Amruthadhaare: ನಾದಿನಿಗೆ ಬುದ್ಧಿ ಹೇಳಿದ ಅತ್ತಿಗೆ: ಆನಂದ್ ಮಾತಿಗೆ ಬೆದರಿದ ಗೌತಮ್
ಅಮೃತಧಾರೆ ಧಾರಾವಾಹಿಯಲ್ಲಿ ಹೊಂದಾಣಿಕೆ ಇಲ್ಲದಿದ್ದರೂ ಹೊಂದಿಕೊಂಡು ಹೇಗೆ ಬದುಕಬೇಕು ಎಂದು ಗೌತಮ್ ಮತ್ತು ಭೂಮಿಕಾ ಜೋಡಿ ತೋರಿಸಿಕೊಡುತ್ತಿದ್ದಾರೆ.
ಇದು ಇಬ್ಬರಿಗೂ ಬೇಡವಾದ ಮದುವೆಯಾಗಿತ್ತು. ತಮ್ಮ ತಮ್ಮ ಕುಟುಂಬದ ಹಿತದೃಷ್ಟಿಯಿಂದ ಮದುವೆಗೆ ಒಪ್ಪಿಕೊಂಡರು. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರೂ ಕಿತ್ತಾಡುತ್ತಿರುತ್ತಾರೆ.

ಹಾಗಿದ್ದರೂ ಕೂಡ ಗೌತಮ್ ಮತ್ತೆ ಭೂಮಿಕಾ ಮನೆಯವರು ಎಂದು ಬಂದಾಗ ತಮ್ಮೊಳಗಿನ ಹುಳುಕನ್ನು ಕೊಂಚವೂ ತೋರಿಸಿಕೊಳ್ಳುವುದಿಲ್ಲ. ಆದರೆ, ಮಹಿಮಾ ಮತ್ತು ಜೀವ ಪ್ರೀತಿಸಿ ಮದುವೆಯಾದರೂ ಇಷ್ಟು ಹೊಂದಾಣಿಕೆ ಇಲ್ಲ.
ಅತ್ತೆ ಮಾತು ಮೀರಿದ ಭೂಮಿಕಾ
ಇಭೂಮಿಕಾ ಗೌರಿ ಹಬ್ಬದ ದಿನ ತವರು ಮನೆಗೆ ಹೋಗಬೇಕೆಂದು ಶಕುಂತಲಾ ಬಳಿ ಕೇಳುತ್ತಾಳೆ. ಆದರೆ ಶಕುಂತಲಾ, ಭೂಮಿಕಾ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಬೇಡ ಎಂದು ಹೇಳಿರುತ್ತಾಳೆ. ಆದರೆ, ಗಣೇಶ ಹಬ್ಬದ ದಿನ ಭೂಮಿಕಾ ತಾಯಿ ಮಂದಾಕಿನಿ ಫೋನ್ ಮಾಡಿ ಮನೆಗೆ ಅಳಿಯನ ಜೊತೆಗೆ ಬರುವಂತೆ ಹೇಳುತ್ತಾಳೆ. ಭೂಮಿಕಾ ಅಜ್ಜಿಯ ಬಳಿ ಹೋಗಿ ಮನೆಗೆ ಹೋಗಬಹುದಾ ಎಂದು ಕೇಳಿದ್ದಕ್ಕೆ ಅಜ್ಜಿ ನಿನ್ನ ಗಂಡ ಗೌತಮ್ ಬಳಿ ಕೇಳಿಕೊಂಡು ಹೋಗು ಎಂದಾಗ ಭೂಮಿಕಾಳಿಗೆ ಗೌತಮ್ ಮನೆಗೆ ಹೋಗಲು ಪರ್ಮಿಷನ್ ಕೊಟ್ಟಿರುತ್ತಾನೆ. ಖುಷಿಯಲ್ಲಿ ಭೂಮಿಕಾ ತನ್ನ ಅತ್ತೆಗೆ ಒಂದು ಮಾತನ್ನೂ ಹೇಳದೇ ಹೊರಟಿರುತ್ತಾಳೆ. ಇದೆಲ್ಲವೂ ಶಕುಂತಲಾಳಿಗೆ ಶಾಕ್ ಆಗುವಂತೆ ಮಾಡುತ್ತದೆ. ಲಕ್ಷ್ಮೀಕಾಂತ ಬೇರೆ ನಿನ್ನ ಸೊಸೆ ಕೈ ಮೀರಿ ಹೋಗುತ್ತಿದ್ದಾಳೆ ಎಂದು ವಾರ್ನಿಂಗ್ ಕೊಡುತ್ತಾನೆ.

