Amruthadhaare: ನಟಿಸುವ ಮೂಲಕ ಗೆಳೆಯನನ್ನು ಯಾಮಾರಿಸಿದ ಗೌತಮ್- ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಅಬಾರ್ಷನ್ ಮಾಡಿಕೊಂಡ ನಂತರ ಪಶ್ಚಾತಾಪ ಪಟ್ಟರೂ ಕೂಡ ಮನೆಯವರಿಗೆ ಸತ್ಯ ತಿಳಿಯದಂತೆ ನೋಡಿಕೊಂಡಿದ್ದಾಳೆ.
ಆಕ್ಸಿಡೆಂಟ್ ಆಗಿದ್ದಕ್ಕೆ ಅಬಾರ್ಷನ್ ಆಯ್ತು ಎಂದು ಎಲ್ಲರನ್ನೂ ನಂಬಿಸಿದ್ದಾಳೆ. ಆದರೆ, ಶಕುಂತಲಾ ಮತ್ತು ಅಶ್ವಿನಿ ಈ ಮಾತನ್ನು ಸುತಾರಾಂ ಒಪ್ಪಿಕೊಳ್ಳುತ್ತಿಲ್ಲ.

ಅಶ್ವಿನಿಯೇ ಮಹಿಮಾ ತಲೆಗೆ ಮಗುವಾದರೆ, ಬ್ಯೂಟಿ ಹಾಳಾಗುತ್ತೆ. ಮೊದಲಿನಂತೆ ಇರಲು ಸಾಧ್ಯವಿಲ್ಲ ಎಂದೆಲ್ಲಾ ಮಹಿಮಾ ತಲೆಗೆ ತುಂಬಿ ಹೋಗಿರುತ್ತಾಳೆ.
ಮಗಳ ಸ್ಥಿತಿ ಕಂಡು ಬೇಸರಿಸಿಕೊಂಡ ಶಕುಂತಲಾ
ಅಶ್ವಿನಿ ಮಾತಿನಿಂದ ಕಂಗೆಟ್ಟು ಮಹಿಮಾ ಮಗು ಬೇಡವೇ ಬೇಡ ಎಂದು ಹೇಳಿ ಅಬಾರ್ಷನ್ ಮಾಡಿಸಿಕೊಂಡಿದ್ದಾಳೆ. ಅಶ್ವಿನಿಗೆ ಹೋಲಿಸಿದರೆ, ಶಕುಂತಲಾಳಿಗೆ ಮಹಿಮಾ ಮೇಲೆ ಹೆಚ್ಚೇನು ಪ್ರೀತಿ ಇಲ್ಲ. ಹಾಗಿದ್ದರೂ ಕೂಡ ಮಹಿಮಾ ಬದುಕು ಸುಖಾಗಿರಲಿ ಎಂದೇ ಬಯಸುತ್ತಿರುತ್ತಾಳೆ. ಆದರೆ, ಮಹಿಮಾ ಪರಿಸ್ಥಿತಿ ಹೀಗಾಗುವುದಕ್ಕೆ ಬೇರೆಯೇ ಕಾರಣವಿರಬೇಕು ಎಂದು ಯೋಚಿಸಿದ ಶಕುಂತಲಾ, ಮಹಿಮಾಳನ್ನು ಪ್ರಶ್ನೆ ಮಾಡುತ್ತಾಳೆ. ಆದರೆ, ಉತ್ತರ ಸಿಗುವುದಿಲ್ಲ. ಮಹಿಮಾ ಸ್ಥಿತಿಯನ್ನು ನೆನೆದು ಅಳುತ್ತಲೇ ಇರುತ್ತಾಳೆ. ಬಹಳ ಕಷ್ಟಪಟ್ಟು ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿರುವ ಶಕುಂತಲಾಳಿಗೆ ತನ್ನ ಮಕ್ಕಳು ಸುಖವಾಗಿಬೇಕು ಎಂಬುದೊಂದೆ ಆಸೆ. ಲಕ್ಷ್ಮೀಕಾಂತ, ಭೂಮಿಕಾ ಎಲ್ಲರೂ ಕೂಡ ಶಕುಂತಲಾಳನ್ನು ಸಮಾಧಾನ ಮಾಡುತ್ತಾರೆ.
ಪತಿಗಾಗಿ ಮಿಡಿದ ಭೂಮಿಕಾ ದಿವಾನ್
ಇತ್ತ ಮಹಿಮಾಗಿಂತಲೂ ಗೌತಮ್ ಸ್ಥಿತಿ ಬಹಳ ದಃಖದಲ್ಲಿರುತ್ತದೆ. ತಂಗಿ ಮೇಲೆ ಹೆಚ್ಚಿನ ಪ್ರೀತಿ ಹೊಂದಿರುವ ಗೌತಮ್‌ಗೆ ಅವಳ ಮಗುವಿನ ಬಗ್ಗೆ ನೂರೆಂಟು ಕನಸನ್ನು ಹೊಂದಿದ್ದ. ಮಗುವಿಗಾಗಿ ಸಾಕಷ್ಟು ಪ್ಲ್ಯಾನ್ ಕೂಡ ಮಾಡಿಕೊಂಡಿದ್ದ. ಆದರೆ, ಮಹಿಮಾ ಮಾಡಿಕೊಂಡ ತಪ್ಪಿನಿಂದ ಗೌತಮ್ ಬಾಳಲ್ಲಿ ದೊಡ್ಡ ಆಘಾತ ಉಂಟಾಗಿತ್ತು. ಇದರಿಂದ ಹೊರ ಬರಲಾಗದೇ, ಗೌತಮ್ ಬಹಳ ಕಷ್ಟ ಪಡುತ್ತಿದ್ದ. ನೊಂದುಕೊಂಡು ಕೊರಗುತ್ತಿರುತ್ತಾನೆ. ಭೂಮಿಕಾ ಗೌತಮ್‌ಗೆ ಸಮಾಧಾನ ಮಾಡುತ್ತಾಳೆ. ನೀವು ಎಲ್ಲಾ ನೋವನ್ನು ಮರೆತು ಮುಂದೆ ಸಾಗಿದರೆ ಮಾತ್ರವೇ ಮನೆಯವರೂ ಅರಾಮಾಗಿ ಇರುತ್ತಾರೆ ಎಂದು ಬುದ್ಧಿ ಹೇಳುತ್ತಾಳೆ.

