Amruthadhaare ; ಸರದಲ್ಲಿ ಮೈಕ್ ಇದ್ದ ವಿಚಾರವನ್ನು ಗೌತಮ್ ಗೆ ಹೇಳುತ್ತಾಳಾ ಭೂಮಿಕಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಸುಧಾಳನ್ನು ಮನೆಗೆ ಡ್ರಾಪ್ ಮಾಡಿದ ಕ್ಯಾಬ್ ಡ್ರೈವರ್ ತನ್ನ ಅನುಮಾನವನ್ನು ಭೂಮಿಕಾಳಿಗೆ ಹೇಳಿದ್ದಾನೆ. ನಿಮ್ಮ ಮನೆಯಲ್ಲೇ ಶತ್ರುಗಳಿರಬಹುದು. ಹಾಗಾಗಿ ಆದಷ್ಟು ಎಚ್ಚರವಾಗಿರಿ ಎಂದು ಆತ ಭೂಮಿಕಾಳಿಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ನಮ್ಮ ಮೇಲೆ ಮನೆಯವರೇ ಯಾರೋ ಕೊಲ್ಲಲು ಪ್ರಯತ್ನ ಪಡುತ್ತಿದ್ದಾರಾ..? ಯಾಕಾಗಿರಬಹುದು ಎಂಬ ಪ್ರಶ್ನೆ ಭೂಮಿಕಾಳಲ್ಲಿ ಎದ್ದಿದೆ. ಈಗ ಭೂಮಿಕಾ ಈ ಘಟನೆಯ ಸುತ್ತಾ ಲೆಕ್ಕಾಚಾರ ಹಾಕಿ ಮನೆಯ ಕಳ್ಳರನ್ನು ಕಂಡು ಹಿಡಿಯಬೇಕಿದೆ.

ಶಕುಂತಲಾ ಪ್ಲಾನ್ ಗೆ ಅಡ್ಡ ಬಂದ ಮಲ್ಲಿ

ಭೂಮಿಕಾ ಹೊಟ್ಟೆಯಲ್ಲಿರುವ ಮಗುವನ್ನು ಶಕುಂತಲಾ ಕೊಲ್ಲಬೇಕು ಎಂದು ವಿಷವನ್ನು ತಂದು ಭೂಮಿಕಾ ತಿನ್ನುವ ಆಹಾರದಲ್ಲಿ ಬೆರೆಸಿದ್ದಾಳೆ. ಭೂಮಿಕಾಳಿಗೆ ಸಮಯಕ್ಕೆ ಸರಿಯಾಗಿ ತಿನ್ನಬೇಕು ಎಂದು ಬುದ್ಧಿವಾದವನ್ನು ಹೇಳುತ್ತಾ, ವಿಷ ಬೆರೆಸಿದ ಆಹಾರವನ್ನು ಕೊಟ್ಟಿದ್ದಾಳೆ. ಭೂಮಿಕಾ ಕುಡಿಯಲು ಮುಂದಾಗಿದ್ದು, ಇದೇ ಸಮಯಕ್ಕೆ ಸರಿಯಾಗಿ ಮಲ್ಲಿ ಭೂಮಿಕಾ ತವರು ಮನೆಯಿಂದ ಬಂದ ತಿನಿಸುಗಳನ್ನು ತಂದುಕೊಟ್ಟಿದ್ದಾಳೆ. ರವೆ ಉಂಡೆ, ಚಕ್ಕುಲಿ, ಕೋಡುಬಳೆಯನ್ನು ನೋಡಿದ ಭೂಮಿಕಾ, ಶಕುಂತಲಾ ಕೊಟ್ಟಿದ್ದನ್ನು ಬಿಟ್ಟು ಮನೆಯಿಂದ ಬಂದ ತಿನಿಸುಗಳನ್ನು ತಿನ್ನುತ್ತಾಳೆ. ಅಲ್ಲಿಗೆ ಮಲ್ಲಿ ಅಡ್ಡ ಬಂದು ಶಕುಂತಲಾಳ ಪ್ಲಾನ್ ಗೆ ಕಲ್ಲು ಹಾಕಿದ್ದಾಳೆ.

