Amruthadhaare ; ರೋಲ್ಡ್ ಗೋಲ್ಡ್ ಉಡುಗೊರೆ ಕೊಟ್ಟು ಎಡವಟ್ಟು ಮಾಡಿಕೊಂಡ್ಲಾ ಮಂದಾಕಿನಿ..?
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಫುಡ್ ಡೆಲಿವರಿ ಮಾಡಿ ಮನೆಗೆ ಬರುವುದರೊಳಗೆ ಸುಸ್ತಾಗಿ ಬಿಡುತ್ತಾನೆ. ಅವನನ್ನು ನೋಡಿ ಮನೆಯವರು ಪ್ರಶ್ನಿಸುತ್ತಾರೆ. ಆಫೀಸ್ ಕೆಲಸಕ್ಕೆ ಹೋಗಿದ್ಯಾ... ? ಯಾಕಿಷ್ಟು ಸುಸ್ತಾಗಿರುತ್ತೀಯಾ.? ಎಂದೆಲ್ಲಾ ಪ್ರಶ್ನೆ ಮಾಡುತಾರೆ. ನಿತ್ಯ ಮನೆಯವರ ಬಳಿ ಸುಳ್ಳು ಹೇಳಿ ಮ್ಯಾನೇಜ್ ಮಾಡುವುದೇ ಜೀವನ್ ಕೆಲಸವಾಗಿದೆ. ಮನೆಯಲ್ಲಿ ಸಮಸ್ಯೆ ಇರುವುದರಿಂದ ಜೀವನ್ ಮೇಲೂ ಒತ್ತಡ ಇದೆ. ಆದರೆ, ಮಹಿಮಾ ಬಳಿ ಮನೆಯವರು ಹಣ ತೆಗೆದುಕೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಸೊಸೆ ಹಣವನ್ನು ಮುಟ್ಟಬಾರದು ಎಂದು ಅವರ ಉದ್ದೇಶವಾಗಿದೆ.
ಅಪ್ಪಿ-ಪಾರ್ಥನಿಗೆ ಬಲೆ ಹೆಣೆದ ಶಕುಂತಲಾ
ಇತ್ತ ಶಕುಂತಲಾ ಅಪೇಕ್ಷಾಳಿಗೆ ಪ್ರತೈಕವಾಗಿ ಆಗಿ ಕಾಲ್ ಮಾಡುತ್ತಾಳೆ. ಗೌತಮ್ ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸುವಂತೆ ಸ್ವಾಗತಿಸುತ್ತಾಳೆ. ಅಪ್ಪಿ ಮೇಲೆ ವಿಶೇಷವಾದ ಪ್ರೀತಿ ಇರುವಂತೆ ನಟಿಸುತ್ತಾಳೆ. ಆದರೆ, ಅಪೇಕ್ಷಾ ಮತ್ತು ಪಾರ್ಥನನ್ನು ಗೌತಮ್ ಎದುರು ಕೆಟ್ಟವರನ್ನಾಗಿ ಮಾಡುವುದೇ ಅವರ ಉದ್ದೇಶ. ಗೌತಮ್ ಬರ್ತ ಡೇ ಪಾರ್ಟಿಯಲ್ಲಿ ಇಬ್ಬರೂ ಸಿಕ್ಕಿ ಬೀಳೂವಂತೆ ಮಾಡಬೇಕು ಎಂದು ಲಕ್ಷ್ಮೀಕಾಂತ ಆಲೋಚಿಸಿದ್ದಾನೆ. ಆದರೆ, ಅಪ್ಪಿ ಮಾತ್ರ ಖುಷಿ ಖುಷಿಯಾಗಿ ಬರ್ತ ಡೇ ಪಾರ್ಟಿಗೆ ಹೋಗಲು ಸಜ್ಜಾಗಿದ್ದಾಳೆ. ಪಾರ್ಥನ ಜೊತೆಗೆ ಸಮಯ ಕಳೆಯಬಹುದು ಎಂಬುದು ಅವಳ ಉದ್ದೇಶವಾಗಿದೆ.

