Amruthadhaare ; ಮಲ್ಲಿಗೆ ತಾಳಿ ಕಟ್ಟಿದ ಜೈದೇವ ; ಭೂಮಿಕಾ ಬಾಳಿಗೆ ಬಿರುಗಾಳಿಯಾಗುತ್ತಾಳಾ ಶಕುಂತಲಾ..?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ ಹಾಗೂ ಅಪೇಕ್ಷ ಮದುವೆ ಅರ್ಧಕ್ಕೆ ನಿಂತು ಹೋಗಿದೆ. ಮಲ್ಲಿಯನ್ನು ಗೌತಮ್ ವಾಪಸ್ ಕರೆಸಿಕೊಂಡಿದ್ದಾನೆ. ಗೌತಮ್ ಮದುವೆ ಮನೆಯಲ್ಲೇ ಎಲ್ಲರ ಮುಂದೆಯೂ ಮಲ್ಲಿಯನ್ನು ಪ್ರಶ್ನೆ ಮಾಡಿದ್ದಾನೆ. ಮಲ್ಲಿ ಜೈದೇವ ಮತ್ತು ತನ್ನ ನಡುವೆ ನಡೆದ ಎಲ್ಲಾ ಘಟನೆಯನ್ನು ವಿವರವಾಗಿ ತಿಳಿಸಿದ್ದಾಳೆ. ತಾನು ಜೈದೇವನನ್ನು ಮನಸಾರೆ ಒಪ್ಪಿದ್ದು. ಅವನ ಮಗು ತನ್ನ ಹೊಟ್ಟೆಯಲ್ಲಿದೆ ಎಂದು ಮಲ್ಲಿ ಎಲ್ಲರ ಎದುರು ಹೇಳುತ್ತಾಳೆ. ಈ ಮಾತನ್ನು ಕೇಳಿದಾಗ ಗೌತಮ್ ಗೆ ಬೇಸರವಾಗುತ್ತದೆ.
ನ್ಯಾಯದ ಪರ ನಿಂತ ಗೌತಮ್
ಆದರೆ, ಜೈದೇವ ಇಲ್ಲಿ ಮಲ್ಲಿ ನಾಟಕ ಮಾಡುತ್ತಿದ್ದಾನೆ ಎಂದು ಸುಳ್ಳು ಹೇಳುತ್ತಾನೆ. ಜೈದೇವ ಮಾತಿನಿಂದ ಕೋಪಗೊಂಡ ಗೌತಮ್ ಕಪಾಳಕ್ಕೆ ಹೊಡೆಯುತ್ತಾನೆ. ಸರಿ ಹೋಗುತ್ತೀಯಾ ಎಂದು ನಂಬಿದ್ದೆ. ಆದರೆ, ನಾಟಕ ಮಾಡಿಕೊಂಡು ಹೀಗೆ ಎಲ್ಲರಿಗೂ ಮೋಸ ಮಾಡುತ್ತಿದ್ದೀಯಾ. ಎಲ್ಲಾ ಸಿಸಿಟಿವಿ ಫುಟೇಜ್ ಅನ್ನು ನಾನು ನೋಡಿದ್ದೇನೆ. ನೀನು ಮಲ್ಲಿ ಮನೆಗೆ ಹೋಗಿದ್ದು ಗೊತ್ತಿದೆ ಎಂದು ಹೇಳುತ್ತಾನೆ. ಆಗ ಶಕುಂತಲಾ ಈ ಮದುವೆಗೆ ಒಪ್ಪುವುದಿಲ್ಲ. ಇವರೆಲ್ಲಾ ಸೇರಿ ನಾಟಕ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಕಿರುಚಾಡುತ್ತಾಳೆ. ಆದರೆ, ಶಕುಂತಲಾ ಮಾತಿಗೆ ಯಾರೂ ಸೊಪ್ಪು ಹಾಕುವುದಿಲ್ಲ.