ಮಹಿಮಾ ಜೊತೆ ಭೂಮಿಕಾ ಮಾತು
ಮಂದಾಕಿನಿ, ಭೂಮಿಕಾಳಿಗೆ ಮಹಿಮಾ ಜಗಳ ಆಡಿದ ವಿಚಾರವನ್ನೆಲ್ಲಾ ತಿಳಿಸಿರುತ್ತಾಳೆ. ಭೂಮಿಕಾ ಮನೆಗೆ ಬಂದ ಕೂಡಲೇ ಎಲ್ಲರ ಜೊತೆಗೆ ಖುಷಿಯಾಗಿ ಮಾತನಾಡುತ್ತಾಳೆ. ಮಹಿಮಾಳನ್ನು ನೋಡಲು ರೂಮಿಗೆ ಹೋಗುತ್ತಾಳೆ. ಮಹಿಮಾ, ಜೀವನ್ ಮೇಲೆ ಕೋಪ ಮಾಡಿಕೊಂಡು ಕುಳಿತಿರುತ್ತಾಳೆ. ಭೂಮಿಕಾ ಹೇಗಿದ್ದೀಯಾ, ಈ ಮನೆ ಅಡ್ಜಸ್ಟ್ ಆಯ್ತಾ ಎಂದು ಪ್ರಶ್ನೆ ಮಾಡುತ್ತಾಳೆ.
ಮಹಿಮಾಳಿಗೆ ಜೀವನದ ಪಾಠ
ಭೂಮಿಕಾ ಮಾತಿಗೆ ಮಹಿಮಾ ಕೋಪ ಮಾಡಿಕೊಂಡು ಇದೇನು ಅರಮನೆನಾ ಹಾಗೆ ಕೇಳುತ್ತೀರಾ. ಒಂದಿದ್ದರೆ ಒಂದಿಲ್ಲ, ಮಿಡಲ್ ಕ್ಲಾಸ್ ಮನೆ ಎಂದು ಕೂಗಾಡುತ್ತಾಳೆ. ಅಲ್ಲದೇ, ನೀವು ನೋಡಿ ಬಯಸದೇ ದೊಡ್ಡ ಮನೆಗೆ ಹೋಗಿದ್ದೀರಾ. ಏನು ಕಡಿಮೆ ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡುತ್ತಾಳೆ. ಆಗ ಮಹಿಮಾಳಿಗೆ ಭೂಮಿಕಾ ಬುದ್ಧಿ ಹೇಳುತ್ತಾಳೆ. ನಾನು ನಿನ್ನಂತೆ ಆ ಮನೆಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದೇನೆ. ನಾವು ಪ್ರೀತಿಸುವವರಿಗಾಗಿ ಹೇಗಿರಬೇಕು ಎಂದು ಬುದ್ಧಿ ಹೇಳುತ್ತಾಳೆ.
ಗೌತಮ್ ಬಾಂಬ್ ಹಾಕಿದ ಆನಂದ್
ಗೌತಮ್ ಗಣೇಶ ಹಬ್ಬದ ದಿನವೂ ಆಫಿಸಿಗೆ ಹೋಗಿರುತ್ತಾನೆ. ಇಂದು ರಾತ್ರಿಯೇ ಯುಎಸ್‌ಗೆ ಬರುವುದಾಗಿ ಮಾತನಾಡುತ್ತಿರುತ್ತಾನೆ. ಈ ಮಾತನ್ನು ಕೇಳಿಸಿಕೊಂಡ ಆನಂದ್ ಮನೆಯವರ ಪರ್ಮಿಷನ್ ತೆಗೆದುಕೊಳ್ಳದೇ ನೀನು ಹೇಗೆ ಹೇಳುತ್ತೀಯಾ. ಹೊಸದಾಗಿ ಮದುವೆ ಆಗಿದ್ದೀಯಾ ಇದೆಲ್ಲಾ ಸಾಧ್ಯವಿಲ್ಲ ಎಂದು ಬಾಂಬ್ ಹಾಕುತ್ತಾನೆ. ಮದುವೆಯಾದ ಮೇಲೆ ಮೊದಲು ನಿನ್ನ ಹೆಂಡತಿಯ ಒಪ್ಪಿಗೆ ಪಡೆದು ಏನೇ ತೀರ್ಮಾನಗಳನ್ನು ಮಾಡಬೇಕು ಎಂದು ಹೇಳುತ್ತಾನೆ.
ಗಣೇಶನ ಹಬ್ಬಕ್ಕೆ ಮನೆಗೆ ಬಂದ ಅಳಿಯ
ಆನಂದ್ ಮಾತಿನಿಂದ ಭಯಗೊಂಡ ಗೌತಮ್ ಸೀದಾ ಅತ್ತೆಯ ಮನೆಗೆ ಹೋಗುತ್ತಾನೆ. ಭೂಮಿಕಾ ಬಳಿ ತಾನು ಯುಎಸ್‌ಗೆ ಹೋಗುವ ವಿಚಾರವನ್ನು ತಿಳಿಸಲು ಬಂದಿರುತ್ತಾನೆ. ಆದರೆ, ಭೂಮಿಕಾ ಮನೆಯವರು ಗಣೇಶ ಹಬ್ಬಕ್ಕೆ ಬಂದಿದ್ದಾರೆ ಅಂತ ತಿಳಿದು ಸಂಭ್ರಮಿಸುತ್ತಾರೆ. ಇನ್ನು ಗೌತಮ್ ಅಜ್ಜಿ ಅಳಿಯ ಭೂಮಿಕಾ ಜೊತೆಗೆ ಅತ್ತೆ ಮನೆಗೆ ಹೋಗಿರುವ ವಿಚಾರ ಕೇಳಿ ಖುಷಿ ಪಡುತ್ತಾರೆ. ಆದರೆ, ಶಕುಂತಲಾ ಹಾಗೂ ಲಕ್ಷ್ಮೀಕಾಂತನಿಗೆ ಇದು ದೊಡ್ಡ ಸಮಸ್ಯೆಯ ಮುನ್ಸೂಚನೆಯಾಗಿದೆ.


Click it and Unblock the Notifications