ಗೌತಮ್ ಬರ್ತಡೇ ಪಾರ್ಟಿ
ಭೂಮಿಕಾ ಗೌತಮ್ ಗಾಗಿ ಸರ್ಪ್ರೈಸ್ ಪಾರ್ಟಿ ಅನ್ನು ಅರೇಂಜ್ ಮಾಡಿದ್ದಾಳೆ. ಅಲ್ಲದೇ, ಗೌತಮ್ ಗೋಸ್ಕರ ತಾನೇ ಕೇಕ್ ತಯಾರಿಸಿ ತಂದು ರೂಮ್ ನಲ್ಲಿ ಕಟ್ ಮಾಡಿಸಿದ್ದಾಳೆ. ಅಷ್ಟೂ ಕೇಕ್ ಗೌತಮ್ ಒಬ್ಬನೇ ತಿಂದಿದ್ದು, ತನ್ನ ಹುಟ್ಟುಹಬ್ಬದ ದಿನ ಫುಲ್ ಹ್ಯಾಪಿ ಆಗಿದ್ದಾನೆ. ಮಲ್ಲಿ ಹೆಸರು ಬೇಳೆ ಪಾಯಸ ಮಾಡಿ ಕೊಟ್ಟಿದ್ದಾಳೆ. ಗೌತಮ್ ಮತ್ತು ಭೂಮಿಕಾ ಇಬ್ಬರೂ ಪಾಯಸವನ್ನು ಹಂಚಿಕೊಂಡು ಸವಿದಿದ್ದು ಖುಷಿ ಪಡುತ್ತಾರೆ. ಅಪರ್ಣಾ ಗೌತಮ್ ನನ್ನು ಆದಷ್ಟು ಬೇಗ ಮಗು ಕೊಡು ಎಂದು ಕೇಳಿ ಮುಜುಗರವುಂಟು ಮಾಡಿದ್ದಾಳೆ. ಗೌತಮ್ ಬರ್ತಡೇ ಪಾರ್ಟಿಗೆ ಶಕುಂತಲಾ ಸ್ನೇಹಿತರು ಆಗಮಿಸಿದ್ದಾರೆ.
ಸರ್ಪ್ರೈಸ್ ಉಡುಗೊರೆ ಕೊಟ್ಟ ಭೂಮಿಕಾ
ಗೌತಮ್ ಹುಟ್ಟುಹಬ್ಬಕ್ಕೆ ಬರಲು ಮಂದಾಕಿನಿ ಉಡುಗೊರೆ ಕೊಡುವ ಬಗ್ಗೆ ಪ್ಲಾನ್ ಮಾಡಿದ್ದಾಳೆ. ಚೀಟಿ ದುಡ್ಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಅನಿವಾರ್ಯವಾಗಿ ಹಣ ಕೈ ಸೇರಿಲ್ಲ. ಆದರೂ ಗೌತಮ್ ಹುಟ್ಟು ಹಬ್ಬಕ್ಕೆ ಭಾರಿ ಗಿಫ್ಟ್ ನೀಡಿದ್ದಾಳೆ. ಎಲ್ಲರ ಎದುರು ಚಿನ್ನದ ಸರವನ್ನು ಕೊರಳಿಗೆ ಹಾಕಿದ್ದಾಳೆ. ಬಂದವರೆಲ್ಲಾ ಉಡುಗೊರೆ ಕೊಟ್ಟು ವಿಶ್ ಮಾಡಿದ್ದಾರೆ. ಗೌತಮ್ ಗೆ ಇನ್ನಷ್ಟು ರುಚಿ ರುಚಿಯಾದ ಊಟ ಸಿಗಲಿ ಎಂದು ಭೂಮಿಕಾ ಶುಭಕೋರಿದ್ದಾಳೆ. ಭೂಮಿಕಾ ವಿಶ್ ಕೇಳಿ ಆನಂದ್ ಗೌತಮ್ ನನ್ನು ರೇಗಿಸಿದ್ದಾನೆ. ಭೂಮಿಕಾ ಉಡುಗೊರೆ ಕೊಟ್ಟು, ಒಬ್ಬರೇ ಇರುವಾಗ ತೆಗೆಯಿರಿ ಎಂದಿದ್ದಾಳೆ.

ಪಾರ್ಟಿಯಲ್ಲಿ ಮಂದಾಕಿನಿ ಎಡವಟ್ಟು
ಗೌತಮ್ ಕೇಕ್ ಕಟ್ ಮಾಡಿದ ಬಳಿಕ ಪಾರ್ಟಿ ಶುರುವಾಗುತ್ತದೆ. ಅಪೇಕ್ಷಾ ಮತ್ತು ಪಾರ್ಥನನ್ನು ನೋಡಿದ ಲಕ್ಷ್ಮೀಕಾಂತ ಮನದೊಳೆಗೆ ಲೆಕ್ಕಾಚಾರ ಹಾಕುತ್ತಾರೆ. ಇನ್ನು ಮಂದಾಕಿನಿ ಮಾಮೂಲಿಯಂತೆಯೇ ಎಲ್ಲರ ಜೊತೆಗೆ ತನ್ನ ಹಳೆಯ ದಿನಗಳ ಬಗ್ಗೆ ಹೇಳುತ್ತಾ ಮಾತನಾಡುತ್ತಿರುತ್ತಾಳೆ. ಶಕುಂತಲಾ ಸ್ನೇಹಿತೆ ಜಾನಕಿ ಎಂಬಾಕೆ ಮಂದಾಕಿನಿಯನ್ನು ಪ್ರಶ್ನೆ ಮಾಡುತ್ತಾಳೆ. ಆ ಸರವನ್ನು ಎಲ್ಲಿ ಖರೀದಿಸಿದ್ದು ಎನ್ನುತ್ತಾಳೆ. ಮಂದಾಕಿನಿ ಬಾಯಿಗೆ ಬಂದ ಅಂಗಡಿ ಹೆಸರನ್ನು ಹೇಳುತ್ತಾಳೆ. ಆದರೆ, ಜಾನಕಿ ಆ ಅಂಗಡಿಗೆ ನಾನೂ ಹೋಗಿದ್ದೆ ಆದರೆ, ನನಗೆ ಆ ಡಿಸೈನ್ ಕಾಣಿಸಲೇ ಇಲ್ಲ ಎಂದು ಹೇಳುತ್ತಾಳೆ. ಮಂದಾಕಿನಿ ರೋಲ್ಡ್ ಗೋಲ್ಡ್ ಸರವನ್ನು ತಂದು ಹಾಕಿದ್ದು, ಈಗ ಎಲ್ಲರ ಎದುರು ಸಿಕ್ಕಿ ಬೀಳುತ್ತಾಳಾ ಕಾದು ನೋಡಬೇಕಿದೆ.


Click it and Unblock the Notifications