amruthadhaare-serial-26-march-episode-written-update

ಆತಂಕದಲ್ಲೇ ಒದ್ದಾಡಿದ ಭೂಮಿಕಾ

ಕ್ಯಾಬ್ ಡ್ರೈವರ್ ಮನೆಯಿಂದ ಹೊರಡುವಾಗ ಹೇಳಿದ ಮಾತುಗಳು ಭೂಮಿಕಾಳನ್ನು ಕಾಡಲು ಶುರು ಮಾಡಿದೆ. ಈ ಮನೆಗೆ ಸೊಸೆಯಾಗಿ ಬಂದ ದಿನದಿಂದಲೂ ಹಲವು ರೀತಿಯಲ್ಲಿ ಜೀವಕ್ಕೆ ಅಪಾಯವಾಗಿದೆ. ಅಂತಹ ಸಂದರ್ಭದಲ್ಲಿ ಭೂಮಿಕಾ ತನ್ನ ಚಾಕಚಕ್ಯತೆಯನ್ನು ಬಳಸಿಕೊಂಡು ಜೀವ ಉಳಿಸಿಕೊಂಡಿದ್ದಾಳೆ. ಈ ಮನೆಯಲ್ಲಿ ಜೈದೇವ್ ನಲ್ಲಿರುವ ಕೆಟ್ಟ ಗುಣಗಳನ್ನು ಭೂಮಿಕಾ ಅರಿತುಕೊಂಡಿದ್ದಾಳೆ. ಆದರೆ, ಜೈದೇವ್ ಗಿಂತಲೂ ದೊಡ್ಡ ವಿಷಜಂತು ಮನೆಯಲ್ಲಿರುವುದು ಇನ್ನೂ ಭೂಮಿಕಾ ಗಮನಕ್ಕೆ ಬಂದಿಲ್ಲ. ಕ್ಯಾಬ್ ಡ್ರೈವರ್ ಹೇಲಿ ಮಾತುಗಳೀಂದ ಭೂಮಿಕಾ ಆತಂಕಕ್ಕೆ ಒಳಗಾಗಿದೆ. ಯಾರಿಗೆ ಈ ಮನೆಯಲ್ಲಿ ನನ್ನ ಮೇಲೆ ಯಾರಿಗೆ ಧ್ವೇಷವಿದೆ.? ತನ್ನ ಹಿಂದೆ ಏನೆಲ್ಲಾ ನಡೆಯುತ್ತಿರಬಹುದು ಎಂಸು ಆತಂಕಗೊಂಡಿದ್ದಾಳೆ.

ಮನೆ ಕಳ್ಳರನ್ನು ಪತ್ತೆ ಮಾಡುತ್ತಾನಾ ಗೌತಮ್..?

ಭೂಮಿಕಾಳಿಗೆ ಸಿಕ್ಕಾಪಟ್ಟೆ ಭಯವಾಗಿದ್ದು, ಆತಂಕದಲ್ಲೇ ಗೌತಮ್ ಬಳಿ ಸತ್ಯ ಹೇಳಲು ಮುಂದಾಗಿದ್ದಾಳೆ. ತನಗೆ ನೀಡಿದ್ದ ಸರದಲ್ಲಿ ಮೈಕ್ ಇತ್ತು ಎಂಬ ಸತ್ಯವನ್ನು ಹೇಳಿದ್ದಾಳೆ. ಈ ಮಾತನ್ನು ಕೇಳಿ ಶಾಕ್ ಆಗಿರುವ ಗೌತಮ್, ಆ ಸರಕ್ಕೆ ಮೈಕ್ ಇಟ್ಟವರು ಯಾರು ಎಂಬುದನ್ನು ಪತ್ತೆ ಮಾಡಲು ಮುಂದಾಗಿದ್ದಾನೆ. ಹಾಗೊಂದು ವೇಳೆ, ಲಕ್ಷ್ಮೀಕಾಂತ ಮತ್ತು ಶಕುಂತಲಾ ಸಿಕ್ಕಿ ಬಿದ್ದರೆ ಇಷ್ಟು ವರ್ಷಗಳ ಕಾಲ ಬಚ್ಚಿಟ್ಟಿರುವ ರಹಸ್ಯಗಳೆಲ್ಲವೂ ಬಯಲಾಗುವುದು ಪಕ್ಕಾ. ಮನೆಯಲ್ಲೇ ಇರುವ ಕಳ್ಳರನ್ನು ಈಗ ಗೌತಮ್ ಹೇಗೆ ಪತ್ತೆ ಮಾಡುತ್ತಾನೆ ಎಂಬುದೇ ಕುತೂಹಲದ ಸಂಗತಿಯಾಗಿದೆ.

Take a Poll

ಸದಾಶಿವನ ಜೀವಕ್ಕೆ ಅಪಾಯವಿದೆಯಾ..?

ಒಂದು ಶಾಲೆಯಲ್ಲಿ ಶಿಕ್ಷಕನಾಗಿದ್ದ ಸದಾಶಿವ ಜೀವನದಲ್ಲಿ ಬಹಯಳ ಮೌಲ್ಯಗಳನ್ನು ಇಟ್ಟುಕೊಂಡಿರುವ ವ್ಯಕ್ತಿ. ಆದರೆ, ಈಗ ಸದಾಶಿವನ ಮಗ ಜೀವನ್ ಅಡ್ಡ ದಾರಿಯನ್ನು ಹಿಡಿದಿದ್ದಾನೆ. ಹೀಗಾಗಿ ಸದಾಶಿವ ರಾಜೇಂದ್ರ ಭೂಪತಿಗೆ ಕರೆ ಮಾಡಿ, ನಿಮ್ಮಿಂದ ನಮ್ಮ ಮಗ ಹಾದಿ ತಪ್ಪುತ್ತಿದ್ದಾನೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ. ನನ್ನ ಮಗ ಕೇವಲ ಬಿಸಿನೆಸ್ ಪಾಟ್ನರ್ ಆಗಿದ್ದರೆ ಸಾಕು. ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾನೆ. ಇದು ಸರಿಯಲ್ಲ ಎಂದು ಬುದ್ಧಿ ಹೇಳಲು ಯತ್ನಿಸಿದ್ದಾರೆ. ಆದರೆ, ರಾಜೇಂದ್ರ ಭೂಪತಿ ತನ್ನ ಸೇಡನ್ನು ಸದಾಶಿವನ ಜೀವಕ್ಕೆ ಆಪತ್ತು ತರುವ ಮೂಲಕ ತೀರಿಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X