಪರ್ ತಂದು ಮಹಿಮಾಳಿಗೆ ಕೊಡಲು ಹೇಳುತ್ತಾನೆ. ಇದನ್ನು ನೋಡಿ ಗೌತಮ್ ನಮ್ಮಿಬ್ಬರದ್ದು ಅಬ್‌ನಾರ್ಮಲ್ ಆದರೆ, ಇವರಿಬ್ಬರದ್ದು ಪ್ಯಾರಾ ನಾರ್ಮಲ್ ಎಂದು ತಮಾಷೆ ಮಾಡಿ ಹೊರಡುತ್ತಾನೆ.
ಅಮ್ಮಮ್ಮನಿಗೆ ಖುಷಿಯೋ ಖುಷಿ
ಭೂಮಿಕಾ ಇದೆಲ್ಲಾ ನಿಮ್‌ಗಳದ್ದೇ ಪ್ಲ್ಯಾನ್ ಎಂದು ಗೊತ್ತು. ಮುಂದಿನ ಸಲ ಪ್ಲ್ಯಾನ್ ಮಾಡಿದರೆ, ಯಾರಿಗೂ ಗೊತ್ತಾಗದಂತೆ ಮಾಡಿ ಎಂದು ಹೇಳುತ್ತಾಳೆ. ಇನ್ನು ಮನೆಗೆ ಹೋಗುತ್ತಿದ್ದಂತೆ ಮಂದಾಕಿನಿ ಬಹಳ ಎಕ್ಸೈಟ್‌ಮೆಂಟ್‌ನಲ್ಲಿ ಗೌತಮ್ ಏನು ಹೇಳಿದ ಎಂದು ಕೇಳುತ್ತಾಳೆ. ಭೂಮಿಕಾ ಏನೂ ಇಲ್ಲ ಎಂದು ಹೇಳುತ್ತಾಳೆ. ಅಮ್ಮಮ್ಮನನ್ನು ನೋಡಿದ ಭೂಮಿಕಾ ಖುಷಿ ಆಗುತ್ತಾಳೆ. ಅಮ್ಮಮ್ಮನನ್ನು ಸಣ್ಣ ಆಗಿದ್ದೀರಾ ಎಂದು ಕಾಂಪ್ಲಿಮೆಂಟ್ ಕೊಡುತ್ತಾಳೆ. ಬಳಿಕ ಗೌತಮ್ ಬಗ್ಗೆ ಭೂಮಿಕಾ ಬಳಿ ಬಹಳ ಕುತೂಹಲದಿಂದ ವಿಚಾರಿಸುತ್ತಿರುತ್ತಾಳೆ. ಆದರೆ, ಭೂಮಿಕಾ ಏನನ್ನೂ ಹೇಳುವುದಿಲ್ಲ.

ದರ್ಬಾರ್ ಮಾಡುತ್ತಿರುವ ಅಜ್ಜಿ
ಇತ್ತ ಗೌತಮ್ ಅವರ ಅಜ್ಜಿ ಶಕುಂತಲಾಳ ಕೈಯಲ್ಲಿ ಕಾಲು ಒತ್ತಿಸಿಕೊಳ್ಳುತ್ತಾ, ದರ್ಬಾರ್ ಮಾಡುತ್ತಿರುತ್ತಾಳೆ. ಇದು ಶಕುಂತಲಾಳಿಗೆ ಬಹಳ ಹಿಂಸೆ ಆಗುತ್ತದೆ. ಇನ್ನು ಅಜ್ಜಿ ಗೌತಮ್ ಮದುವೆ ಆಗುವವರೆಗೂ ತಾವು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗುವುದಿಲ್ಲ ಎಂದು ಹೇಳುತ್ತಾರೆ. ಇದು ಶಕುಂತಲಾಳಿಗೆ ದೊಡ್ಡ ಸಂಕಷ್ಟಕ್ಕೆ ದೂಡಿದಂತಾಗಿದೆ. ಆದರೆ, ಬೇರೆ ದಾರಿಯೇ ಇಲ್ಲ.
ಅಜ್ಜಿಯನ್ನು ಭೇಟಿ ಮಾಡಿದ ಗೌತಮ್
ಇನ್ನು ಗೌತಮ್ ಮನೆಗೆ ಬಂದ ಕೂಡಲೇ ಅಜ್ಜಿ ಅನ್ನು ನೋಡಲು ಮಹಿಮಾಳನ್ನು ಕೂಡ ಕರೆದುಕೊಂಡು ಹೋಗುತ್ತಾನೆ. ಅಜ್ಜಿ ಮೊಮ್ಮೊಗ ಗೌತಮ್‌ನನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಬಳಿಕ ಮದುವೆಯ ಹುಡುಗಿ ಮಹಾರಾಣಿಯಂತೆ ಸುಂದರವಾಗಿದ್ದಾಳಾ ಎಂದು ಗೌತಮ್ ಬಳಿ ಕೇಳುತ್ತಾಳೆ. ಗೌತಮ್ ಹಾಗೇನೂ ಇಲ್ಲ. ಸಾಮಾನ್ಯ ಹುಡುಗಿ ಓಕೆ ತೊಂದರೆ ಏನೂ ಇಲ್ಲ ಎಂದು ಹೇಳುತ್ತಾನೆ. ಆದರೆ, ಅಜ್ಜಿ ಇಲ್ಲ ನನ್ನ ಮೊಮ್ಮಗ ಮದುವೆ ಆಗುವ ಹುಡುಗಿ ಸುಂದರಿಯೇ ಆಗಿರಬೇಕು ಎಂದಿದ್ದಕ್ಕೆ ಇದೆಲ್ಲಾ ಬೆಳಗ್ಗೆ ಮಾತನಾಡೋಣ ಎಂದು ಹೇಳುತ್ತಾನೆ. ಅಜ್ಜಿಯ ನಿರೀಕ್ಷೆಯನ್ನು ಭೂಮಿಕಾ ಹುಸಿ ಮಾಡುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