ಮಲ್ಲಿಗೆ ತಾಳಿ ಕಟ್ಟಿದ ಜೈದೇವ
ಕೊನೆಗೆ ಶಕುಂತಲಾ ಮನೆ ಕೆಲಸದವನ ಮೊಮ್ಮಗಳು ನನ್ನ ಮನೆ ಸೊಸೆ ಆಗಲು ನಾನು ಬಿಡಲ್ಲ ಎಂದಾಗ ಗೌತಮ್ ಶಕುಂತಲಾಳ ಜೀವನದಲ್ಲಿ ನಡೆದ ಹಳೆಯ ಘಟನೆಗಳನ್ನು ನೆನಪಿಸುತ್ತಾನೆ. ಮಲ್ಲಿಯನ್ನು ನೋಡಿದಾಗ ನನ್ನ ತಂದೆ ಸತ್ತಾಗ ನಾಲ್ಕು ಮಕ್ಕಳ ಜೊತೆಗೆ ಅಸಹಾಯಕರಾಗಿ ನಿಂತಿದ್ದವರೇ ನನ್ನ ಕಣ್ಣಿಗೆ ಕಂಡಿದ್ದು ಎಂದು ಹೇಳುತ್ತಾನೆ. ಶಕುಂತಲಾಳಿಗೆ ಈ ಮಾತುಗಳು ಮುಜುಗರವನ್ನು ಉಂಟು ಮಾಡುತ್ತದೆ. ಗೌಥಮ್ ತಾನು ನ್ಯಾಯದ ಪರವಾಗಿ ಇರುವುದಾಗಿ ಹೇಳಿ ಮಂದಾಕಿನಿ ಹಾಗೂ ಸದಾಶಿವನ ಕ್ಷಮೆ ಕೇಳುತ್ತಾನೆ. ಜೈದೇವ ಇಷ್ಟವಿಲ್ಲದೇ ಹೋದರೂ ಕೂಡ ಬಲವಂತವಾಗಿ, ಬೇರೆ ದಾರಿ ಇಲ್ಲದೆಯೇ ಮಲ್ಲಿಗೆ ತಾಳಿಯನ್ನು ಕಟ್ಟುತ್ತಾನೆ.

ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರೇಮಿಗಳು
ತನ್ನ ಮದುವೆ ನಿಂತು ಹೋಗಿದ್ದಕ್ಕೆ ಅಪೇಕ್ಷಾ ಮನದೊಳಗೆ ಖುಷಿ ಪಡುತ್ತಾಳೆ. ಪಾರ್ಥ ತನಗೆ ಸಿಗುತ್ತಾನೆ ಎಂದು ಮೊಗದಲ್ಲಿ ಮಂದಹಾಸ ತಂದುಕೊಂಡಿದ್ದಾಳೆ. ಜೈದೇವನಿಂದ ಪಾರಾಗಿರುವ ಅಪೇಕ್ಷಾ ಪಾರ್ಥನ ಕೈ ಹಿಡಿಯುವುದು ಪಕ್ಕಾ ಆಗಿದೆ. ಪಾರ್ಥನಿಗೂ ಈ ಮದುವೆ ನಿಂತಿದ್ದು ಖುಷಿ ತಂದಿದೆ. ಇಬ್ಬರೂ ಕೂಡ ಮದುವೆಯ ಮನೆಯಲ್ಲೇ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇವರಿಬ್ಬರ ಮದುವೆಗೆ ಯಾವೆಲ್ಲ ಅಡ್ಡಿ ಆತಂಕಗಳು ಬರುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.

ಹೆಂಡತಿ ಮಾತು ಕೇಳಿದ್ದಕ್ಕೆ ಬೇಸರ
ಮದುವೆಯೆಲ್ಲಾ ಮುಗಿದ ಮೇಲೂ ಶಕುಂತಲಾ ಕೋಪದಲ್ಲೇ ಇದ್ದಾಳೆ. ನನ್ನ ಗಂಡ ಸತ್ತಾಗಲೂ ನನಗೆ ಇಷ್ಟು ಬೇಸರ ಆಗಲಿಲ್ಲ. ಗೌತಮ್ ಮಲತಾಯಿ ಎಂದು ಎಲ್ಲರ ಮುಂದೆ ಹೇಳಿದ್ದು ಬೇಸರ ಆಯ್ತು. ನಾನು ಬೇಡ ಎಂದರೂ ನನ್ನ ಮಗ ಜಯದೇವ್ ಗೆ ಮಲ್ಲಿ ಜೊತೆಗೆ ಮದುವೆ ಮಾಡಿಸಿದ್ದಾನೆ. ಇದಕ್ಕೆಲ್ಲ ಕಾರಣ ಭೂಮಿಕಾ. ಯಾವುದೇ ಕಾರಣಕ್ಕೂ ಭೂಮಿಕಾ, ಗೌತಮ್ ಅನ್ನು ಒಟ್ಟಿಗೆ ಇರಲು ಬಿಡೋದಿಲ್ಲ ಎಂದು ಮನದೊಳಗೆ ಲೆಕ್ಕಾಚಾರ ಹಾಕಿದ್ದಾಳೆ. ಭೂಮಿಕಾ ಮದುವೆ ಮುಗಿದ ಮೇಲೆ ಶಕುಂತಲಾ ಬಳಿ ಬಂದು ನಿಮ್ಮ ಮಾತನ್ನು ಮೀರಿ ಮದುವೆ ಮಾಡಿಸಿದ್ದಕ್ಕೆ ಕ್ಷಮಿಸಿ ಎಂದು ಕಾಲಿಗೆ ಬೀಳುತ್ತಾಳೆ. ಆಗಲೂ ಶಕುಂತಲಾ ಯಾವುದೇ ರೆಸ್ಪಾನ್ಸ್ ಮಾಡುವುದಿಲ್ಲ.


Click it and Unblock the Notifications