ಭೂಮಿ ಎನ್ನುವಷ್ಟು ಹತ್ತಿರವಾದ ಪತ್ನಿ
ಭೂಮಿಕಾ ಕೊಂಚ ಕೊಂಚವೇ ಗೌತಮ್ ಮನಕ್ಕೆ ಇಳಿಯುತ್ತಿದ್ದು, ಈಗ ಭೂಮಿಕಾ ಹೇಳುವ ಮಾತನ್ನು ಕೂಡ ಅರ್ಥ ಮಾಡಿಕೊಳ್ಳುತ್ತಾನೆ. ಇತ್ತೀಚೆಗೆ ಗೌತಮ್‌ಗೆ ಆನಂದ್‌ಗಿಂತಲೂ ಭೂಮಿಕಾಳೇ ಹೆಚ್ಚಾಗಿದ್ದಾಳೆ. ಪ್ರತಿಯೊಂದು ವಿಚಾರವನ್ನು ಗೌತಮ್, ಭೂಮಿಕಾ ಬಳಿ ಹಂಚಿಕೊಳ್ಳುತ್ತಾನೆ. ಆನಂದ್ ಮತ್ತು ಅಪರ್ಣಾ, ಗೌತಮ್ ಅನ್ನು ಸಮಾಧಾನ ಮಾಡಲೆಂದು ಮನೆಗೆ ಬಂದರೆ ಅವರಿಬ್ಬರಿಗೂ ಶಾಕ್ ಆಗುತ್ತದೆ. ಗೌತಮ್‌ಗೆ ಬೇಸರವಾದರೆ, ಮನಸ್ಸು ತಿಳಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈಗ ನೋಡಿದರೆ, ಗೌತಮ್ ಫುಲ್ ಹ್ಯಾಪಿ ಮೂಡ್‌ನಲ್ಲಿ ಇರುತ್ತಾನೆ. ಆನಂದ್ ಬಳಿ ಭೂಮಿಕಾ ಬಗ್ಗೆ ಮಾತನಾಡುವಾಗ ಭೂಮಿ ಎಂದು ಕರೆಯುತ್ತಾನೆ.
ಸುಳ್ಳು ಹೇಳಿ ಯಾಮಾರಿಸಿದ ದಂಪತಿ
ಇದನ್ನೆಲ್ಲಾ ಗಮನಿಸಿದ ಆನಂದ್‌ಗೆ ತನ್ನ ಗೆಳೆಯ ಭೂಮಿಕಾಳನ್ನು ಹೆಂಡತಿ ಎಂದು ಒಪ್ಪಿಕೊಂಡು ತನ್ನ ವೈಯಕ್ತಿಕ ಜೀವನದ ಬಗ್ಗೆಯೂ ಕಾಳಜಿ ಮಾಡುತ್ತಿರುವುದು ಖುಷಿ ಕೊಡುತ್ತದೆ. ಇನ್ನು ಭೂಮಿಕಾ ಕೂಡ ಅಪರ್ಣಾ ಬಳಿ ಮಾತನಾಡುವಾಗ ಒಂದಷ್ಟು ಸುಳ್ಳುಗಳನ್ನು ಹೇಳುತ್ತಾಳೆ. ಇಬ್ಬರೂ ತುಂಬಾ ಖುಷಿಯಾಗಿದ್ದೀವಿ ಎನ್ನುತ್ತಾಳೆ. ಆದರೆ, ಅಪರ್ಣಾಳಿಗೆ ಅನುಮಾನವಿರುತ್ತದೆ. ಹೀಗಾಗಿ ಗೌತಮ್ ಮತ್ತು ಭೂಮಿಕಾ ಇಬ್ಬರೂ ರೂಮ್‌ನಲ್ಲಿ ಇರುವಾಗ ಕದ್ದು ನೋಡುತ್ತಿರುತ್ತಾಳೆ. ಆಗ ಭೂಮಿ ಮತ್ತು ಗೌತಮ್ ಇಬ್ಬರೂ ಸೇರಿ ಅಪರ್ಣಾ ಮತ್ತು ಆನಂದ್ ಅನ್ನು ಯಾಮಾರಿಸುತ್ತಾರೆ.


Click it and Unblock the Notifications











